ಬಿಗ್ಬಾಸ್ ಎಂದರೆ ಬೇರೆಯೇ ಜಗತ್ತು. ಇಲ್ಲಿ ಹೊರಗಿನ ಪ್ರಪಂಚದಲ್ಲಿ ಎನು ನಡೆಯುತ್ತಿದೆ ಅದರ ಬಗ್ಗೆ ಸ್ಪರ್ಧಿಗಳಿಗೆ ಏನು ತಿಳಿದಿರುವುದಿಲ್ಲ. ಆದರೆ ಈ ಸೀಸನ್ನಲ್ಲಿ ಒಂದು ಅನುಮಾನ ಸೃಷ್ಠಿಯಾಗಿದ್ದು, ಹೊರ ಜಗತ್ತಿನ ಮಾಹಿತಿ ದೊಡ್ಮನೆಗೆ ನುಸುಳಿತಾ? ಎಂಬುದು ಪ್ರೇಕ್ಷಕರಿಗೆ ಕಾಡಿದೆ. ಏನು ಆ ಹೊರಗಿನ ಸುದ್ದಿ? ಇಲ್ಲಿದೆ ಮಾಹಿತಿ.
ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ದಿನಗಳ ಹಿಂದೆ ಈ ಸಿನಿಮಾ ಹ್ಯಾಂಡ್ಸ್ ಅಪ್ ಹಾಡು ಬಿಡುಗಡೆಯಾಗಿತ್ತು. ಮಾತ್ರವಲ್ಲದೆ, ಹಾಡಿನಲ್ಲಿರುವ ಸಿಗ್ನೇಚರ್ ಸ್ಟೆಪ್ ಕೂಡ ವೈರಲ್ ಆಗಿತ್ತು. ಇದೇ ಹಾಡನ್ನು ಸೋಮವಾರದಂದು ಮುಂಜಾನೆ ಬಿಗ್ಬಾಸ್ ಮನೆಯಲ್ಲಿ ಹಾಕಲಾಗಿತ್ತು. ಆದರೆ ಈ ಹಾಡಿಗೆ ಸ್ಪರ್ಧಿ ಚಂದನ್ ಆಚಾರ್ ಮಾಡಿ ಡ್ಯಾನ್ಸ್ ಮಾತ್ರ ಸಿಗ್ನೇಚರ್ ಸ್ಟೆಪ್ನಂತೆ ಮೇಲ್ನೋಟಕ್ಕೆ ಭಾಸವಾಗುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ