• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Tiger Shroff -DishaPatani: ಬಾಲಿವುಡ್​ನ ಮತ್ತೊಂದು ಜೋಡಿಯ ಬ್ರೇಕಪ್? ಟೈಗರ್ ಶ್ರಾಫ್ ಬಗ್ಗೆ ಏನಂದ್ರು ನಟಿ

Tiger Shroff -DishaPatani: ಬಾಲಿವುಡ್​ನ ಮತ್ತೊಂದು ಜೋಡಿಯ ಬ್ರೇಕಪ್? ಟೈಗರ್ ಶ್ರಾಫ್ ಬಗ್ಗೆ ಏನಂದ್ರು ನಟಿ

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ

ಈಗ ಬಾಲಿವುಡ್ ನಲ್ಲಿ ತುಂಬಾ ದಿನಗಳಿಂದ ನಟ ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ಅವರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಶುರುವಾಗಿದ್ದವು. ಆರು ವರ್ಷಗಳ ತಮ್ಮ ಸಂಬಂಧವನ್ನು ಎಂದಿಗೂ ಈ ಜೋಡಿ ದೃಢಪಡಿಸಲಿಲ್ಲ ಮತ್ತು ಯಾವಾಗಲೂ ಅವರು ಉತ್ತಮ ಸ್ನೇಹಿತರು ಅಂತ ಹೇಳಿ ಸಮರ್ಥಿಸಿಕೊಂಡಿದ್ದರು ಹಾಗಿದ್ರೆ ಈಗ ಇವರ ಸಂಬಂಧ ಏನಾಗಿದೆ ನೋಡಿ.

ಮುಂದೆ ಓದಿ ...
 • Share this:

ಈ ಸಿನೆಮಾ (Cinema) ಮಂದಿ ಯಾವಾಗ ಒಬ್ಬರ ಜೊತೆಯಲ್ಲಿ ಇನ್ನೊಬ್ಬರು ಓಡಾಡುತ್ತಾರೆ, ಯಾವಾಗ ಬೇರೆ ಬೇರೆ ಆಗುತ್ತಾರೆ ಅಂತಾನೆ ಅರ್ಥವಾಗುವುದಿಲ್ಲ. ಕೆಲವರು ಸುಮಾರು ವರ್ಷಗಳ ಕಾಲ ಸಂಬಂಧದಲ್ಲಿದ್ದು, ದಿಢೀರನೆ ಬೇರೆಯಾಗುತ್ತಾರೆ ಮತ್ತು ಇನ್ನೂ ಕೆಲವರು ಸಂಬಂಧದಲ್ಲಿದ್ದು, ಮದುವೆಯಾಗಿ (Marriage) ಕೆಲವು ವರ್ಷಗಳ ಕಾಲ ಒಟ್ಟಿಗೆ ಇದ್ದು, ನಂತರ ವಿಚ್ಛೇದನ (Divorce) ಪಡೆಯುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಹಾಗಂತ ಮದುವೆಯಾದ ಎಲ್ಲಾ ನಟ ನಟಿಯರು (Actor and Actress) ಹೀಗೆ ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ ಅಂತ ಅಲ್ಲ, ಕೆಲವು ನಟ ಮತ್ತು ನಟಿಯರು ಮದುವೆಯಾಗಿ ಸುಖವಾಗಿಯೂ ಸಹ ಬಾಳುತ್ತಿದ್ದಾರೆ.


ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ನಾಡು ಏನಾದ್ರೂ ಸಂಬಂಧವಿತ್ತಾ?
ಈಗ ಬಾಲಿವುಡ್ ನಲ್ಲಿ ತುಂಬಾ ದಿನಗಳಿಂದ ನಟ ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ಅವರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಶುರುವಾಗಿದ್ದವು. ಆರು ವರ್ಷಗಳ ತಮ್ಮ ಸಂಬಂಧವನ್ನು ಎಂದಿಗೂ ಈ ಜೋಡಿ ದೃಢಪಡಿಸಲಿಲ್ಲ ಮತ್ತು ಯಾವಾಗಲೂ ಅವರು ಉತ್ತಮ ಸ್ನೇಹಿತರು ಅಂತ ಹೇಳಿ ಸಮರ್ಥಿಸಿಕೊಂಡರು. ಈ ಇಬ್ಬರು ಫಿಟ್ನೆಸ್ ಮತ್ತು ಜಿಮ್ ಉತ್ಸಾಹಿಗಳು ಆಗಿದ್ದರಿಂದ ಅವರ ಸಾಮಾನ್ಯ ಆಸಕ್ತಿಗಳು ಮತ್ತು ಡಿನ್ನರ್ ಪಾರ್ಟಿ ಮತ್ತು ಮಾಲ್ಡೀವ್ಸ್ ಪ್ರವಾಸಗಳನ್ನು ಗಮನದಲ್ಲಿಟ್ಟುಕೊಂಡು ಸ್ಪಷ್ಟವಾದ ಪ್ರಣಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು.


ಇದನ್ನೂ ಓದಿ:  Akshay Kumar: ಅಕ್ಷಯ್ ಕುಮಾರ್ ಸಂಭಾವನೆಯ ಬಗ್ಗೆ ಏನಂದ್ರು ಸಮಂತಾ? ಸೌತ್ ಬ್ಯೂಟಿಯ ಉತ್ತರಕ್ಕೆ ಶಾಕ್ ಆದ ಕರಣ್


ನಟ ಟೈಗರ್ ಶ್ರಾಫ್ ತನ್ನ ಖಾಸಗಿ ಜೀವನದ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ ಮತ್ತು ಇವರಿಬ್ಬರಲ್ಲಿ ಹೆಚ್ಚು ನಿಷ್ಕಪಟವಾಗಿರುವ ದಿಶಾ ಅವರು ಒಮ್ಮೆ 2019 ರಲ್ಲಿ ಬಾಂಬೆ ಟೈಮ್ಸ್ ಗೆ ನೀಡಿದ ಒಂದು ಸಂದರ್ಶನದಲ್ಲಿ ಅದರ ಬಗ್ಗೆ ಮಾತಾಡಿದ್ದರು.


ಟೈಗರ್ ಶ್ರಾಫ್ ಬಗ್ಗೆ ದಿಶಾ ಏನು ಹೇಳಿದ್ರು 
ಅವರಿಬ್ಬರ ಸ್ನೇಹ ಮತ್ತು ಬಾಂಧವ್ಯದ ಬಗ್ಗೆ ಕೇಳಿದಾಗ, ದಿಶಾ ಅವರು "ನಮ್ಮಿಬ್ಬರಲ್ಲಿ, ಟೈಗರ್ ಹೆಚ್ಚು ಫಿಟ್ನೆಸ್ ಪ್ರಜ್ಞೆ ಹೊಂದಿದ್ದಾರೆ. ಅವನಿಗೆ ಅದರದೇ ಧ್ಯಾನ, ಅವರು ಸಂಪೂರ್ಣವಾಗಿ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದಾರೆ" ಎಂದು ಹೇಳಿದ್ದರು. "ನಾನು ಅಷ್ಟಾಗಿ ಯಾವೊಬ್ಬ ಪುರುಷರ ಗಮನವನ್ನು ಪಡೆದಿಲ್ಲ ಮತ್ತು ಯಾವುದೇ ಒಬ್ಬ ವ್ಯಕ್ತಿ ನನ್ನನ್ನು ಇದುವರೆಗೂ ಕೇಳಿಲ್ಲ ಅಥವಾ ನನಗೆ ಪ್ರಪೋಸ್ ಮಾಡಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಆ ರೀತಿಯ ಪುರುಷ ಗಮನವನ್ನು ನಾನು ಎಂದಿಗೂ ಪಡೆದಿಲ್ಲ” ಎಂದು ಹೇಳಿದ್ದರು.


ಇದನ್ನೂ ಓದಿ: Samantha: ಸಿನಿಮಾದಲ್ಲಿ ಮಾತ್ರವಲ್ಲ ಶಾಲೆಯಲ್ಲೂ ಟಾಪರ್, ಸಮಂತಾ SSLC ಅಂಕಪಟ್ಟಿ ವೈರಲ್


ಅದಕ್ಕೆ 'ಟೈಗರ್ ಕೂಡ ಪ್ರಪೋಸ್ ಮಾಡಿಲ್ಲವೇ ಅಂತ ಕೇಳಿದಾಗ, ದಿಶಾ ಅವರು "ನಾನು ಅವನನ್ನು ಮೆಚ್ಚಿಸಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೇನೆ, ಆದರೆ ಅವನು ನನ್ನ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ನಾವು ಊಟಕ್ಕಾಗಿ ಹೊರಗೆ ಹೋಗುತ್ತೇವೆ. ಆದರೆ ನನಗೆ ಸ್ನೇಹಕ್ಕಿಂತ ಹೆಚ್ಚು ಬೇಕು, ಆದರೆ ಅದು ಅಲ್ಲಿ ಆಗುತ್ತಿಲ್ಲ. ನಾವು ಅದಕ್ಕಿಂತ ಹೆಚ್ಚು ಇರಬೇಕೆಂದು ನಾನು ಬಯಸುತ್ತೇನೆ, ಆದರೆ ಅದು ಒಂದು ಕಡೆಯ ಪ್ರೀತಿಯಾಗಿಯೇ ಉಳಿದಿದೆ. ಜಿಮ್ನಾಸ್ಟಿಕ್ಸ್, ಫಿಟ್ನೆಸ್ ನಲ್ಲಿ ಎಲ್ಲದರಲ್ಲಿಯೂ ನಾನು ಅವನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅದು ಸಂಭವಿಸುತ್ತಿಲ್ಲ" ಎಂದು ಹೇಳಿದ್ದರು.

top videos


  ಇಬ್ರೂ ಬೇರೆ ಬೇರೆ ಆಗಿದ್ದೇಕೆ?
  ಆದರೆ ಈಗ ಈ ಇಬ್ಬರ ಆಪ್ತ ಮೂಲಗಳು ಬಿಟಿಯೊಂದಿಗೆ ಮಾತನಾಡುತ್ತಾ, "ಇಬ್ಬರೂ ದೀರ್ಘಕಾಲದಿಂದ ಸ್ನೇಹಿತರಾಗಿದ್ದರು, ಆದರೆ ಟೈಗರ್ ತನ್ನ ಸ್ವಂತ ಜೀವನ ಮತ್ತು ಫಿಟ್ನೆಸ್ ಬಗ್ಗೆ ತುಂಬಾ ಗಮನ ಹರಿಸಿದ್ದಾರೆ. ಅವರು ಮೊದಲಿನಿಂದಲೂ ಅದರ ಬಗ್ಗೆ ಸ್ಪಷ್ಟವಾಗಿದ್ದರು. ವಿಷಯಗಳು ಅಂತಿಮವಾಗಿ ಬದಲಾಗುತ್ತವೆ ಎಂದು ದಿಶಾ ಭರವಸೆ ಹೊಂದಿದ್ದರು, ಆದರೆ ಅದು ಸಂಭವಿಸುತ್ತಿಲ್ಲ. ಈ ರೀತಿಯ ಒಂದೇ ಕಡೆಯ ಪ್ರೀತಿ ಸಂಬಂಧಗಳು ಭಾವನಾತ್ಮಕವಾಗಿ ಬರಿದಾಗುತ್ತಿವೆ ಮತ್ತು ಅದು ಇಬ್ಬರ ನಡುವೆ ಉದ್ವಿಗ್ನತೆಗೆ ಕಾರಣವಾಗುತ್ತಿದೆ. ಅಂತಿಮವಾಗಿ ಅವರು ಇಬ್ಬರು ಬೇರೆ ಬೇರೆಯಾಗಿದ್ದಾರೆ ಮತ್ತು ಇದು ಅವರಿಬ್ಬರ ಜೀವನಕ್ಕೂ ಒಳ್ಳೆಯದು" ಎಂದು ಹೇಳಿವೆ.

  First published: