Samantha Akkineni: ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿಮಾಗೆ ವಿದಾಯ ಹೇಳಲಿರುವ ಸಮಂತಾ ಅಕ್ಕಿನೇನಿ..!

Samantha Akkineni: ನಟಿ ಸಮಂತಾ ನಾಗಚೈತ್ಯರನ್ನು ವಿವಾಹವಾದ ನಂತರವೂ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಅಲ್ಲದೆ ವಿವಾಹದ ನಂತರವೂ ಅವರು ಸ್ಟಾರ್ ನಟಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹೀಗಿರುವಾಗಲೇ ಅವರು ಸಿನಿಮಾಗಳಿಗೆ ವಿದಾಯ ಹೇಳುವ ನಿರ್ಣಯ ತೆಗೆದುಕೊಂಡಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.

Anitha E | news18
Updated:July 9, 2019, 3:02 PM IST
Samantha Akkineni: ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿಮಾಗೆ ವಿದಾಯ ಹೇಳಲಿರುವ ಸಮಂತಾ ಅಕ್ಕಿನೇನಿ..!
ಹಾಟ್​ ಲುಕ್​ನಲ್ಲಿ ಸಮಂತಾ
  • News18
  • Last Updated: July 9, 2019, 3:02 PM IST
  • Share this:
ಟಾಲಿವುಡ್​ನಲ್ಲಿ ಸದ್ಯದ ಹಾಟ್​ ಟಾಪಿಕ್​ ಎಂದರೆ ಅದು ಸಂಮಂತಾ ಸಿನಿರಂಗಕ್ಕೆ ವಿದಾಯ ಹೇಳುತ್ತಿರುವ ವಿಷಯ. ನಿಜವಾಗಿಯೂ ಸಮಂತಾ ಸಿನಿಮಾಗಳಿಗೆ ವಿದಾಯ ಹೇಳಿದ್ದಾರಾ ಎಂದು ಎಲ್ಲರೂ ಆಶ್ಚರ್ಯಪಡುವಂತಾಗಿದೆ.

ನಟಿ ಸಮಂತಾ ನಾಗಚೈತ್ಯರನ್ನು ವಿವಾಹವಾದ ನಂತರವೂ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಅಲ್ಲದೆ ವಿವಾಹದ ನಂತರವೂ ಅವರು ಸ್ಟಾರ್ ನಟಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹೀಗಿರುವಾಗಲೇ ಅವರು ಸಿನಿಮಾಗಳಿಗೆ ವಿದಾಯ ಹೇಳುವ ನಿರ್ಣಯ ತೆಗೆದುಕೊಂಡಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಆದರೆ ಸಮಂತಾ ತಮ್ಮ ಸಿನಿ ನಿವೃತ್ತಿ ಕುರಿತು ಹೇಳಿದ್ದಾದರೂ ಏನು ಗೊತ್ತಾ..?

Samantha in Oh Baby Movie
'ಓ ಬೇಬಿ' ಸಿನಿಮಾದಲ್ಲಿ ನಟಿ ಸಮಂತಾ


ಸದ್ಯ ಓ ಬೇಬಿ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಸಮಂತಾ, ಈ ಸಿನಿಮಾದ ನಂತರ ಯಾವ ರೀತಿಯ ಸಿನಿಮಾ ಹಾಗೂ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದರಂತೆ. ನಿರ್ದೇಶಕಿ ನಂದಿನಿ ರೆಡ್ಡಿ ಅವರೊಂದಿಗೆ ಸಮಂತಾ ತಮ್ಮ ಸಿನಿ ನಿವೃತ್ತಿ ಕುರಿತು ಚರ್ಚೆ ನಡೆಸಿದ್ದರಂತೆ. 'ಓ ಬೇಬಿ' ನಂತರ ಈಗ ನಿರ್ದೇಶಕರು ಸಮಂತಾಗಾಗಿ ಕತೆಗಳನ್ನು ಸಿದ್ಧ ಮಾಡುತ್ತಿದ್ರೆ, ಸ್ಯಾಮ್​ ಮಾತ್ರ ಕೊಂಚ ವಿಶ್ರಮಿಸುವ ಆಲೋಚನೆಯಲ್ಲಿರುವಂತಿದೆ. ಈಗಾಗಲೇ ಸಮಂತಾ ತಮಿಳಿನ '96' ಸಿನಿಮಾದ ತೆಲುಗು ರಿಮೇಕ್​ಗೆ ಓಕೆ ಅಂದಿದ್ದು, ಶರ್ವಾನಂದ ಅವರಿಗೆ ಜೊತೆಯಾಗಲಿದ್ದಾರೆ.

Samantha Akkineni
ಸಮಂತಾ


ಸಮಂತಾಗೆ ಮಕ್ಕಳು ಬೇಕೆಂಬ ಆಸೆ ಇದೆಯಂತೆ. ಅದರಲ್ಲೂ ಅವರಿಗೆ ತಾಯಿಯಾಗುವ ಬಯಕೆ ತುಂಬಾ ಸಮಯದಿಂದ ಇದೆಯಂತೆ. ಆದರೆ ಅದಕ್ಕೆ ಸರಿಯಾದ ಸಮಯ ಇದಲ್ಲವಂತೆ. ಇನ್ನೂ ಸ್ವಲ್ಪ ಸಮಯದ ನಂತರ ಇದರ ಬಗ್ಗೆ ಆಲೋಚಿಸುವುದಾಗಿ ಹಾಗೂ ತಾಯಿಯಾದ ನಂತರ ಸಿನಿಮಾಗಳಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ ಸಮಂತಾ.

ಇದನ್ನೂ ಓದಿ: Kurukshetra Trailer: ಕುರುಕ್ಷೇತ್ರ ಟ್ರೈಲರ್​ ನೋಡಿ ಸಿಟ್ಟಾದ ಡಿಬಾಸ್​ ಅಭಿಮಾನಿಗಳು : ಮತ್ತೊಮ್ಮೆ ಟ್ರಾಲ್​ ಆದ ನಿರ್ಮಾಪಕ ಮುನಿರತ್ನ ..!ಸಮಂತಾ '96' ರಿಮೇಕ್​ ನಂತರ ಮತ್ತಷ್ಟು ಸಿನಿಮಾಗಳ ಕತೆ ಕೇಳುತ್ತಿದ್ದಾರೆ. ಆದರೆ ಅವರು ಒಂದು ಬಾರಿ ತಾಯಿಯಾದರೆ ಮಾತ್ರ ಸಿನಿಮಾಗಳಿಗೆ ವಿದಾಯ ಹೇಳುತ್ತಾರೆ ಅನ್ನೋದು ಈಗ ಬಹಿರಂಗವಾಗಿದೆ.

 

Jennifer Lopez: ವಯಸ್ಸು 50ರ ಗಡಿ ದಾಟಿದರೂ ಇನ್ನೂ ಬಳುಕುವ ಬಳ್ಳಿಯಂತಿರುವ ಹಾಟ್​ ಬೇಬಿ ಜೆನಿಫರ್​..!
First published: July 9, 2019, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading