• Home
  • »
  • News
  • »
  • entertainment
  • »
  • Ponniyin Selvan 1: ಪೊನ್ನಿಯಿನ್ ಸೆಲ್ವನ್​​ನಲ್ಲಿ ರಜನಿ-ಕಮಲ್ ಹಾಸನ್​ ಯಾಕಿಲ್ಲ? ಏನಂತಾರೆ ಮಣಿರತ್ನಂ?

Ponniyin Selvan 1: ಪೊನ್ನಿಯಿನ್ ಸೆಲ್ವನ್​​ನಲ್ಲಿ ರಜನಿ-ಕಮಲ್ ಹಾಸನ್​ ಯಾಕಿಲ್ಲ? ಏನಂತಾರೆ ಮಣಿರತ್ನಂ?

ಪೊನ್ನಿಯಿನ್ ಸೆಲ್ವನ್

ಪೊನ್ನಿಯಿನ್ ಸೆಲ್ವನ್

Ponniyin selvan 1: ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಆದರೆ ಈ ಸಿನಿಮಾದಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ನಟಿಸಿಲ್ಲ. ಇಂಥಹ ಲೆಜೆಂಡ್ ನಟರನ್ನು ಮಣಿರತ್ನಂ ತಮ್ಮ ಐತಿಹಾಸಿಕ ಸಿನಿಮಾದಿಂದ ಯಾಕೆ ಕೈಬಿಟ್ಟರು? ನ್ಯೂಸ್​ 18 ಜೊತೆ ಮಣಿರತ್ನಂ ಮಾತುಗಳು.

ಮುಂದೆ ಓದಿ ...
  • Share this:

ಪೊನ್ನಿಯಿನ್ ಸೆಲ್ವನ್ 1 (Ponniyin Selvan 1) ಸಿನಿಮಾ ಗ್ರ್ಯಾಂಡ್ ರಿಲೀಸ್ ಕಂಡಿದೆ. ಕಲ್ಕಿ ಮಾಹಾಕಾವ್ಯ ಆಧಾರಿತ ಸಿನಿಮಾವನ್ನು ಅದ್ಭುತ ದೃಶ್ಯ ವೈಭವವಾಗಿ ತೆರೆಯ ಮೇಲೆ ತಂದಿದ್ದಾರೆ ಮಣಿ ರತ್ನಂ (Mani Ratnam). ಸಿನಿಮಾ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ. ಸೌತ್​ನ ಸೂಪರ್​​ಸ್ಟಾರ್​​ಗಳನ್ನು ಒಳಗೊಂಡಿರುವ ಸಿನಿಮಾದಲ್ಲಿ ತಮಿಳಿನ ಲೆಜೆಂಡ್ ನಟರಾದ ಕಮಲ್ ಹಾಸನ್ (Kamal Hassan) ಹಾಗೂ ರಜನೀಕಾಂತ್ (Rajinikant) ಅವರೇ ಇಲ್ಲ ಎನ್ನುವುದು ಸಿನಿ ಪ್ರಿಯರ ಅಚ್ಚರಿ. ಇವರನ್ನು ಮಣಿರತ್ನಂ ಯಾಕೆ ಕೈಬಿಟ್ಟರು ಎನ್ನುವುದು ಎಲ್ಲರ ಕುತೂಹಲ. ಈ ಬಗ್ಗೆ ಸೌತ್​ನ ಫೇಮಸ್ ನಿರ್ದೇಶಕ ಮಣಿ ರತ್ನಂ ಅವರೇ ನ್ಯೂಸ್​ 18 (News18) ಜೊತೆಗೆ ಮಾತನಾಡಿದ್ದಾರೆ. ಅವರ ಎಕ್ಸ್​ಕ್ಲೂಸಿವ್ ಸಂದರ್ಶನ ಇಲ್ಲಿದೆ.


ಪೊನ್ನಿಯಿನ್ ಸೆಲ್ವನ್ ರಿಲೀಸ್ ಆದಾಗಿನಿಂದ ಉತ್ತಮ ವಿಮರ್ಶೆ ಪಡೆಯುತ್ತಿದೆ. ವಿಶ್ವಾದ್ಯಂತ ಬಿಡುಗಡೆಯಾದ ಸಿನಿಮಾಗೆ (Cinema) ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ಇತಿಹಾಸದಲ್ಲಿಯೇ ಬೃಹತ್ ಸಮ್ರಾಜ್ಯ ಸ್ಥಾಪಿಸಿದ್ದ ಚೋಳರ (Chola) ಕಥೆ ಇದಾಗಿರುವುದರಿಂದ ಸಿನಿಮಾ ಸೆಟ್ಟೇರಿದಾಗಿನಿಂದಲೂ ಇದು ಸಾಕಷ್ಟು ಕುತೂಹಲ ಸೃಷ್ಟಿಸಿತ್ತು.
ಒಟ್ಟು ನಾಲ್ಕು ಭಾಗಗಳು, ಎರಡು ಭಾಗದಲ್ಲಿ ಸಿನಿಮಾ


ನ್ಯೂಸ್ 18 ಕನ್ನಡ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಣಿರತ್ನಂ ಮಾತನಾಡಿ, ಚೆನ್ನೈನ ಲಾಯ್ಡ್ಸ್ ರಸ್ತೆಯ ಲೈಬ್ರರಿಯಿಂದ ಪೊನ್ನಿಯಿನ್ ಸೆಲ್ವನ್ ಪುಸ್ತಕ ತಂದಾಗ ಇದೆಲ್ಲವೂ ಶುರುವಾಯಿತು. ನಾನದನ್ನು ಅದೆಷ್ಟೋ ಸಲ ಓದಿದ್ದೆ. ಕಲ್ಕಿ ಅವರು ಅದ್ಭುತವಾದ ಶೈಲಿಯಲ್ಲಿ ಈ ಕಾದಂಬರಿ ಬರೆದಿದ್ದು, ಇದನ್ನು ತೆರೆ ಮೇಲೆ ತೋರಿಸುವ ಉತ್ಸಾಹ ಹುಟ್ಟಿತು. ಕಾದಂಬರಿ ನಾಲ್ಕು ಭಾಗಗಳು ನಾಲ್ಕು ಭಿನ್ನ ಚಿತ್ರಗಳಾಗಿ ಕಾಣಿಸಿದವು. ಹೀಗಿದ್ದರೂ ನಾವು ಒಟ್ಟು ಎರಡು ಭಾಗಗಳಲ್ಲಿ ಸಿನಿಮಾ ಮಾಡಿದೆವು ಎಂದಿದ್ದಾರೆ.


ಕಾಡುತ್ತಿದ್ದ ಕಾದಂಬರಿ


ಪ್ರತಿ ಬಾರಿ ನಾನು ಅದನ್ನು ಓದುವಾಗಲೂ ಪ್ರತಿ ಪಾತ್ರವೂ ನನ್ನನ್ನು ಕಾಡುತ್ತಿತ್ತು. ಮೊದಲ ಬಾರಿ ವಂದಿಯದೇವನ್ ಅತಿಯಾಗಿ ಕಾಡಿತು. ಕುಂದವೈ ಪಾತ್ರದ ಮೇಲೂ ಅಗಾಧ ಪರಿಣಾಮ ಕಾಣಿಸಿತ್ತು. ಪ್ರತಿ ಪಾತ್ರವನ್ನೂ ಕಲ್ಕಿ ತಿದ್ದಿ ತೀಡಿ ಮಾಡಿದ್ದರು. ಇದು ನನಗೆ ಸಿನಿಮಾ ಮಾಡಲು ಪ್ರೇರೇಪಿಸಿತು ಎಂದಿದ್ದಾರೆ.


Ponniyin Selvan Part 1 Movie Review Mani Ratnams adaptation of Kalkis Ponniyin Selvan is spectacular
ಪೊನ್ನಿಯನ್​ ಸೆಲ್ವನ್​


ಸಾವಿರ ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಆಧಾರಿಸಿ ಕಲ್ಕಿ 70 ವರ್ಷದ ಹಿಂದೆ ಈ ಕಾದಂಬರಿ ಬರೆದರು. ಅವರು ಈ ಹಂತದವರೆಗೆ ಬರೆದ ಘಟನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಕಾದಂಬರಿಯಲ್ಲಿ ಉಲ್ಲೇಖಿಸಿರುವ ರಾಜಕೀಯವು ಈ ಅವಧಿಗೂ ಅನ್ವಯಿಸುತ್ತದೆ ಎಂದು ಮಣಿರತ್ನಂ ಹೇಳಿದ್ದಾರೆ.


ಚಲನಚಿತ್ರದ ಸಂಭಾಷಣೆಯು ನಿರ್ಣಾಯಕ ಅಂಶವಾಗಿತ್ತು ಎಂದಿದ್ದಾರೆ ಮಣಿರತ್ನಂ. ಆದರೂ ಬರಹಗಾರ ಜಯಮೋಹನ್ ಅವರು ಪದ್ಯವನ್ನು ನೈಜವಾಗಿ ಧ್ವನಿಸುವಲ್ಲಿ ಸಹಾಯ ಮಾಡಿದರು ಎಂದಿದ್ದಾರೆ.


ರಜನಿ-ಕಮಲ್:


ಮಣಿರತ್ನಂ ಪ್ರಕಾರ, 'ಹೆಚ್ಚಿನ ಅಭಿಮಾನಿಗಳು ರಜಿನಿ ಮತ್ತು ಕಮಲ್ ಅನ್ನು ಬೆಂಬಲಿಸುತ್ತಾರೆ. ಕಲ್ಕಿಯ ಪೊನ್ನಿಯಿನ್ ಸೆಲ್ವನ್ ಅವರ ಮೇಲಿನ ಅಭಿಮಾನದ ಕಾರಣದಿಂದ ಅವರನ್ನು ಸಿನಿಮಾದಲ್ಲಿ ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದರು. ಆದರೆ, ಸೀಕ್ವೆನ್ಸ್‌ಗಳ ಕೊರತೆಯಿಂದ ಇಬ್ಬರೂ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ' ಎಂದು ನಿರ್ದೇಶಕರು ಒಪ್ಪಿಕೊಂಡರು.


ಇದನ್ನೂ ಓದಿ: Ponniyin Selvan: ಸೌತ್​ನ ಟಾಪ್ ಡೈರೆಕ್ಟರ್ ಮಣಿರತ್ನಂ ಸಿನಿಮಾದಲ್ಲಿ ಹುಬ್ಬಳ್ಳಿ ಹುಡುಗ!


ನೀವು ಪೊನ್ನಿಯಿನ್ ಸೆಲ್ವನ್ ಅನ್ನು ಓದಿದಾಗ ಕಲ್ಕಿ ಈ ಪುಸ್ತಕವನ್ನು ಬರೆಯಲು ಎಷ್ಟು ಅಧ್ಯಯನ ಮಾಡಿದ್ದಾರೆಂದು ನೀವು ಹೇಳಬಹುದು. ಈ ಚಲನಚಿತ್ರದ ವೇಷಭೂಷಣಗಳು, ಸೌಂದರ್ಯಶಾಸ್ತ್ರ ಮತ್ತು ಇತರ ಅಂಶಗಳು ಹೆಚ್ಚಿನ ಸಂಶೋಧನೆಯನ್ನು ಒಳಗೊಂಡಿವೆ. ಅವರ ಆಲೋಚನೆಗಳನ್ನು ಪಡೆಯಲು ನಾವು ಹೆಚ್ಚಿನ ಸಂಖ್ಯೆಯ ವೃತ್ತಿಪರರನ್ನು ಸಂಪರ್ಕಿಸಿದ್ದೇವೆ' ಎಂದು ಅವರು ಹೇಳಿದರು.


ಚೋಳರ ಕಾಲವನ್ನು ತಿಳಿಯುವುದು ಸವಾಲಾಗಿತ್ತೇ?


ಅದಕ್ಕೆ ಉತ್ತರಿಸಿ ಮಣಿ ರತ್ನಂ, ಹೌದು. ಖಂಡಿತಾ ಚಾಲೆಂಜಿಂಗ್ ಆಗಿತ್ತು. ಕಲ್ಕಿಯವರ ಕಥೆಯ ಹೊರತಾಗಿಯೂ ಕೆಲವು ದೃಶ್ಯಗಳನ್ನು ಕಾಲ್ಪನಿಕಗೊಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ponniyin Selvan Movie Review: ಕಾದಂಬರಿ ಸಿನಿಮಾ ಆದಾಗ ಅದ್ಭುತ! ಪೊನ್ನಿಯಿನ್ ಸೆಲ್ವನ್​ಗೆ ವ್ಯಾಪಕ ಮೆಚ್ಚುಗೆ


ಮುಕ್ತಾಯದ ಭಾಗದಲ್ಲಿ, ಮಣಿರತ್ನಂ ಅವರು ಕಾದಂಬರಿಯನ್ನು ಓದಿದವರಿಗೆ ಇದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಓದದವರಿಗೆ ಚಿತ್ರವು ಸುಲಭವಾಗಿ ಅರ್ಥವಾಗುವಂತೆ ಕಾಣುತ್ತದೆ. ನಾನು ಸಿನಿಮಾ ಮಾಡುವಾಗ ಅದನ್ನು ಪ್ಯಾನ್-ಇಂಡಿಯನ್ ಸಿನಿಮಾ ಎಂದು ಪರಿಗಣಿಸಿರಲಿಲ್ಲ. ಚಿತ್ರವು ಹೆಚ್ಚು ಸ್ಥಳೀಯವಾಗಿತ್ತು. ಸತ್ಯಜಿತ್ ರೇ ಅವರ ಬಂಗಾಳಿ ಹಳ್ಳಿ ಕಥೆಯನ್ನು ಜಗತ್ತು ಹೇಗೆ ನೋಡಿದೆಯೋ ಹಾಗೆ ಎಂದಿದ್ದಾರೆ.

Published by:Divya D
First published: