ಸೂಪರ್ ಸ್ಟಾರ್ ರಜನಿಕಾಂತ್(Super Star Rajinikanth) ಅವರ ಪುತ್ರಿ ಐಶ್ವರ್ಯ(Aishwarya) ಅವರನ್ನು ವಿವಾಹವಾಗಿದ್ದ(Marriage) ತಮಿಳು ನಟ ಧನುಷ್(Actor Dhanush) ವಿವಾಹ ವೀಚ್ಚೆಧನ(Divorce) ನೀಡಿದ್ದಾರೆ.. ಈ ಜೋಡಿಯ ವೀಚ್ಚೆಧನದ ಸುದ್ದಿ ಈಗ ಎಲ್ಲಾ ಕಡೆ ಸಾಕಷ್ಟು ಸದ್ದು ಮಾಡುತ್ತಿದೆ.. ಅಲ್ಲದೆ 18 ವರ್ಷ ಸಂಸಾರ ಮಾಡಿದ ಬಳಿಕ ಈ ಜೋಡಿ ವೀಚ್ಚೆಧನ ಪಡೆದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಒಂದು ಕಡೆ ಧನುಷ್ ಗೆ ಕೆಲವು ನಟಿ ಮಣಿಯರ(Actress) ಜೊತೆ ಡೇಟಿಂಗ್ ನಲ್ಲಿ(Dating) ಇದ್ದರು ಎನ್ನುವುದೇ ಕಾರಣ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದರ ನಡುವೆ ಧನುಷ್ ಆಪ್ತ ಸ್ನೇಹಿತರೊಬ್ಬರು(Friend) ಐಶ್ವರ್ಯ ಹಾಗೂ ಧನುಷ್ ದಂಪತಿ ವೀಚ್ಚೆಧನ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ... ಹರೆಯದ ಹುಡುಗಿಯರು ಕೂಡ ನಾಚುವಂತೆ ಡಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ!
ಬಹಳ ಹಿಂದೆ ಹದಗೆಟ್ಟಿದ್ದ ಧನುಷ್ ಹಾಗೂ ಐಶ್ವರ್ಯಾ ಸಂಬಂಧ
ಧನುಷ್ ಆಪ್ತರು ನೀಡಿರುವ ಮಾಹಿತಿ ಪ್ರಕಾರ ಧನುಷ್ ಐಶ್ವರ್ಯ ನಡುವೆ ಸಂಬಂಧ ಬಹಳ ದಿನಗಳ ಹಿಂದೆ ಹಾಳಾಗಿತ್ತು. ತಮ್ಮ ಮದುವೆಯ ಸಂಬಂಧ ಉಳಿಸಿಕೊಳ್ಳಲು ಧನುಷ್ ಹಾಗೂ ಐಶ್ವರ್ಯ ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಕೊನೆಗೆ ಇಬ್ಬರೂ ವಿಚ್ಛೇದನ ಪಡೆದು ಕೊಂಡಿದ್ದಾರೆ.
ಧನುಷ್ ಕೆಲಸದಿಂದಾಗಿಯೇ ಕೌಟುಂಬಿಕ ಜೀವನಕ್ಕೆ ಕುತ್ತು
ಧನುಷ್ ಅವರ ಸಿನಿಮಾಗಳನ್ನು ನೋಡಿದಾಗ ಧನುಶ್ ಅವರು ಎಷ್ಟು ಪರಿಶ್ರಮ ಮಾತಾಡುತ್ತಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ.. ಒಂದು ಸಿನಿಮಾ ಒಪ್ಪಿಕೊಂಡಾಗ ಸಿನಿಮಾಗಾಗಿ ಸಾಕಷ್ಟು ಪ್ರಯತ್ನ ಪಡುವ ಧನುಷ್, ಒಂದು ನಗರದಿಂದ ಮತ್ತೊಂದು ನಗರಕ್ಕೆ ಸದಾ ಪ್ರವಾಸ ಮಾಡುತ್ತಲೇ ಇರುತ್ತಾರೆ. ಹೀಗೆ ಹೊರಗಡೆ ಸಿನಿಮಾ ಶೂಟಿಂಗ್‌ಗೆ ಹೋಗುತ್ತಾರೆ. ಇದರಿಂದ ಅವರ ಕೌಟುಂಬಿಕ ಜೀವನಕ್ಕೆ ಕುತ್ತು ತಂದುಕೊಂಡಿದ್ದಾರೆ.
ಪತ್ನಿ ಜೊತೆ ಜಗಳವಾದಾಗ ಹೊಸ ಸಿನಿಮಾಗೆ ಸಹಿ
ಧನುಷ್ ತಮ್ಮ ಕೌಟುಂಬಿಕ ಜೀವನ ಉಳಿಸಿಕೊಳ್ಳಲು ಪತ್ನಿಯ ಜೊತೆಗೆ ಜಗಳವಾದರೆ ಹೊಸ ಸಿನಿಮಾಗೆ ಸಹಿ ಮಾಡುತ್ತಿದ್ದರಂತೆ. ಐಶ್ವರ್ಯಾ ಜೊತೆ ಏನಾದರೂ ಮನಸ್ತಾಪವಿದ್ದರೆ, ಧನುಷ್ ಹೊಸ ಸಿನಿಮಾ ಸಹಿ ಮಾಡುತ್ತಿದ್ದರು. ಬಿದ್ದು ಹೋಗುತ್ತಿರುವ ಸಂಬಂಧದಿಂದ ದೂರ ಉಳಿಯಲು ಅವರು ತಮ್ಮ ಕೆಲಸವನ್ನು ಬಳಸಿಕೊಳ್ಳುತ್ತಿದ್ದರು. ಇದು ಅವರಿಬ್ಬರ ಸಂಬಂಧಕ್ಕೆ ಕುತ್ತು ತಂದು ಬಿಟ್ಟಿತು. ಹೀಗಾಗಿಯೇ ಕಳೆದ ಆರು ತಿಂಗಳ ಹಿಂದೆಯೇ ಧನುಷ್ ಹಾಗೂ ಐಶ್ವರ್ಯ ಜೋಡಿ ವಿಚ್ಛೇದನ ಪಡೆದುಕೊಳ್ಳುವ ಬಗ್ಗೆ ಚರ್ಚೆ ಮಾಡಿತ್ತಂತೆ.
ಇನ್ನು ಧನುಷ್ ಸಿನಿಮಾ ಜೊತೆ ಪ್ರೊಡಕ್ಷನ್ ಹೌಸ್‌ಗೂ ಕೈ ಹಾಕಿದ್ದಾರೆ. ಇವರ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾಗಳು ಸೆಟ್ಟೇರುತ್ತಿವೆ. ಓಟಿಟಿ ವೇದಿಕೆಯನ್ನು ಬಳಸಿಕೊಂಡು ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿದ್ದರು. ಕಳೆದ ಆರು ತಿಂಗಳು ಇವರಿಬ್ಬರಿಗೂ ತುಂಬಾನೇ ಸಮಸ್ಯೆಯಾಗಿದೆ. ಹೀಗಾಗಿ ಇಬ್ಬರು ವಿಚ್ಛೇದನ ನೀಡುವ ಬಗ್ಗೆ ಹಲವು ದಿನಗಳಿಂದ ಚರ್ಚೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಅತರಂಗಿ ರೇ ಸಿನಿಮಾ ಬಳಿಕ ವಿಚ್ಛೇದನ ನೀಡಲು ಧನುಷ್ ಪ್ಲ್ಯಾನ್
ಇತ್ತೀಚೆಗೆ ಬಾಲಿವುಡ್ನಲ್ಲಿ ಧನುಷ್ ನಟಿಸಿರುವ ಅತರಂಗಿ ರೇ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಅತರಂಗಿ ರೇ ಸಿನಿಮಾ ಪ್ರಚಾರದ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೋವಿದ್ದರೂ ಧನುಷ್ ಎಲ್ಲಿಯೂ ತೋರಿಸಿಕೊಂಡಿಲ್ಲ. ಆದ್ರೆ 'ಅತರಂಗಿ ರೇ' ಸಿನಿಮಾ ಬಿಡುಗಡೆ ಬಳಿಕ ವಿಚ್ಛೇದನ ಸುದ್ದಿ ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಆ ಸ್ಟಾರ್ ನಟಿಯಿಂದಲೇ ಧನುಷ್ ದಾಂಪತ್ಯದಲ್ಲಿ ಬಿರುಕು? ನಿಜಕ್ಕೂ ಅಂದು ಸಿನಿಮಾದ ಶೂಟಿಂಗ್ ವೇಳೆ ಏನಾಗಿತ್ತು?
ಮಕ್ಕಳ ಭವಿಷ್ಯ ಕಟ್ಟಲು ಐಶ್ವರ್ಯಾ ಸಜ್ಜು
ಇನ್ನೊಂದು ಕಡೆ ಧನುಷ್ ಪತ್ನಿ ಐಶ್ವರ್ಯಾ ಕೂಡ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದರು. ಚಾರಿಟಿ ಕೆಲಸಗಳು, ಸ್ರೀ ಸಬಲೀಕರಣ ಯೋಜನೆಗಳ ಮೇಲೆ ಕೆಲಸ ಮಾಡುತ್ತಿದ್ದರು. ಹಾಗೇ ಇಬ್ಬರು ಗಂಡು ಮಕ್ಕಳು ಯಾತ್ರ ಹಾಗೂ ಲಿಂಗ ಭವಿಷ್ಯ ರೂಪಿಸುವ ಕೆಲಸಕ್ಕೆ ಮುಂದಾಗಿದ್ದರು. ಇಬ್ಬರೂ ಮಕ್ಕಳಿಗೆ ಸಹ ಪೋಷಕರಾಗಿ ಇರುತ್ತಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೂ ಅಚ್ಚರಿಯಿಲ್ಲ. ಎಂದು ಧನುಷ್ ಹಾಗೂ ಐಶ್ವರ್ಯಾ ಆಪ್ತ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ