ಸಲ್ಮಾನ್ ಖಾನ್ ಯಾಕೆ ಮದುವೆ ಆಗುತ್ತಿಲ್ಲ?; ಅವರ ಭಾವ ಕೊಟ್ಟ ಕಾರಣ ಇದು

Salman Khan Marriage- ಸಲ್ಮಾನ್ ಖಾನ್ ಮದುವೆ ಯಾವಾಗ? ಅವರು ಇನ್ನೂ ಯಾಕೆ ಮದುವೆ ಆಗಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಇದಕ್ಕೆ ಅವರ ತಂಗಿ ಗಂಡ ಆಯುಶ್ ಶರ್ಮಾ ಉತ್ತರ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

 • News18
 • Last Updated :
 • Share this:
  ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನ ಬಾಲಿವುಡ್​ನ ದಿ ಮೋಸ್ಟ್ ಎಲಿಜಿಬಿಬಲ್ ಬ್ಯಾಚಲರ್ ಎಂದು ಪರಿಗಣಿಸಿ ಬಹಳ ವರ್ಷಗಳೇ ಆದವು. ಈಗಲೂ ಅವರು ಅದೇ ಪಟ್ಟದಲ್ಲಿ ಮುಂದುವರಿದಿದ್ದಾರೆ. ಅವರ ಬ್ಯಾಚಲರ್ ಲೈಫ್ ಮುಗಿಯುತ್ತಲೇ ಇಲ್ಲ. ಹಲವರ ಜೊತೆ ಅಫೇರ್, ಕೆಲವರ ಜೊತೆ ಹುಚ್ಚುಚ್ಚು ಲವ್ ಇತ್ಯಾದಿಗಳನ್ನ ಹೊಂದಿದ್ದ ಸಲ್ಮಾನ್ ಖಾನ್ ಯಾವಾಗ ಬೇಕಾದರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಅವರಿಗೆ ಈಗಾಗಲೇ 55 ವರ್ಷ ವಯಸ್ಸಾಯಿತು. ಈಗಲೂ ಅವರು ಮದುವೆಯ ಸುಳಿವು ಕೊಡುತ್ತಿಲ್ಲ. ಪತ್ರಕರ್ತರು ಮದುವೆಯ ಸೊಲ್ಲೆತ್ತಿದ್ದರೆ ಸಾಕು ಟಾಪಿಕ್ ಬದಲಿಸಿಬಿಡುತ್ತಾರೆ. ಸಲ್ಲು ಭಾಯ್​ಗೆ ಗೃಹಸ್ಥಾಶ್ರಮಕ್ಕೆ ಕಾಲಿಡುವ ಆಸಕ್ತಿ ಬತ್ತಿ ಹೋಗಿದೆಯಾ ಎಂದನಿಸಬಹುದು. ಇದಕ್ಕೆ ಅವರ ಬಾವ ಆಯುಶ್ ಶರ್ಮಾ ಬಳಿ ಉತ್ತರ ಇದೆ.

  ಸಲ್ಮಾನ್ ಖಾನ್ ಅವರ ಸೋದರಿ ಅರ್ಪಿತಾ ಅವರ ಗಂಡ ಆಯುಶ್ ಶರ್ಮಾ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ಮದುವೆ ಬಗ್ಗೆ ಯೋಚಿಸುವುದಕ್ಕೂ ಸಮಯ ಇಲ್ಲವಂತೆ. ಸಲ್ಮಾನ್ ಖಾನ್ ಕಾರ್ಯವೈಖರಿ ಹೇಗಿದೆ ಎಂದರೆ ಅವರಿಗೆ ಮದುವೆಗೆ ಪುರುಸೊತ್ತೇ ಇಲ್ಲದಂತಿದೆ ಎನ್ನುತ್ತಾರೆ ಶರ್ಮಾ.

  “ಮದುವೆಯ ವಿಚಾರವನ್ನೇ ಅವರೊಂದಿಗೆ ಮಾತನಾಡುವುದಿಲ್ಲ. ನಾನು ಅವರ ಜೀವನ ಕಂಡ ಪ್ರಕಾರ ಮತ್ತು ಅವರು ಕೆಲಸ ಮಾಡುವ ರೀತಿ ನೋಡಿದರೆ ಅವರಿಗೆ ಮದುವೆ ಆಗಲು ಸಮಯ ಇಲ್ಲ ಎಂದೇ ಅನಿಸುತ್ತೆ. ಅವರು ಈಗ ಹೇಗಿದ್ದಾರೋ ಹಾಗೇ ಇರಲು ಬಯಸುತ್ತಾರೆ. ಅವರೇ ಸ್ವಂತವಾಗಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ” ಎಂದು ಆಯುಶ್ ಶರ್ಮಾ ಹೇಳುತ್ತಾರೆ.

  ಇದನ್ನೂ ಓದಿ: ‘ಗೆಲುವು ಸಿಗದಿದ್ದರೂ ಪ್ರೀತಿ, ಸ್ನೇಹ ಸಿಕ್ಕಿತು’- ಭಾರತದ ಬಗ್ಗೆ ಪಾಕ್ ಕಿರಿಯರು ಆಡಿದ ಮಾತಿದು

  ಸಂಗೀತಾ ಬಿಜಲಾನಿ ಜೊತೆ ಮದುವೆಯಾಗಬೇಕೆಂದಿದ್ದ ಸಲ್ಮಾನ್:

  ಸಲ್ಮಾನ್ ಖಾನ್ ಜೊತೆ ಹಲವು ನಟಿಯರ ಹೆಸರು ಈ ಹಿಂದೆ ಜೋಡಿತಗೊಂಡಿದ್ದಿದೆ. ಹಲವು ಅಫೇರ್​ಗಳಲ್ಲಿ ಸಲ್ಲು ಹೆಸರು ಇದೆ. ಅದರಲ್ಲಿ ಬಹಳ ಮುಖ್ಯವಾದುದು ಸಂಗೀತಾ ಬಿಜಲಾನಿ ಅವರೊಂದಿಗಿನ ಅಫೇರ್. ವಿಷ್ಣುವರ್ಧನ್ ಅವರಿಗೆ ಒಂದು ಸಿನಿಮಾದಲ್ಲಿ ಹೀರೋಯಿನ್ ಆಗಿದ್ದ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಮತ್ತು ಸಲ್ಮಾನ್ ಖಾನ್ ನಡುವಿನ ಪ್ರೇಮ ವ್ಯವಹಾರಕ್ಕೆ 10 ವರ್ಷ ಜೀವ ಇತ್ತು. ಅವರು ಇನ್ನೇನು ಮದುವೆ ಆಗುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ ಸಂಗೀತಾ ಅವರು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನ ವರಿಸಿಬಿಟ್ಟರು.

  ಸಲ್ಮಾನ್ ಖಾನ್ ಅವರದ್ದು ಬಿಗ್ ಹಾರ್ಟ್ ಎಂದು ಹೇಳುವವರು ಇದ್ದಾರೆ. ಅದು ನಿಜವೇ ಆಗಿರಬೇಕು. ತಾನು ಪ್ರೀತಿಸಿದ ಹುಡುಗಿ ಬೇರೊಬ್ಬರನ್ನ ಮದುವೆ ಆದರೂ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಹೃದಯವಂತ ಎಂದರೆ ತಪ್ಪಾಗಲಾರದು. ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಖಾನ್ ಈಗಲೂ ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದಾರೆ.

  ಇದನ್ನೂ ಓದಿ: Sarah Ali Khan: ಈ ರೀತಿಯ ಹುಡುಗ ಸಿಕ್ಕರೆ ಸಾರಾ ಅಲಿ ಖಾನ್ ಈಗ್ಲೇ ಮದುವೆಯಾಗ್ತಾರಂತೆ, ಹುಡುಗರು ಸ್ವಲ್ಪ ಇತ್ತ ನೋಡಿ...

  ನಟ-ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಮಾತನಾಡುತ್ತಾ ಸಂಗೀತಾ ಬಿಜಲಾನಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದರು. “ಒಂದು ಸಮಯದಲ್ಲಿ ನಾನು ಮದುವೆ ಆಗಲು ಬಯಸಿದ್ದೆ. ಆದರೆ, ಅದು ಯಾಕೋ ಸಾಧ್ಯವಾಗಲಿಲ್ಲ. ನಾನು ಜನರಿಗೆ ಆತ್ಮೀಯನಾಗಲು ಹೋದಾಗೆಲ್ಲಾ ಅವರು ಗಾಬರಿಗೊಳ್ಳುತ್ತಾರೆ. ಸಂಗೀತಾ ಜೊತೆಗಿನ ಮದುವೆಗೆ ಕಾರ್ಡ್ ಕೂಡ ಪ್ರಿಂಟ್ ಮಾಡಿಸಿದ್ದೆ” ಎಂದು ಸಲ್ಮಾನ್ ಖಾನ್ ಹೇಳಿದ್ದರು.

  ಈಗ ವಂಟುರ್ ಜೊತೆ ಡೇಟಿಂಗ್:

  ಈಗ 55ರ ಹರೆಯದಲ್ಲಿ ಸಲ್ಮಾನ್ ಖಾನ್ ಅವರು ವಿದೇಶದ ಗಾಯಕಿ ಲೂಲಿಯಾ ವಂಟುರ್ ಎಂಬಾಕೆಯನ್ನ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಬಹಳ ದಿನಗಳಿಂದ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಮನೆಯ ಅನೇಕ ಕಾರ್ಯಕ್ರಮಗಳಿಗೆ ಈ ಹುಡುಗಿ ಪಾಲ್ಗೊಳ್ಳುವುದು ಈ ಸುದ್ದಿಗೆ ಪೂರಕವಾಗಿಯೇ ಇದೆ.
  Published by:Vijayasarthy SN
  First published: