ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಲಿಪ್​ ಲಾಕ್​ ದೃಶ್ಯ ವೈರಲ್!

ಈ ಮೊದಲು ಮಲಯಾಳಂನಲ್ಲಿ ಮಾತ್ರ ಸಿನಿಮಾ ಸಿದ್ಧಗೊಂಡಿತ್ತು. ನಂತರ ಚಿತ್ರತಂಡ, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗೆ ಚಿತ್ರ ಡಬ್​ ಮಾಡಿ ರಿಲೀಸ್​ ಮಾಡಲು ನಿರ್ಧರಿಸಿದೆ.

Rajesh Duggumane | news18
Updated:February 7, 2019, 12:08 PM IST
ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಲಿಪ್​ ಲಾಕ್​ ದೃಶ್ಯ ವೈರಲ್!
ಪ್ರಿಯಾ-ರೋಶನ್​
Rajesh Duggumane | news18
Updated: February 7, 2019, 12:08 PM IST
ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಕಣ್ಸನ್ನೆ ಮೂಲಕವೇ ಸದ್ದು ಮಾಡಿದವರು. ಒಂದು ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಅವರು ಫೇಮಸ್​ ಆಗಿ ಬಿಟ್ಟರು. ಪ್ರಿಯಾ ನಟನೆಯ ಚಿತ್ರ ಇನ್ನೂ ತೆರೆಕಂಡಿಲ್ಲ. ಆದಾಗ್ಯೂ, ಅವರ ಬೇಡಿಕೆ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಈಗ ನಟಿ ಪ್ರಿಯಾ ಮತ್ತೆ ಸದ್ದು ಮಾಡಿದ್ದಾರೆ. ಅದು ಲಿಪ್​ ಲಾಕ್​ ಮಾಡುವ ಮೂಲಕ!

ಹೌದು, ಪ್ರಿಯಾ ಲಿಪ್​ಲಾಕ್​ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ! ಹಾಗಂತ ಇದು ಅವರ ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ. ಅವರ, ನಟನೆಯ ‘ಒರು ಆಡಾರ್​ ಲವ್​' ಸಿನಿಮಾದಲ್ಲಿ ಬರುವ ದೃಶ್ಯ ಇದು. ಈ ವಿಡಿಯೋ ಸದ್ಯ ಎಲ್ಲರ ಕಣ್ಣು ಕುಕ್ಕಿದೆ.

ಫೆಬ್ರವರಿ ಪ್ರೇಮಿಗಳ ತಿಂಗಳು ಎಂದೇ ಕರೆಯಲ್ಪಡುತ್ತದೆ. ಈ ಚಿತ್ರದಲ್ಲಿ ಕೂಡ ಪ್ರೇಮಕ್ಕೆ ಸಂಬಂಧಿಸಿದ ವಿಷಯ ಸಾಕಷ್ಟಿದೆಯಂತೆ. ಹಾಗಾಗಿ ಫೆ.14ರಂದು ಸಿನಿಮಾ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರತಂಡ ಲವ್​ ಡೇ ಟೀಸರ್​ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಿಯಾ ಹಾಗೂ ಚಿತ್ರದ ನಾಯಕ ರೋಶನ್​ ಲಿಪ್​ ಲಾಕ್​ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಟೀಸರ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ ಬಾಬು ಜತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ..!ಈ ಮೊದಲು ಮಲಯಾಳಂನಲ್ಲಿ ಮಾತ್ರ ಸಿನಿಮಾ ಸಿದ್ಧಗೊಂಡಿತ್ತು. ನಂತರ ಚಿತ್ರತಂಡ, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಿಗೆ ಚಿತ್ರ ಡಬ್​ ಮಾಡಿ ರಿಲೀಸ್​ ಮಾಡಲು ನಿರ್ಧರಿಸಿದೆ. ಅಂತೆಯೇ, ಕನ್ನಡದಲ್ಲಿ ಈ ಚಿತ್ರ ‘ಕಿರಿಕ್​ ಲವ್​ಸ್ಟೋರಿ’ ಹೆಸರಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಆಡಿಯೋ ಕೂಡ ಬಿಡುಗಡೆ ಮಾಡಿಕೊಂಡಿತ್ತು.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಯಂಗ್​​ ರೆಬೆಲ್ ಅಭಿಷೇಕ್​ರಿಂದ​ ಒಲವಿನ ಉಡುಗೊರೆ..!
Loading...

ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕಿರಿಕ್​ ಲವ್​ಸ್ಟೋರಿ' ಬಿಡುಗಡೆಯಾಗುತ್ತಿದೆ. ಪ್ರಿಯಾ ನಟನೆಯ ಚೊಚ್ಚಲ ಚಿತ್ರವೇ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಅವರಿಗೆ ಖುಷಿ ತಂದಿದೆಯಂತೆ. ಇತ್ತೀಚೆಗೆ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅವರು ಬೆಂಗಳೂರಿಗೆ ಆಗಮಿಸಿದ್ದರು.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...