• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • RRR Movie: ಆಸ್ಕರ್ ವೇದಿಕೆ ಮೇಲೆ ರಾಮ್ ಚರಣ್​ ಜೊತೆ ಡ್ಯಾನ್ಸ್ ಮಾಡಲು ಒಪ್ಪಲಿಲ್ಲ ಜೂನಿಯರ್ NTR! ಕಾರಣ ಏನು?

RRR Movie: ಆಸ್ಕರ್ ವೇದಿಕೆ ಮೇಲೆ ರಾಮ್ ಚರಣ್​ ಜೊತೆ ಡ್ಯಾನ್ಸ್ ಮಾಡಲು ಒಪ್ಪಲಿಲ್ಲ ಜೂನಿಯರ್ NTR! ಕಾರಣ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಟ ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ‘ನಾಟು ನಾಟು’ ಹಾಡಿಗೆ ಲೈವ್ ಆಗಿ ಡ್ಯಾನ್ಸ್ ಮಾಡಲು ತುಂಬಾ ಉತ್ಸುಕರಾಗಿದ್ದರಂತೆ. ಆದ್ರೆ ಇದಕ್ಕೆ ಜ್ಯೂನಿಯರ್ ಎನ್‌ಟಿಆರ್ ಒಪ್ಪಿಲ್ಲ ಕಾರಣ ಏನು ಗೊತ್ತಾ?

  • Share this:

ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರಾದ ಎಸ್.ಎಸ್. ರಾಜಮೌಳಿ ಅವರ ‘RRR’ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅದ್ಭುತ ಮೆಚ್ಚುಗೆ ಪಡೆದು ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿತು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮಾರ್ಚ್ 2022 ರಲ್ಲಿ ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ಆಸ್ಕರ್​ ಗೆದ್ದು ಚಿತ್ರತಂಡ ಬೀಗಿದೆ. 


95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದ ಸೂಪರ್ ಹಿಟ್ ಟ್ರ್ಯಾಕ್ ‘ನಾಟು ನಾಟು’ ಅಂತೂ ಬರೀ ನಮ್ಮ ಭಾರತ ದೇಶದಲ್ಲಿ ಅಲ್ಲದೆ, ಇಡೀ ಜಗತ್ತಿನಾದ್ಯಂತ ಜನರನ್ನು ಆಕರ್ಷಿಸಿದೆ ಮತ್ತು ಮನರಂಜಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಹೌದು.. ಈ ನಾಟು ನಾಟು ಹಾಡಿಗೆ ಅಮೆರಿಕದ ಪೊಲೀಸಪ್ಪ ಡ್ಯಾನ್ಸ್ ಮಾಡಿದ್ದ ವೀಡಿಯೋ ಮತ್ತು ಮೊನ್ನೆ ಟೆಕ್ಸಾಸ್ ನಲ್ಲಿ ಕಾರುಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಸರಿಯಾಗಿ ಸಾಲುಗಳಲ್ಲಿ ನಿಲ್ಲಿಸಿ ಈ ಹಾಡಿನ ಬೀಟ್ಸ್ ಗೆ ಲೈಟ್ ಶೋ ನಡೆಸಿರುವುದನ್ನು ಸಹ ನಾವು ನೋಡಿದ್ದೆವು.


ಅಷ್ಟೇ ಅಲ್ಲದೆ ನಟಿ ರಾಖಿ ಸಾವಂತ್ ಮತ್ತು ಇನ್ನಿತರೆ ನಟ ಮತ್ತು ನಟಿಯರು ಸಹ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದ ವಿಡಿಯೋಗಳನ್ನು ನಾವು ನೋಡಿದ್ದೆವು.


ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ‘ನಾಟು ನಾಟು’ ಹಾಡಿಗೆ ಡ್ಯಾನ್ಸ್ ಮಾಡಿದ್ದು ಬೇರೆ ನಟರಂತೆ..


ಆದರೆ ಈ ಹಾಡಿಗೆ ಮನಮೋಹಕವಾಗಿ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದ ನಟ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಹಾಡಿಗೆ ಡ್ಯಾನ್ಸ್ ಮಾಡಲು ಒಪ್ಪಿಲ್ಲವಂತೆ.


ನಟ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ ಹತ್ತಿರದ ಮೂಲವೊಂದು ತಿಳಿಸಿದಂತೆ ಈ ನಟರ ಬದಲು ಜೇಸನ್ ಗ್ಲೋವರ್ ಮತ್ತು ಬಿಲ್ಲಿ ಮುಸ್ತಫಾ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಹಾಡಿಗೆ ಡ್ಯಾನ್ಸ್ ಮಾಡಿ ಪ್ರದರ್ಶನ ನೀಡಿದರಂತೆ ಎಂದು ಹೇಳಲಾಗುತ್ತಿದೆ.


ಇದೇಕೆ ಹೀಗೆ? ಈ ನಟರು ಏಕೆ ಡ್ಯಾನ್ಸ್ ಮಾಡಲಿಲ್ಲ ಅಂತ ನಿಮ್ಮ ತಲೆಯಲ್ಲಿ ಪ್ರಶ್ನೆಯೊಂದು ಮೂಡಬಹುದು.


ಜೂನಿಯರ್ ಎನ್‌ಟಿಆರ್ ಅವರು ರಾಮ್ ಚರಣ್ ಆಸ್ಕರ್ ನಲ್ಲಿ ಡ್ಯಾನ್ಸ್ ಮಾಡದೇ ಇರೋದಕ್ಕೆ ಕಾರಣ ಇದಂತೆ..


ಮೂಲಗಳ ಪ್ರಕಾರ "ನಟ ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ‘ನಾಟು ನಾಟು’ ಹಾಡಿಗೆ ಲೈವ್ ಆಗಿ ಡ್ಯಾನ್ಸ್ ಮಾಡುವ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಹೀಗೆ ಮಾಡುವುದು ಜ್ಯೂನಿಯರ್ ಎನ್‌ಟಿಆರ್ ಗೆ ಇಷ್ಟವಿರಲಿಲ್ಲವಂತೆ. ಅವರು ಇದಕ್ಕೆ ಸಮಯ ಮತ್ತು ಪೂರ್ವಾಭ್ಯಾಸದ ಕೊರತೆಯೇ ಕಾರಣ ಎಂದು ಹೇಳಿದರಂತೆ.


ಸತ್ಯವಾದ ವಿಷಯವೆಂದರೆ ರಾಮ್ ಚರಣ್ ಅವರೊಂದಿಗೆ ವೇದಿಕೆಗೆ ಹೋಗಿ ಡ್ಯಾನ್ಸ್ ಪ್ರದರ್ಶನ ನೀಡಲು ಎನ್‌ಟಿಆರ್ ಗೆ ಮನಸ್ಸಿರಲಿಲ್ಲ ಎನ್ನಲಾಗುತ್ತಿದೆ. ಎನ್‌ಟಿಆರ್ ನಿರ್ಧಾರವನ್ನು ಸಮರ್ಥಿಸಿಕೊಂಡ ಮೂಲಗಳು "ಇದು ಒಂದು ಪ್ರಮುಖ ಘಟನೆಯಾಗಿದ್ದು, ಈ ಇಬ್ಬರು ನಟರು ಈಗಾಗಲೇ ಯುಎಸ್ಎಯಲ್ಲಿ ಚಿತ್ರಕ್ಕಾಗಿ ಸಾಕಷ್ಟು ಪ್ರಸಾರ ಮತ್ತು ಪ್ರಾಮುಖ್ಯತೆಯನ್ನು ಪಡೆದಿದ್ದಾರೆ.


ಜ್ಯೂನಿಯರ್ ಎನ್‌ಟಿಆರ್ ಹೆಚ್ಚಿನ ಹೋಲಿಕೆಗಳನ್ನು ಮಾಡಲು ಬಯಸಲಿಲ್ಲ. ಆದ್ದರಿಂದ ಅವರು ಆಸ್ಕರ್ ನಲ್ಲಿ ಡ್ಯಾನ್ಸ್ ಮಾಡದೆ ದೂರ ಉಳಿದರು" ಅಂತ ಹೇಳಲಾಗುತ್ತಿದೆ.


ಇತಿಹಾಸವನ್ನೇ ಸೃಷ್ಟಿಸಿದೆ ಈ ‘ನಾಟು ನಾಟು’ ಹಾಡು


ವ್ಯಾಪಕವಾಗಿ ಜನಪ್ರಿಯವಾಗಿರುವ ನಾಟು ನಾಟು ಹಾಡನ್ನು ಎಂ.ಎಂ.ಕೀರವಾಣಿ ಅವರು ಸಂಯೋಜಿಸಿದ್ದಾರೆ, ಇದನ್ನು ಬರೆದವರು ಚಂದ್ರಬೋಸ್ ಅಂತ ಹೇಳಬಹುದು. ಇದನ್ನು ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಹಾಡಿದ್ದಾರೆ. ಈ ಹಾಡು ಆಸ್ಕರ್ ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.


top videos



    ಈ ವರ್ಷದ ಆರಂಭದಲ್ಲಿ, ಈ ಹಾಡು 'ಅತ್ಯುತ್ತಮ ಮೂಲ ಹಾಡು' ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಸೇರಿದಂತೆ ಜಾಗತಿಕ ವೇದಿಕೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಸಹ ಗಳಿಸಿತು.

    First published: