DBoss Darshan: ರಾಜಮೌಳಿಯ ಮಹಾಭಾರತದಲ್ಲಿ ದುರ್ಯೋಧನನಾಗ್ತಾರ ಡಿಬಾಸ್​: ಲಂಕಾಧಿಪತಿಯಾಗ್ತಾರಾ ಕೌರವಾಧಿಪತಿ ದರ್ಶನ್ ?

DBoss Darshan: ಕುರುಕ್ಷೇತ್ರದಲ್ಲಿ ದರ್ಶನ್​ ದುರ್ಯೋಧನನಾಗಿ ತೋರಿರುವ ದರ್ಪ, ಗತ್ತು ಈಗ ದಾಸನಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸುವಂತಿದೆ. ಅದಕ್ಕೆ ಈಗ ಮತ್ತೊಂದು ದೊಡ್ಡ ಪಾತ್ರ ದಾಸನಿಗಾಗಿ ಕಾಯುತ್ತಿದೆ.

Anitha E | news18
Updated:August 13, 2019, 4:31 PM IST
DBoss Darshan: ರಾಜಮೌಳಿಯ ಮಹಾಭಾರತದಲ್ಲಿ ದುರ್ಯೋಧನನಾಗ್ತಾರ ಡಿಬಾಸ್​: ಲಂಕಾಧಿಪತಿಯಾಗ್ತಾರಾ ಕೌರವಾಧಿಪತಿ ದರ್ಶನ್ ?
ದುರ್ಯೋಧನನಾಗಿ ದರ್ಶನ್​
  • News18
  • Last Updated: August 13, 2019, 4:31 PM IST
  • Share this:
ದುರ್ಯೋಧನ ಅಂದ್ರೆ ದರ್ಶನ್, ದರ್ಶನ್ ಅಂದ್ರೆ ದುರ್ಯೋಧನ. ಕರುನಾಡಿಗೆ ಇರುವುದು ಒಬ್ಬನೇ ದುರ್ಯೋಧನ ಅಂತ ಈ ಹಿಂದೆ ರವಿಮಾಮ ಹೇಳಿದ್ದರು. ಅದಕ್ಕೆ ತಕ್ಕಂತೆ 'ಕುರುಕ್ಷೇತ್ರ'ದಲ್ಲಿ ದರ್ಶನ್​ ಅವರನ್ನು ನೋಡಿದವರೆಲ್ಲ ದಾಸನಿಗೆ ಸರಿಸಾಟಿ ಯಾರು ಇಲ್ಲ ಅಂತಿದ್ದಾರೆ.

'ಕುರುಕ್ಷೇತ್ರ'ದಲ್ಲಿ ದರ್ಶನ್​ ದುರ್ಯೋಧನನಾಗಿ ತೋರಿರುವ ದರ್ಪ, ಗತ್ತು ಈಗ ದಾಸನಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸುವಂತಿದೆ. ಅದಕ್ಕೆ ಈಗ ಮತ್ತೊಂದು ದೊಡ್ಡ ಪಾತ್ರ ದಾಸನಿಗಾಗಿ ಕಾಯುತ್ತಿದೆ.

Darshan Fan tweets about Raavana Character
ಡಿಬಾಸ್​ ಅಭಿಮಾನಿಗಳ ಟ್ವೀಟ್​


ಮಹಾಕಾವ್ಯ 'ಮಹಾಭಾರತ'ದ ಮೇಲೆ ಸಿನಿಮಾ ಮಾಡುವುದು ಒಂದು ದೊಡ್ಡ ಜವಾಬ್ದಾರಿ. ಇಂತಹ ಸಿನಿಮಾಗಳಲ್ಲಿ ಅವಕಾಶ ಅರಸಿ ಬರುವುದು ಸುಮ್ಮನೆ ಅಲ್ಲ. ಅದರಲ್ಲಿ ಅವಕಾಶ ಸಿಗುವುದೇ ಪುಣ್ಯ ಎನ್ನುವ ಕಲಾವಿದರಿಗೆ, ಆ ಪಾತ್ರಗಳಿಗೆ ನ್ಯಾಯ ಒದಗಿಸುವ ಸಾಮರ್ಥ್ಯವಿರಬೇಕು.

ಇದನ್ನೂ ಓದಿ: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ..!

ಹೀಗಿರುವಾಗ ದುರ್ಯೋಧನನಂತಹ ಪಾತ್ರ ಮಾಡಿ ಸೈ ಎನಿಸಿಕೊಳ್ಳುವುದು ಸಾಮಾನ್ಯ ಅಲ್ಲ. ಈಗ ದರ್ಶನ್ ದುರ್ಯೋಧನನಾಗಿ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರೋದು ನೋಡಿ ಅದಾಗಲೇ ಮತ್ತೆರೆಡು ಮಹಾನ್ ಪಾತ್ರಗಳನ್ನು ದರ್ಶನ್​ ಮಾಡಬೇಕು ಅಂತ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ

 
Loading...
ನಿರ್ದೇಶಕ ರಾಜಮೌಳಿ ಅವರ ಕನಸಿನ ಕೂಸಾಗಿರುವ 'ಮಹಾಭಾರತ' ಸಿನಿಮಾ ಕೆಲಸ ಆರಂಭವಾದರೆ, ಅದರಲ್ಲಿ ದರ್ಶನ್​ ಅವರೇ ದುರ್ಯೋಧನನ ಪಾತ್ರ ಮಾಡಬೇಕು. ಅಷ್ಟೇ ಅಲ್ಲ ಬಾಲಿವುಡ್​ನಲ್ಲಿ ಈಗಾಗಲೇ ಕೆಲಸ ಆರಂಭಿಸಿರುವ 'ರಾಮಾಯಣ' ಚಿತ್ರದಲ್ಲೂ ದಚ್ಚು ರಾವಣನಾಗಿ ಅಭಿನಯಿಸಬೇಕು ಎಂಬುದು ಡಿಬಾಸ್ ಅಭಿಮಾನಿಗಳ ಆಗ್ರಹ.

ರಾಮಾಯಣದ ಮಹಾವೀರ... ಲಂಕೆಯ ಒಡೆಯ... ರಾಕ್ಷಸರ ರಾಜ ರಾವಣನ ಪಾತ್ರವನ್ನು ದರ್ಶನ್ ಮಾಡಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.

ಗೀತಾ ಆರ್ಟ್ಸ್​ ಈಗಾಗಲೇ 'ರಾಮಾಯಣ'ವನ್ನು ತೆರೆಯ ಮೇಲೆ ತರುವ ಯೋಜನೆ ಹಾಕಿಕೊಂಡಿದೆ. ಬಾಲಿವುಡ್​ನಲ್ಲಿ ನಿರ್ಮಾಣಗೊಳ್ಳಲಿರುವ ಈ ಸಿನಿಮಾವನ್ನು ನಿತೇಶ್​ ತಿವಾರಿ ನಿರ್ದೇಶಿಸಲಿದ್ದಾರೆ. 500 ಕೋಟಿ ಬಜೆಟ್​ನಲ್ಲಿ ಸಿದ್ಧಗೊಳ್ಳಲಿರುವ ಈ ರಾಮಾಯಣವನ್ನು ತೆಲುಗು ಹಾಗೂ ತಮಿಳಿನಲ್ಲೂ ಡಬ್​ ಮಾಡುವ ಯೋಜನೆ ಇದೆ.

ಇದನ್ನೂ ಓದಿ: ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

3ಡಿಯಲ್ಲಿ ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ದರ್ಶನ್​ ರಾವಣನಾಗೋದು ಸೂಕ್ತ ಅಂತ ಒತ್ತಾಯ ಮಾಡ್ತಿದ್ದಾರೆ ದರ್ಶನ್ ಅಭಿಮಾನಿಗಳು. ಆದರೆ ಈ ಬಗ್ಗೆ ಸಿನಿಮಾದ ನಿರ್ಮಾಪಕರು ಅಥವಾ ನಿರ್ದೇಶಕರು ಇನ್ನೂ ಮಾತನಾಡಿಲ್ಲ.  ಒಟ್ಟಾರೆ 2020ರಲ್ಲಿ ಆರಂಭವಾಗಲಿರೋ ಈ ಬಿಗ್‍ಬಜೆಟ್ ರಾಮಾಯಣದಲ್ಲಿ ದರ್ಶನ್​ ಲಂಕಾಧಿಪತಿಯಾಗ್ತಾರ ಅಥವಾ ಇಲ್ಲವಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!


 
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...