Katrina Kaif: ಮುಂದಿನ ಚಿತ್ರದ ಟೈಟಲ್ ಕಾರ್ಡ್​ನಲ್ಲಿ ಕತ್ರಿನಾ ಹೆಸರು ಚೇಂಜ್ ಮಾಡ್ತಾರಾ? ಹೀಗೊಂದು ಗುಸುಗುಸು ಶುರುವಾಗಿದೆ

ಕರೀನಾ ಮತ್ತು ಐಶ್ವರ್ಯಾ ರೈ ಬಚ್ಚನ್ ಇಬ್ಬರೂ ತಮ್ಮ ಪತಿಯ ಕೊನೆಯ ಹೆಸರುಗಳನ್ನು ವೃತ್ತಿಪರ ಸ್ಥಳದಲ್ಲಿ ಬಳಸಲು ಆಯ್ಕೆ ಮಾಡಿದ್ದರೆ ದೀಪಿಕಾ ಪಡುಕೊಣೆ ಮದುವೆಯ ನಂತರವೂ ತಮ್ಮ ಮೊದಲ ಹೆಸರನ್ನು ಉಳಿಸಿಕೊಂಡಿದ್ದಾರೆ

ವಿಕ್ಕಿ ಕೌಶಲ್, ಕತ್ರೀನಾ ಕೈಫ್

ವಿಕ್ಕಿ ಕೌಶಲ್, ಕತ್ರೀನಾ ಕೈಫ್

  • Share this:
ಸಾಮಾನ್ಯವಾಗಿ ಕೆಲವು ಚಿತ್ರರಂಗದ ನಟಿಯರು ತಮ್ಮ ಮದುವೆಯ ನಂತರ ತಮ್ಮ ಹೆಸರಿನ ಕೊನೆಯಲ್ಲಿ ತಮ್ಮ ಗಂಡನ ಮನೆಯ ಹೆಸರನ್ನು ಸೇರಿಸಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವರು ಅದನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಬಾಲಿವುಡ್‌ನಲ್ಲಿ (Bollywood) ಸಹ ಇದೇ ಟ್ರೆಂಡ್ ಇರುವುದನ್ನು ನಾವು ಕಾಣಬಹುದು. ಮದುವೆಯ ನಂತರ ತಮ್ಮ ಹೆಸರಿನ ಕೊನೆಯಲ್ಲಿ ಗಂಡನ ಮನೆಯ ಹೆಸರನ್ನು ಸೇರಿಸಿಕೊಂಡಿರುವ ಪಟ್ಟಿಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಹೆಂಡತಿ ಜಯಾ ಅವರು ಮದುವೆಯ ನಂತರ ಜಯಾ ಬಚ್ಚನ್ ಆಗಿರುವುದು ಮತ್ತು ಕರೀನಾ ಸಹ ಕರೀನಾ ಕಪೂರ್ ಖಾನ್ ( Kareena Kapoor ) ಎಂದು ಅವರ ಹೆಸರನ್ನು ಮದುವೆಯ ನಂತರ ಬದಲಾಯಿಸಿಕೊಂಡಿರುವುದನ್ನು(Changing Her Name) ನಾವು ನೋಡುತ್ತೇವೆ. ಈಗ ಆ ಸರದಿ ಹೊಸದಾಗಿ ಮದುವೆಯಾದ ನಟಿ ಕತ್ರೀನಾ ಕೈಫ್ (Katrina Kaif) ಅವರದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕತ್ರೀನಾ ಕೈಫ್ ಕೌಶಲ್
ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಇತ್ತೀಚೆಗೆ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಇಬ್ಬರು ನವ ದಂಪತಿಗಳು ಈಗಾಗಲೇ ತಮ್ಮ ಹೊಸ ಜೀವನವನ್ನು ಒಂದು ಐಷಾರಾಮಿ ಮನೆಯಲ್ಲಿ ಪ್ರಾರಂಭಿಸಿದ್ದಾರೆ ಎನ್ನುವುದು ಸಹ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಎಲ್ಲದರ ಮಧ್ಯೆ ಅಭಿಮಾನಿಗಳಿಗೆ ಒಂದು ಕುತೂಹಲ ಏನೆಂದರೆ ಮದುವೆಯ ನಂತರ ನಟಿ ಕತ್ರಿನಾ ಅವರು ತಮ್ಮ ಹೆಸರಿನ ಕೊನೆಯಲ್ಲಿ ಅವರ ಪತಿ ಮತ್ತು ನಟ ವಿಕ್ಕಿ ಕೌಶಲ್ ಅವರ ಹೆಸರನ್ನು ಸೇರಿಸಿಕೊಳ್ಳುವರೇ ಎಂಬುದಾಗಿದೆ. ಮದುವೆಯಂತೂ ಆಗಿದೆ, ಈಗ ಕತ್ರೀನಾ ಕೈಫ್ ತನ್ನ ಹೆಸರನ್ನು ಕತ್ರೀನಾ ಕೈಫ್ ಕೌಶಲ್ ಎಂದು ಬದಲಾಯಿಸಬಹುದು ಎಂಬುದು ಚಿತ್ರೋದ್ಯಮದಲ್ಲಿ ಹೊಸದಾಗಿ ಕೇಳಿ ಬರುತ್ತಿರುವಂತಹ ಗುಸುಗುಸು ಎಂದು ಹೇಳಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ, ಟೈಗರ್ 3 ಚಿತ್ರದ ತಯಾರಕರು ಮುಂಬರುವ ನಟ ಸಲ್ಮಾನ್ ಖಾನ್ ಮತ್ತು ನಟಿ ಕತ್ರೀನಾ ಅಭಿನಯದ ಹೊಸ ಪೋಸ್ಟರ್‌ಗಳು ಮತ್ತು ಟ್ರೈಲರ್‌ನಲ್ಲಿ ಈ ಬದಲಾಗುವ ಹೊಸ ಹೆಸರನ್ನು ಅಳವಡಿಸಿಕೊಳ್ಳಲಿದ್ದಾರೆಯೇ ಎಂಬುದು ಕಾದು ನೋಡಬಹುದಾದ ಅಂಶವಾಗಿದೆ.

ಇದನ್ನೂ ಓದಿ: Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

ಕತ್ರೀನಾ ಪತಿ ವಿಕ್ಕಿ ಕೌಶಲ್ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳುವರೇ..?
ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಡಿಸೆಂಬರ್‌ನಲ್ಲಿ ರಾಜಸ್ಥಾನದ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದು, ಕತ್ರೀನಾ ಅವರ ಮುಂದಿನ ಟೈಗರ್ 3 ಚಿತ್ರದ ಸೆಟ್‌ನಲ್ಲಿ ನಡೆದ ಸಭೆಯಲ್ಲಿ ಉದ್ಭವಿಸಿದ ಪ್ರಶ್ನೆಯೆಂದರೆ ಅದು ಕತ್ರೀನಾ ಕೈಫ್ ತನ್ನ ಚಿತ್ರದ ಬಿಡುಗಡೆಯ ನಂತರ ಅದರಲ್ಲಿ ಕತ್ರೀನಾ ಕೈಫ್ ಕೌಶಲ್ ಎಂದು ಹೆಸರು ಬದಲಾಯಿಸಿಕೊಂಡಿರುತ್ತಾರೆಯೇ ಎಂಬುದಾಗಿತ್ತು ಎಂದು ಹೇಳಬಹುದು. ಕತ್ರೀನಾ ಅವರ ಹೆಸರಿನ ಶಾರ್ಟ್ ಫಾರ್ಮ್ ಕೆಕೆ ಆಗಿದ್ದರೆ, ಈಗ ಕೌಶಲ್ ಉಪನಾಮವನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರೆ ಅದು ಕೆಕೆಕೆ ಆಗುತ್ತದೆ ಎಂದು ಈಗಾಗಲೇ ಚರ್ಚೆಯಾಗುತ್ತಿದೆ.

ಚಿತ್ರ ತಂಡ ಬಹಿರಂಗ
ಕತ್ರೀನಾ ತನ್ನ ಭವಿಷ್ಯದ ಚಿತ್ರಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವರೆ ಎಂಬುದು ಎಲ್ಲರೂ ತುಂಬಾನೇ ಕಾತುರತೆಯಿಂದ ಕಾಯುತ್ತಿರುವಂತಹ ಪ್ರಶ್ನೆಯಾಗಿದೆ. "ಈ ನಿರ್ಧಾರವು ಸಂಪೂರ್ಣವಾಗಿ ಅವಳ ಮೇಲಿದೆ, ಅವಳು ತನ್ನ ಹೆಸರನ್ನು ಬದಲಾಯಿಸಲು ನಿರ್ಧರಿಸಿದರೆ, ಟೈಗರ್ 3 ಚಿತ್ರದ ತಯಾರಕರು ಪೋಸ್ಟರ್‌ಗಳಲ್ಲಿ ಕತ್ರೀನಾ ಕೈಫ್ ಕೌಶಲ್ ಎಂದು ಬರೆಯುತ್ತಾರೆ" ಎಂದು ಚಿತ್ರ ತಂಡದಲ್ಲಿನ ಸದಸ್ಯರು ಹೇಳುತ್ತಾರೆ.

ಇದನ್ನೂ ಓದಿ: Katrina Vicky: ಹಳೇ ಗೆಳತಿ ಕತ್ರಿನಾ​ಗೆ ಸಲ್ಮಾನ್​​ ಕೊಟ್ಟ ದುಬಾರಿ ಮದುವೆ ಗಿಫ್ಟ್​ ಏನು ಗೊತ್ತೇ?

ಕರೀನಾ ಮತ್ತು ಐಶ್ವರ್ಯಾ ರೈ ಬಚ್ಚನ್ ಇಬ್ಬರೂ ತಮ್ಮ ಪತಿಯ ಕೊನೆಯ ಹೆಸರುಗಳನ್ನು ವೃತ್ತಿಪರ ಸ್ಥಳದಲ್ಲಿ ಬಳಸಲು ಆಯ್ಕೆ ಮಾಡಿದ್ದರೆ, ದೀಪಿಕಾ ಪಡುಕೊಣೆ ಮದುವೆಯ ನಂತರವೂ ತಮ್ಮ ಮೊದಲ ಹೆಸರನ್ನು ಉಳಿಸಿಕೊಂಡಿದ್ದಾರೆ. ಕತ್ರೀನಾ ಸ್ನೇಹಿತರು ಅವರ ವೃತ್ತಿಪರ ಹೆಸರಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ನಿರ್ಧಾರವು ಸಂಪೂರ್ಣವಾಗಿ ಅವಳದು ಎಂದು ಹೇಳಿದ್ದಾರೆ.
Published by:vanithasanjevani vanithasanjevani
First published: