ಕೆ.ಜಿ.ಎಫ್​ ನಂತರ ಕಿರಾತಕನ ಮುಂದಿನ ನಡೆಯೇನು ಗೊತ್ತಾ..?

Anitha E | news18
Updated:January 11, 2019, 5:19 PM IST
ಕೆ.ಜಿ.ಎಫ್​ ನಂತರ ಕಿರಾತಕನ ಮುಂದಿನ ನಡೆಯೇನು ಗೊತ್ತಾ..?
ಮೈ ನೇಮ್​ ಇಸ್​ ಕಿರಾತಕ ಅಡ್ಡದಲ್ಲಿ ಯಶ್​
Anitha E | news18
Updated: January 11, 2019, 5:19 PM IST
-ರಕ್ಷಾ ಜಾಸ್ಮೀನ್, 

ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ನಟನಲ್ಲ.. ಗ್ಲೋಬಲ್ ಸ್ಟಾರ್ ಆಗಿ ಗಮನ ಸೆಳೆಯುತ್ತಿರುವ ಸೂಪರ್​ ಸ್ಟಾರ್​. 'ಕೆ.ಜಿ.ಎಫ್' ಸಿನಿಮಾ ಮೂಲಕ ಪ್ರಪಂಚದಾದ್ಯಂತ ತಮ್ಮ ಹವಾ ಸೃಷ್ಟಿಸಿರೋ ಯಶ್, ತಮ್ಮ ಸ್ಟಾರ್ ವ್ಯಾಲ್ಯೂವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಹೀಗಿರಬೇಕಾದರೇನೆ ಯಶ್‍ರ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ತೆರೆ ಕಂಡಿದೆ 'ಕೆ.ಜಿ.ಎಫ್​': ನೆರೆ ರಾಷ್ಟ್ರದಲ್ಲೂ ರಾಕಿ ಭಾಯ್​ ಹವಾ ಶುರು..!

'ಕೆ.ಜಿ.ಎಫ್' ಸಿನಿಮಾ ಮೂಲಕ ನಂ.1 ಸ್ಟಾರ್ ಪಟ್ಟಕ್ಕೇರಿರೋ ರಾಕಿಂಗ್ ಸ್ಟಾರ್ ಯಶ್‍ರ ಪ್ರತಿ ಹೆಜ್ಜೆ ಮೇಲೂ ನಿರೀಕ್ಷೆ ಮೂಡಿದೆ. ಅಭಿಮಾನಿಗಳಿಂದ ಹಿಡಿದು ಪರಭಾಷಾ ಸಿನಿ ರಂಗದಲ್ಲೂ ಯಶ್‍ರ ಮುಂದಿನ ಚಿತ್ರಗಳ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಸದ್ಯ ಯಶ್‍ಗೆ ಬೇಡಿಕೆಯೂ ಹೆಚ್ಚಾಗಿದ್ದು, ಟಾಲಿವುಡ್, ಮಾಲಿವುಡ್‍ನಿಂದಲೂ ದೊಡ್ಡ ದೊಡ್ಡ ಅವಕಾಶಗಳು ಅರಸಿ ಬರುತ್ತಿವೆಯಂತೆ. ಆದರೆ ಬೇರೆ ಸಿನಿಮಾ ಅವಕಾಶಗಳನ್ನು ಪಕ್ಕಕ್ಕಿಟ್ಟಿರೋ ಯಶ್ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಒಪ್ಪಿಕೊಂಡಿರೋ ಪ್ರಾಜೆಕ್ಟ್ ಕಡೆ ಗಮನ ಕೊಟ್ಟಿದ್ದಾರೆ. ಹೀಗಿರಬೇಕಾದರೇನೆ ಗಾಂಧಿನಗರ ಗಲ್ಲಿಯಿಂದ ಸುದ್ದಿಯೊಂದು ಕೇಳಿ ಬರುತ್ತಿದ್ದು, 'ಮೈ ನೇಮ್ ಈಸ್ ಕಿರಾತಕ'ದಲ್ಲಿ ಯಶ್ ಮತ್ತೆ ತೊಡಗಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಹೌದು, 'ಕೆ.ಜಿ.ಎಫ್' ಸಿನಿಮಾದ ಯಶಸ್ಸಿನ ನಂತರ 'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೆ ಯಶ್ ಗುಡ್ ಬೈ ಹೇಳಿ, ಚಿತ್ರತಂಡದಿಂದ ಹೊರಬಂದಿದ್ದರು ಎಂಬ ಸುದ್ದಿ ಗಾಂಧಿನರದಲ್ಲಿ ಹಬ್ಬಿತ್ತು. 'ಕೆ.ಜಿ.ಎಫ್' ಪಾರ್ಟ್ 2 ಶೂಟಿಂಗ್‍ಗೆ ಹೆಚ್ಚಿನ ಸಮಯ ನೀಡಬೇಕಿರುವುದರಿಂದ, ಯಶ್ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಕೈ ಬಿಟ್ಟಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: ಸಿನಿ ಅಡ್ಡದಲ್ಲಿ ಸಂಕ್ರಾಂತಿ: ರಾಮ್​ ಚರಣ್​, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..?​
Loading...

ಆದರೆ ಅಧಿಕೃತವಾಗಿ ಯಶ್ ಈ ಕುರಿತು ಎಲ್ಲೂ ಮಾತನಾಡಿರಲಿಲ್ಲ. ಹೀಗಿರುವಾಗಲೇ ಯಶ್ 'ಕೆ.ಜಿ.ಎಫ್ ಚಾಪ್ಟರ್ 2' ಜೊತೆ ಜೊತೆಗೆ 'ಕಿರಾತಕ' ಸಿನಿಮಾದ ಶೂಟಿಂಗ್‍ನಲ್ಲೂ ಪಾಲ್ಗೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಇದ್ದು, ಸಂಕ್ರಾಂತಿ ಹಬ್ಬದಂದು ಶೂಟಿಂಗ್‍ನಲ್ಲಿ ಭಾಗಿ ಆಗಲಿದ್ದಾರೆ ಅಂತಲೂ ಆಪ್ತ ಮೂಲಗಳಿಂದ ತಿಳಿದು ಬಂದಿದೆ. 

ಹೇಳಿ ಕೇಳಿ 'ಕಿರಾತಕ' ಯಶ್‍ಗೆ ದೊಡ್ಡ ಬ್ರೇಕ್ ನೀಡಿದ್ದ ಚಿತ್ರ. ಯಶ್‍ಗೂ ಈ ಸಿನಿಮಾಗೂ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ನಿರ್ದೇಶಕ ಅನಿಲ್ ಕುಮಾರ್, ಕಥೆಯನ್ನ ಯಶ್ ಮುಂದಿಟ್ಟಾಗ ಮರು ಯೋಚಿಸದೇ ಚಿತ್ರಕ್ಕೆ ಹಸಿರು ನಿಶಾನೆ ನೀಡಿದ್ದರು.  ಆದರೆ 'ಕೆ.ಜಿ.ಎಫ್' ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದ ಯಶ್, 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಸಿನಿಮಾಗಾಗಿಯೇ 'ಕೆ.ಜಿ.ಎಫ್' ಚಿತ್ರೀಕರಣದ ಬಳಿಕ ತನ್ನ ಉದ್ದುದ್ದ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಅಲ್ಲದೆ 'ಮೈ ನೇಮ್ ಈಸ್ ಕಿರಾತಕ' ಅಡ್ಡಾದಿಂದಲೇ ಹೊರಬಂದಿದ್ದ ಫೋಟೋ ಒಂದರಲ್ಲಿ ಪಂಚೆ, ಕಲರ್ ಕಲರ್ ಶರ್ಟ್ ತೊಟ್ಟು ಪೋಸ್ ನೀಡಿದ್ದರು. ಚಿಕ್ಕಣ್ಣ, ಕುರಿ ಪ್ರತಾಪ್ ಕೂಡ ಈ ಪೋಸ್ಟರ್​ನಲ್ಲಿ ಯಶ್‍ಗೆ ಜೊತೆಯಾಗಿದ್ದರು.

ಹಾಗೇ 'ಕೆ.ಜಿ.ಎಫ್' ಸಿನಿಮಾದ ರಿಲೀಸ್ ನಂತ್ರ 'ಮೈ ನೇಮ್ ಈಸ್ ಕಿರಾತಕ'ದಲ್ಲಿ ಯಶ್ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಇತ್ತು. ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ 'ಮಾಸ್ಟರ್ ಪೀಸ್', ಸಿನಿಮಾದಿಂದ ಹೊರಬಂದಿದ್ದಾರೆ ಅನ್ನೊ ಶಾಕಿಂಗ್ ಸುದ್ದಿ ಕೂಡ ಕೇಳಿಬಂದಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ನಿರ್ದೇಶಕ ಅನಿಲ್ ಕುಮಾರ್ `ದಾರಿ ತಪ್ಪಿದ ಮಗ' ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. 'ಕಿರಾತಕ' ಮತ್ತೆ ಶುರುವಾಗುತ್ತೆ ಅನ್ನೋ ವಿಷಯ ಖಚಿತವಾಗುತ್ತಿದ್ದಂತೆಯೇ,  ಅನಿಲ್ ಕುಮಾರ್ ಹಗಲು ರಾತ್ರಿಯೆನ್ನದೇ 'ದಾರಿ ತಪ್ಪಿದ ಮಗ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ಪೂರ್ಣಗೊಳಿಸಿ, ಮತ್ತೆ 'ಕಿರಾತಕ' ತಂಡ ಸೇರುವ ಕಾತರದಲ್ಲಿದ್ದಾರೆ.

ಹೌದು, ಸದ್ಯ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ 'ಕೆ.ಜಿ.ಎಫ್- ಚಾಪ್ಟರ್​ 2'ಗೂ ಮುನ್ನವೇ ಬರುತ್ತೆ ಅನ್ನೋ ಸುದ್ದಿ ಗಾಢವಾಗಿ ಹಬ್ಬಿದೆ. ಅತ್ತ ನಿರ್ದೇಶಕ ಅನಿಲ್ ಕುಮಾರ್ ಕೂಡ ದಾರಿ ತಪ್ಪಿದ ಮಗ ಸಿನಿಮಾದ ಕೊನೆ ಹಂತದ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಂಕ್ರಾಂತಿ ಬಳಿಕ ಪ್ರಾಜೆಕ್ಟ್ ಆರಂಭ ಆಗುತ್ತೆ ಅಂತ ಹೇಳಲಾಗುತ್ತಿದ್ದು, ಯಶ್ ಇನ್ನು ಈ ಕುರಿತೂ ಒಂದೂ ಮಾತೂ ಆಡಿಲ್ಲ.

ಒಟ್ಟಾರೆ ಒಂದರ ಹಿಂದೆ ಒಂದರಂತೆ ಐಟಿ ಶಾಕ್ ಹಾಗೂ ಅಭಿಮಾನಿಯ ನಿಧನದಿಂದ ನೊಂದಿರೊ ಯಶ್‍ರ ಮುಂದಿನ ಸಿನಿಮಾದ ಬಗ್ಗೆ ಎಲ್ಲರ ಗಮನವಿದ್ದು, ಯಾವ ಸಿನಿಮಾ ಯಾವಾಗ ಶೂಟಿಂಗ್ ಆರಂಭಿಸುತ್ತೆ, ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತೆ ಅಂತ ತಲೆಕೆಡಿಸಿಕೊಂಡಿದ್ದಾರೆ.

PHOTOS: ಪಾಕಿಸ್ತಾನದಲ್ಲಿ ಎಲ್ಲೆಲ್ಲಿ ಹೇಗಿದೆ ಗೊತ್ತಾ 'ಕೆ.ಜಿ.ಎಫ್'​ ಹವಾ: ಇಲ್ಲಿವೆ ಕೆಲವು ಚಿತ್ರಗಳು..!


 

ಐಟಿ ದಾಳಿ ನಂತರ ಇದು ಎರಡನೇ ಬಾರಿಗೆ ತಮ್ಮ ತಾಯಿಯೊಂದಿಗೆ ವಿಚಾರಣೆಗೆ ಹಾಜರಾಗಿದ್ದ ಯಶ್​ ಮಾಧ್ಯಮಗಳ ಮೇಲೆ ಬೇಸರ ಮಾಡಿಕೊಂಡಿದ್ದೇಕೆ..?

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...