ಕನ್ನಡದಲ್ಲಿ ಪ್ರತಿ ವರ್ಷ ದೊಡ್ಡ (Sankranti Movie Release) ಹಬ್ಬಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದವು. ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾಗಳು ಪ್ರತಿ ವರ್ಷ ಸಂಕ್ರಾಂತಿ (Kannada Movie Release) ಹಬ್ಬಕ್ಕೆ ರಿಲೀಸ್ ಆಗುತ್ತಿದ್ದವು. ಸಂಕ್ರಾಂತಿ ಹಬ್ಬವನ್ನ ಮನಸ್ಸಿನಲ್ಲಿ ಇಟ್ಟುಕೊಂಡೇ ಕ್ರೇಜಿ ಸ್ಟಾರ್ ಸಿನಿಮಾ ಮಾಡುತ್ತಿದ್ದರು. ಸಂಕ್ರಾಂತಿ ಹಬ್ಬ 14 ಕ್ಕೆ ಇದೆ ಅಂದ್ರೆ (Ravichandran Movie Release) ಅಂದು ರವಿಚಂದ್ರನ್ ಸಿನಿಮಾ ರಿಲೀಸ್ ಆಗೋದು ಗ್ಯಾರಂಟಿ ಇತ್ತು. ಜನ ಕೂಡ ಕ್ರೇಜಿ ಸ್ಟಾರ್ ಚಿತ್ರಕ್ಕೆ ಕಾಯುತ್ತಲೇ ಇದ್ದರು. ಆದರೆ ಈಗ ಆ ಸಂಕ್ರಾಂತಿ (Sankranti Movie Release Fact) ಖುಷಿ ಎಲ್ಲಿ ಹೋಯಿತು.? ಕನ್ನಡದ ಸಿನಿಮಾಗಳು ಯಾಕೆ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿಲ್ಲ. ಈ ಎಲ್ಲದಕ್ಕೂ ಹಲವು ಕಾರಣಗಳು ಇವೆ. ಒಂದು ವಿಶ್ಲೇಷಣೆ ಇಲ್ಲಿದೆ.
ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾ ಯಾಕ್ ಬರ್ತಿಲ್ಲ ಗೊತ್ತೇ?
ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾ ಯಾಕೆ ರಿಲೀಸ್ ಆಗೋದಿಲ್ಲ. ಈ ಒಂದು ಪ್ರಶ್ನೆಯನ್ನ ಪ್ರತಿ ವರ್ಷ ಕೇಳಲಾಗುತ್ತದೆ. ಹಾಗೆ ಕೇಳಿದ ಪ್ರಶ್ನೆಗೆ ಉತ್ತರವೂ ಸಿಗುತ್ತದೆ.
ಆ ಉತ್ತರ ನಿಜಕ್ಕೂ ಶೋಚನೀಯವಾಗಿ ಇದೆ. ಚಿತ್ರರಂಗದ ಬೆಳವಣಿಗೆಯನ್ನ ತುಂಬಾ ಸೂಕ್ಷ್ಮವಾಗಿ ಗಮನಿಸಿದ್ರೆ, ಅಲ್ಲಿ ಒಂದು ಸಮೃದ್ಧ ಕಾಲ ಇತ್ತು. ಸಂಕ್ರಾತಿ ಹಬ್ಬಕ್ಕೆ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದವು.
ಅದೊಂದು ಕಾಲ ಇತ್ತು ರವಿಚಂದ್ರನ್ ಸಿನಿಮಾ ರಿಲೀಸ್ ಆಗ್ತಿತ್ತು?
ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರತಿ ವರ್ಷ ಸಂಕ್ರಾಂತಿ ಹಬ್ಬಕ್ಕೆ ಒಂದು ಸಿನಿಮಾ ರಿಲೀಸ್ ಮಾಡ್ತಾ ಇದ್ದರು. ಸಂಕ್ರಾಂತಿ ಹಬ್ಬವನ್ನ ಗಮನದಲ್ಲಿಟ್ಟುಕೊಂಡೇ ತಮ್ಮ ಹೊಸ ಚಿತ್ರದ ಪೂಜೆ ಮಾಡುತ್ತಿದ್ದರು.
ಆದರೆ ಈಗ ಆ ಕಾಲ ಇಲ್ವೇ ಇಲ್ಲ. ಸಂಕ್ರಾಂತಿ ಹಬ್ಬಕ್ಕೆ ಚಿತ್ರವನ್ನ ರಿಲೀಸ್ ಮಾಡೋಕೆ ಯಾರು ಮುಂದೆ ಬರೋದಿಲ್ಲ. ಈ ಹಬ್ಬದ ಹಿಂದೆ ಮುಂದೆ ಈಗೀನ ಸಿನಿಮಾಗಳು ಬರೋದೇ ಕಡಿಮೆ. ಸಂಕ್ರಾಂತಿ ಹಬ್ಬಕ್ಕೆಂದೆ ಮೊನ್ನೆ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಬಂದಿದೆ. ಅದು ಬಿಟ್ಟರೇ, ಬೇರೆ ಭಾಷೆ ಚಿತ್ರಗಳೇ ಪೊಂಗಲ್ ಗೆ ಬಂದಿವೆ. ಯಾಕೆ ಗೊತ್ತೇ?
ಸಂಕ್ರಾಂತಿ ಹಬ್ಬಕ್ಕೆ ಪರ ಭಾಷೆಯ ಸಿನಿಮಾಗಳೇ ರಿಲೀಸ್
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪರ ಭಾಷೆಯ ಸಿನಿಮಾಗಳೇ ಹೆಚ್ಚು ರಿಲೀಸ್ ಆಗಿವೆ. ಪರ ಭಾಷೆಯ ಚಿತ್ರಗಳು ರಿಲೀಸ್ ಆಗೋಕೆ ಕಾರಣವೂ ಇದೆ. ಸಂಕ್ರಾಂತಿ ಹಬ್ಬವನ್ನ ಪೊಂಗಲ್ ಅಂತಲೇ ಕರೆಯಲಾಗುತ್ತದೆ. ಈ ಒಂದು ಕಾರಣಕ್ಕೇನೆ ತೆಲುಗು-ತಮಿಳು ಚಿತ್ರಗಳೇ ಹೆಚ್ಚು ರಿಲೀಸ್ ಆಗುತ್ತವೆ.
ಕನ್ನಡದ ಸಿನಿಮಾ ರಿಲೀಸ್ ಮೇಲೆ ಪರ ಭಾಷೆ ಆ ನಿರ್ಧಾರದ ಎಫೆಕ್ಟ್
ತಮಿಳು ಚಿತ್ರರಂಗ ಮತ್ತು ತೆಲುಗು ಚಿತ್ರರಂಗದ ನಿರ್ಮಾಪಕರ ಸಂಘ 2017 ರಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದೆ. ಆ ನಿರ್ಧಾರ ನೇರವಾಗಿಯೇ ಸಂಕ್ರಾಂತಿ ಹಬ್ಬಕ್ಕೇನೆ ಕನೆಕ್ಟ್ ಆಗುತ್ತದೆ. ಈ ಒಂದು ಕಾರಣಕ್ಕೇನೆ ಕನ್ನಡ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗೋದೇ ಇಲ್ಲ.
ಸಂಕ್ರಾಂತಿ ಹಬ್ಬಕ್ಕೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕೇವಲ ಆಯಾ ಭಾಷೆಯ ಚಿತ್ರಗಳೇ ರಿಲೀಸ್ ಆಗಬೇಕು. ಕನ್ನಡ ಸೇರಿ ಬೇರೆ ಭಾಷೆ ಚಿತ್ರಗಳು ಇಲ್ಲಿ ಡಬ್ಬಿಂಗ್ ಮಾಡಿ ರಿಲೀಸ್ ಮಾಡೋ ಹಾಗಿಲ್ಲ. ಇದಕ್ಕೆ ಅವಕಾಶ ಕೊಡೋದೇ ಬೇಡ ಅಂತಲೇ ಡಿಸೈಡ್ ಮಾಡಿದರು.
ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾ ಯಾಕೆ ಬರೋದಿಲ್ಲ ಗೊತ್ತೇ?
ಕನ್ನಡ ಸಿನಿಮಾಗಳು ಈಗ ಎಲ್ಲ ಭಾಷೆಯಲ್ಲೂ ರಿಲೀಸ್ ಆಗುತ್ತಿವೆ. ಆಯಾ ಭಾಷೆಯಲ್ಲಿ ಡಬ್ ಆಗಿಯೇ ಎಲ್ಲೆಡೆ ತೆರೆಗೆ ಬರುತ್ತವೆ. ಆದರೆ ಸಂಕ್ರಾಂತಿ ಹಬ್ಬಕ್ಕೆ ಬೇರೆ ಭಾಷೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲ. ಈ ಒಂದು ಕಾರಣಕ್ಕೆ ಕನ್ನಡ ಸಿನಿಮಾ ನಿರ್ಮಾಪಕರು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡೋಕೆ ಮುಂದಾಗೋದಿಲ್ಲ.
ಸಂಕ್ರಾಂತಿ ಹಬ್ಬಕ್ಕೆಂದೇ ಅಂದು ಒಳ್ಳೆ ಸಿನಿಮಾ ರೆಡಿ ಆಗುತ್ತಿದ್ದವು
ಈ ಒಂದು ಮಾತನ್ನ ಕನ್ನಡ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಒತ್ತಿ ಹೇಳುತ್ತಾರೆ. ಅಂದು ರವಿಚಂದ್ರನ್ ಸಿನಿಮಾಗಳು ಹಬ್ಬಕ್ಕೆಂದೇ ರೆಡಿ ಆಗಿ, ಜನವರಿ 14 ರಂದು ರಿಲೀಸ್ ಆಗುತ್ತಿದ್ದವು.
ಕನ್ನಡದಲ್ಲಿ ಪ್ಯಾನ್ ಇಂಡಿಯಾದ ಎಫೆಕ್ಟ್ ಹೇಗಿದೆ ನೋಡಿ
ಆದರೆ ಈಗ ಅಂತಹ ಸ್ಥಿತಿ ಇಲ್ವೇ ಇಲ್ಲ. ರವಿಚಂದ್ರನ್ ಸಿನಿಮಾ ಈಗ ಆ ಟೈಮ್ಗೆ ಬರುತ್ತಿಲ್ಲ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳೂ ಹಬ್ಬಕ್ಕೆ ಚಿತ್ರ ರೆಡಿ ಮಾಡ್ತಿಲ್ಲ. ಎಲ್ಲವೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿವೆ.
ಕನ್ನಡ ಸೇರಿ ಪರ ಭಾಷೆಯಲ್ಲಿ ರಿಲೀಸ್ ಮಾಡೋಕೆ ಎಲ್ಲ ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಇದರಿಂದ ಸಂಕ್ರಾಂತಿ ಹಬ್ಬಕ್ಕೆ ಈ ಪ್ಲಾನ್ ಮಾಡಿದ್ರೆ, ತೆಲುಗು ಮತ್ತು ತಮಿಳು ಭಾಷೆ ಚಿತ್ರದಲ್ಲಿ ಇದಕ್ಕೆ ಸದ್ಯಕ್ಕೆ ಅವಕಾಶ ಇಲ್ವೇ ಇಲ್ಲ.
ಇದನ್ನೂ ಓದಿ: Sapthami Gowda: ಬಾಲಿವುಡ್ಗೆ ಹಾರಿದ ಕಾಂತಾರ ಚೆಲುವೆ; ವಿವೇಕ್ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ
ಹೀಗಾಗಿಯೇ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾ ಬರ್ತಿಲ್ಲ. ಬಂದ್ರೂ ಪರ ಭಾಷೆ ಚಿತ್ರಗಳ ಹಾವಳಿ ಹೆಚ್ಚಿರುತ್ತದೆ ಅನ್ನೋದೇ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಒಟ್ಟು ಅಭಿಪ್ರಾಯ ಆಗಿದೆ. ಇನ್ನುಳಿದಂತೆ ಈ ರೀತಿಯ ವ್ಯವಸ್ಥೆ ಇದ್ದರೇ, ಲಾಭ-ನಷ್ಟದ ಮೇಲೂ ಎಫೆಕ್ಟ್ ಖಂಡಿತ ಬೀಳುತ್ತದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ