ತೆಲುಗಿನ ಸಕ್ಸಸ್​ ರಶ್ಮಿಕಾಗೆ ತಂದಿತಾ ಕಿರಿಕ್​?; ಕೊಡಗಿನ ಬೆಡಗಿ ಮೇಲೆ ಐಟಿ ಕಣ್ಣು ಬಿದ್ದಿದ್ದೇಕೆ?

ಬೆರಳೆಣಿಕೆಯ ಸಿನಿಮಾಗಳ ಮೂಲಕವೇ ಸಕ್ಸಸ್​ ಕಂಡ ನಟಿ ರಶ್ಮಿಕಾ ಮಂದಣ್ಣ ಮೇಲೆ ಐಟಿ ಕಣ್ಣು ಬಿದ್ದಿದೆ. ರಶ್ಮಿಕಾ ಮನೆ ಮೇಲೆ ದಿಢೀರ್​ ದಾಳಿ ನಡೆಯಲು ಅವರು ಪಡೆಯುತ್ತಿರುವ ಯಶಸ್ಸು ಕೂಡ ಕಾರಣವಾಗಿದೆ. ಕೋಟ್ಯಾಂತರ ರೂ ಬಿಗ್​ ಬಜೆಟ್​ ಚಿತ್ರಗಳು ನಿರ್ಮಾಣವಾಗುವ ತೆಲುಗಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ರಶ್ಮಿಕಾ ಯಶಸ್ಸು ಸಾಧಿಸಿದ್ದೆ ಈ ದಾಳಿಗೆ ಕಾರಣವಾ ಎಂಬ ಅನುಮಾನ ಕೂಡ ಮೂಡಿದೆ.

Seema.R | news18-kannada
Updated:January 16, 2020, 12:30 PM IST
ತೆಲುಗಿನ ಸಕ್ಸಸ್​ ರಶ್ಮಿಕಾಗೆ ತಂದಿತಾ ಕಿರಿಕ್​?; ಕೊಡಗಿನ ಬೆಡಗಿ ಮೇಲೆ ಐಟಿ ಕಣ್ಣು ಬಿದ್ದಿದ್ದೇಕೆ?
ರಶ್ಮಿಕಾ
  • Share this:
ತೆಲುಗು ಸಿನಿಮಾದಲ್ಲಿ ನಂಬರ್​ ಒನ್​ ಪಟ್ಟಕ್ಕೆ ಏರಲು ರಶ್ಮಿಕಾ ತಯಾರಿ ನಡೆಸುತ್ತಿರುವಾಗಲೇ ಇತ್ತ ಅವರ ವಿರಾಜಪೇಟೆ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ,  ದಾಖಲೆ ಪರಿಶೀಲನೆ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದಷ್ಟೇ ಕನ್ನಡ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಅವರ ಮೇಲೆ ಐಟಿ ಇಲಾಖೆ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಕೂಡ ತೆಲುಗು ಸಿನಿಮಾದಲ್ಲಿ ಅವರು ಪಡೆಯುತ್ತಿರುವ ಸಕ್ಸಸ್​  ಈ ದಾಳಿಗೆ  ಕಾರಣ ಎಂಬ ಮಾತು ಕೂಡ ಕೇಳಿಬಂದಿದೆ. 

2016ರಲ್ಲಿ 'ಕಿರಿಕ್​ ಪಾರ್ಟಿ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ನಟಿ ಈವರೆಗೆ ಕಂಡಿರುವುದೆಲ್ಲಾ ಕೇವಲ ಸಕ್ಸಸ್​. ಪ್ರತಿ ಸಿನಿಮಾಗಳಲ್ಲಿಯೂ ಯಶಸ್ಸಿನ ಜೊತೆ ದೊಡ್ಡ ದೊಡ್ಡ​​ ಆಫರ್​ಗಳನ್ನು ರಶ್ಮಿಕಾ ಪಡೆದಿದ್ದಾರೆ.

ರಶ್ಮಿಕಾ ಮಂದಣ್ಣ ನಟಿಸುರುವುದೆಲ್ಲಾ ಸ್ಟಾರ್​ ನಟರೊಂದಿಗೆಯೇ. ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್​, ದರ್ಶನ್​, ಗಣೇಶ್​ , ಧೃವ ಸರ್ಜಾ ಜೊತೆ ಬಿಗ್​ ಬಜೆಟ್​ ಚಿತ್ರದಲ್ಲಿ ನಟಿಸಿ, ಅವೆಲ್ಲವೂ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ.

ಕನ್ನಡದಲ್ಲಿಯೇ ಸ್ಟಾರ್​ ನಾಯಕರೊಂದಿಗೆ ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ ತೆಲುಗಿನಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದು, ತಾವು ಸ್ಟಾರ್​ ನಟಿ ಎಂಬುದನ್ನು ಅಲ್ಲಿಯೂ ಸಾಬೀತು ಮಾಡಿದರು.

'ಚಲೋ' ಸಿನಿಮಾ ಮೂಲಕ ಟಾಲಿವುಡ್​​ ಪ್ರವೇಶಿಸಿದ ಅವರು, ಮೊದಲ ಸಿನಿಮಾದಲ್ಲಿಯೇ ತೆಲುಗು ಸಿನಿಮಾ ಪ್ರೇಕ್ಷಕರ ಮನಗೆದ್ದರು. ಇದಾದ ಬಳಿಕ ವಿಜಯದೇವರಕೊಂಡ ಜೊತೆ ನಟಿಸಿದ 'ಗೀತಾ ಗೋವಿಂದಂ', 'ಡಿಯರ್​ ಕಾಮ್ರೇಡ್​' ರಶ್ಮಿಕಾ ಉತ್ತಮ ನಟಿ ಎನ್ನುವ ಜೊತೆ ಯಶಸ್ವಿ ನಟಿ ಎಂದು ತೋರಿಸಿದವು.

ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಜೊತೆ ಸಿನಿಮಾ ನಟಿಸಬೇಕು ಎಂದು ಎನ್ನಿಲ್ಲದ ಪ್ರಯತ್ನ ಮಾಡು ನಟಿಯರ ನಡುವೆ ಸುಲಭವಾಗಿ ಈ ಸ್ಥಾನ ಗಿಟ್ಟಿಸಿಕೊಂಡವರು ಇದೇ ಕಿರಿಕ್​ ಬೆಡಗಿ. ನಾಲ್ಕನೇ ಚಿತ್ರದಲ್ಲಿಯೇ ಮಹೇಶ್​ ಬಾಬು ಜೊತೆ ನಟಿಸಿದ ಅವರ 'ಸರಿಲೇರು ನಿಕ್ಕೆವ್ವರು' ಚಿತ್ರ ಗಲ್ಲಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಇದರ ಜೊತೆ ರಶ್ಮಿಕಾ ಅಭಿನಯಕ್ಕೆ ಕೂಡ ಪ್ರಶಂಸೆಗಳು ಹರಿದು ಬಂದಿದ್ದು, ಮತ್ತಷ್ಟು ಆಫರ್​ಗಳು ಅವರನ್ನು ಹುಡುಕಿಕೊಂಡು ಬಂದಿದೆ.

ಇದನ್ನು ಓದಿ: ಬೆಳ್ಳಂ ಬೆಳಗ್ಗೆ ರಶ್ಮಿಕಾಗೆ ಐಟಿ ಶಾಕ್​; ಆಕೆಯ ಆಸ್ತಿ ಎಷ್ಟು ಗೊತ್ತಾ?ನಿರ್ದೇಶಕರ ಲಕ್ಕಿ ಹಿರೋಯಿನ್​ ಆಗುವುದರ ಜೊತೆ ರಶ್ಮಿಕಾಗೆ ಮಾಡೆಲಿಂಗ್​ ಮತ್ತು ಜಾಹೀರಾತುಗಳಲ್ಲಿ ಮಿಂಚುವುದರಲ್ಲಿ ಹಿಂದೆ ಬಿದ್ದಿಲ್ಲ. ಕಡಿಮೆ ಅವಧಿಯಲ್ಲಿಯೇ ಇಷ್ಟು ಸಕ್ಸಸ್​ ಪಡೆದ ನಟಿ, ಆದಾಯ ಹೆಚ್ಚಾಗಿದೆ. ಅಲ್ಲದೇ, ತೆಲುಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗುವಷ್ಟು ಹಣ ಸಂಪಾದನೆ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ಸದ್ಯ ಸಿನಿ ರಂಗದಲ್ಲಿ ಕೇಳಿ ಬಂದಿದ್ದು, ಇದೇ ಕಾರಣಕ್ಕೆ ಅವರ ಮನೆ ಮೇಲೆ ಐಟಿ ದಾಳಿಯಾಗಿದೆ ಎನ್ನಲಾಗಿದೆ.
First published: January 16, 2020, 12:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading