Avatar Movie:ಅವತಾರ್ ಮರು ಬಿಡುಗಡೆ ಮಾಡಲು ಇದೇ ಕಾರಣವಂತೆ

ಅವತಾರ್‌ ಸಿನೆಮಾ

ಅವತಾರ್‌ ಸಿನೆಮಾ

ಅವತಾರ್ ಚಿತ್ರದ ಮುಂದುವರಿದ ಭಾಗವಾದ ಅವತಾರ್: ದಿ ವೇ ಆಫ್ ವಾಟರ್ ಚಿತ್ರಕ್ಕೂ ಮುನ್ನ ಹಳೆಯ ಅವತಾರ್‌ ಚಿತ್ರವನ್ನು ಜಾಗತಿಕವಾಗಿ ಮರುಬಿಡುಗಡೆ ಮಾಡಲಾಗುತ್ತಿದೆ. ಅವತಾರ್‌ನ ಮುಂದುವರಿದ ಭಾಗ ಈ ವರ್ಷದ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದ್ದು ಅವತಾರ್‌ನ ಆರಂಭ ಭಾಗವನ್ನು 2009 ರಲ್ಲಿ 3ಡಿ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಪ್ರೇಕ್ಷಕರಿಗಾಗಿ ಚಿತ್ರವನ್ನು 4ಕೆ ಮಾದರಿಯಲ್ಲಿ ಮರುಮಾದರಿಗೊಳಿಸಲಾಗಿದೆ.

ಮುಂದೆ ಓದಿ ...
  • Share this:

ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ ಜೇಮ್ಸ್ ಕ್ಯಾಮೆರಾನ್ (James Cameron) ಅವತಾರ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ (Re-release) ಮಾಡುವ ಉತ್ಸಾಹದಲ್ಲಿದ್ದಾರೆ. ಅವತಾರ್ ಚಿತ್ರದ ಮುಂದುವರಿದ ಭಾಗವಾದ ಅವತಾರ್: ದಿ ವೇ ಆಫ್ ವಾಟರ್ (Avatar: The Way of Water) ಚಿತ್ರಕ್ಕೂ ಮುನ್ನ ಹಳೆಯ ಅವತಾರ್‌ ಚಿತ್ರವನ್ನು ಜಾಗತಿಕವಾಗಿ ಮರುಬಿಡುಗಡೆ ಮಾಡಲಾಗುತ್ತಿದೆ. ಅವತಾರ್‌ನ ಮುಂದುವರಿದ ಭಾಗ ಈ ವರ್ಷದ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದ್ದು ಅವತಾರ್‌ನ ಆರಂಭ ಭಾಗವನ್ನು 2009 ರಲ್ಲಿ 3ಡಿ ಮಾದರಿಯಲ್ಲಿ ಬಿಡುಗಡೆ (Release) ಮಾಡಲಾಗಿತ್ತು. ಇದೀಗ ಪ್ರೇಕ್ಷಕರಿಗಾಗಿ ಚಿತ್ರವನ್ನು 4ಕೆ ಮಾದರಿಯಲ್ಲಿ ಮರುಮಾದರಿಗೊಳಿಸಲಾಗಿದೆ.


ಚಿತ್ರವೂ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿ ಮೂಡಿಬಂದಿದೆ:
ಜಾಗತಿಕ ಪ್ರತಿಕಾಗೋಷ್ಟಿಯಲ್ಲಿ ಜೇಮ್ಸ್ ಅವರು ಚಿತ್ರದ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು, ನಿಮಗೆಲ್ಲರಿಗೂ ಗೊತ್ತಿರುವಂತೆ ಚಿತ್ರವು ಬಿಡುಗಡೆಯಾಗಿ 12 ವರ್ಷಗಳು ಕಳೆದಿವೆ ಅಂತೆಯೇ ನೀವು 22, 23 ವಯಸ್ಸಿನ ಒಳಗಿನವರಾಗಿದ್ದರೆ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿರುವ ಸಾಧ್ಯತೆ ತುಂಬಾ ತುಂಬಾ ಕಡಿಮೆ. ನೀವು ಚಿತ್ರವನ್ನು ನೋಡೇ ಇಲ್ಲ ಎಂದೇ ಹೇಳಬಹುದು. ದೊಡ್ಡ ಪರದೆಗಾಗಿ ಚಿತ್ರ ರಸಿಕರು ವೀಕ್ಷಿಸಬೇಕೆಂಬ ನಿಟ್ಟಿನಲ್ಲಿ ಚಿತ್ರವನ್ನು 3 ಡಿಯಲ್ಲಿ ನಾವು ನಿರ್ಮಿಸಿದ್ದೆವು. ಈಗ ಅದೇ ಚಿತ್ರವನ್ನು ನಾವು 4ಕೆ ಮಾದರಿಯಲ್ಲಿ ಹೈ ಡೈನಾಮಿಕ್ ಶ್ರೇಣಿಯಲ್ಲಿ ಪ್ರತಿ ಸೆಕೆಂಡ್‌ಗೆ 48 ಫ್ರೇಮ್‌ನಂತೆ ಮರುಮಾದರಿಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.


ಪ್ರೇಕ್ಷಕರಿಗೆ ಚಿತ್ರ ರಂಜನೀಯವಾಗಿರಲಿದೆ
ಇದರಿಂದಾಗಿ ಚಿತ್ರವು ಈ ಹಿಂದಿಗಿಂತಲೂ ಹೆಚ್ಚು ಆಕರ್ಷಕ ಹಾಗೂ ಉತ್ತಮವಾಗಿ ಕಂಡುಬರಲಿದೆ. ಚಿತ್ರವನ್ನು ಆಸ್ವಾದಿಸುವ ಸಮಯದಲ್ಲಿ ಇದು ನಿಮ್ಮ ಅನುಭವಕ್ಕೆ ಬರಲಿದೆ ಎಂದು ಹೇಳಿರುವ ನಿರ್ದೇಶಕರು, ಚಿತ್ರದ ಆರಂಭದಲ್ಲಿ ಕಂಡುಬಂದದ್ದಕ್ಕಿಂತಲೂ ಸುಂದರವಾಗಿ ಮರುವಿನ್ಯಾಸಗೊಳಿಸಿದ ಮಾದರಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Ranu Mondal Biopic: ಬರ್ತಿದೆ ರಾನು ಮೊಂಡಲ್ ಜೀವನಾಧಾರಿತ ಸಿನಿಮಾ! ಫಸ್ಟ್​ ಲುಕ್ ರಿಲೀಸ್


ಚಿತ್ರವನ್ನು ನೋಡುವ ಪ್ರೇಕ್ಷಕ ವೃಂದ ಈಗ ಬದಲಾಗುತ್ತಿದೆ. ಚಿತ್ರವನ್ನು ಪ್ರಸಾರ ಸಮಯದಲ್ಲಿ ಅವರು ಮೆಚ್ಚಿಕೊಂಡರೂ ನಾವು ಅಂದುಕೊಂಡ ರೀತಿಯಲ್ಲಿ ಅವರೆಂದಿಗೂ ಸಿನಿಮಾವನ್ನು ವೀಕ್ಷಿಸಿರಲಿಕ್ಕಿಲ್ಲ. ಸಂಪೂರ್ಣ ಮರುಮಾದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಾವು ಚಿತ್ರವನ್ನು ವೀಕ್ಷಿಸಿದ್ದು, ನಿಜಕ್ಕೂ ಫಲಿತಾಂಶ ಅದ್ಭುತವಾಗಿ ಹೊರಹೊಮ್ಮಿದೆ ಎಂದು ಜೇಮ್ಸ್ ಕ್ಯಾಮೆರಾನ್ ನುಡಿದಿದ್ದಾರೆ.


ಅವತಾರ್ ಮರುಬಿಡುಗಡೆ ಹೇಗಿದೆ?
ಚಿತ್ರವು ಪ್ರೇಕ್ಷಕರಿಗೆ ಹೇಗೆ ಇಷ್ಟವಾಗಬಹುದು ಮತ್ತು ಅವರು ಚಿತ್ರವನ್ನು ಹೇಗೆ ಸ್ವೀಕರಿಸಬಹುದು ಎಂಬುದರ ಕುರಿತು ನಾವು ರೋಮಾಂಚಿತರಾಗಿದ್ದೇವೆ. ಚಿತ್ರವು ಹೇಗೆ ಕಾಣಬಹುದು ಎಂಬುದನ್ನು ಕುರಿತು ನಾವು ಪ್ರಭಾವಿತರಾಗಿದ್ದೇವೆ. ಚಿತ್ರದ ಭೌತಿಕ ಅನುಭವವನ್ನು ಚಿತ್ರವನ್ನು ನೋಡದ ಜನರೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಜೇಮ್ಸ್ ಕ್ಯಾಮೆರಾನ್ ತಿಳಿಸಿದ್ದಾರೆ.


[embed]https://youtu.be/jm2sNLIPPvA[/embed]


ಸ್ಯಾಮ್ ವರ್ಥಿಂಗ್ಟನ್ (ಜೇಕ್ ಸಲ್ಲಿ), ಜೊಯಿ ಸಲ್ಡಾನಾ (ನೈತಿರಿ), ಸಿಗೌರ್ನಿ ವೀವರ್ (ಡಾ. ಗ್ರೇಸ್ ಆಗಸ್ಟಿನ್), ಮಿಚೆಲ್ ರೋಡ್ರಿಗಸ್ (ಟ್ರೂಡಿ ಚಾಕನ್), ಸ್ಟೀಫನ್ ಲ್ಯಾಂಗ್ (ಮೈಲ್ಸ್ ಕ್ವಾರಿಚ್) ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದು ತಾವೆಲ್ಲರೂ ಚಿತ್ರ ಮರುಬಿಡುಗಡೆಯ ಕುರಿತು ಹೆಚ್ಚು ಪುಳಕಿತರಾಗಿರುವುದಾಗಿ ತಿಳಿಸಿದ್ದಾರೆ.


ಮರುಬಿಡುಗಡೆಯಾಗುತ್ತಿರುವ ಅವತಾರ್ ಚಿತ್ರ
ಸಪ್ಟೆಂಬರ್ 23, 2022 ರಂದು ಚಿತ್ರದ ಮರುಬಿಡುಗಡೆಯು ತೆರೆಕಾಣಲಿದೆ. 2009 ರಲ್ಲಿ ತೆರೆಕಂಡ ಅವತಾರ್ ಚಿತ್ರ ಬಾಕ್ಸ್ ಆಫೀಸ್‌ನ ಅತ್ಯಂತ ಹೆಚ್ಚು ಗಳಿಕೆಯ ಚಿತ್ರವಾಗಿ ಹೆಸರು ಮಾಡಿತ್ತು.


ಇದನ್ನೂ ಓದಿ:  Mahalakshmi-Ravindar: ಮಹಾಲಕ್ಷ್ಮಿ ಜೊತೆ ಮದ್ವೆ ಬಳಿಕ ಡೆಲಿವರಿ ಬಾಯ್ ಆದ ರವೀಂದರ್​, ಇದೆಂಥಾ ಪರಿಸ್ಥಿತಿ ಬಂತು ಎಂದ ಫ್ಯಾನ್ಸ್​!

top videos


    ಚಿತ್ರದಲ್ಲಿ ಬಳಸಿದ ಗ್ರಾಫಿಕ್ಸ್, ಕಲಾತ್ಮಕ ಅಂಶಗಳು ಸಿನಿ ರಸಿಕರ ಮನಸ್ಸನ್ನು ಗೆದ್ದಿತ್ತು ಹಾಗೂ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಚಿತ್ರದ ಮರುಬಿಡುಗಡೆಯನ್ನೂ ಜೇಮ್ಸ್ ಕ್ಯಾಮರೂನ್ ಅತ್ಯಂತ ವಿಶಿಷ್ಟ ಶೈಲಿಯಲ್ಲಿ ನಡೆಸಿದ್ದು ಚಿತ್ರವನ್ನು ವೀಕ್ಷಸದವರಿಗೆ ಈ ಚಿತ್ರ ಖಂಡಿತ ರೋಮಾಂಚವನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

    First published: