ಪುರುಷರಿಗೇಕೆ ಬೇಕು ಪಿತೃತ್ವ ರಜೆ..? ವಿರಾಟ್ ಕೊಹ್ಲಿ, ಸೈಫ್‌ ಅಲಿ ಖಾನ್‌ಗೆ ಸಿಕ್ಕ ಅದೃಷ್ಟ ಎಲ್ಲರಿಗೂ ಸಿಗಲ್ಲ..!

ಕೊಹ್ಲಿಯ ಪಿತೃತ್ವ ರಜೆ ಒಂದು ಒಳ್ಳೆಯ ನಿದರ್ಶನವನ್ನು ನೀಡುತ್ತದೆ ಮತ್ತು ಬಿಸಿಸಿಐನಂತಹ ಸಂಸ್ಥೆಗಳಲ್ಲಿ ಕಡ್ಡಾಯ ಪಿತೃತ್ವ ರಜೆ ಕಾನೂನು ರಚನೆಯಾಗಲು ದಾರಿ ಮಾಡಿಕೊಡುತ್ತದೆ ಎಂದು ಹಲವರು ಅಭಿಪ್ರಾಯಪಟ್ಟರು.

ವಿರಾಟ್​ ಕೊಹ್ಲಿ-ಅನುಷ್ಕಾ ಜೋಡಿ ಮತ್ತು ತನ್ನ ಮಗನೊಂದಿಗೆ ಸೈಫ್ ಅಲಿ ಖಾನ್​.

ವಿರಾಟ್​ ಕೊಹ್ಲಿ-ಅನುಷ್ಕಾ ಜೋಡಿ ಮತ್ತು ತನ್ನ ಮಗನೊಂದಿಗೆ ಸೈಫ್ ಅಲಿ ಖಾನ್​.

 • Share this:
  ಭಾರತ - ಆಸ್ಟ್ರೇಲಿಯ ಟೆಸ್ಟ್‌ ಸರಣಿ ವೇಳೆ ಒಂದೇ ಪಂದ್ಯವಾಡಿದ ವಿರಾಟ್‌ ಕೊಹ್ಲಿ ತಮ್ಮ ಮಗಳು ವಾಮಿಕಾ ಹುಟ್ಟುವ ಮುನ್ನವೇ ರಜೆ ತೆಗೆದುಕೊಂಡಿದ್ದು, ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ, ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಸಹ ಪಿತೃತ್ವ ರಜೆಗಳ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ನಟಿ ಮತ್ತು ಪತ್ನಿ ಕರೀನಾ ಕಪೂರ್ ಖಾನ್ ಅವರೊಂದಿಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವ ಸೈಫ್, ತಾನು ಯಾವಾಗಲೂ ಪಿತೃತ್ವ ರಜೆಗಳನ್ನು ತೆಗೆದುಕೊಂಡಿದ್ದೇನೆ. ನಟಿ ಅಮೃತಾ ಸಿಂಗ್ ಪತ್ನಿಯಾಗಿದ್ದಾಗ ಜನಿಸಿದ್ದ ಸಾರಾ ಅಲಿ ಖಾನ್‌, ಇಬ್ರಾಹಿಂ ಖಾನ್‌ ಹಾಗೂ ತೈಮೂರ್‌ ಜನನನ ಸಮಯದಲ್ಲೂ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ.

  "ನೀವು ಮನೆಯಲ್ಲಿ ನವಜಾತ ಶಿಶುವನ್ನು ಹೊಂದಿರುವಾಗ ಯಾರು ಕೆಲಸ ಮಾಡಲು ಬಯಸುತ್ತಾರೆ! ನಿಮ್ಮ ಮಕ್ಕಳು ಬೆಳೆಯುತ್ತಿರುವುದನ್ನು ನೀವು ನೋಡದಿದ್ದರೆ, ನೀವು ತಪ್ಪು ಮಾಡುತ್ತಿದ್ದೀರಿ" ಎಂದು ನಟ ಸೈಫ್‌ ಅಲಿ ಖಾನ್‌ ಸಂದರ್ಶನವೊಂದರಲ್ಲಿ ಹೇಳಿದರು. ಅಲ್ಲದೆ, “ಮತ್ತು ನಾನು ಕೆಲಸದಿಂದ ಬಿಡುವು ತೆಗೆದುಕೊಳ್ಳಬಹುದು.. 9 ರಿಂದ 5 ರ ದಿನಚರಿಯನ್ನು ಅನುಸರಿಸುವ ಬದಲು, ನಾನು ನಟನಂತೆ ಬದುಕುತ್ತೇನೆ" ಎಂದು ಅವರು ಹೇಳಿದರು.

  ನಟಿ ಆ್ಯನ್ನೆ ಹ್ಯಾಥ್‌ವೇ ಸಹ ಈ ಸಂಪೂರ್ಣ ಅವಶ್ಯಕತೆಯ ಬಗ್ಗೆ ಒತ್ತಿಹೇಳಿದ್ದರು. ಈಗ, ನಮ್ಮ ದೇಶದ ಪ್ರಮುಖ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಮೊದಲ ಮಗುವಿನ ಜನನದ ಸಮಯದಲ್ಲಿ ನಟಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇರಲು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಡೆದ ಮೊದಲ ಭಾರತ - ಆಸ್ಟ್ರೇಲಿಯ ಟೆಸ್ಟ್‌ ಪಂದ್ಯದ ಬಳಿಕ ಭಾರತಕ್ಕೆ ಮರಳುವ ನಿರ್ಧಾರ ಮಾಡಿ ರಜೆ ತೆಗೆದುಕೊಂಡಿದ್ದರು. ಈ ಪಿತೃತ್ವ ರಜೆ ಹಲವರ ಹುಬ್ಬೇರಿಸಿದ್ದು ಸುಳ್ಳಲ್ಲ. ಟೆಸ್ಟ್ ಸರಣಿಯಲ್ಲಿ ಆಡಲು ಅವರ "ರಾಷ್ಟ್ರೀಯ ಕರ್ತವ್ಯ" ವನ್ನು ನಿರಾಕರಿಸಿ ರಜಾದಿನವನ್ನು ತೆಗೆದುಕೊಂಡಿದ್ದಕ್ಕೆ ಮಾಜಿ ಕ್ರಿಕೆಟಿಗರು ಸೇರಿ ಹಲವರು ಅಸಾಮಾಧಾನ ವ್ಯಕ್ತಪಡಿಸಿದ್ದರು.

  ಆದರೆ ಅನೇಕ ನಟರು ಮತ್ತು ಸೆಲೆಬ್ರಿಟಿಗಳು ಪಿತೃತ್ವ ರಜೆಗಳ ಮಹತ್ವದ ಬಗ್ಗೆಯೂ ಹೇಳಿದ್ದಾರೆ. ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿ ರನ್ನು ಬೆಂಬಲಿಸಿ ಮಾತನಾಡಿದ್ದರು. 'ಸಂಪೂರ್ಣ ಟೆಸ್ಟ್‌ ಸರಣಿ ಆಡಿದ್ದರೆ ನಾಯಕನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿತ್ತು. ಈ ಹಿನ್ನೆಲೆ ಕ್ರಿಕೆಟ್‌ಗಿಂತ ತನ್ನ ಮಗುವಿನ ಜನನಕ್ಕೆ ಪ್ರಾಮುಖ್ಯತೆ ನೀಡಿದ್ದು ಸರಿಯಾದ ನಿರ್ಧಾರ' ಎಂದು ಸ್ಮಿತ್‌ ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು.

  ಇದನ್ನೂ ಓದಿ: Farmers Protest: ಕೇಂದ್ರ ಕೃಷಿ ಕಾನೂನನ್ನು ಬೆಂಬಲಿಸಿ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್; ಮಹಾರಾಷ್ಟ್ರ ಸರ್ಕಾರದಿಂದ ತನಿಖೆಗೆ ಆದೇಶ

  ಇನ್ನೊಂದೆಡೆ, ಕೊಹ್ಲಿಯ ಪಿತೃತ್ವ ರಜೆ ಒಂದು ಒಳ್ಳೆಯ ನಿದರ್ಶನವನ್ನು ನೀಡುತ್ತದೆ ಮತ್ತು ಬಿಸಿಸಿಐನಂತಹ ಸಂಸ್ಥೆಗಳಲ್ಲಿ ಕಡ್ಡಾಯ ಪಿತೃತ್ವ ರಜೆ ಕಾನೂನು ರಚನೆಯಾಗಲು ದಾರಿ ಮಾಡಿಕೊಡುತ್ತದೆ ಎಂದು ಇತರರು ಅಭಿಪ್ರಾಯಪಟ್ಟರು.

  ಅನೇಕ ಬಾಲಿವುಡ್ ಸೆಲೆಬ್ರಿಟಿಗಳಾದ ಶಾಹಿದ್ ಕಪೂರ್ ಮತ್ತು ಕುನಾಲ್ ಖೇಮು ಕೂಡ ತಮ್ಮ ಮಕ್ಕಳ ಜನನದ ಸಮಯದಲ್ಲಿ ಪಿತೃತ್ವ ರಜೆಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
  Published by:MAshok Kumar
  First published: