Prabhas: ಫ್ಲಾಪ್​ ಆಗುತ್ತೆ ಅಂತ ಸ್ನೇಹಿತರು ಎಚ್ಚರಿಸಿದರೂ ಸಿನಿಮಾ ಒಪ್ಪಿಕೊಂಡ ಪ್ರಭಾಸ್..!

Prabhas Raju: ಸಾಹೋ ಸಿನಿಮಾದ ಸೋಲಿನಿಂದ ಹೊರ ಬರುವ ಪ್ರಯತ್ನದಲ್ಲಿರುವ ಪ್ರಭಾಸ್​ಗೆ ಈಗ ಹೊಸ ಸಿನಿಮಾ ಸಿಕ್ಕಿದೆ. ಆದರೆ ಅದೂ ಫ್ಲಾಪ್​ ಆಗಲಿದೆ ಅನ್ನೋ ಭಯ ಪ್ರಭಾಸ್ ಅವರ ಸ್ನೇಹಿತರಿಗಿದೆಯಂತೆ. ಅದಕ್ಕೂ ಕಾರಣ ಇದೆ. 

Anitha E | news18-kannada
Updated:January 22, 2020, 3:24 PM IST
Prabhas: ಫ್ಲಾಪ್​ ಆಗುತ್ತೆ ಅಂತ ಸ್ನೇಹಿತರು ಎಚ್ಚರಿಸಿದರೂ ಸಿನಿಮಾ ಒಪ್ಪಿಕೊಂಡ ಪ್ರಭಾಸ್..!
ಪ್ರಭಾಸ್ ಅಭಿನಯದ ಹೊಸ ಸಿನಿಮಾದ ಚಿತ್ರ
  • Share this:
ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ 'ಸಾಹೋ'. ಪ್ರಭಾಸ್​ ಅಭಿನಯದ ಈ ಬಿಗ್​ ಬಜೆಟ್​ ಚಿತ್ರ ಯಾರೂ ಊಹಿಸದ ಮಟ್ಟದಲ್ಲಿ ನೆಲಕಚ್ಚಿತ್ತು.

'ಸಾಹೋ' ಸಿನಿಮಾದ ಸೋಲಿನಿಂದ ಹೊರ ಬರುವ ಪ್ರಯತ್ನದಲ್ಲಿರುವ ಪ್ರಭಾಸ್​ಗೆ ಈಗ ಹೊಸ ಸಿನಿಮಾ ಸಿಕ್ಕಿದೆ. ಆದರೆ ಅದೂ ಫ್ಲಾಪ್​ ಆಗಲಿದೆ ಅನ್ನೋ ಭಯ ಪ್ರಭಾಸ್ ಅವರ ಸ್ನೇಹಿತರಿಗಿದೆಯಂತೆ. ಅದಕ್ಕೂ ಕಾರಣ ಇದೆ.

Complaint filed against Prabhas starrer Sahoo Producer in Madhapur Police Station
ನಿರ್ದೇಶಕ ಸುಜಿತ್​ ಹಾಗೂ ಪ್ರಭಾಸ್​


ಪ್ರಭಾಸ್​ ಸದ್ಯ ರಾಧಾಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರ ಚಿತ್ರೀಕರಣ ಸಹ ಆರಂಭವಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೆ ಪ್ರಭಾಸ್​ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುವ ಮೂಲಕ ಅಪ್ಡೇಟ್​ ಕೊಟ್ಟಿದ್ದರು.

 

 




View this post on Instagram




 

Elated to share that I’m resuming shooting for my upcoming film. Looking forward to a fun schedule.


A post shared by Prabhas (@actorprabhas) on






ಪ್ರಭಾಸ್​ ಅಭಿನಯಿಸುತ್ತಿರುವ ಈ ಸಿನಿಮಾಗೆ 'ಜಾನ್'​ ಎಂದು ಶೀರ್ಷಿಕೆ ನೀಡಲಾಗಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿರುವ ಚಿತ್ರದಲ್ಲಿ ಪ್ರಭಾಸ್​ ಅವರ ದೊಡ್ಡಪ್ಪ ಕೃಷ್ಣರಾಜು ಅವರು ಸಹ ನಟಿಸುತ್ತಿದ್ದಾರೆ. ಅದೂ ಕೂಡ ಪ್ರಭಾಸ್​ ಒತ್ತಾಯದ ಮೇರೆಗೆ ಕೃಷ್ಣಂರಾಜು ಒಪ್ಪಿಕೊಂಡಿದ್ದಾರಂತೆ.

ಇದನ್ನೂ ಓದಿ: HBD Nikhil: ನಿಖಿಲ್​ಗೆ ಸಿಕ್ತು ಹುಟ್ಟುಹಬ್ಬದ ಗಿಫ್ಟ್​: ಬಿಡುಗಡೆಯಾಯ್ತು ಹೊಸ ಚಿತ್ರದ ಪೋಸ್ಟರ್​..!

ಆದರೆ ಈ ಹಿಂದೆ ಪ್ರಭಾಸ್​ ಜತೆ ಕೃಷ್ಣಂರಾಜು ಅವರು ಅಭಿನಯಿಸಿದ್ದ 'ಬಿಲ್ಲಾ' ಹಾಗೂ 'ರೆಬೆಲ್​' ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಸದ್ದಿಲ್ಲದಂತೆ ಮಾಯವಾಗಿದ್ದವು. ಇದಕ್ಕೆ ಕಾರಣ ಇವರಿಬ್ಬರು ಜೊತೆಯಲ್ಲಿ ನಟಿಸಿದ್ದೇ ಎಂಬ ಮಾತುಗಳು ಆಗ ಹರಿದಾಡುತ್ತಿದ್ದವು.

Why Prabhas Friend worried about his New Movie
ದೊಡ್ಡಪ್ಪ ಕೃಷ್ಣಂರಾಜು ಹಾಗೂ ದೊಡ್ಡಮ್ಮ ಜತೆ
ಪ್ರಭಾಸ್​


ಇದೇ ವಿಷಯವನ್ನು ಪ್ರಭಾಸ್​ ಅವರ ಸ್ನೇಹಿತರು ಹೇಳಿದ್ದಾರಂತೆ. ಇಬ್ಬರೂ ಜೊತೆಯಲ್ಲಿ ಅಭಿನಯಿಸಿದರೆ, ಸಿನಿಮಾ ಫ್ಲಾಪ್​ ಆಗುತ್ತದೆ ಎಂದು ಡಾರ್ಲಿಂಗ್​ ಸ್ನೇಹಿತರು ಭಯದಲ್ಲಿದ್ದಾರೆ. ಆದರೂ ಈ ಎಲ್ಲ ನಂಬಿಕೆಗಳನ್ನು ಬದಿಗೊತ್ತಿ ಸಿನಿಮಾಗಾಗಿ ಪ್ರಭಾಸ್​ ತನ್ನ ದೊಡ್ಡಪ್ಪನೊಂದಿಗೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

Manvita: ಏನಾಯ್ತು ಕೆಂಡ ಸಂಪಿಗೆಯ ಮಾನ್ವಿತಾಗೆ...!
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ