Dilip Kumar-Shahrukh Khan: ಶಾರುಖ್ ಖಾನ್‍ ಜೀವನದಲ್ಲಿ​ ವಿಶೇಷ ಸ್ಥಾನ ಪಡೆದುಕೊಂಡ ದಿಲೀಪ್​ ಕುಮಾರ್: ಕಾರಣಗಳೇನು ಗೊತ್ತಾ..?

ದಿಲೀಪ್ ಕುಮಾರ್ ಹಾಗೂ ಶಾರುಖ್​ ಖಾನ್ ಅವರ ನಡುವೆ ಸಾಕಷ್ಟು ಹೋಲಿಕೆಗಳಿವೆ. ‘ದ ಫಸ್ಟ್ ಖಾನ್’ ದಿಲೀಪ್ ಕುಮಾರ್ ಅವರು 1955ರಲ್ಲಿ ದೇವದಾಸ್ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದರು. ಶರತ್‍ಚಂದ್ರ ಚಟ್ಟೋಪಧ್ಯಾಯ ಅವರ ಕಾದಂಬರಿ ಆಧಾರಿತ ಅದೇ ಪಾತ್ರವನ್ನು 2002ರಲ್ಲಿ ಶಾರುಖ್ ನಿರ್ವಹಿಸಿದ್ದರು. ಇಬ್ಬರೂ ಅತಿ ಹೆಚ್ಚು ಫಿಲ್ಮ್‌ಫೇರ್‌ ಪಡೆದಿದ್ದಾರೆ.

ಶಾರುಖ್​ ಖಾನ್ ಹಾಗೂ ದಿಲೀಪ್ ಕುಮಾರ್​

ಶಾರುಖ್​ ಖಾನ್ ಹಾಗೂ ದಿಲೀಪ್ ಕುಮಾರ್​

  • Share this:
ಬಾಲಿವುಡ್‍ನ ಮೊದಲ ಸೂಪರ್ ಸ್ಟಾರ್.... ಮೇರು ನಟ ದಿಲೀಪ್ ಕುಮಾರ್ ಇನ್ನು ನಮ್ಮೊಂದಿಗಿಲ್ಲ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 98 ವರ್ಷದ ನಟ ಇಹಲೋಕ ತ್ಯಜಿಸಿದ್ದಾರೆ. ಭಾರತೀಯ ಸಿನಿಮಾರಂಗದ ಮೊದಲ ಸೂಪರ್‌ಸ್ಟಾರ್‌ ಆಗಿದ್ದ ಅವರು, ಒಂದರ ಮೇಲೊಂದು ಬ್ಲಾಕ್‍ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಯುವ ನಟನಟಿಯರಿಗೆ ಸ್ಫೂರ್ತಿಯಾಗಿದ್ದರು. ಅವರ ನಟನೆ ಮತ್ತು ಡೈಲಾಗ್ ಹೇಳುವ ಶೈಲಿಗೆ ಪ್ರತ್ಯೇಕ ಅಭಿಮಾನಿ ಬಳಗವಿತ್ತು. ದಿಲೀಪ್ ಕುಮಾರ್ ಅಥವಾ ದಿಲೀಪ್ ಸಾಬ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಅವರ ಮೂಲ ಹೆಸರು ಯೂಸುಫ್ ಖಾನ್. ತಮ್ಮ ನೆಚ್ಚಿನ ನಟ ಕೊನೆಯ ಉಸಿರನ್ನು ಎಳೆದ ಸುದ್ದಿಯನ್ನು ಕೇಳಿದ ಕೋಟ್ಯಂತರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ, ಗೂಗಲ್‍ನಲ್ಲಿ ಶಾರುಖ್ ಖಾನ್ -ದೀಲೀಪ್ ಕುಮಾರ್ ಅವರ ಕುರಿತ ಮಾಹಿತಿಯ ಹುಡುಕಾಟ ಹೆಚ್ಚಿದೆ ಮತ್ತು ಟ್ವಿಟ್ಟರ್‌ನಲ್ಲಿ ಅವರಿಬ್ಬರು ಜೊತೆಗಿರುವ ವಿಡಿಯೋ ಮತ್ತು ಫೋಟೋಗಳು ಟ್ರೆಂಡಿಗ್‍ನಲ್ಲಿವೆ.

ದಿಲೀಪ್ ಕುಮಾರ್ ಹಾಗೂ ಶಾರುಖ್​ ಖಾನ್ ಅವರ ನಡುವೆ ಸಾಕಷ್ಟು ಹೋಲಿಕೆಗಳಿವೆ. ‘ದ ಫಸ್ಟ್ ಖಾನ್’ ದಿಲೀಪ್ ಕುಮಾರ್ ಅವರು 1955ರಲ್ಲಿ ದೇವದಾಸ್ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದರು. ಶರತ್‍ಚಂದ್ರ ಚಟ್ಟೋಪಧ್ಯಾಯ ಅವರ ಕಾದಂಬರಿ ಆಧಾರಿತ ಅದೇ ಪಾತ್ರವನ್ನು 2002ರಲ್ಲಿ ಶಾರುಖ್ ನಿರ್ವಹಿಸಿದ್ದರು. ಇಬ್ಬರೂ ಅತಿ ಹೆಚ್ಚು ಫಿಲ್ಮ್‌ಫೇರ್‌ ಪಡೆದಿದ್ದಾರೆ.

ದಿಲೀಪ್​ ಕುಮಾರ್​


ದಿಲೀಪ್ ಕುಮಾರ್ ಅವರು 1922 ರ ಡಿಸೆಂಬರ್ 11ರಂದು ಪೇಶಾವರದಲ್ಲಿ ಜನಿಸಿದರು. ಅವರ ತಂದೆ ಲಾಲ್ ಗುಲಾಮ್ ಸರ್ವಾರ್ ಹಣ್ಣಿನ ವ್ಯಾಪಾರಿ ಆಗಿದ್ದರು. ಅವರ ಮನೆಗೆ 200 ಮೀಟರ್ ದೂರದಲ್ಲಿ ಶಾರುಖ್ ಖಾನ್ ಅವರ ಪೂರ್ವಜರ ಮನೆ ಇತ್ತು ಎಂದು 2012ರಲ್ಲಿ ಬಿಬಿಸಿ ವರದಿ ಮಾಡಿದೆ.

ಇದನ್ನೂ ಓದಿ: Dilip Kumar: ರಾಜ್​ಕುಮಾರ್​-ದಿಲೀಪ್​ ಕುಮಾರ್​ರ ಅಪರೂಪದ ಫೋಟೋಗಳು: ಸಂತಾಪ ಸೂಚಿಸಿದ ಪುನೀತ್​ ರಾಜ್​ಕುಮಾರ್

ಆದರೆ, ಬಾಲಿವುಡ್ ಮತ್ತು ಪೇಶಾವರ ನಂಟಿನ ಹೊರತಾಗಿ, ಇನ್ನೂ ಕೆಲವು ಸಾಮ್ಯತೆಗಳು ಅವರಲ್ಲಿವೆ. ಶಾರುಖ್ ಖಾನ್ ಅವರು, 2017ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಾನು ಕೆಲವು ವರ್ಷಗಳ ಹಿಂದೆ ಕೇತನ್ ಮೆಹ್ತಾ ಅವರ ಜೊತೆ ಕೆಲಸ ಮಾಡುತ್ತಿದ್ದಾಗ ಅವರ ಕಚೇರಿಯಲ್ಲಿ ದಿಲೀಪ್ ಕುಮಾರ್ ಅವರ ಫೋಟೋವನ್ನು ಕಂಡು ಅದು ತನ್ನ ಫೋಟೋವೆಂದು ತಪ್ಪಾಗಿ ಭಾವಿಸಿದ್ದಾಗಿ ಹೇಳಿಕೊಂಡಿದ್ದಾರೆ.

Dilip Kumar on how to create an enduring performance, love the moment when he holds SRK's hand ❤ pic.twitter.com/afnvwQKSlnನಾನು ಅವರ (ಕೇತನ್ ಮೆಹ್ತಾ) ಕಚೇರಿಯಲ್ಲಿ ದಿಲೀಪ್ ಕುಮಾರ್ ಅವರ ಫೋಟೋವನ್ನು ನೋಡಿದೆ. ನನಗೆ ಓಹ್ ! ಇದು ನಾನು ಎಂದೆನಿಸಿತು. ಆ ಫೋಟೋದಲ್ಲಿ ಅವರು ಬಹಳಷ್ಟು ನನ್ನನ್ನು ಹೋಲುತ್ತಿದ್ದರು. ಅಥವಾ ನಾನು ಅವರಂತೆ ಕಾಣುತ್ತಿದ್ದೆ ಎಂದು ಶಾರುಖ್ ಹೇಳಿದ್ದರು.

ಇದನ್ನೂ ಓದಿ: RIP Dilip Kumar: ಮೊಹಮ್ಮದ್​ ಯೂಸುಫ್​ ಖಾನ್ ಟ್ರಾಜಿಡಿ ಕಿಂಗ್​​ ದಿಲೀಪ್​ ಕುಮಾರ್ ಆದ ಕಥೆ..!

ಅದೇ ಸಂದರ್ಶನದಲ್ಲಿ ತನ್ನ ತಾಯಿಗೆ ದಿಲೀಪ್ ಕುಮಾರ್ ಎಂದರೆ ಬಹಳ ಇಷ್ಟವಿತ್ತು ಮತ್ತು ಅವರ ಮಗ ದಿಲೀಪ್ ಅವರಂತೆಯೇ ಕಾಣಿತ್ತಾನೆ ಎಂದು ಭಾವಿಸಿದ್ದರು. ಸೈರಾ ಬಾನು ಮತ್ತು ದಿಲೀಪ್ ಕುಮಾರ್ ತನ್ನನ್ನು ಮಗನಂತೆಯೇ ಭಾವಿಸಿದ್ದರು ಎಂದು ಶಾರುಖ್ ಹೇಳಿದ್ದಾರೆ.
Published by:Anitha E
First published: