Kangana: ಬೆತ್ತಲಾಗಲಿದ್ದಾರಂತೆ ಬಾಲಿವುಡ್​ ಕ್ವೀನ್​ ಕಂಗನಾ: ಶಾಕ್​ ಆದ ಅಭಿಮಾನಿಗಳು..!

Kangana: ಕಂಗನಾ ಈಗಾಗಲೇ ಕೆಲವು ಬಾಲಿವುಡ್​ ಸಿನಿಮಾಗಳಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಪಾತ್ರ ಹಾಗೂ ಕತೆಗೆ ಅನುಗುಣವಾಗಿ ಅಗತ್ಯವಾದ ದೃಶ್ಯಗಳಲ್ಲಿ ಹಸಿ ಬಿಸಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇಂತಹ ನಟಿ ಈಗ ಬೆತ್ತಲಾಗಲಿದ್ದಾರಂತೆ ಅನ್ನೋ ಸುದ್ದಿ ಬಿ-ಟೌನ್​ ಗಲ್ಲಿಗಳಲ್ಲಿ ಗುಲ್ಲಾಗಿದೆ. 

news18-kannada
Updated:October 23, 2019, 12:42 PM IST
Kangana: ಬೆತ್ತಲಾಗಲಿದ್ದಾರಂತೆ ಬಾಲಿವುಡ್​ ಕ್ವೀನ್​ ಕಂಗನಾ: ಶಾಕ್​ ಆದ ಅಭಿಮಾನಿಗಳು..!
ಕಾನ್ಸ್​ನಲ್ಲಿ ಕಂಗನಾರ ಹೊಸ ಸಮ್ಮರ್​ ಲುಕ್​
news18-kannada
Updated: October 23, 2019, 12:42 PM IST
ಬಾಲಿವುಡ್​ ಕ್ವೀನ್​ ಕಂಗನಾ ತಾವು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಹಾಗೂ ನೈಜ ಅಭಿನಯಕ್ಕೆ ಹೆಸರಾದ ನಟಿ. ಸದಾ ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸುವ ಕ್ವೀನ್​ ಈಗ ಬೆತ್ತಲಾಗಲಿದ್ದಾರಂತೆ.

ಹೌದು, ಕಂಗನಾ ಈಗಾಗಲೇ ಕೆಲವು ಬಾಲಿವುಡ್​ ಸಿನಿಮಾಗಳಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಪಾತ್ರ ಹಾಗೂ ಕತೆಗೆ ಅನುಗುಣವಾಗಿ ಅಗತ್ಯವಾದ ದೃಶ್ಯಗಳಲ್ಲಿ ಹಸಿ ಬಿಸಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇಂತಹ ನಟಿ ಈಗ ಬೆತ್ತಲಾಗಲಿದ್ದಾರಂತೆ ಅನ್ನೋ ಸುದ್ದಿ ಬಿ-ಟೌನ್​ ಗಲ್ಲಿಗಳಲ್ಲಿ ಗುಲ್ಲಾಗಿದೆ.

Will Kangana Ranaut going to be act in nude scene in Tamil movie Aadai Hindi remake
ನಟಿ ಕಂಗನಾ


ಕಂಗನಾ ಬೆತ್ತಲಾಗಲಿದ್ದಾರೆ ಅನ್ನೋ ಸುದ್ದಿ ಕೇಳಿ ಶಾಕ್​ ಆಗುವ ಅಗತ್ಯ ಇಲ್ಲ. ಅವರು ಸಿನಿಮಾವೊಂದರಲ್ಲಿ ಬೆತ್ತಲಾಗುವ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ದಕ್ಷಿಣ ಭಾರತದ ತೆಲುಗು ಹಾಗೂ ತಮಿಳಿನಲ್ಲಿ ತೆರೆಕಂಡ ಸಿನಿಮಾದ ರಿಮೇಕ್​ನಲ್ಲಿ ನಟಿಸಲಿದ್ದಾರಂತೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಹಿಂದೆ ಬಿದ್ದ ಸ್ಟಾರ್​ ನಟ: ಕಿಲಾಡಿ ಕೈ ತಪ್ಪಿದ ಎರಡು ಸಿನಿಮಾ.!

ತೆಲುಗಿನಲ್ಲಿ 'ಆಮೆ' ಹಾಗೂ ತಮಿಳಿನಲ್ಲಿ 'ಆಡೈ' ಹೆಸರಿನಲ್ಲಿ ತೆರೆಕಂಡ, ನಟಿ ಅಮಲಾ ಪೌಲ್​ ನಟಿಸಿರುವ ಈ ಚಿತ್ರ ಹಿಂದಿಯಲ್ಲಿ ರಿಮೇಕ್​ ಆಗಲಿದೆಯಂತೆ. ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಇದರ ನಿರ್ಮಾಣಕ್ಕೆ ಮುಂದಾಗಿದೆ ಎಂದು ಸಿನಿಮಾದ ನಿರ್ದೇಶಕ ರತ್ನ ಕುಮಾರ್​ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

 
Loading...



ರತ್ನಕುಮಾರ್​ ನಿರ್ದೇಶನದ ಈ ಸಿನಿಮಾದಲ್ಲಿ ಅಮಲಾ ಪೌಲ್​ ಕೆಲವು ದೃಶ್ಯಗಳಲ್ಲಿ ಬೆತ್ತಲಾಗಿ ಅಭಿನಯಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆದರೆ ಈ ಸಿನಿಮಾದ ರಿಮೇಕ್​ನಲ್ಲಿ ಕಂಗನಾ ನಟಿಸುತ್ತಾರೆ ಎನ್ನುವುದು ದೊಡ್ಡ ವಿಷಯ.

Amala Paul in Tamil Movie Aadai Movie
'ಆಡೈ' ಸಿನಿಮಾದಲ್ಲಿ ನಟಿ ಅಮಲಾ ಪೌಲ್​


'ಆಡೈ' ಸಿನಿಮಾದ ಹಿಂದಿ ರಿಮೇಕ್​ ಹಕ್ಕನ್ನು ವಿಕ್ರಮ್​ ಭಟ್​ ಖರೀದಿಸಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೆ ನಿರ್ದೇಶಕ ಈ ಪಾತ್ರಕ್ಕಾಗಿ ಕಂಗನಾರನ್ನು ಸಂಪರ್ಕಿಸಿದ್ದು, ಅವರಿಗೆ ಕತೆ ಕೇಳಿಸಿದ್ದಾರಂತೆ. ಕತೆಯಲ್ಲಿ ಕೊಂಚ ಬದಲಾವಣೆ ಮಾಡಲು ಕಂಗನಾ ತಿಳಿಸಿದ್ದಾರಂತೆ. ಎಲ್ಲ ಸರಿಹೋದರೆ ಕಂಗನಾ ಪಾತ್ರಕ್ಕಾಗಿ ಹೇಗೆ ಬೇಕಾದರೂ ನಟಿಸುತ್ತಾರೆ. ಆದರೆ ಕಂಗನಾ ಈ ಸಿನಿಮಾಗೆ ಒಪ್ಪಿಗೆ ಕೊಟ್ಟು, ಅಮಲಾ ರೀತಿಯಲ್ಲೇ ಅವರು ನಗ್ನವಾಗಿ ಅಭಿನಯಿಸುತ್ತಾರಾ ಎಂದು ಕಾದುನೋಡಬೇಕಿದೆಯಷ್ಟೆ.

 

Shraddha Srinath: ಹೇಗಿದ್ದ ಶ್ರದ್ಧಾ ಶ್ರೀನಾಥ್​ ಹೀಗಾಗಿದ್ದು ಹೇಗೆ ಗೊತ್ತಾ..?



 
First published:October 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...