HOME » NEWS » Entertainment » WILL DARSHANS KURUKSEHTRA BEAT YASHS KGF RECORD ZP

ಕೆ.ಜಿ.ಎಫ್ ಕಲೆಕ್ಷನ್ ದಾಖಲೆ ಮುರಿದು ಮುನ್ನುಗ್ಗಲಿದೆ ಕುರುಕ್ಷೇತ್ರ?

Kurukshetra collection: ಈ ಎಲ್ಲಾ ಗಳಿಕೆಗಳ ಲೆಕ್ಕಚಾರಗಳನ್ನು ತೆಗೆದುಕೊಂಡರೆ ಕುರುಕ್ಷೇತ್ರ ಸಿನಿಮಾ ಶೀಘ್ರದಲ್ಲೇ ನೂರು ಕೋಟಿ ಕ್ಲಬ್ ಸೇರಲಿದೆ. ಅದೇ ರೀತಿ ಕೆಲವೇ ವಾರಗಳಲ್ಲಿ ಅಮೆರಿಕ ಸೇರಿದಂತೆ ಹಲವೆಡೆ ಕುರುಕ್ಷೇತ್ರ ರಿಲೀಸ್ ಆಗಲಿದ್ದು, ಇದರಿಂದ ಮತ್ತಷ್ಟು ಮೊತ್ತ ನಿರ್ಮಾಪಕರ ಪಾಲಿಗೆ ಹರಿದು ಬರಲಿದೆ.

zahir | news18india
Updated:August 15, 2019, 10:02 PM IST
ಕೆ.ಜಿ.ಎಫ್ ಕಲೆಕ್ಷನ್ ದಾಖಲೆ ಮುರಿದು ಮುನ್ನುಗ್ಗಲಿದೆ ಕುರುಕ್ಷೇತ್ರ?
kurukshetra-Kgf
  • Share this:
ಕರುನಾಡಿನಲ್ಲಿ 'ಕುರುಕ್ಷೇತ್ರ'ದ ಅಬ್ಬರ ಜೋರಾಗಿಯೇ ಇದೆ. ತೆರೆಕಂಡ 400ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ರಜೆಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಇದರಿಂದ ಕುಟುಂಬ ಪ್ರೇಕ್ಷಕರು ಥಿಯೇಟರುಗಳಿಗೆ ಹರಿದು ಬರುತ್ತಿದ್ದಾರೆ.

ಇನ್ನು ದರ್ಶನ್ ಫ್ಯಾನ್ಸ್ ಕೂಡ ಚಿತ್ರಕ್ಕಾಗಿ ಮುಗಿ ಬೀಳುತ್ತಿದ್ದು ಒಂದು ಬಾರಿ ನೋಡಿದವರು ಮತ್ತೊಮ್ಮೆ ದುರ್ಯೋಧನನ ಘರ್ಜನೆಗಾಗಿ ಕ್ಯೂ ನಿಲ್ಲುತ್ತಿದ್ದಾರೆ. ಪರಿಣಾಮ ಕನ್ನಡದ ಈ ಐತಿಹಾಸಿಕ ಸಿನಿಮಾವು ಮೊದಲ ದಿನವೇ 13 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು 2ನೇ ದಿನದ ಗಳಿಕೆಯು 10 ಕೋಟಿ ದಾಟಿದ್ದು, 3ನೇ ದಿನ 5 ರಿಂದ 6 ಕೋಟಿ ಲೂಟಿ ಮಾಡಿದೆ.

ಹಾಗೆಯೇ ಸೋಮವಾರ ಹಾಗೂ ಮಂಗಳವಾರ ಕೂಡ ಚಿತ್ರಮಂದಿರತ್ತ ಪ್ರೇಕ್ಷಕರು ಹರಿದು ಬಂದಿದ್ದು, ಕೋಟಿ ಲೆಕ್ಕದಲ್ಲೇ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ. ಇನ್ನು ತೆಲುಗಿನ ಪ್ರೇಕ್ಷಕರು ಸಹ 'ಕುರುಕ್ಷೇತ್ರ' ಚಿತ್ರವನ್ನು ಮೆಚ್ಚಿದ್ದು, ಐತಿಹಾಸಿಕ ರಣರಂಗವನ್ನು ವೀಕ್ಷಿಸಲು ಟಾಲಿವುಡ್ ಸಿನಿಪ್ರಿಯರು ಹರಿದು ಬರುತ್ತಿದ್ದಾರೆ. ಒಂದು ಮೂಲದ ಪ್ರಕಾರ ತೆಲುಗಿನಲ್ಲಿ ಚಿತ್ರದ ಕಲೆಕ್ಷನ್ ಈಗಾಗಲೇ ಒಂದೂವರೆ ಕೋಟಿ ದಾಟಿದೆ.

ಒಟ್ಟಿನಲ್ಲಿ ಎರಡು ಚಿತ್ರರಂಗದ ಬಾಕ್ಸಾಫೀಸ್​ನಲ್ಲೂ 'ಸುಲ್ತಾನ'ನ​ ರಾಜಭಾರ ಜೋರಾಗಿಯೇ ನಡೆಯುತ್ತಿದೆ. ಒಂದೇ ಗಳಿಕೆಯು ಮುಂದುವರೆದರೆ ಮೊದಲ ವಾರದಲ್ಲಿ ಒಟ್ಟು ಕಲೆಕ್ಷನ್ 40 ಕೋಟಿ ಆಸುಪಾಸಿಗೆ ಬರಲಿದೆ. ಸದ್ಯಕ್ಕೆ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವೆಂಬ ಖ್ಯಾತಿ 'ಕೆ.ಜಿ.ಎಫ್' ಹೆಸರಿನಲ್ಲಿದೆ. ಬಾಕ್ಸಾಫೀಸ್​ನಲ್ಲಿ ಆರ್ಭಟಿಸಿದ್ದ ಯಶ್ ಅಭಿನಯದ ಈ ಚಿತ್ರವು ಸುಮಾರು 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಅಲ್ಲದೆ ಕನ್ನಡದಲ್ಲಿ ಮೊದಲ ಬಾರಿ 100 ಕೋಟಿಗಳಿಸಿದ ಚಿತ್ರವೆಂಬ ಹೆಗ್ಗಳಿಕೆ 'ಕೆ.ಜಿ.ಎಫ್' ಚಿತ್ರಕ್ಕಿದ್ದು, 2ನೇ ಚಿತ್ರವೆಂಬ ಕೀರ್ತಿ 'ಕುರುಕ್ಷೇತ್ರ' ಚಿತ್ರದ ಪಾಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಏಕೆಂದರೆ 'ಕುರುಕ್ಷೇತ್ರ' ಸಿನಿಮಾವನ್ನು ಕೇವಲ ಕನ್ನಡ ಹಾಗೂ ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. 2 ಭಾಷೆಯಲ್ಲೇ ಚಿತ್ರವು ಮೊದಲ ವಾರದಲ್ಲಿ 40 ಕೋಟಿಯತ್ತ ದಾಪುಗಾಲಿಟ್ಟಿದೆ. ಇನ್ನು ತಮಿಳಿನಲ್ಲಿ ಹಾಗೂ ಮಲಯಾಳಂನಲ್ಲೂ ಚಿತ್ರ ರಿಲೀಸ್ ಆಗಬೇಕಿದೆ.

ತಮಿಳು ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ನಟ ಅರ್ಜುನ್ ಸರ್ಜಾ, ನಟಿ ಸ್ನೇಹ ಈ ಸಿನಿಮಾದಲ್ಲಿರುವುದು 'ಕುರುಕ್ಷೇತ್ರ'ಕ್ಕೆ ಕಾಲಿವುಡ್​ನಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಮಲಯಾಳಂ ಟ್ರೈಲರ್​ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಅಲ್ಲಿನ ಸಿನಿಪ್ರಿಯರಿಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ತಿಳಿಸುತ್ತದೆ. ಹಾಗೆಯೇ ಸದ್ಯಕ್ಕೆ ಕೇರಳದಲ್ಲಿ ಯಾವುದೇ ದೊಡ್ಡ ಸ್ಟಾರ್​ಗಳ ಚಿತ್ರಗಳು ಬಿಡುಗಡೆ ಆಗದಿರುವುದು 'ಕುರುಕ್ಷೇತ್ರ'ಕ್ಕೆ ವರವಾಗಲಿದೆ. ಹೀಗಾಗಿ ಕಾಲಿವುಡ್-ಮಾಲಿವುಡ್​ನಲ್ಲಿ ಭರ್ಜರಿ ಕಲೆಕ್ಷನ್ ಆಗುವ ನಿರೀಕ್ಷೆಯಲ್ಲಿದ್ದಾರೆ ನಿರ್ಮಾಪಕರು.

ಇನ್ನು ಹಿಂದಿಯಲ್ಲೂ ಸಿನಿಮಾ ಬಿಡುಗಡೆ ಆಗಲಿದ್ದು, ಹಲವು ರಾಜ್ಯಗಳಲ್ಲಿ ಕೋಟಿ ಲೆಕ್ಕದಲ್ಲೇ ಕಲೆಕ್ಷನ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮುಂದಿನ ವಾರದೊಳಗೆ ಅನ್ಯಭಾಷೆಯಲ್ಲೂ 'ಕುರುಕ್ಷೇತ್ರ' ಬಿಡುಗಡೆಯಾದರೆ 'ಕೆಜಿಎಫ್' ದಾಖಲೆ ಬದಿಗೆ ಸರಿಯಲಿದೆ. ಈ ಹಿಂದೆ 'ಕೆಜಿಎಫ್' ಎರಡು ವಾರಗಳಲ್ಲಿ 43.90 ಕೋಟಿ ಗಳಿಸಿತ್ತು. ಇದೀಗ ಭಾರತದಾದ್ಯಂತ 'ಕುರುಕ್ಷೇತ್ರ' ರಿಲೀಸ್ ಆದರೆ ಯಶ್ ಚಿತ್ರದ ಕಲೆಕ್ಷನ್ ದಾಖಲೆಯನ್ನು ದರ್ಶನ್ ಚಿತ್ರ ಮುರಿಯಲಿದೆ.ಅಂತೆಯೇ 'ಕುರುಕ್ಷೇತ್ರ' ಥಿಯೇಟರ್ ಕಲೆಕ್ಷನ್ ಹೊರತುಪಡಿಸಿ ಚಿತ್ರ 30 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸುವ ಸಾಧ್ಯತೆಯಿದೆ. ಚಿತ್ರದ ಕನ್ನಡ ಸ್ಯಾಟ್‍ಲೈಟ್ ಹಕ್ಕು 9 ಕೋಟಿಗೆ ಕುದುರಿದರೆ, ಆಡಿಯೋ ಹಕ್ಕು 2 ಕೋಟಿಗೆ ಮಾರಾಟವಾಗಿದೆ. ಹಾಗೆಯೇ ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಸ್ಯಾಟಲೈಟ್ ರೈಟ್ಸ್​ ಡಿಮ್ಯಾಂಡ್ ಬರಲಾರಂಭಿದೆ. ಇನ್ನು ಡಿಜಿಟಲ್ ರೈಟ್ಸ್​ಗೂ ಕೋಟಿ ಲೆಕ್ಕದಲ್ಲಿ ಬೇಡಿಕೆ ಬಂದಿದೆ ಎನ್ನಲಾಗಿದೆ.

ಈ ಎಲ್ಲಾ ಗಳಿಕೆಗಳ ಲೆಕ್ಕಚಾರಗಳನ್ನು ತೆಗೆದುಕೊಂಡರೆ 'ಕುರುಕ್ಷೇತ್ರ' ಸಿನಿಮಾ ಶೀಘ್ರದಲ್ಲೇ ನೂರು ಕೋಟಿ ಕ್ಲಬ್ ಸೇರಲಿದೆ. ಅದೇ ರೀತಿ ಕೆಲವೇ ವಾರಗಳಲ್ಲಿ ಅಮೆರಿಕ ಸೇರಿದಂತೆ ಹಲವೆಡೆ ಕುರುಕ್ಷೇತ್ರ ರಿಲೀಸ್ ಆಗಲಿದ್ದು, ಇದರಿಂದ ಮತ್ತಷ್ಟು ಮೊತ್ತ ನಿರ್ಮಾಪಕರ ಪಾಲಿಗೆ ಹರಿದು ಬರಲಿದೆ. ಹೀಗೆ ಆದಲ್ಲಿ 'ಕೆಜಿಎಫ್' ಚಿತ್ರದ ಗಳಿಕೆಯ ದಾಖಲೆಯನ್ನು ಕುರುಕ್ಷೇತ್ರ ಮುರಿಯಲಿದೆ ಎಂದು ಹೇಳಲಾಗುತ್ತಿದೆ. ಗಾಂಧಿನಗರ ಬಾಕ್ಸಾಫೀಸ್ ಪಂಡಿತರ ಪ್ರಕಾರ ವಿಶ್ವದಾದ್ಯಂತೆ ಕುರುಕ್ಷೇತ್ರ ಬಿಡುಗಡೆ ಆದ ಬಳಿಕವಷ್ಟೇ ಒಟ್ಟಾರೆ ಗಳಿಕೆಯನ್ನು ಊಹಿಸಬಹುದು. ಈಗಾಗಲೇ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದ್ದು, ಇವೆಲ್ಲವನ್ನು ಗಮನಿಸಿದರೆ 'ಕೆಜಿಎಫ್' ಸಿನಿಮಾವನ್ನು ಗಳಿಕೆಯನ್ನು ಮೀರುವಂತೆ 'ಕುರುಕ್ಷೇತ್ರ'  ನಿಲ್ಲಲಿದೆಯಂತೆ.

ಸದ್ಯ ಕರ್ನಾಟಕದ ಹಲವು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಈ ಸಮಯದಲ್ಲೂ ಚಿತ್ರ 30 ರಿಂದ 40 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಮಳೆ ಕಡಿಮೆಯಾದರೆ ಮತ್ತಷ್ಟು ಭಾಗದಲ್ಲಿ 'ಕುರುಕ್ಷೇತ್ರ' ರಿಲೀಸ್ ಆಗಲಿದೆ. ಹೀಗಾಗಿ ಬಾಕ್ಸಾಫೀಸ್ ಸುಲ್ತಾನ್​ನ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆ. ಇವೆಲ್ಲವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕರ್ನಾಟಕದಲ್ಲಿ 'ಕೆಜಿಎಫ್' ಚಿತ್ರದ ಗಳಿಕೆಯನ್ನು 'ಕುರುಕ್ಷೇತ್ರ' ಮೀರಿಸಲಿದೆ. ಹಾಗೆಯೇ ಕನ್ನಡದ ಪಾಲಿಗೆ ಭರ್ಜರಿ ಕಲೆಕ್ಷನ್ ಮಾಡಿದ ಮತ್ತೊಂದು ಚಿತ್ರ ಎಂಬ ಕೀರ್ತಿ ಶೀಘ್ರದಲ್ಲೇ 'ಕುರುಕ್ಷೇತ್ರ ಪಾಲಾಗಲಿದೆ.
First published: August 15, 2019, 10:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories