Sushant Singh Rajput: ಬಾಲಿವುಡ್ ಬಿಗ್​ ಬಜೆಟ್ ಸಿನಿಮಾಗಳು ಬಾಯ್ಕಾಟ್, ಸುಶಾಂತ್ ಮಾತ್ರ ಫುಲ್ ಟ್ರೆಂಡಿಂಗ್! ಯಾಕೆ ಹೀಗೆ?

ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಚಿತ್ರದಿಂದ ಹಿಡಿದು ಆಲಿಯಾ ಭಟ್ ಅಭಿನಯದ ಡಾರ್ಲಿಂಗ್ಸ್ ಚಿತ್ರವಾಗಿರಬಹುದು ಅದೇ ರೀತಿ ಅಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ ಚಿತ್ರದಿಂದ ಆರಂಭಿಸಿ ರಣಬೀರ್ ಕಪೂರ್ ಅವರ ಶಮ್‌ಶೇರ್ ಚಿತ್ರದವರೆಗೆ ಇತ್ತೀಚೆಗೆ ಬಿಡುಗಡೆಯಾದ ಪ್ರತಿಯೊಂದು ಸಿನಿಮಾಗಳು ಕೂಡ ಏನಾದರೂ ಒಂದು ಕಾರಣಕ್ಕಾಗಿ ಬಹಿಷ್ಕಾರ ಇಲ್ಲವೇ ನಿಷೇಧಕ್ಕೆ ಒಳಗಾಗುತ್ತಿವೆ. ಈ ಚಿತ್ರಗಳನ್ನು ಒಟಿಟಿ ಇಲ್ಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಾರದೆಂಬ ಬಹಿಷ್ಕಾರಕ್ಕೆ ಒಳಗಾಗುತ್ತಿವೆ.

 ಅನುರಾಗ್ ಕಶ್ಯಪ್ ಮತ್ತು ಸುಶಾಂತ್ ಸಿಂಗ್

ಅನುರಾಗ್ ಕಶ್ಯಪ್ ಮತ್ತು ಸುಶಾಂತ್ ಸಿಂಗ್

  • Share this:
ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ (Raksha Bandhan) ಚಿತ್ರದಿಂದ ಹಿಡಿದು ಆಲಿಯಾ ಭಟ್ ಅಭಿನಯದ ಡಾರ್ಲಿಂಗ್ಸ್ ಚಿತ್ರವಾಗಿರಬಹುದು ಅದೇ ರೀತಿ ಅಮೀರ್ ಖಾನ್‌ರ ಲಾಲ್ ಸಿಂಗ್ ಚಡ್ಡಾ (Lal Singh Chaddha) ಚಿತ್ರದಿಂದ ಆರಂಭಿಸಿ ರಣಬೀರ್ ಕಪೂರ್ ಅವರ ಶಮ್‌ಶೇರ್ ಚಿತ್ರದವರೆಗೆ ಇತ್ತೀಚೆಗೆ ಬಿಡುಗಡೆಯಾದ ಪ್ರತಿಯೊಂದು ಸಿನಿಮಾಗಳು ಕೂಡ ಏನಾದರೂ ಒಂದು ಕಾರಣಕ್ಕಾಗಿ ಬಹಿಷ್ಕಾರ (Boycott) ಇಲ್ಲವೇ ನಿಷೇಧಕ್ಕೆ ಒಳಗಾಗುತ್ತಿವೆ. ಈ ಚಿತ್ರಗಳನ್ನು ಒಟಿಟಿ ಇಲ್ಲವೇ ಚಿತ್ರಮಂದಿರಗಳಲ್ಲಿ (Movie Theater) ಪ್ರದರ್ಶಿಸಬಾರದೆಂಬ ಬಹಿಷ್ಕಾರಕ್ಕೆ ಒಳಗಾಗುತ್ತಿವೆ. ಕೆಲವೊಂದು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರ ಪ್ರಕಾರ ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಚಿತ್ರಗಳು ಪ್ರೇಕ್ಷಕರ ಮಾನಸಿಕ ಅಭಿವ್ಯಕ್ತಿಗಳಿಗೆ ಧಕ್ಕೆಯನ್ನುಂಟು ಮಾಡುತ್ತಿವೆ ಎಂದಾಗಿದೆ.

ಪ್ರೇಕ್ಷಕರಿಗೆ ರುಚಿಸದೇ ಇರುವ ವಿಷಯಗಳನ್ನು ಚಿತ್ರಗಳಲ್ಲಿ ತುರುಕಲಾಗುತ್ತಿದೆ ಹಾಗೂ ಮನರಂಜನೆಯನ್ನು ನೀಡಬೇಕಾಗಿರುವ ಚಿತ್ರಗಳಿಂದ ಇಂದಿನ ದಿನಗಳಲ್ಲಿ ಕಲಹಗಳು ಏರ್ಪಡುತ್ತಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಚಿತ್ರಗಳನ್ನು ಬಹಿಷ್ಕರಿಸದಂತೆ ವಿನಂತಿಸುತ್ತಿರುವ ನಟ ನಟಿಯರು:
ಚಿತ್ರಗಳನ್ನು ನಿಷೇಧಿಸದಂತೆ ಅಥವಾ ನಿರ್ಬಂಧಿಸದಂತೆ ಅಮೀರ್ ಹಾಗೂ ಅಕ್ಷಯ್ ಪ್ರೇಕ್ಷಕರನ್ನು ವಿನಂತಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಂಡುಬಂದಿರುವ ಯಾವುದೇ ಸನ್ನಿವೇಶ ಇಲ್ಲವೇ ಘಟನೆಗಳು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಲ್ಲಿ ಕ್ಷಮಿಸಬೇಕೆಂದು ಕೋರಿದ್ದಾರೆ ಅದಾಗ್ಯೂ ಚಿತ್ರಗಳನ್ನು ನಿಷೇಧಿಸುವ ಟ್ರೆಂಡ್ ಹಿರಿದಾಗುತ್ತಲೇ ಇದೆ.

ಚಿತ್ರ ನಿರ್ದೇಶಕ bollywood movieಅಭಿಪ್ರಾಯವೇನು?
ಇದೇ ಸಮಯದಲ್ಲಿ ತಾಪ್ಸಿ ಪನ್ನು ಅಭಿನಯದ ಅನುರಾಗ್ ಕಶ್ಯಪ್‌ ನಿರ್ದೇಶನದಲ್ಲಿ ಮೂಡಿಬಂದಿರುವ ದೊಬಾರಾ ಚಿತ್ರದ ಪ್ರಚಾರ ಸಮಯದಲ್ಲಿ ಅನುರಾಗ್ ಸಿನಿಮಾ ನಿಷೇಧದ ಇಲ್ಲವೇ ಆ ಕುರಿತು ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಸನ್ನಿವೇಶವನ್ನು ಆಧರಿಸಿ ತಾವು ಗ್ಯಾಂಗ್ಸ್ ಆಫ್ ವಸ್ಸೇಪುರ್ ಇಲ್ಲವೇ ಬ್ಲ್ಯಾಕ್ ಫ್ರೈಡೆಯಂತಹ ಚಿತ್ರಗಳನ್ನು ತಯಾರಿಸಿಲ್ಲ ಇದೀಗ ತಮ್ಮ ಕೈಯಲ್ಲಿ ಹಲವಾರು ಚಿತ್ರಗಳ ಸ್ಕ್ರಿಪ್ಟ್ ಸಿದ್ಧವಿದ್ದರೂ ಪ್ರೇಕ್ಷಕರು ಅದನ್ನು ಸ್ವೀಕರಿಸುವುದಿಲ್ಲವೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Koffee With Karan: ಕಾಫಿ ವಿತ್ ಕರಣ್​ನಲ್ಲಿ ಸೋನಂ ಕಪೂರ್! ದೀಪಿಕಾ ಪಡುಕೋಣೆ ಬಗ್ಗೆ ಏನಂದ್ರು?

ಇಂದು ನಾನು ಬ್ಲ್ಯಾಕ್ ಫ್ರೈಡೇ, ಗ್ಯಾಂಗ್ಸ್ ಆಫ್ ವಸ್ಸೇಪುರ್ ನಂತಹ ಚಿತ್ರಗಳ ಸ್ಕ್ರಿಪ್ಟ್ ಅನ್ನು ಬದಲಾಯಿಸಿ ಚಿತ್ರ ನಿರ್ಮಾಣ ಮಾಡಿದರೂ ಅದನ್ನು ಸ್ವೀಕರಿಸುವ ಪ್ರೇಕ್ಷಕರು ದೊರೆಯುವುದು ಕಷ್ಟ. ಏಕೆಂದರೆ ಇಂದಿನ ಹೆಚ್ಚಿನ ಸಿನಿಮಾಗಳು ರಾಜಕೀಯ ಹಾಗೂ ಧರ್ಮವನ್ನು ಅವಲಂಬಿಸಿವೆ ಹಾಗಾಗಿಯೇ ಪ್ರೇಕ್ಷಕರು ಇಂತಹ ಚಿತ್ರಗಳನ್ನು ನಿಷೇಧಿಸುತ್ತಿದ್ದಾರೆ ಎಂಬುದಾಗಿ ಅನುರಾಗ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸಿನಿಮಾಗಳ ನಿಷೇಧ ಹಾಗೂ ಇಂದಿಗೂ ಸುದ್ದಿಯಲ್ಲಿರುವ ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್‌ನಂತಹ ಪ್ರತಿಭಾನ್ವಿತ ನಟ ಅಸುನೀಗಿ ಎರಡು ವರ್ಷಗಳ ನಂತರ ಕೂಡ ಪ್ರತಿದಿನ ಸುಶಾಂತ್ ಕುರಿತಾದ ಸುದ್ದಿಗಳೇ ಹರಿದಾಡುತ್ತಿವೆ. ಪ್ರತಿಯೊಂದು ನಿಷೇಧಕ್ಕೊಳಗಾಗುತ್ತಿರುವ ಈ ಸಮಯದಲ್ಲಿ ಇದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಪ್ರತಿಯೊಬ್ಬರನ್ನೂ, ಪ್ರತಿಯೊಂದನ್ನು ಇಲ್ಲಿ ನಿಷೇಧಿಸಲಾಗುತ್ತಿದೆ. ರಾಜಕೀಯ ಪಕ್ಷ, ಭಾರತೀಯ ಕ್ರಿಕೆಟ್ ತಂಡ, ಪ್ರತಿಯೊಬ್ಬರೂ ಹೀಗೆ ಇನ್ನು ನೀವು ಕೂಡ ನಿಷೇಧಿಸಲಾಗಿಲ್ಲವೆಂದಾದಲ್ಲಿ ನೀವು ಅಷ್ಟೊಂದು ಮಹತ್ವದವರಲ್ಲ ಎಂಬುದು ಇಲ್ಲಿ ಪ್ರಮುಖವಾಗಿದೆ.

ಇದನ್ನೂ ಓದಿ: Urvashi and Rishabh: ಊರ್ವಶಿ ರೌಟೇಲಾ ಬಗ್ಗೆ ರಿಷಬ್ ಪಂತ್ ಹೀಗೆ ಅನ್ನೋದಾ! ಇನ್‌ಸ್ಟಾಗ್ರಾಮ್‌ನಲ್ಲಿ ಈ ಸ್ಟೋರಿಯನ್ನು ರಿಷಬ್ ಅಳಿಸಿದ್ದಾದ್ರೂ ಯಾಕೆ?

ದಕ್ಷಿಣದ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಸದ್ದುಮಾಡುತ್ತಿರುವಾಗ ಹಿಂದಿ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹಿಟ್ ಆಗುತ್ತಿಲ್ಲ ಅಂತೆಯೇ ಹಣಗಳಿಕೆಯಲ್ಲೂ ಹಿಂದಿವೆ ಇದಕ್ಕೆ ಮುಖ್ಯ ಕಾರಣಗಳ ಕುರಿತು ಅನುರಾಗ್ ಕಶ್ಯಪ್ ಅನಿಸಿಕೆ ಹಂಚಿಕೊಂಡಿದ್ದರು. ಇವರ ಪ್ರಕಾರ ಬಾಲಿವುಡ್ ಚಿತ್ರಗಳು ಸಂಸ್ಕೃತಿಕವಾಗಿ ಬೇರೂರಿಲ್ಲ ಇದಕ್ಕೆ ಕಾರಣ ಹಿಂದಿ ಭಾಷೆ ಅರಿಯದವರೂ ಕೂಡ ಹಿಂದಿ ಚಿತ್ರಗಳ ನಿರ್ಮಾಣಕ್ಕೆ ಹೊರಟಿರುವುದಾಗಿದೆ. ಸರಾಗವಾಗಿ ಹಿಂದಿ ಮಾತನಾಡಲು ಬಾರದವರೂ ಕೂಡ ಚಿತ್ರ ನಿರ್ದೇಶನ, ಸಂಭಾಷಣೆಗಳ ಸಿದ್ಧಪಡಿಸುವಿಕೆ, ಕಥೆ ಬರೆಯುವುದರಲ್ಲಿ ತೊಡಗಿಕೊಂಡಿದ್ದಾರೆ. ತಮ್ಮದೇ ಭಾಷೆಯಲ್ಲಿ ನುರಿತರಾಗಿರುವ ಚಿತ್ರ ನಿರ್ಮಾಪಕರು, ನಿರ್ದೇಶಕರು ಚಿತ್ರಗಳನ್ನು ನಿರ್ಮಿಸಿದಾಗ ಅಂತಹ ಚಿತ್ರಗಳು ಸ್ಥಳೀಯರ ಮನಮುಟ್ಟುತ್ತವೆ ಮತ್ತು ಹಿಟ್ ಆಗುತ್ತವೆ ಎಂಬ ಅನಿಸಿಕೆ ಹಂಚಿಕೊಂಡಿದ್ದಾರೆ.
Published by:Ashwini Prabhu
First published: