ನಿರೂಪ್ ಭಂಡಾರಿ ನಟನೆಯಲ್ಲಿ ಮೂಡಿಬರುತ್ತಿರುವ ‘ವಿಂಡೋ ಸೀಟ್’ ಸಿನಿಮಾದ ಟೀಸರ್ ಯ್ಯೂಟೂಬ್ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಕಿಚ್ಚ ಜೊತೆಗೆ ಫ್ಯಾಂಟಮ್ ಸಿನಿಮಾದಲ್ಲಿ ನಟಿಸುತ್ತಿರುವ ನಿರೂಪ್ ಭಂಡಾರಿ ಇತ್ತ ವಿಂಡೋ ಸೀಟ್ನಲ್ಲೂ ಅಭಿನಯಿಸುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರೂಪ್ಗೆ ನಾಯಕಿಯಾಗಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗರ್ ನಟಿಸುತ್ತಿದ್ದಾರೆ.
ವಿಂಡೋ ಸೀಟ್ ಮೂಲಕ ಕಥೆ ಹೇಳಲು ಹೊರಟಿರುವ ನಿರೂಪ್ ಭಂಡಾರಿ ರಘು ಎಂಬ ಮ್ಯೂಜಿಷಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರವಿಶಂಕರ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀತಲ್ ಶೆಟ್ಟಿ ಅವರದೇ ಕಥೆ-ನಿರ್ದೇಶನದಲ್ಲಿ ವಿಂಡೋ ಸೀಟ್ ಸಿನಿಮಾ ಮೂಡಿಬರುತ್ತಿದೆ. ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ವಿಂಡೋ ಸೀಟ್ ಫಸ್ಟ್ ಲುಕ್ ಬಿಡುಗಡೆಯ ವೇಳೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಟೀಸರ್ ಬಡುಗಡೆಗೊಂಡಿತ್ತು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ