• Home
  • »
  • News
  • »
  • entertainment
  • »
  • Window Seat Trailer: ವಿಂಡೋಸೀಟ್‌ನಲ್ಲಿ ಪ್ರೀತಿ-ಕೋಪದ ಪಯಣ! ಟ್ರೈಲರ್​ನಲ್ಲಿ ಅಡಗಿದೆ ಕಥೆಯ ರಹಸ್ಯ

Window Seat Trailer: ವಿಂಡೋಸೀಟ್‌ನಲ್ಲಿ ಪ್ರೀತಿ-ಕೋಪದ ಪಯಣ! ಟ್ರೈಲರ್​ನಲ್ಲಿ ಅಡಗಿದೆ ಕಥೆಯ ರಹಸ್ಯ

ವಿಂಡೋಸೀಟ್​

ವಿಂಡೋಸೀಟ್​

Trailer Release: ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರೂಪ್​ಗೆ ನಾಯಕಿಯಾಗಿ ಸಂಜನಾ ಆನಂದ್​ ಮತ್ತು ಅಮೃತಾ ಅಯ್ಯಂಗರ್​ ಅಭಿನಯಿಸುತ್ತಿದ್ದಾರೆ.ವಿಂಡೋಸೀಟ್​ ಮೂಲಕ ಕಥೆ ಹೇಳಲು ಹೊರಟಿರುವ ನಿರೂಪ್​ ಭಂಡಾರಿ ರಘು ಎಂಬ ಮ್ಯೂಜಿಷಿಯನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಂದೆ ಓದಿ ...
  • Share this:

ರಂಗಿತರಂಗ (Rangi Taranga) ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ (Sandalwood) ಕಾಲಿಟ್ಟ ನಟ ನಿರೂಪ್​ ಭಂಡಾರಿ (Nirup Bhandari) , ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಸ್ಸು ಕದ್ದ ನಟ. ನಂತರ ರಾಜರಥವೇರಿದ್ದ ನಿರೂಪ್​ ಈಗ ವಿಂಡೋಸೀಟ್​ (window Seat) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ಸಸ್ಪೆನ್ಸ್​ ಥ್ರಿಲ್ಲರ್​ ವಿಂಡೋಸೀಟ್ ಚಿತ್ರದಲ್ಲಿ ನಿರೂಪ್​ ಈಗ ನಾಯಕರಾಗಿದ್ದಾರೆ. ಈ ಹಿಂದೆ ಅಂದರೆ ಲಾಕ್​ಡೌನ್​ನಲ್ಲೇ ಈ ಸಿನಿಮಾದ ಟೈಟಲ್​ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಆಗಲೇ ಈ ಚಿತ್ರದ ನಾಯಕ ನಿರೂಪ್​ ಭಂಡಾರಿ ಎಂದೂ ಬಹಿರಂಗಪಡಿಸಲಾಗಿತ್ತು. ಹೀಗೆ ಹೊಸ ರೀತಿಯಲ್ಲಿ ಪೋಸ್ಟರ್ ರಿಲೀಸ್​ ಮಾಡಿದ್ದ ತಂಡ ಈಗ ಟ್ರೈಲರ್ ಬಿಡುಗಡೆ ಮಾಡಿದ್ದು, ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.


ನಟಿ ಹಾಗೂ ನಿರೂಪಕಿ ಶೀತ​ಲ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಂಡೋಸೀಟ್​ ಸಿನಿಮಾ ಹಲವಾರು ಕಾರಣಗಳಿಂದ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಈಗ ಈ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಇನ್ನು ಮೊನ್ನೆಯಷ್ಟೇ ಟ್ರೈಲರ್ ಪ್ರೋಮೋ ಕೂಡ ರಿಲೀಸ್​ ಆಗಿದ್ದು, ಅದು ಕೂಡ ಬಹಳ ಅದ್ಭುತವಾಗಿ ಮೂಡಿಬಂದಿತ್ತು.


ನಿರೀಕ್ಷೆ ಹೆಚ್ಚಿಸಿದ ಟ್ರೈಲರ್


ಪ್ರತಿಯೊಬ್ಬರ ಬದುಕು ಇಂದು ಪಯಣವಿದ್ದಂತೆ. ಕೆಲವರ ಪಯಣ ನೋವು ನಲಿವಿನ ಮಿಶ್ರಣವಾದರೆ, ಇನ್ನೋ ಕೆಲವರದ್ದು ಬರೀ ನೋವಿನ ಪಯಣವಾಗುತ್ತದೆ. ಆದರೆ ತಮ್ಮ ಪಯಣವನ್ನು ವಿಂಡೋಸೀಟ್​ನಲ್ಲಿ ಕುಳಿತು ಮಾಡಿದರೆ ಅದರ ಅನುಭವವೇ ಬೇರೆ ಎಂಬುದನ್ನ ಈ ಪ್ರೋಮೋದಲ್ಲಿ ತೋರಿಸಲಾಗಿದೆ.



ಈಗ ಬಿಡುಗಡೆಯಾಗಿರುವ ಈ ಟ್ರೈಲರ್​ನಲ್ಲಿ ಜಗಳ, ಪ್ರೀತಿ, ಕೋಪ ಹೀಗೆ ಎಲ್ಲದರ ಮಿಶ್ರಣವನ್ನು ನೋಡಬಹುದಾಗಿದ್ದು, ಎಲ್ಲವನ್ನು ಎದುರಿಸಿ ಹೋರಾಡುವ ನಾಯಕ ರಘುವಿನ ಕಥೆಯೇ ಈ ವಿಂಡೋಸೀಟ್​.


ಇದನ್ನೂ ಓದಿ: ಬಿಡುಗಡೆಗೆ ಸಿದ್ಧವಾಯ್ತು ಭೈರಾಗಿ, ಶಿವಣ್ಣ ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ


ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರೂಪ್​ಗೆ ನಾಯಕಿಯಾಗಿ ಸಂಜನಾ ಆನಂದ್​ ಮತ್ತು ಅಮೃತಾ ಅಯ್ಯಂಗರ್​ ಅಭಿನಯಿಸುತ್ತಿದ್ದಾರೆ.ವಿಂಡೋಸೀಟ್​ ಮೂಲಕ ಕಥೆ ಹೇಳಲು ಹೊರಟಿರುವ ನಿರೂಪ್​ ಭಂಡಾರಿ ರಘು ಎಂಬ ಮ್ಯೂಜಿಷಿಯನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರವಿಶಂಕರ್​ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಜೀವನದಲ್ಲಿ ಗಿಟಾರ್​ ಮುಟ್ಟದ ನಿರೂಪ್​, ಅದನ್ನೂ ಕಲಿತಿದ್ದಾರಂತೆ.




ಇದನ್ನೂ ಓದಿ: ಸಲ್ಮಾನ್‌ ಖಾನ್‌ಗೆ ಒಂದು ಕಾಲದಲ್ಲಿ ಬಟ್ಟೆ ಖರೀದಿಸೋಕೂ ಹಣ ಇರ್ಲಿಲ್ವಂತೆ! ಆಗ ಸಹಾಯ ಮಾಡಿದ್ದು ಇದೇ ಕನ್ನಡಿಗನಂತೆ!


ಶೀತಲ್​ ಶೆಟ್ಟಿ ಕಥೆ ಬರೆದು ನಿರ್ದೇಶಿಸುತ್ತಿರುವ ವಿಂಡೋಸೀಟ್​ ಚಿತ್ರಕ್ಕೆ ಮ್ಯೂಸಿಕ್​ ಮಾಂತ್ರಿಕ ಅರ್ಜುನ್​ ಜನ್ಯ ಅವರ ಸಂಗೀತವಿದೆ. ನಿರ್ದೇಶಕಿಯಾಗಿ ಶೀತಲ್​ ಶೆಟ್ಟಿ ಅವರ ಮೊದಲ ಪ್ರಯತ್ನವೇ ಈ ವಿಂಡೋಸೀಟ್​. ಇದಕ್ಕೆ ನಿರ್ಮಾಪಕ ಜಾಕ್​ ಮಂಜು ಬಂಡವಾಳ ಹೂಡಿದ್ದಾರೆ. ಇನ್ನು 2020ರಲ್ಲೇ ಬಿಡುಗಡೆಯಾಗಿದ್ದ ಈ ಚಿತ್ರದ ಲಿರಿಕಲ್ ಹಾಡು, ಆ ಮೂಲಕ ಚಿತ್ರತಂಡವನ್ನು ಪರಿಚಯಿಸಿದ್ದ ಪರಿ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿತ್ತು.

Published by:Sandhya M
First published: