• Home
  • »
  • News
  • »
  • entertainment
  • »
  • Stardom: ದಕ್ಷಿಣದ ಸ್ಟಾರ್​ ನಟರುಗಳ ಸಾಲು ಸಾಲು ಸಿನಿಮಾಗಳ ವೈಫಲ್ಯಕ್ಕೆ ಕಾರಣವೇನು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

Stardom: ದಕ್ಷಿಣದ ಸ್ಟಾರ್​ ನಟರುಗಳ ಸಾಲು ಸಾಲು ಸಿನಿಮಾಗಳ ವೈಫಲ್ಯಕ್ಕೆ ಕಾರಣವೇನು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ರಜನೀಕಾಂತ್

ರಜನೀಕಾಂತ್

ಕೆಲ ಸಮಯದಿಂದ ಈ ಸ್ಟಾರ್ ನಟರು ಹೇಳಿಕೊಳ್ಳುವಂತಹ ಅದ್ಭುತ ಚಿತ್ರಗಳನ್ನು ವೀಕ್ಷಕರಿಗೆ ನೀಡಲು ವಿಫಲರಾಗುತ್ತಿದ್ದಾರೆ ಎಂಬುದನ್ನು ಸಹ ಅಲ್ಲಗೆಳೆಯುವಂತಿಲ್ಲ.

  • Share this:

ಭಾರತೀಯ ಚಿತ್ರರಂಗವು 40-50ರ ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಇಂದು ಜಗತ್ತಿನ ಹಲವು ಶ್ರೇಷ್ಠ ಚಿತ್ರರಂಗಗಳ ಪೈಕಿ ಭಾರತೀಯ ಚಿತ್ರಂಗವು ಒಂದಾಗಿದ್ದು ಜನಮನಗಳ ವಿಶ್ವಾಸವನ್ನು ಗಳಿಸುತ್ತಲೇ ಬಂದಿದೆ. ಭಾರತದಲ್ಲಿ ಹಿಂದಿ ಭಾಷೆ ಮಾತನಾಡಬಲ್ಲ ಹಾಗೂ ಅರ್ಥೈಸಿಕೊಳ್ಳ ಬಲ್ಲ ಜನರ ಸಂಖ್ಯೆ ಹೆಚ್ಚಾಗಿಯೇ ಇರುವುದರಿಂದ ಹಿಂದಿ ಚಿತ್ರರಂಗ ಅಂದರೆ ಬಾಲಿವುಡ್ ಮೊದಲಿನಿಂದಲೂ ಉನ್ನತ ಸ್ಥಾನ ಅಲಂಕರಿಸುತ್ತಲೇ ಬಂದಿದೆ. ಅದರಂತೆ ದಕ್ಷಿಣ ಭಾರತದಲ್ಲಿ ಬಹು ಭಾಷೆಗಳ ಜನರು ಇರುವುದರಿಂದ ಪ್ರಾದೇಶಿಕ ಭಾಷೆಗಳ ಚಿತ್ರರಂಗಗಳೂ ಉತ್ತಮ ವೃತ್ತಿ ಭೂಮಿಯಾಗಿ ಗಮನಸೆಳೆದಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ತೆಲುಗು ಚಿತ್ರರಂಗವಾದ ಟಾಲಿವುಡ್, ತಮಿಳು ಚಿತ್ರರಂಗವಾದ ಕಾಲಿವುಡ್, ಕನ್ನಡ ಚಿತ್ರರಂಗವಾದ ಸ್ಯಾಂಡಲ್‍ವುಡ್ ಹಾಗೂ ಮಲಯಾಳಂ ಚಿತ್ರರಂಗವಾದ ಮಾಲಿವುಡ್ ತಮ್ಮದೆ ಆದ ವವಿಧ್ಯಮಯ ಚಿತ್ರಕಥೆಗಳಿಂದ ಜನರನ್ನು ಆಕರ್ಷಿಸುತ್ತಿದೆ.


ಅದರಲ್ಲೂ ವಿಶೇಷವಾಗಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಖ್ಯಾತ ಚಿತ್ರತಾರೆಗಳು ಅಭಿನಯಿಸಿರುವ ಹಲವು ಚಿತ್ರಗಳು ಹಿಂದಿ ಸಹಿತ ಇತರೆ ಭಾಷೆಗಳಲ್ಲೂ ಸಹ ನಿರ್ಮಾಣ ಆಗುತ್ತಿರುವುದರಿಂದ ಕಳೆದೆರಡು ವರ್ಷಗಳಲ್ಲಿ ಪ್ರಾದೇಶಿಕ ಭಾಷಾ ಚಿತ್ರರಂಗಗಳು ಸಾಕಷ್ಟು ಮುನ್ನೆಲೆಗೆ ಬರುತ್ತಿವೆ ಎಂದರೆ ತಪ್ಪಾಗಲಾರದು.


ಪ್ರಾದೇಶಿಕ ಭಾಷೆಗಳಲ್ಲಿ ಭಾವನಾತ್ಮಕತೆ ಇರುತ್ತದೆ:


ಅಷ್ಟಕ್ಕೂ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾಗುವ ಚಿತ್ರಗಳು ಎಲ್ಲ ಬಗೆಯ ಭಾವನಾತ್ಮಕತೆಯನ್ನು ತನ್ನ ಚಿತ್ರಕಥೆಯಲ್ಲಿ ಹೊಂದಿರುವುದರಿಂದ ಜನರ ಮನಸ್ಸಿಗೆ ಬೇಗನೆ ತಲುಪುತ್ತವೆ ಎನ್ನಲಾಗುತ್ತದೆ. ಉದಾಹರಣೆಗೆ ತಮಿಳು ಚಲನಚಿತ್ರೋದ್ಯಮವು ಆಕ್ಷನ್, ಹಾಸ್ಯ, ಪ್ರಣಯ ಮತ್ತು ಇತರ ನಿರ್ಣಾಯಕ ಭಾವನೆಗಳ ಪರಿಪೂರ್ಣ ಮಿಶ್ರಣವನ್ನು ಹೊಂದಿರುವ ಚಲನಚಿತ್ರಗಳನ್ನು ನಿರ್ಮಿಸಲು ಹೆಸರುವಾಸಿಯಾಗಿದೆ. ಇತರೆ ಚಿತ್ರ ಉದ್ಯಮಗಳಲ್ಲಿ ಇರುವಂತೆ, ಕಾಲಿವುಡ್‌ನಲ್ಲಿಯೂ ಸಹ ಅಪಾರ ಜನಪ್ರೀಯತೆ ಹೊಂದಿರುವ ತಾರಾ ವರ್ಚಸ್ಸಿನ ನಟರು ಇದ್ದಾರೆ, ಅವರು ತಮ್ಮ ಪರದೆಯ ಮೇಲಿನ ಉಪಸ್ಥಿತಿ, ನಟನೆ ಮತ್ತು ವರ್ಚಸ್ಸಿನ ಮೋಡಿಯಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆಂದರೆ ಅತಿಶಯೋಕ್ತಿಯ ಹೇಳಿಕೆ ಆಗಲಾರದು.


ಸ್ಟಾರ್​ ನಟರ ವೈಫಲ್ಯ:


ತಮಿಳು ಚಿತ್ರರಂಗದಲ್ಲಿ ವಿಶೇಷವಾಗಿ ರಜಿನಿಕಾಂತ್, ದಳಪತಿ ವಿಜಯ್, ಅಜಿತ್ ಕುಮಾರ್ ಮುಂತಾದ ದಿಗ್ಗಜ ನಟರು ಉಪಸ್ಥಿತರಿದ್ದಾರೆ. ಅಲ್ಲದೆ, ಈ ಸ್ಟಾರ್‌ ನಟರು ತಮ್ಮ ಸೂಪರ್ ಹಿಟ್ ಚಿತ್ರಗಳೊಂದಿಗೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಸ್ಥಾಪಿಸುವಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಹಿಂದಿನ ಕೆಲ ವರ್ಷಗಳಲ್ಲಿ ಅವರು ಮಾಡಿದ ಚಿತ್ರಗಳನ್ನು ಪಟ್ಟಿ ಮಾಡಿದರೆ ಸಾಕಷ್ಟು ಹಿಟ್ ಚಿತ್ರಗಳನ್ನೇ ಈ ನಟರು ನೀಡಿದ್ದಾರೆ.


ಆದಾಗ್ಯೂ, ಇತ್ತೀಚಿನ ಕೆಲ ಸಮಯದಿಂದ ಈ ಸ್ಟಾರ್ ನಟರು ಹೇಳಿಕೊಳ್ಳುವಂತಹ ಅದ್ಭುತ ಚಿತ್ರಗಳನ್ನು ವೀಕ್ಷಕರಿಗೆ ನೀಡಲು ವಿಫಲರಾಗುತ್ತಿದ್ದಾರೆ ಎಂಬುದನ್ನು ಸಹ ಅಲ್ಲಗೆಳೆಯುವಂತಿಲ್ಲ. ಈ ವೈಫಲ್ಯತೆಗೆ ಅದರದ್ದೆ ಆದ ಹಲವು ಕಾರಣಗಳು ಇರಬಹುದಾದರೂ ಪ್ರಮುಖವಾಗಿ ಈ ಕೆಳಗಿನ ಕಾರಣಗಳಿಂದಾಗಿ ಅವರ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಸಾಧನೆಯನ್ನು ಮಾಡುತ್ತಿಲ್ಲ ಎನ್ನಬಹುದಾಗಿದೆ.


ಇದನ್ನೂ ಓದಿ: Krithi Shetty: ಬ್ಲೂ ಡ್ರೆಸ್​ನಲ್ಲಿ ಮಿರಿಮಿರಿ ಮಿಂಚಿದ ಕನ್ನಡತಿ, ಇಲ್ಲಿವೆ ಕೃತಿ ಶೆಟ್ಟಿ ಸಖತ್​ ಫೋಟೋಗಳು


ಕಳಪೆ ವಿಷಯಗಳ ಆಯ್ಕೆ:


ಈಗ ಎಲ್ಲೆಡೆ ಕಂಟೆಂಟ್ ಅನ್ನು ರಾಜ ಎನ್ನಲಾಗುತ್ತಿದೆ. ಯಾವುದೇ ಒಂದು ಚಿತ್ರ ನಿರ್ಮಿಸುವಾಗ ಆ ಚಿತ್ರದ ಮುಖ್ಯ ವಿಷಯ ಏನು ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ಆ ವಿಷಯ ಬಹುಸಂಖ್ಯಾತರ ನಿರೀಕ್ಷೆಗೆ ತಲುಪದೆ ಹೋದರೆ ಅದು ಯಶಸ್ವಿಯಾಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಇಂದು ನಿರ್ಮಾಣವಾಗಿದೆ. ಉದಾಹರಣೆಗೆ ರಜನಿಕಾಂತ್ (ಅಣ್ಣಾತ್ತೆ), ಅಜಿತ್ (ವಲಿಮೈ) ಮತ್ತು ವಿಜಯ್ (ಮೃಗ) ಅವರ ಕೊನೆಯ ಚಿತ್ರಗಳನ್ನು ನೀವು ಗಮನಿಸಿದರೆ, ಅವುಗಳು ದೊಡ್ಡ ಸಂಖ್ಯೆಯಲ್ಲಿ ತೆರೆಕಂಡವು ಆದರೆ ಗಲ್ಲಾ ಪೆಟ್ಟಿಗೆಯಲ್ಲಿ ಅವುಗಳ ಸಾಧನೆ ಸರಾಸರಿಯಾಗಿತ್ತು ಇಲ್ಲವೆ ಕೆಟ್ಟದಾಗಿತ್ತು ಎಂದು ಹೇಳಬಹುದು.


ಅದಕ್ಕೆ ಕಾರಣ ಆ ಚಿತ್ರಗಳ ಕಳಪೆ ಕಂಟೆಂಟ್‌. ಕಳಪೆ ಚಿತ್ರಕಥೆಯಿಂದಾಗಿಯೇ ಆ ಚಿತ್ರಗಳು ನಿರೀಕ್ಷಿತ ವೇಗವನ್ನು ಹಿಡಿದಿಡಲು ವಿಫಲವಾದವು ಎಂದು ಹೇಳಬಹುದು. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ವಿಷಯವೆಂದರೆ ಒಬ್ಬ ಸೂಪರ್‌ಸ್ಟಾರ್ ಚಿತ್ರವೊಂದಕ್ಕೆ ಉತ್ತಮ ಓಪನಿಂಗ್ ದೊರಕಿಸಿ ಕೊಡಬಹುದು ಆದರೆ ಆ ಚಿತ್ರ ಹಲವು ದಿನಗಳ ಕಾಲ ಯಶಸ್ವಿ ಪ್ರದರ್ಶನ ನೀಡುತ್ತ ಜಯಭೇರಿ ಬಾರಿಸಲು ಅದರ ಚಿತ್ರಕಥೆ ನಿರ್ಣಾಯಕ ಪಾತ್ರವಹಿಸುತ್ತದೆ ಎಂಬ ವಿಷಯವನ್ನು ಸ್ಪಷ್ಟವಾಗಿ ಕಾಣಬಹುದು. ಚಿತ್ರದ ವಿಷಯ ಸದೃಢವಾಗಿದ್ದು ಎಲ್ಲರ ಮನಸ್ಸಿಗೂ ಮುಟ್ಟುವಂತಿದ್ದರೆ ಹಾಗೂ ಅದರ ಜೊತೆಗೆ ತಾರಾ ವರ್ಚಸ್ಸುಳ್ಳ ಖ್ಯಾತ ನಟರ ಅದ್ಭುತ ಅಭಿನಯ ಸೇರಿಕೊಂಡಾಗ ಆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಹಾಗೆ ಯಾವುದೇ ಕಾರಣಗಳು ಸಿಗದು ಎನ್ನಬಹುದು.


ಸ್ಟಾರ್ಡಮ್ ವರ್ಸಸ್ ತರ್ಕ ಮತ್ತು ಚಿತ್ರಕಥೆ:


ಯಾವುದೇ ನಟ ಎಷ್ಟೇ ಮೌಲ್ಯವರ್ಧಿತ, ತಾರಾ ವರ್ಚಸ್ಸಿರುವ ಕಲಾವಿದನೇ ಆಗಿರಲಿ ಅವರು ಚಿತ್ರಕ್ಕಿಂತ ದೊಡ್ಡದಾಗಿರಲಾರರು. ಈ ಹಿಂದೆ ತೆರೆಕಂಡಿರುವ ಕೆಲ ಚಿತ್ರಗಳನ್ನು ನಾವು ಗಮನಿಸಿದರೆ ಕಂಡುಬರುವ ಇನ್ನೊಂದು ಸಾಮಾನ್ಯ ಸಂಗತಿಯೆಂದರೆ, ನಿಮ್ಮ ಪ್ರಾಜೆಕ್ಟ್‌ನಲ್ಲಿ ನೀವು ಎಷ್ಟೇ ದೊಡ್ಡ ಅಥವಾ ಶಕ್ತಿಯುತ ತಾರೆಗಳನ್ನು ತೆಗೆದುಕೊಂಡರೂ, ಅವನು ಅಥವಾ ಅವಳು ಸರಾಸರಿ ಕಥೆಯನ್ನು ನಿರ್ದಿಷ್ಟ ಮಟ್ಟಕ್ಕೆ ಮಾತ್ರ ಎತ್ತಬಲ್ಲರು ಎಂಬುದು ತಿಳಿಯುತ್ತದೆ.


ಅಣ್ಣಾತ್ತೆ ಮತ್ತು ವಲಿಮೈ ಚಿತ್ರಗಳನ್ನೇ ಗಮನಿಸಿ. ಆ ಚಿತ್ರಗಳ ಕಥೆಗಳಲ್ಲಿ ಯಾವುದೇ ಹೊಸತನವಿಲ್ಲ, ಹಾಗಾಗಿ ಆ ಚಿತ್ರಗಳು ನಿರೀಕ್ಷಿತ ಮಟದಲ್ಲಿ ಪ್ರೇಕ್ಷಕರನ್ನು ಮೆಚ್ಚಿಸದೆ ಹೋದವು. ಇನ್ನು, ಥಳಪತಿ ವಿಜಯ್ ಅವರ ಬೀಸ್ಟ್ ಕ್ಲೈಮ್ಯಾಕ್ಸ್‌ನಲ್ಲಿ ಅವರು ಜೆಟ್ ಫೈಟರ್ ಪೈಲಟ್ ಆಗಿ ಬದಲಾಗುವ ತರ್ಕಬದ್ಧವಲ್ಲದ ದೃಶ್ಯಕ್ಕಾಗಿ ಟೀಕೆಗಳನ್ನು ಗಳಿಸ ಬೇಕಾಯಿತು.


ಇದನ್ನೂ ಓದಿ: Prashanth Neel Birthday: ಪ್ರಶಾಂತ್ ನೀಲ್‌ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ಯಶ್, ಪ್ರಭಾಸ್; 50ನೇ ದಿನದ ಸಂಭ್ರಮದಲ್ಲಿ KGF 2 ತಂಡ


ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆಯಿಂದ ಈಗ ನಿವೃತ್ತರಾಗಿರುವ ಗ್ರೂಪ್ ಕ್ಯಾಪ್ಟನ್ ಶಿವರಾಮನ್ ಸಜನ್, ಈ ಚಲನಚಿತ್ರದ ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡಿದ್ದು "ನನಗೆ ತುಂಬಾ ಪ್ರಶ್ನೆಗಳಿವೆ..." ಎಂದು ಟ್ವೀಟ್ ಮಾಡಿದ್ದರು. ಸಜನ್ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಯುದ್ಧ ಯೋಧ ಮೇಜರ್ ಅಮಿತ್ ಬನ್ಸಾಲ್, "ಏನಾಗಿತ್ತು ? ನನ್ನ ಮೆದುಳು ನಿಶ್ಚೇಷ್ಟಿತವಾಗಿದೆ ... ಮುಂದೆ ಯೋಚಿಸಲು ಸಾಧ್ಯವಿಲ್ಲ ... ಎಲ್ಲಾ ತರ್ಕಗಳು ಚರಂಡಿಯಲ್ಲಿ ಹೋಗಿವೆ..." ಎಂದು ಬರೆದಿದ್ದರು. ಇದರಿಂದ ತಿಳಿಯುವ ಒಂದು ವಿಷಯವೆಂದರೆ ನಟ ಎಷ್ಟೇ ಸ್ಟಾರ್ಡಮ್ ಹೊಂದಿರಲಿ ಕೆಲವೊಮ್ಮೆ ಕನಿಷ್ಠ ತರ್ಕವಿಲ್ಲದ ದೃಶ್ಯಗಳೂ ಸಹ ಜನರಲ್ಲಿ ಗೊಂದಲದ ಸ್ಥಿತಿಯನ್ನು ನಿರ್ಮಿಸುತ್ತವೆ ಹಾಗೂ ಅಂತಹ ದೃಶ್ಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದೇ ಹೇಳಬಹುದು.


ವರ್ಚಸ್ಸಿನಂತೆ ವಿಷಯದಿಂದಲೂ ಘರ್ಜಿಸಬೇಕಾಗಿದೆ:


ಸದ್ಯ ತಮಿಳು ಚಿತ್ರರಂಗದಲ್ಲಿ ಈಗ ಹಲವು ಅದ್ಭುತ ಚಿತ್ರಗಳು ತಯಾರಾಗುವ ಹಾದಿಯಲ್ಲಿವೆ. ಒಂದೆಡೆ ವಂಶಿ ಪೈಡಿಪಲ್ಲಿ ನಿರ್ದೇಶನದ ರಶ್ಮಿಕಾ ಮಂದಣ್ಣ ಜೊತೆಗೆ ದಳಪತಿ ವಿಜಯ್ ಇತ್ತೀಚೆಗೆ ದಳಪತಿ 66 ರ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಮತ್ತೊಂದೆಡೆ, ಅಜಿತ್ ಮತ್ತು ರಜನಿಕಾಂತ್ ಅವರು ಕ್ರಮವಾಗಿ ಹೆಚ್ ವಿನೋದ್ ಅವರೊಂದಿಗೆ ಎಕೆ 61 ಮತ್ತು ನೆಲ್ಸನ್ ಅವರೊಂದಿಗೆ ತಲೈವರ್ 169 ರಲ್ಲಿ ಬ್ಯುಸಿಯಾಗಿದ್ದಾರೆ. ಈಗ ನಿರ್ಮಾಣವಾಗುತ್ತಿರುವ ಈ ಚಿತ್ರಗಳ ವಿಷಯವು ಈ ತಾರೆಯರ ಸ್ಟಾರ್‌ಡಮ್ ಅನ್ನು ಸಮರ್ಥಿಸುವಂತಿರಲಿ ಮತ್ತೆ ಅತ್ಯುತ್ತಮ ಕಂಟೆಂಟ್ ಗಳೊಂದಿಗೆ ಈ ನಟರು ಯಶಸ್ಸಿನ ಶಿಖರ ಏರುವಂತಾಗಲಿ ಎಂದಷ್ಟೆ ನಾವು ಆಶಿಸುತ್ತೇವೆ.

Published by:shrikrishna bhat
First published: