Anushka Shetty: ಈ​ ಸ್ಟಾರ್​​ ಜೊತೆ ಕಮ್​ಬ್ಯಾಕ್​ ಮಾಡ್ತಾರಂತೆ ಅನುಷ್ಕಾ ಶೆಟ್ಟಿ.. ಅಭಿಮಾನಿಗಳ ಆಸೆ ಕೊನೆಗೂ ಈಡೇರುತ್ತಿದೆ!

ಟಾಲಿವುಡ್​ ಹಿರಿಯ ನಟ ಮೆಗಾಸ್ಟಾರ್​ ಚಿರಂಜೀವಿ ಜೊತೆ ಅನುಷ್ಕಾ  ಮೊತ್ತಮೊದಲ ಬಾರಿಗೆ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಟಾಲಿವುಡ್​ ಅಂಗಳದಲ್ಲಿ ಸದ್ಯಕ್ಕೆ ಕೇಳಿಬರುತ್ತಿದೆ. ಇನ್ನೂ  ಇವರಿಬ್ಬರ ಈ ಸಿನಿಮಾ ಬಿಗ್​ಬಜೆಟ್​ನ ಸಿನಿಮಾ ಎಂದು ಹೇಳಲಾಗುತ್ತಿದೆ. ಇಬ್ಬರು ತಾರೆಯರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ.

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ

  • Share this:
ಅನುಷ್ಕಾ ಶೆಟ್ಟಿ(Anushka Shetty).. ನಮ್ಮ ಕನ್ನಡದ ಹುಡುಗಿ.. ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವವರು. ತೆಲುಗು(Telugu), ತಮಿಳು(Tamil) ಚಿತ್ರರಂಗವನ್ನು ಆಳಿದವರು, ಆಳುತ್ತಿರುವವರು. ಆಕೆಯ ಬ್ಯೂಟಿ(Beauty)ಗೆ ಮರುಳಾಗದವರೇ ಇಲ್ಲ.. ನಟಿಗೆ ಬೇಕಿರುವ ಎಲ್ಲ ಅಂಶಗಳು ಅನುಷ್ಕಾ ಶೆಟ್ಟಿ ಅವರಲ್ಲಿತ್ತು. ಅಂದ, ಚೆಂದ, ಎತ್ತರ ಎಲ್ಲವೂ ಪರ್ಫೆಕ್ಟ್(Perfect)​​.. ಈ ನಟಿ ಸಿನಿಮಾದಲ್ಲಿ ಇದ್ದಾರೆ ಅದು ಸೂಪರ್​ ಹಿಟ್​. ಹೀರೋ ಯಾರು ಬೇಕಾದರೂ ಇರಲಿ ಅನುಷ್ಕಾ ಶೆಟ್ಟಿ ನೋಡಲೆಂದೇ ಅಭಿಮಾನಿಗಳು ಚಿತ್ರಮಂದಿರಗಳಿಗೆ ತೆರಳುತ್ತಿದ್ದರು. ಕೆಲ ದಿನಗಳಿಂದ ಅನುಷ್ಕಾ ಶೆಟ್ಟಿ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಬಾಹುಬಲಿ(Baahubali) ಸಿನಿಮಾ ತಂದು ಕೊಟ್ಟ ಯಶಸ್ಸಿನ ಬಳಿಕ ಅನುಷ್ಕಾ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಇದೀಗ ಅವರ ಅಭಿಮಾನಿಗಳಿಗೆ ಗುಡ್​ನ್ಯೂಸ್(Good News)​ ಸಿಕ್ಕಿದೆ. ಆ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. 2020ರಲ್ಲಿ ತೆರೆಕಂಡ ‘ನಿಶ್ಶಬ್ದಂ’ ನಂತರ ಅವರು ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಅದಕ್ಕೂ ಹಿಂದೆ ಅವರು 2018ರಲ್ಲಿ ‘ಭಾಗಮತಿ’ಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅನುಷ್ಕಾ ಮುಂದಿನ ಚಿತ್ರದ ಕುರಿತು ಸುದ್ದಿ ಹರಿದಾಡುತ್ತಿದ್ದು ಫ್ಯಾನ್ಸ್(Fans) ಥ್ರಿಲ್ ಆಗಿದ್ದಾರೆ. ಅದು ತೆಲುಗಿನ ಸೂಪರ್​ಸ್ಟಾರ್​ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಕಮ್​ಬ್ಯಾಕ್(Comeback)​ ಮಾಡಲಿದ್ದಾರೆ ಎಂಬ ವಿಚಾರ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

ಮೆಗಾಸ್ಟಾರ್​ ಜೊತೆ ಕಮ್​ಬ್ಯಾಕ್​ ಮಾಡ್ತಾರಂತೆ ಅನುಷ್ಕಾ ಶೆಟ್ಟಿ!

ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿರುವ ಹೊಸ ಸುದ್ದಿಯ ಪ್ರಕಾರ, ಟಾಲಿವುಡ್​ನ ಹಿರಿಯ ನಟ ಮೆಗಾಸ್ಟಾರ್​ ಚಿರಂಜೀವಿ ಜೊತೆ ಅನುಷ್ಕಾ  ಮೊತ್ತಮೊದಲ ಬಾರಿಗೆ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಟಾಲಿವುಡ್​ ಅಂಗಳದಲ್ಲಿ ಸದ್ಯಕ್ಕೆ ಕೇಳಿಬರುತ್ತಿದೆ. ಇನ್ನೂ  ಇವರಿಬ್ಬರ ಈ ಸಿನಿಮಾ ಬಿಗ್​ಬಜೆಟ್​ನ ಸಿನಿಮಾ ಎಂದು ಹೇಳಲಾಗುತ್ತಿದೆ. ಇಬ್ಬರು ತಾರೆಯರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಆದರೆ, ಇಷ್ಟು ವರ್ಷಗಳಾದರೂ ಅನುಷ್ಕಾ ಶೆಟ್ಟಿ, ಚಿರಂಜೀವಿ ಅವರೊಂದಿಗೆ ನಟಿಸದೇ ಇರುವುದು ಫ್ಯಾನ್ಸ್​ಗೆ ಬೇಸರ ಮೂಡಿಸಿತ್ತು.  2006ರಲ್ಲಿ ತೆರೆಕಂಡ ‘ಸ್ಟಾಲಿನ್’ ಚಿತ್ರದಲ್ಲಿ ಅನುಷ್ಕಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಚಿರಂಜೀವಿ ಜೊತೆ ಹೀರೋಯಿನ್​ ಆಗಿ ಅನುಷ್ಕಾ ಶರ್ಮಾ ಇದುವರೆಗೂ ನಟಿಸಿಲ್ಲ.

ಇದನ್ನು ಓದಿ : ನಟ ಸಿದ್ದಾರ್ಥ್- ಸೈನಾ ನೆಹ್ವಾಲ್ 'ಟ್ವೀಟ್' ಗುದ್ದಾಟ, ಆತ ಹೀಗೆ ಎಂದು ಅಂದುಕೊಡಿರ್ಲಿಲ್ಲ ಎನ್ನುತ್ತಿದ್ದಾರೆ ಜನ

ಒಬ್ಬರ ಸಿನಿಮಾದಲ್ಲಿ ಮತ್ತೊಬ್ಬರ ಸಣ್ಣ ಪಾತ್ರ!

ಚಿರಂಜೀವಿ ಹಾಗೂ ಅನುಷ್ಕಾ ಶೆಟ್ಟಿ ಹೀರೋ-ಹೀರೋಯಿನ್​ ಪಾತ್ರಗಳಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೂ, ಒಬ್ಬರ ಸಿನಿಮಾದಲ್ಲಿ ಮತ್ತೊಬ್ಬರು ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸಿದ್ದಾರೆ. ಸ್ಟಾಲಿನ್​ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಇದಾದ ಹತ್ತು ವರ್ಷಗಳ ನಂತರ ಅನುಷ್ಕಾ ನಟಿಸಿದ ‘ರುದ್ರಮ್ಮದೇವಿ’ ಚಿತ್ರವನ್ನು ಚಿರಂಜೀವಿ ನಿರೂಪಿಸಿದ್ದರು. ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅನುಷ್ಕಾ ರಾಣಿ ಲಕ್ಷ್ಮಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರು ಒಟ್ಟಾಗಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿಲ್ಲ. ಹೀಗಾಗಿ ಈ ಬಾರಿ ಈ ಗಾಳಿ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕೇಳಕೊಳ್ಳುತ್ತಿದ್ದಾರೆ.

ಇದನ್ನು ಓದಿ: ‘ರೌಡಿ ಬಾಯ್ಸ್’ ಸಿನಿಮಾದಲ್ಲಿ ನಟಿ ಅನುಪಮಾ ಕಿಸ್ಸಿಂಗ್ ಸೀನ್​ ಬಗ್ಗೆಯೇ ಚರ್ಚೆ, ವಿಡಿಯೋ ನೋಡಿ

ಇನ್ನೂ ಈ ಚಿತ್ರಕ್ಕೆ ಹೆಸರಾಂತ ನಿರ್ಮಾಪಕರು ಬಂಡವಾಳ ಹೂಡಲಿದ್ದಾರಂತೆ. ಸದ್ಯ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ‘ಗಾಡ್​ಫಾದರ್’ ಹಾಗೂ ‘ಭೋಲಾ ಶಂಕರ್​’ನಲ್ಲೂ ಅವರು ಬಣ್ಣಹಚ್ಚುತ್ತಿದ್ದಾರೆ. ಇದಾದ ಬಳಿಕ ಈ ಸಿನಿಮಾ ಟೇಕ್​ಒವರ್​ ಆಗಲಿದೆ ಎಂದು ಮಾಹಿತಿ ದೊರೆತಿದೆ.
Published by:Vasudeva M
First published: