ಹುಟ್ಟುಹಬ್ಬಕ್ಕೆ ಕೇಕ್ ತರಬೇಡಿ ಎಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಏಕೆ ಹೇಳಿದರು ಗೊತ್ತೆ?

news18
Updated:August 28, 2018, 10:07 AM IST
ಹುಟ್ಟುಹಬ್ಬಕ್ಕೆ ಕೇಕ್ ತರಬೇಡಿ ಎಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಏಕೆ ಹೇಳಿದರು ಗೊತ್ತೆ?
news18
Updated: August 28, 2018, 10:07 AM IST
ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​.28): ಹೀಗೆ ಒಮ್ಮೆ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಮನೆ ಮುಂದೆ ಸೇರಿದ್ದರು. ನೂರಾರು ಕೇಜಿ ಕೇಕ್​ಗಳನ್ನು ತಂದು, ಕಟ್​ ಮಾಡಿಸಿದ್ದರು. ಆದರೆ, ಅದನ್ನು ಯಾರು ತಿನ್ನದೆ, ಮನೆ ಮುಂದೆ ಬೀಸಾಡಿ ಹೊರಟುಹೋದರು. ಬೀದಿಯಲ್ಲಿ ಬಿದ್ದ ಕೇಕನ್ನು ನಮ್ಮ ಅಪಾರ್ಟ್​ಮೆಂಟ್​ನಲ್ಲಿ ಕೆಲಸಕ್ಕೆ ಬರುವವರ ಮಕ್ಕಳು ಎತ್ತಿಕೊಂಡು ತಿನ್ನುತ್ತಿದ್ದರು. ಈ ದೃಶ್ಯ ನೋಡಿದ ಮೇಲೆ ಇನ್ನು ಮುಂದೆ ಜನ್ಮದಿನಕ್ಕೆ ಕೇಕ್​ ಕತ್ತರಿಸಬಾರದು ಎಂದು ನಿರ್ಧರಿಸಿದೆ.

ಹೀಗೆ ತಮ್ಮ ಹುಟ್ಟುಹಬ್ಬದಲ್ಲಿಏಕೆ ಕೇಕ್ ಕತ್ತರಿಸುವುದಿಲ್ಲ ಎಂಬುದಕ್ಕೆ ಕಾರಣ ನೀಡಿದವರು ಅಭಿನಯ ಚಕ್ರವರ್ತಿ ಸುದೀಪ್​.

ಕಳೆದ ವರ್ಷ ಸುದೀಪ್​​ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ, ಈ ಬಾರಿ ತಾವು ಅಭಿಮಾನಿಗಳೊಂದಿಗೆ ಬರ್ತಡೇ ಆಚರಿಸಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಕೆಲ ಕಂಡಿಷನ್ಸ್​ಗಳನ್ನು ಹಾಕಿದ್ದಾರೆ. ಸೆಪ್ಟೆಂಬರ್​ 2ರಂದು ನಡೆಯಲಿರುವ ಹುಟ್ಟುಹಬ್ಬದ ಆಚರಣೆಯಲ್ಲಿ ಕೇಕ್​, ಶಾಲು, ಹಾರ ಇವೆಲ್ಲವನ್ನೂ ಯಾರೂ ತರಬಾರದು. ಖಾಲಿ ಕೈಯಲ್ಲಿ ಬಂದು, ವಿಶ್ ಮಾಡಿ ಹೋಗಬೇಕು. ನನ್ನ ನೆಪದಲ್ಲಿ ಅನಗತ್ಯ ಖರ್ಚು ಮಾಡಬಾರದು ಎಂಬುದು ಅವರ ಷರತ್ತುಗಳು.

ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ನೀಡಿ. ಈ ಸಲ ನೀವೆಲ್ಲ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ್ದೀರಿ. ಇದಕ್ಕೂ ನಿಜಕ್ಕೂ ನನ್ನ ಹುಟ್ಟುಹಬ್ಬಕ್ಕಿಂತ ಹೆಚ್ಚು ಸಂತೋಷ ನೀಡುತ್ತದೆ. ಹೀಗಾಗಿ, ಈ ಬಾರಿ ಕಳೆದ ಸಲದಂತೇ ಅದ್ದೂರಿಯಾಗಲ್ಲದೇ, ಸರಳವಾಗಿ ಆಚರಿಸುವ ಮೂಲಕ ಬಡವರಿಗೆ ನೆರವಾಗೋಣ ಎಂದು ಅಭಿಮಾನಿಗಳಲ್ಲಿ ಸುದೀಪ್​ ಮನವಿ ಮಾಡಿದ್ದಾರೆ.

ನನ್ನ ಷರತ್ತುಗಳಿಗೆ ಅಭಿಮಾನಿಗಳು ಒಪ್ಪಿಕೊಂಡ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಕೊಳ್ಳುತ್ತಿರುವೆ. ಎಲ್ಲರೂ ಕೊಡಗು ಸಂತ್ರಸ್ತರಿಗೆ ನೆವಾದಂತೆ ಬಡವರಿಗೆ ಸಹಾಯವಾಗಬೇಕು. ಒಂದೇ ಒಂದು ಗಿಫ್ಟ್​, ಕೇಕ್​ ಕೂಡ ಕಾಣಬಾರದು. ಆಂಡಬರವಿಲ್ಲದೇ ಸರಳವಾಗಿ ಹುಟ್ದಬ್ಬ ಆಚರಿಸಲು ನಿರ್ಧರಿಸಿದ್ಧೇನೆ ಎಂದರು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...