Bollywood: ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್.. ಕಾರಣ ಇಲ್ಲಿದೆ

2018ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಈ ಜೋಡಿ ಅದೇ ವರ್ಷ ಶಿಲ್ಪಾ ಶೆಟ್ಟಿ ಅವರ ದೀಪಾವಳಿ ಪಾರ್ಟಿಯಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿತ್ತು ಆದಾಗ್ಯೂ ಸುಶ್ಮಿತಾ ಸೇನ್ ಮತ್ತು ರೋಮನ್ ಶಾಲ್ ಏಕೆ ಬೇರ್ಪಟ್ಟರು ಎಂಬುದು ಸ್ಪಷ್ಟವಾಗಿಲ್ಲ

ರೋಹ್‌ಮನ್ ಜೊತೆ ನಟಿ ಸುಷ್ಮಿತಾ ಸೇನ್

ರೋಹ್‌ಮನ್ ಜೊತೆ ನಟಿ ಸುಷ್ಮಿತಾ ಸೇನ್

  • Share this:
ಮಿಸ್‌ ಯುನಿವರ್ಸ್ ಕಿರೀಟ ತೊಟ್ಟ ಬಾಲಿವುಡ್ (Bollywood) ನಟಿ ಸುಷ್ಮಿತಾ ಸೇನ್‌ (Sushmita Sen) ಅವರು ಮಾಡಲ್‌ ರೋಹ್‌ಮನ್ ಶಾಲ್ ( model Rohman shawl ) ಬ್ರೇಕಪ್ (Breakup) ವಿಚಾರ ಸದ್ಯ ಎಲ್ಲಾರಿಗೂ ಗೊತ್ತಿರುವ ವಿಚಾರ, ಆದರೆ ಅವರ ಬ್ರೇಕ್ ಅಪ್ ಹಿಂದಿನ ಕಾರಣ ಏನು ಎಂದು ತಿಳಿಯುವ ಕುತೂಹಲ ಜನರಲ್ಲಿ ತುಸು ಹೆಚ್ಚಾಗಿಯೇ ಇದೆ. ಸುಷ್ಮಿತಾ ಅವರ ಸಿನಿ ಬದುಕಿನ ಜೊತೆಗೆ ಅವರ ವೈಯಕ್ತಿಕ ಬದುಕು (Personal life) ಕೂಡ ಅಷ್ಟೇ ಸದಾ ಚರ್ಚೆಯಲ್ಲಿತ್ತು. ಯಾಕೆಂದರೆ ಸುಷ್ಮಿತಾ ಅವರು ಇನ್ನು ಮದುವೆಯೇ ಆಗಿರಲಿಲ್ಲ, ಸುಶ್ಮಿತಾ ಸೇನ್ ತನ್ನ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬ್ರೇಕ್ ಅಪ್ ಆಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ತಕ್ಷಣ, ಅಭಿಮಾನಿಗಳು ಕೂಡ (Disappointed) ನಿರಾಸೆಗೊಂಡರು.

ಪೋಸ್ಟ್‌ ವೈರಲ್
ಸುಷ್ಮಿತಾ ಸೇನ್ ಯಾರ ಜೊತೆ ಮದುವೆ ಆಗುತ್ತಾರೆ ಎನ್ನುವ ವಿಚಾರ ಹಲವು ಬಾರಿ ಮುನ್ನೆಲೆಗೆ ಬರುತ್ತಿತ್ತು. ಆ ವೇಳೆ ಸುಷ್ಮಿತಾ ಲೈಪ್‌ ಗೆ ಮಾಡಲ್‌ ರೋಹ್‌ಮನ್ ಶಾಲ್ ಎಂಟ್ರಿ ಕೊಟ್ಟರು. ಇದೀಗ ಸುಷ್ಮಿತಾ ರೋಹ್‌ಮನ್ ಶಾಲ್ ಅವರಿಂದ ದೂರ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಗೆಳೆಯ ರೋಹ್ಮಾನ್ ಶಾಲ್ ಕಾಲು ಎಳೆದ ಸುಷ್ಮಿತಾ ಸೇನ್: ಮಾಜಿ ವಿಶ್ವ ಸುಂದರಿಗೆ ನೆಟ್ಟಿಗರ ಸಾಥ್

ಸಂಬಂಧ ಮುಗಿದು ಹೋಗಿದೆ
ಈ ಇಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಹಾಗಾಗಿ ಈ ಜೋಡಿ ಮದುವೆ ಆಗುತ್ತೆ ಅಂತಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೂ ಮುನ್ನ ಬ್ರೇಕಪ್ ಆಗಿದೆ. ಈ ವಿಚಾರವಾಗಿ ಪೋಸ್ಟ್‌ ಹಂಚಿಕೊಂಡಿರುವ ಸುಷ್ಮಿತಾ ಸೇನ್‌ " ಈ ಸಂಬಂಧ ಮುಗಿದು ಹೋಗಿದೆ. ಸ್ನೇಹಿತರಾಗಿ ಪಯಣ ಆರಂಭಿಸಿದ್ದೇವೆ. ಇನ್ನೂ ನಾವು ಸ್ನೇಹಿತರು ಮಾತ್ರ, ಪ್ರೀತಿ ಸದಾ ಇರುತ್ತದೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರೋಹ್‌ಮನ್ ಶಾಲ್ ಜೊತೆಗಿನ ಫೋಟೊ ಕೂಡ ಹಂಚಿಕೊಂಡಿದ್ದಾರೆ ಸುಷ್ಮಿತಾ ಸೇನ್.






ನಟಿ ಸುಷ್ಮಿತಾ ಸೇನ್‌ ಮತ್ತು ರೋಹ್‌ಮನ್ 2018ರಿಂದ ಜೊತೆಗೆ ಇದ್ದಾರೆ. ರೋಹ್‌ಮನ್ ಒಬ್ಬ ಮಾಡಲ್, ಸಾಕಷ್ಟು ಸೆಲೆಬ್ರೆಟಿ ವಿನ್ಯಾಸಕರ ಉಡುಪುಗಳಿಗೆ ರೋಹ್‌ಮನ್ ರ್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಸುಷ್ಮಿತಾ ಜೊತೆಗೆ ರೋಹ್‌ಮನ್ ಹೆಸರು 2018ರಿಂದ ಕೇಳಿ ಬರುತ್ತಿದೆ. ಸುಷ್ಮಿತಾ ಸೇನ್‌ ರೋಹ್‌ಮನ್‌ಗಿಂತಲೂ ವಯಸ್ಸಿನಲ್ಲಿ 15 ವರ್ಷ ದೊಡ್ಡವರು. ಈ ಬಗ್ಗೆ ಕೂಡ ಸಾಕಷ್ಟು ಟ್ರೋಲ್‌ ಆಗಿದ್ದವು.

ಹೃದಯ ಎಮೋಜಿ
ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹ್ಮನ್, "ಯಾವಾಗಲೂ" ಎಂದು ಬರೆದು ನಂತರ ಎರಡು ಹೃದಯ ಎಮೋಜಿಗಳನ್ನು ಕೊಟ್ಟು ಕಮೆಂಟ್​ ಮಾಡಿದ್ದಾರೆ. ಅಭಿಮಾನಿಗಳು ಕೂಡ ಬ್ರೇಕ್​ ಅಪ್ ಪೋಸ್ಟ್‌ಗೆ ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ. 2018ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಈ ಜೋಡಿ, ಅದೇ ವರ್ಷ ಶಿಲ್ಪಾ ಶೆಟ್ಟಿ ಅವರ ದೀಪಾವಳಿ ಪಾರ್ಟಿಯಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿತ್ತು. ಆದಾಗ್ಯೂ, ಸುಶ್ಮಿತಾ ಸೇನ್ ಮತ್ತು ರೋಮನ್ ಶಾಲ್ ಏಕೆ ಬೇರ್ಪಟ್ಟರು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Chris Noth: ಬೇಡ..ಬೇಡ.. ಅಂದ್ರೂ ಕಿಸ್​ ಮಾಡಿ ಎದೆಗೆ ಕೈ ಹಾಕಿದ್ರು: ನಟನ ವಿರುದ್ಧ ಸಿಂಗರ್​ ಗಂಭೀರ ಆರೋಪ

ಬಾಲಿವುಡ್‌ಗೆ ಪಾದಾರ್ಪಣೆ
ಸುಶ್ಮಿತಾ ಸೇನ್ ಅವರು ಆರ್ಯ ಎಂಬ ವೆಬ್-ಸರಣಿಯೊಂದಿಗೆ ಚಿತ್ರರಂಗಕ್ಕೆ ಪುನರಾಗಮನ ಮಾಡಿದರು, ಇದು ಈ ವರ್ಷ ಇಂಟರ್ನ್ಯಾಷನಲ್ ಎಮ್ಮಿಸ್‌ನಲ್ಲಿ ಅತ್ಯುತ್ತಮ ನಾಟಕ ಸರಣಿಯ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು. ಅವರು ಕೊನೆಯ ಬಾರಿಗೆ ಆರ್ಯ ಎರಡನೇ ಸೀಸನ್ ನಲ್ಲಿ ಕಾಣಿಸಿಕೊಂಡರು, ಇದು ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಸುಶ್ಮಿತಾ ಸೇನ್ 1994 ರ ಭುವನ ಸುಂದರಿ ಕಿರೀಟವನ್ನು ಪಡೆದರು. ಅವರು 1996 ರ ಚಲನಚಿತ್ರ ದಸ್ತಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
Published by:vanithasanjevani vanithasanjevani
First published: