ಯೂಟ್ಯೂಬ್​ನಿಂದ ಕೋಟಿಗೊಬ್ಬ-3 ಟೀಸರ್ ಡಿಲೀಟ್ ಆಗಿದ್ಯಾಕೆ..? ಇಲ್ಲಿದೆ ಅಸಲಿ ಕಾರಣ..!

ಕೋಟಿಗೊಬ್ಬ-3 ಟೀಸರ್ ಯೂಟ್ಯೂಬ್‍ನಿಂದ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿತ್ತು. ಇದಕ್ಕೆ ಕಾರಣ ಏನಿರಬಹುದು ಅಂತ ಹಲವು ಊಹಾ ಪೋಹಗಳು ಎದ್ದಿದ್ದವು. ಎಲ್ಲದಕ್ಕೂ ಉತ್ತರ ಕೊಡುವ ಪ್ರಯತ್ನವನ್ನ ಮಾಡಿದ್ದಾರೆ ನಿರ್ಮಾಪಕ ಸೂರಪ್ಪಬಾಬು.

news18-kannada
Updated:March 9, 2020, 6:07 PM IST
ಯೂಟ್ಯೂಬ್​ನಿಂದ ಕೋಟಿಗೊಬ್ಬ-3 ಟೀಸರ್ ಡಿಲೀಟ್ ಆಗಿದ್ಯಾಕೆ..? ಇಲ್ಲಿದೆ ಅಸಲಿ ಕಾರಣ..!
Kiccha
  • Share this:
ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಶಿವರಾತ್ರಿ ಪ್ರಯುಕ್ತ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲದೆ ಚಿತ್ರಪ್ರೇಮಿಗಳಿಂದ ಸಾಕಷ್ಟು ಪ್ರಶಂಸೆ ಕೂಡ ಪಡೆದುಕೊಂಡಿತ್ತು. 29 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದು ಯೂಟ್ಯೂಬ್‍ನಲ್ಲಿ ಸಂಚಲನವನ್ನೂ ಸಹ ಎಬ್ಬಿಸಿತ್ತು. ಆದರೆ ಇಂತಹ ಈ ಟೀಸರ್ ಇದ್ದಕ್ಕಿದ್ದ ಹಾಗೆ ಯೂಟ್ಯೂಬ್‍ನಿಂದಲೇ ಕಾಣೆಯಾಗಿತ್ತು. ಇದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗಳೂ ಚಿತ್ರಪ್ರೇಮಿಗಳಿಂದ ಕೇಳಿ ಬಂದಿತ್ತು.  ಅದಕ್ಕೀಗ ಸ್ವತಃ ನಿರ್ಮಾಪಕರೇ ಉತ್ತರ ಕೊಟ್ಟಿದ್ದಾರೆ.

ಕೋಟಿಗೊಬ್ಬ-3 ಟೀಸರ್ ಯೂಟ್ಯೂಬ್‍ನಿಂದ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿತ್ತು. ಇದಕ್ಕೆ ಕಾರಣ ಏನಿರಬಹುದು ಅಂತ ಹಲವು ಊಹಾ ಪೋಹಗಳು ಎದ್ದಿದ್ದವು. ಎಲ್ಲದಕ್ಕೂ ಉತ್ತರ ಕೊಡುವ ಪ್ರಯತ್ನವನ್ನ ಮಾಡಿದ್ದಾರೆ ನಿರ್ಮಾಪಕ ಸೂರಪ್ಪಬಾಬು.

ನಿರ್ಮಾಪಕ ಸೂರಪ್ಪ ಬಾಬು ಹೇಳುವ ಪ್ರಕಾರ 'ಪೋಲೆಂಡ್ ಶೂಟಿಂಗ್ ಕೋಆರ್ಡಿನೇಟ್ ಮಾಡಿದ್ದಂತಹ ಬಾಂಬೆ ಮೂಲದ ಸಂಸ್ಥೆ ಕಾಪಿ ರೈಟ್ ವಿಚಾರವಾಗಿ ತಗಾದೆ ತೆಗೆದಿದೆಯಂತೆ. ಪೋಲೆಂಡ್‍ನಲ್ಲಿ ಶೂಟ್ ಮಾಡಿರೋ ಪೋರ್ಷನ್‍ನ ಕಾಪಿ ರೈಟ್ ನಮಗೆ ಸೇರಬೇಕು. ಹೀಗಾಗಿ ಯೂಟ್ಯೂಬ್‍ನಿಂದ ತೆಗೆಯಿರಿ ಅಂತ ಕಂಪ್ಲೇಂಟ್ ಮಾಡಿದೆಯಂತೆ.

ಅಷ್ಟೇ ಅಲ್ಲದೆ 42 ಲಕ್ಷಕ್ಕೆ ಮುಂಬೈ ಮೂಲದ ಸಂಜಯ್ ಪೌಲ್ ಬೇಡಿಕೆ ಇಟ್ಟಿದ್ದಾರೆ. ನಾವು ಅವರಿಗೆ ಯಾವುದೇ ಹಣ ನೀಡಬೇಕಾಗಿಲ್ಲ. ಹೀಗಾಗಿ ಒಂದು ರುಪಾಯಿಯನ್ನೂ ಅವರಿಗೆ ಕೊಡೋದಿಲ್ಲ. ಬೇಕಾದರೆ ಕೋರ್ಟ್‍ನಲ್ಲಿ ಹಣ ಡಿಪಾಸಿಟ್ ಮಾಡಿ, ಕೋರ್ಟ್ ಮೂಲಕವೇ ಬಗೆಹರಿಸಿಕೊಳ್ಳುತ್ತೇನೆ ಎಂದಿದ್ದಾರೆ ಸೂರಪ್ಪ ಬಾಬು.

ಇದನ್ನೂ ಓದಿ: ಅನಿಯಮಿತ ಕರೆ ಮತ್ತು ಪ್ರತಿದಿನ 1.5GB ಡೇಟಾ ಪ್ಲ್ಯಾನ್: ಯಾವ ಕಂಪೆನಿಯ ರಿಚಾರ್ಜ್​ ಯೋಜನೆ ಉತ್ತಮ?

ಅಂದಹಾಗೆ ಕೆಲವು ತಿಂಗಳುಗಳ ಹಿಂದೆ 92 ಲಕ್ಷ ಹಣ ಬಾಕಿ ಕೊಡಬೇಕು ಅಂತ ಮುಂಬೈ ಮೂಲದ ಸಂಸ್ಥೆ ಕಿರಿಕ್ ಮಾಡಿತ್ತು. ಚಿತ್ರತಂಡದ ಇಬ್ಬರು ಸದಸ್ಯರ ಪಾಸ್‍ಪೋರ್ಟ್ ಅನ್ನು ಸಹ ವಶಪಡಿಸಿಕೊಂಡಿತ್ತು. ಆ ವೇಳೆ ಬೆಂಗಳೂರು ಪೊಲೀಸ್ ಕಮಿಷನರ್ ಮೊರೆ ಹೋಗಿದ್ದರು ನಿರ್ಮಾಪಕ ಸೂರಪ್ಪ ಬಾಬು. ಬೆಂಗಳೂರು ಪೊಲೀಸರು ನೋಟಿಸ್ ನೀಡಿದ ನಂತರ ಇಬ್ಬರ ಪಾಸ್‍ಪೋರ್ಟ್ ವಾಪಸ್ ನೀಡಲಾಗಿತ್ತು. ಈಗ ಮತ್ತೆ ಹಣದ ವಿಚಾರದಲ್ಲಿ  ಮುಂಬೈ ಮೂಲದ ಸಂಸ್ಥೆ ಕೋಟಿಗೊಬ್ಬ-3 ತಂಡಕ್ಕೆ ಕಗ್ಗಂಟಾಗಿ ಕಾಡುತ್ತಿದೆ.
First published:March 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading