ಬಿಸಿ ಬಿಸಿ ಮುದ್ದೆ ಜತೆಗೆ ಅಲಿಯಾನೂ ಇಷ್ಟ ಎಂದ ರಾಕಿಂಗ್​ ಸ್ಟಾರ್ ಯಶ್​...!

ರಾಕಿಂಗ್​ ಸ್ಟಾರ್​ ಯಶ್​ಗೆ ಬಿಸಿ ಬಿಸಿ ಮುದ್ದೆ ಅಷ್ಟೇ ಅಲ್ಲ ನಟಿ ಅಲಿಯಾನೂ ಇಷ್ಟವಂತೆ. ಇದ್ಯಾಕೆ ಯಶ್​ ಮುದ್ದೆ ಜತೆ ಅಲಿಯಾನ ನೆನಪಿಸಿಕೊಳ್ಳುತ್ತಿದ್ದಾರೆ ಅಂದುಕೊಳ್ಳುತ್ತೀದ್ದೀರಾ.... ಅದನ್ನ ತಿಳಿಯೋಕೆ ವರದಿ ಓದಿ....

Anitha E | news18
Updated:December 4, 2018, 3:55 PM IST
ಬಿಸಿ ಬಿಸಿ ಮುದ್ದೆ ಜತೆಗೆ ಅಲಿಯಾನೂ ಇಷ್ಟ ಎಂದ ರಾಕಿಂಗ್​ ಸ್ಟಾರ್ ಯಶ್​...!
ರಾಕಿಂಗ್​ ಸ್ಟಾರ್​ ಯಶ್​ಗೆ ಬಿಸಿ ಬಿಸಿ ಮುದ್ದೆ ಅಷ್ಟೇ ಅಲ್ಲ ನಟಿ ಅಲಿಯಾನೂ ಇಷ್ಟವಂತೆ. ಇದ್ಯಾಕೆ ಯಶ್​ ಮುದ್ದೆ ಜತೆ ಅಲಿಯಾನ ನೆನಪಿಸಿಕೊಳ್ಳುತ್ತಿದ್ದಾರೆ ಅಂದುಕೊಳ್ಳುತ್ತೀದ್ದೀರಾ.... ಅದನ್ನ ತಿಳಿಯೋಕೆ ವರದಿ ಓದಿ....
Anitha E | news18
Updated: December 4, 2018, 3:55 PM IST
ರಾಕಿಂಗ್ ಸ್ಟಾರ್ ಯಶ್​ಗೆ ಡಿಸೆಂಬರ್​ ಅದೃಷ್ಟದ ತಿಂಗಳು ಎನ್ನಬಹುದು.  ಅವರ ಬಹು ನಿರೀಕ್ಷಿತ ಸಿನಿಮಾ 'ಕೆಜಿಎಫ್​'ನಿಂದಾಗಿ ಇವತ್ತುದೇಶದಾದ್ಯಂತ ಮನೆಮಾತಾಗಿದ್ದಾರೆ. ಆದರೆ ಅವರ ತನು, ಮನ ಎಲ್ಲವೂ ಎಂದಿಗೂ ಕನ್ನಡಮಯ. ಹೀಗಾಗಿಯೇ ಈ ಪಡುವಾರಳ್ಳಿಯ ಪಡ್ಡೆ ಹುಡುಗ ಇವತ್ತು ಮುಗಿಲೆತ್ತರಕ್ಕೇರಿದ್ದಾರೆ.

ಇದನ್ನೂ ಓದಿ: ರಾಕಿಂಗ್​ ಜೋಡಿ ಯಶ್​-ರಾಧಿಕಾಗೆ ಶುಭ ಕೋರಿದ ಪ್ರಿಯಾ ಸುದೀಪ್​...!

'ಕೆಜಿಎಫ್' ಚಿತ್ರ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದರೂ, ಚಿತ್ರತಂಡದ ಮೊದಲ ಆದ್ಯತೆ ಕನ್ನಡ. ಹೀಗಾಗಿಯೇ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ತಮಿಳುನಾಡು, ಆಂಧ್ರ, ಮುಂಬೈ ಹಾಗೂ ಕೇರಳ ರಾಜ್ಯಗಳಿಂದ ಪತ್ರಕರ್ತರನ್ನು ಬೆಂಗಳೂರಿಗೇ ಕರೆಸಿಕೊಂಡು, ಸುದ್ದಿಗೋಷ್ಠಿ ಮಾಡಿದ್ದರು.

ಈಗ ಇದೇ ಡಿಸೆಂಬರ್ 21ರಂದು 'ಕೆ.ಜಿ.ಎಫ್' ತೆರೆಗೆ ಅಪ್ಪಳಿಸಲು ರೆಡಿಯಾಗಿರುವ ಕಾರಣ, ಚಿತ್ರತಂಡ ಹೊರರಾಜ್ಯಗಳಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿರುವಾಗ ಯಶ್‍ಗೆ ಮುದ್ದೆ ಮೇಲೆ ಆಸೆಯಾಗಿದೆ. ಇಡ್ಲಿ ಸಾಂಬಾರ್​, ದೋಸೆ ಬೇ....ನನಗೆ ಬಿಸಿಬಿಸಿ ಮುದ್ದೆನೇ ಬೇಕು ಅಂದಿದ್ದಾರೆ. ಅಷ್ಟೇ ಅಲ್ಲ ಮುಂಬೈನಲ್ಲಿ ಅವರಿಗೆ ಅಲಿಯಾ ಎಂದರೆ ತುಂಬಾ ಇಷ್ಟ ಎಂದೂ ಹೇಳಿದ್ದಾರೆ. ಇದು ಏಕೆ ಯಶ್​ ಹೀಗೆಲ್ಲ ಆಡುತ್ತಿದ್ದಾರೆ ಅಂದುಕೊಳ್ಳುತ್ತಿದ್ದರೆ, ಅದಕ್ಕೆ ಉತ್ತರ ನಾವೇ ಕೊಡುತ್ತೇವೆ ಓದಿ...

ಅಂದಹಾಗೆ ಅಲ್ಲಿ ನಡೆದಿರೋದಿಷ್ಟು. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಿರೂಪಕರೊಬ್ಬರು ನಿಮಗೆ ಇಡ್ಲಿ ಸಾಂಬಾರ್ ಅಥವಾ ದೋಸೆ ಯಾವುದು ಇಷ್ಟ ಎಂದು ಕೇಳಿದ್ದಾರೆ. ಅದಕ್ಕೆ ನಗುತ್ತಾ ಉತ್ತರಿಸಿರುವ ಯಶ್, ನನಗೆ ಬಿಸಿಬಿಸಿ ಮುದ್ದೆ ಇಷ್ಟ. ಅದು ನಮ್ಮ ಕರ್ನಾಟಕದ ಆಲ್‍ಟೈಮ್ ಡಯಟ್ ಫುಡ್ ಅಂದಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.ಅಷ್ಟೇ ಅಲ್ಲ ಯಶ್​ಗೆ ಬಾಲಿವುಡ್​ನಲ್ಲಿ ಯಾವ ನಟಿಯೆಂದರೆ ಇಷ್ಟ ಅಂತ ಕೇಳಿದ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರ ಅಲಿಯಾ ಎಂದು. ಹಾಗೆಂದ ಕೂಡಲೇ ರಾಧಿಕಾ ಅಂತ ನೀವು ಕೇಳಬಹುದು. ಅದಕ್ಕೂ ಅವರು ಉತ್ತರಿಸಿದ್ದಾರೆ. ಸಹ ನಟಿಯಾಗಿ ಹಾಗೂ ಬಾಳಸಂಗಾತಿಯಾಗಿ ರಾಧಿಕಾ ಆಲ್​ಟೈಮ್​ ಫೇವರಿಟ್​ ಎಂದಿದ್ದಾರೆ ನಮ್ಮ ರಾಕಿಂಗ್​ ಸ್ಟಾರ್​.
Loading...

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಕೊಟ್ಟ ಶಾಕಿಂಗ್​ ನ್ಯೂಸ್​ನಿಂದ ನಿದ್ದೆ ಮರೆತ ರಮ್ಯಾ-ರಶ್ಮಿಕಾ..!

ಇನ್ನೂ ಅವಕಾಶ ಸಿಕ್ಕರೆ ಬಾಲಿವುಡ್​ ನಟ ನವಾಜುದ್ದೀನ್​ ಸಿದ್ದಿಖಿ ಅವರೊಂದಿಗೆ ಅಭಿನಯಿಸುವ ಆಸೆ ಇದೆಯಂತೆ ಯಶ್​ಗೆ. ಇದು ಯಾವಾಗ ಈಡೇರುತ್ತೋ ಗೊತ್ತಿಲ್ಲ. ಆದರೆ ಕನ್ನಡದ ಹುಡುಗ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎನ್ನಬಹುದು.

ಅದೇನೇ ಇರಲಿ, ಹೊರ ರಾಜ್ಯದವರನ್ನು ಕರ್ನಾಟಕಕ್ಕೆ ಕರೆಸಿಕೊಳ್ಳೋದರ ಜತೆಗೆ ಹೊರ ರಾಜ್ಯಗಳಿಗೆ ತೆರಳಿಯೂ ರಾಕಿಂಗ್ ಸ್ಟಾರ್ ಯಶ್ ಕನ್ನಡ ನಾಡು, ನುಡಿ, ಭಾಷೆ, ಖಾದ್ಯ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಮಾತನಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಜತೆಗೆ ತಾನೊಬ್ಬ ಸ್ಟಾರ್ ಅನ್ನೋದನ್ನು ತೋರಿಸದೇ, ಸರಳ ವಿಚಾರಗಳಿಂದ, ಮುಗ್ಧ ಮಾತುಗಳಿಂದ ಹೊರರಾಜ್ಯದ ಸಿನಿಪ್ರಿಯರಿಗೂ ಪ್ರಿಯರಾಗಿದ್ದಾರೆ.

First published:December 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...