Exclusive: ಎಲ್ಲಾ ಭಾಷೆಯಲ್ಲೂ ಸೌಂಡ್ ಮಾಡ್ತಿರೋ ಕೆಜಿಎಫ್​ 2 ಇಂಗ್ಲಿಷಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ ಯಶ್ ಹೀಗಂದ್ರು ನೋಡಿ

ಮುಂಬೈ(Mumbai), ದೆಹಲಿ(Delhi), ಚೆನ್ನೈ(Chennai) ಸೇರಿ ಹಲವೆಡೆ ಭರದಿಂದ ಪ್ರಚಾರ ಕಾರ್ಯ ಮಾಡುತ್ತಿದೆ. ರಾಕಿ ಭಾಯ್​ ಹೋದಲೆಲ್ಲಾ ಅಭಿಮಾನಿಗಳು ಸಾಗರದಂತೆ ಸೇರುತ್ತಿದ್ದಾರೆ. ಇದೀಗ ಕೆಜಿಎಫ್​ 2 ಸಿನಿಮಾದ ಕೆಲ ಇಂಟ್ರೆಸ್ಟಿಂಗ್​ ವಿಚಾರಗಳು ಒಂದೊಂದಾಗಿ ಹೊರಬರುತ್ತಿದೆ. 

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

  • Share this:
    ಕೆಜಿಎಫ್​ 2(KGF 2).. ಕೆಜಿಎಫ್​ 2.. ಕೆಜಿಎಫ್​ 2 ಸದ್ಯಕ್ಕೆ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಪದ ಅಂದರೆ ಇದೆ ಇರಬಹುದು. ಕೆಜಿಎಫ್​ 2 ಜ್ವರ ಇಡೀ ವಿಶ್ವದಲ್ಲೇ ಶುರುವಾಗಿಬಿಟ್ಟಿದೆ. ಯಾವಾಗ ಕೆಜಿಎಫ್​ 2 ಸಿನಿಮಾ ರಿಲೀಸ್(KGF Release) ಆಗುತ್ತೆ. ಯಾವಾಗಪ್ಪ ರಾಕಿ ಭಾಯ್​ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತೀವಿ ಅಂತ ಕಾಯುತ್ತಿದ್ದಾರೆ. ವಿಶ್ವ(World)ದಾದ್ಯಂತ ಕೆಜಿಎಫ್ 2 ಅಲೆಯ ಅಬ್ಬರ ಜೋರಾಗಿದೆ. ವಿಶ್ವದ ಮೂಲೆ, ಮೂಲೆಯಲ್ಲೂ ಕೂಡ ಈ ಚಿತ್ರವನ್ನು ನೋಡಲು ಸಿನಿಮಾ ಪ್ರಿಯರು ಕಾಯುತ್ತಿದ್ದಾರೆ. ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 2(KGF Chapter 2) ಚಿತ್ರತಂಡ ದೇಶಾದ್ಯಂತ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮುಂಬೈ(Mumbai), ದೆಹಲಿ(Delhi), ಚೆನ್ನೈ(Chennai) ಸೇರಿ ಹಲವೆಡೆ ಭರದಿಂದ ಪ್ರಚಾರ ಕಾರ್ಯ ಮಾಡುತ್ತಿದೆ. ರಾಕಿ ಭಾಯ್​ ಹೋದಲೆಲ್ಲಾ ಅಭಿಮಾನಿಗಳು ಸಾಗರದಂತೆ ಸೇರುತ್ತಿದ್ದಾರೆ. ಇದೀಗ ಕೆಜಿಎಫ್​ 2 ಸಿನಿಮಾದ ಕೆಲ ಇಂಟ್ರೆಸ್ಟಿಂಗ್​ ವಿಚಾರಗಳು ಒಂದೊಂದಾಗಿ ಹೊರಬರುತ್ತಿದೆ. 

    ಇಂಗ್ಲಿಷ್​ ಭಾಷೆಯಲ್ಲಿ ಕೆಜಿಎಫ್​ ಯಾಕಿಲ್ಲ?

    ಹೌದು, ಕೆಜಿಎಫ್​ 2 ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್​2 ಅಬ್ಬರಿಸೋಕೆ ರೆಡಿಯಾಗಿದೆ. ಇದೀಗ ಈ ಚಿತ್ರತಂಡ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಈ ಒಂದು ಪ್ರಶ್ನೆ ಕೇಳಿಬರುತ್ತಿದೆ. ಅದು ಏನು ಅಂದರೆ, ಎಲ್ಲಾ ಭಾಷೆಯಲ್ಲಿರುವ ಕೆಜಿಎಫ್​ 2 ಇಂಗ್ಲಿಷ್​ನಲ್ಲಿ ಯಾಕೆ ಬಂದಿಲ್ಲ ಎಂದು ಹಲವರು ಕೇಳಿದ್ದಾರೆ. ಈ ಪ್ರಶ್ನೆ ಸ್ವತಃ ರಾಕಿ ಭಾಯ್​ ಉತ್ತರ ನೀಡಿದ್ದಾರೆ. ಯಶ್​ ಕೊಟ್ಟ ಉತ್ತರ ಕೇಳಿ ಕೆಲವರು ನಕ್ಕಿದ್ದಾರೆ. ಹೌದು, ‘ಇಂಗ್ಲಿಷ್​ನಲ್ಲಿ ಯಾಕಿಲ್ಲ ಅಂದರೆ, ನಮ್ದು ಬಟ್ಲರ್​ ಇಂಗ್ಲಿಷ್​ ಕಣಪ್ಪಾ’ ಅದಕ್ಕೆ ಎಂದು ಯಶ್​​ ಹೇಳಿದ್ದಾರೆ.

    ಇಂಗ್ಲಿಷ್​ನಲ್ಲೂ ಬರುತ್ತಂತೆ ಕೆಜಿಎಫ್ 2 

    ಹೌದು, ಫನ್ನಿ ಉತ್ತರ ಕೊಟ್ಟ ಬಳಿಕ ಯಶ್​ ಸರಿಯಾದ ಉತ್ತರ ಕೊಟ್ಟಿದ್ದಾರೆ. ನಮ್ಮ ನಿರ್ದೇಶಕರು ಪ್ರಶಾಂತ್​ ನೀಲ್​ ಅವರಿಗೆ ಇಂಗ್ಲಿಷ್​ನಲ್ಲಿ ಮಾಡುವ ತಾಕತ್ತು ಇದೆ. ಅವರು ಮಾಡಿ ತೋರಿಸುತ್ತಾರೆ ಎಂದು ರಾಕಿಂಗ್​ ಸ್ಟಾರ್​ ಯಶ್​ ಹೇಳಿದ್ದಾರೆ. ಇದಕ್ಕೆ ಇಂಗ್ಲಿಷ್​ನಲ್ಲಿ ಸಾಂಗ್​ಗಳು ಹೇಗಿರಲಿದೆ ಎಂದು ಮತ್ತೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಕಿಂಗ್​ ಸ್ಟಾರ್​ ಯಶ್​ ಅದಕ್ಕೆ ಬೇರೆ ಡಿಸೈನ್ ಮಾಡಲಾಗಿದೆ.  ಅದಕ್ಕೆ ಇನ್ನೂ ಟೈಮ್​ ಇದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: KGF Chapter 2 ಜೊತೆಗೆ ಚಿತ್ರತಂಡದಿಂದ ಬಿಗ್​ ಸರ್​ಪ್ರೈಸ್​! Prabhas ಫ್ಯಾನ್ಸ್​ ಖುಷಿ ಪಡೋ ವಿಚಾರ ಬಾಸ್​..

    ‘ಯುದ್ಧಭೂಮಿಯಲ್ಲಿ ಅದೆಲ್ಲಾ ನೆನಪಾಗಲ್ಲ’

    ಇನ್ನೂ ಸಿನಿಮಾ ಬಗ್ಗೆ ಮಾತನಾಡಿದ ಯಶ್​ ಕೆಜಿಎಫ್​ 2 ಸಿನಿಮಾ ಪ್ಯಾನ್  ಇಂಡಿಯಾ ಸಿನಿಮಾ.ಎಲ್ಲರಿಗೂ ಬೇಗ ಕನೆಕ್ಟ್​ ಆಗುತ್ತೆ. ನಾನು ಎಷ್ಟು ಸಿನಿಮಾ ಮಾಡಿದೆ ಅನ್ನೊದಕ್ಕಿಂತ ಆ ಸಿನಿಮಾದಿಂದ ಏನಾಯ್ತು ಅನ್ನೋದು ಮುಖ್ಯ ಆಗುತ್ತೆ. ಊಟ, ನಿದ್ದೆ ಬಿಟ್ಟು ಹಗಲಿರುಳು ಶ್ರಮಿಸಿದ್ದೇವೆ. ಯುದ್ಧ ಭೂಮಿಯಲ್ಲಿ ಅದೆಲ್ಲಾ ನೆನಪಾಗಲ್ಲ ಎಂದು ಅವರು ಹೇಳಿದರು.

    ಇದನ್ನೂ ಓದಿ: ಕಥೆ-ಪುರಾಣ ಬಿಟ್ಟು ಸಿನಿಮಾ ಸ್ಪೆಷಾಲಿಟಿ ಬಗ್ಗೆ ಹೇಳ್ರಿ ಎಂದ ವ್ಯಕ್ತಿ! ರಾಕಿ ಭಾಯ್​ ಕೊಟ್ಟ ಖಡಕ್​ ಉತ್ತರ ಇದು..

    ಏಕವಚನದಲ್ಲೇ ಮಾತನಾಡಿಸಿದ ತಮಿಳು ಪತ್ರಕರ್ತ?

    ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಎಲ್ಲರಿಗೂ ಧನ್ಯವಾದ ತಿಳಿಸುವುದು ಕಾಮನ್​. ಸಿನಿಮಾಗಾಗಿ ಕೆಲಸ ಮಾಡಿದವರ ಬೆನ್ನು ತಟ್ಟುವುದು ಸಹಜ ಆದರೆ, ಇಲ್ಲೊಬ್ಬ ವ್ಯಕ್ತಿ ಕೆಜಿಎಫ್​ 2 ಚಿತ್ರತಂಡಕ್ಕೆ ಕಿರಿಕ್​ ಮಾಡಿದ್ದಾರೆ. ರಾಕಿಂಗ್​ ಸ್ಟಾರ್ ಯಶ್​ ಹಾಗೂ ಪ್ರಶಾಂತ್​ ನೀಲ್​ರನ್ನು ಏಕವಚನದಲ್ಲೇ ಮಾತನಾಡಿಸಿದ್ದಾರೆ. ‘ಹಲೋ ಯಶ್​, ಡೈರೆಕ್ಟರ್​ ಪ್ರಶಾಂತ್​ ನೀಲ್​ ಇಲ್​​ ನೋಡ್ರಿ’ ಎಂದು ಕೇಳಿದ್ದಾನೆ. ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೀರಾ.. ಮೊದಲು ಸಿನಿಮಾ ಬಗ್ಗೆ ಹೇಳಿ, ಏನು ಸ್ಪೆಶಲ್​ ಇದೆ ನಿಮ್ಮ ಸಿನಿಮಾದಲ್ಲಿ ಮೊದಲು ಹೇಳು ಎಂದು ಎಲ್ಲರ ಮುಂದೆ ಕೇಳಿದ್ದಾನೆ.
    Published by:Vasudeva M
    First published: