• Home
  • »
  • News
  • »
  • entertainment
  • »
  • Abhishek Bachchan: ‘ಕೇಸ್ ತೋ ಬಂತಾ ಹೈ’ ಶೋನಿಂದ ನಟ ಅಭಿಷೇಕ್ ಬಚ್ಚನ್ ಹೊರನಡೆದದ್ದೇಕೆ? ಕಾರಣ ಇಲ್ಲಿದೆ

Abhishek Bachchan: ‘ಕೇಸ್ ತೋ ಬಂತಾ ಹೈ’ ಶೋನಿಂದ ನಟ ಅಭಿಷೇಕ್ ಬಚ್ಚನ್ ಹೊರನಡೆದದ್ದೇಕೆ? ಕಾರಣ ಇಲ್ಲಿದೆ

ಕೇಸ್ ತೋ ಬಂತಾ ಹೈ ಶೋ

ಕೇಸ್ ತೋ ಬಂತಾ ಹೈ ಶೋ

ನಾವು ಹಾಸ್ಯ ಮಾಡಿದರೂ, ಅದನ್ನು ಎಲ್ಲಿಗೆ ಮುಗಿಸಬೇಕು ಅನ್ನೋದು ನಮಗೆ ತಿಳಿದಿರಬೇಕು. ಅನೇಕ ಟಿವಿ ಶೋ ಗಳಲ್ಲಿ ತುಂಬಾನೇ ಹಾಸ್ಯ ಮಾಡುವುದನ್ನು ನಾವು ನೋಡಿರುತ್ತೇವೆ ಮತ್ತು ಎಷ್ಟೋ ಸಾರಿ ಈ ರೀತಿಯ ಜೋಕ್ ಗಳು ಎದುರಿಗಿರುವವರ ಮನಸ್ಸಿಗೆ ನೋವುಂಟು ಮಾಡುತ್ತದೆ ಅನ್ನೋದನ್ನ ನಾವು ಗಮನಿಸುವುದೇ ಇಲ್ಲ. ಅಲ್ಲಿ ಈ ಜೋಕ್ ಗಳಿಂದಾಗಿ ಜಗಳವಾದರೆ, ಆಗ ನಮಗೆ ‘ಅರೇ ಆ ರೀತಿ ಜೋಕ್ಸ್ ನಾವು ಅವರ ಮೇಲೆ ಮಾಡಬಾರದಾಗಿತ್ತು’ ಅಂತ ಅನ್ನಿಸುತ್ತದೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಕೆಲವೊಮ್ಮೆ ನಾವು ಈ ಹಾಸ್ಯವನ್ನು (Comedy) ಮಾಡುತ್ತಾ ಮಾಡುತ್ತಾ ಎದುರಿಗಿರುವವರ ಮನಸ್ಸಿಗೆ ಅದು ಎಂತಹ ನೋವನ್ನು ಕೊಡಬಹುದು ಅನ್ನೋ ಒಂದು ವಿಚಾರವನ್ನೆ ಮರೆತು ಬಿಟ್ಟಿರುತ್ತೇವೆ. ಹೌದು.. ನಾವು ಹಾಸ್ಯ ಮಾಡಿದರೂ, ಅದನ್ನು ಎಲ್ಲಿಗೆ ಮುಗಿಸಬೇಕು ಅನ್ನೋದು ನಮಗೆ ತಿಳಿದಿರಬೇಕು. ಅನೇಕ ಟಿವಿ ಶೋ (TV Show) ಗಳಲ್ಲಿ ತುಂಬಾನೇ ಹಾಸ್ಯ ಮಾಡುವುದನ್ನು ನಾವು ನೋಡಿರುತ್ತೇವೆ ಮತ್ತು ಎಷ್ಟೋ ಸಾರಿ ಈ ರೀತಿಯ ಜೋಕ್ ಗಳು ಎದುರಿಗಿರುವವರ ಮನಸ್ಸಿಗೆ ನೋವುಂಟು ಮಾಡುತ್ತದೆ ಅನ್ನೋದನ್ನ ನಾವು ಗಮನಿಸುವುದೇ ಇಲ್ಲ. ಅಲ್ಲಿ ಈ ಜೋಕ್ ಗಳಿಂದಾಗಿ (Joke) ಜಗಳವಾದರೆ, ಆಗ ನಮಗೆ ‘ಅರೇ ಆ ರೀತಿ ಜೋಕ್ಸ್ ನಾವು ಅವರ ಮೇಲೆ ಮಾಡಬಾರದಾಗಿತ್ತು’ ಅಂತ ಅನ್ನಿಸುತ್ತದೆ.


ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.. ಇಲ್ಲಿ ಜೋಕ್ಸ್ ಮಾಡಿರೋದು ಸಾಮಾನ್ಯವಾದ ವ್ಯಕ್ತಿ ಮೇಲಲ್ಲ, ಬಾಲಿವುಡ್ ನ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರ ಮೇಲೆ ಜೋಕ್ಸ್ ಮಾಡಿದ್ದಾರೆ. ಅದು ಅವರ ಮಗ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಎದುರುಗಡೆ ಅಂತ ಹೇಳಿದರೆ ನೀವು ಒಂದು ಕ್ಷಣ ನಂಬಲಿಕ್ಕಿಲ್ಲ.


ತಮ್ಮ ತಂದೆಯ ಮೇಲೆ ಕಾಮಿಡಿ ಮಾಡಿದ್ರೆ ಅಭಿಷೇಕ್ ಗೆ ಕೋಪ ಬರುತ್ತೆ!
ತಮ್ಮ ತಂದೆ ಅಮಿತಾಭ್ ಬಚ್ಚನ್ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅಭಿಷೇಕ್ ತನ್ನ ತಂದೆಯ ಮೇಲೆ ಯಾರೆ ಜೋಕ್ ಮಾಡಿದರೂ ಸಹ ಸಹಿಸಿಕೊಳ್ಳುವುದಿಲ್ಲ. ಮೆಗಾಸ್ಟಾರ್ ಬಗ್ಗೆ ಹಾಸ್ಯಾಸ್ಪದ ಅಥವಾ ಕೀಳುಮಟ್ಟದ ಏನನ್ನೂ ಅವರು ಕೇಳಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ.


ಇದನ್ನೂ ಓದಿ: OTT Movies: ಒಟಿಟಿಯಲ್ಲಿ ಬಿಡುಗಡೆಯಾದ ಬೆಸ್ಟ್ ಚಿತ್ರಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಮೂವಿ ಲಿಸ್ಟ್


ಇತ್ತೀಚೆಗೆ, ನಟ ರಿತೇಶ್ ದೇಶಮುಖ್ ಮತ್ತು ವರುಣ್ ಶರ್ಮಾ ಹೋಸ್ಟ್ ಮಾಡಿದ ಶೋ ‘ಕೇಸ್ ತೋ ಬಂತಾ ಹೈ’ ನ ಪ್ರೋಮೋ ತುಂಬಾನೇ ಸುದ್ದಿಯಲ್ಲಿದೆ, ಏಕೆಂದರೆ ಅಭಿಷೇಕ್ ಈ ಶೋ ನ ಬಗ್ಗೆ ಅಸಮಾಧಾನಗೊಂಡಿದ್ದಾರೆ ಅಂತ ಹೇಳಬಹುದು. ಈ ಪ್ರೋಮೊ ವೀಡಿಯೋ ಪ್ರಕಾರ, ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಷೇಕ್, ಪರಿತೋಷ್ ತ್ರಿಪಾಠಿ ಅವರ ಹಾಸ್ಯದಿಂದ ಸ್ವಲ್ಪ ಕೋಪಗೊಂಡರು ಎಂದು ನೋಡಬಹುದು.


ಹಾಸ್ಯ ನಟನನ್ನು ಕೇಳಿದ ನಂತರ, ಜೂನಿಯರ್ ಬಚ್ಚನ್ ದೇಶ್ಮುಖ್ ಅವರಿಗೆ ಕರೆದು ಶೋ ನ ಚಿತ್ರೀಕರಣವನ್ನು ನಿಲ್ಲಿಸುವಂತೆ ಕೇಳಿಕೊಂಡರು. ಅವರು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸುತ್ತಾ ತಮ್ಮ ಬಗ್ಗೆ ತಮಾಷೆ ಮಾಡಿದರೆ ಅದನ್ನು ಸಹಿಸಿಕೊಳ್ಳುತ್ತೇನೆ, ಆದರೆ ತನ್ನ ತಂದೆಯ ಬಗ್ಗೆ ಅಲ್ಲ ಎಂದು ಅವರು ಹೇಳಿದರು.


ಅಭಿಷೇಕ್ ಹೇಳಿದ್ದೇನು ನೋಡಿ..
"ಇದು ಸ್ವಲ್ಪ ಜಾಸ್ತಿ ಆಗುತ್ತಿದೆ, ನಾನು ನನಗಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತೇನೆ, ಆದರೆ ನಮ್ಮ ಪೋಷಕರ ಬಗ್ಗೆ ಜೋಕ್ ಮಾಡುವುದನ್ನು ನಾನು ಸಹಿಸುವುದಿಲ್ಲ. ನನ್ನ ಪೋಷಕರ ಬಗ್ಗೆ ಯಾರಾದರೂ ಏನಾದರೂ ಅಂದರೆ ನಾನು ಸೂಕ್ಷ್ಮವಾಗುತ್ತೇನೆ" ಎಂದು ಅಭಿಷೇಕ್ ಹೇಳಿದರು.ಪರಿತೋಷ್ ಅಲ್ಲಿಯೇ ನಿಂತು ತನ್ನ ಕಡೆಯಿಂದ ಸಂದರ್ಭವನ್ನು ವಿವರಿಸಲು ಪ್ರಯತ್ನಿಸಿದನು, ಆದರೆ ಜೂನಿಯರ್ ಬಚ್ಚನ್ ಅವರ ವಿವರಣೆಯನ್ನು ನಿರ್ಲಕ್ಷಿಸಿ "ಸ್ವಲ್ಪ ಮರ್ಯಾದೆ ಅವರಿಗೆ ನೀಡಲೇಬೇಕು" ಎಂದು ಹೇಳಿದರು. ಕಾಮಿಡಿ ಅಂತ ಹೇಳಿ ನಾವು ಇತ್ತೀಚೆಗೆ ಸ್ವಲ್ಪ ಜಾಸ್ತಿಯೇ ಅದರಲ್ಲಿ ಕಳೆದುಹೋಗುತ್ತೇವೆ ಮತ್ತು ಎದುರಿಗಿದ್ದವರಿಗೆ ಅದು ಹೇಗೆ ಅನ್ನಿಸಬಹುದು ಅಂತಾನೂ ಯೋಚನೆ ಮಾಡುವುದಿಲ್ಲ" ಎಂದು ಹೇಳಿದರು.


ಶೋನ ನಿರ್ದೇಶಕ ಫರ್ಹಾದ್ ಮಧ್ಯೆ ಪ್ರವೇಶಿಸಬೇಕಾಯ್ತು..
ಶೋನ ನಿರ್ದೇಶಕ ಫರ್ಹಾದ್ ಸಮ್ಜಿ ಕೂಡ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಅಭಿಷೇಕ್ ಅವರಿಗೆ "ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ನಾನು ಮೂರ್ಖನಲ್ಲ" ಅಂತ ಹೇಳಿ ಸೆಟ್ ನಿಂದ ಹೊರ ನಡೆದೇ ಬಿಟ್ಟರು. ಅಭಿಷೇಕ್ ಅವರ ಈ ವರ್ತನೆಯಿಂದ ಪರಿತೋಷ್, ರಿತೇಶ್ ಮತ್ತು ಫರ್ಹಾದ್ ಒಂದು ಕ್ಷಣ ಆಘಾತಕ್ಕೊಳಗಾಗಿದ್ದಂತೂ ಸುಳ್ಳಲ್ಲ.


ಇದನ್ನೂ ಓದಿ: Ramayan:‌ ರಾಮಾಯಣ್ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಗೋವಿಲ್‌ ಅವರ ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ


‘ಕೇಸ್ ತೋ ಬಂತಾ ಹೈ’ ಶೋ ನ ಪರಿಕಲ್ಪನೆಯ ಪ್ರಕಾರ, ಒಬ್ಬ ಸೆಲೆಬ್ರಿಟಿಯನ್ನು ಸ್ಟ್ಯಾಂಡ್-ಅಪ್ ಹಾಸ್ಯ ನಟರು ತಮಾಷೆ ಮಾಡುತ್ತಾರೆ. ಎಂದರೆ ಅವರ ವೃತ್ತಿಪರ ಮತ್ತು ವೈಯಕ್ತಿಕ ಆಯ್ಕೆಗಳಿಗಾಗಿ ಅವರನ್ನು ಅಪಹಾಸ್ಯ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ರಿತೇಶ್ ದೇಶಮುಖ್ ಮತ್ತು ವಕೀಲರಾಗಿ ವರುಣ್ ಶರ್ಮಾ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಕುಶಾ ಕಪಿಲಾ ಅವರು ಸ್ಟೇಜ್ ಕೋರ್ಟ್ ರೂಮ್ ಹಾಸ್ಯದ ತೀರ್ಪುಗಾರರಾಗಿ ಶೋ ಆನ್ನು ನಡೆಸಿಕೊಡುತ್ತಾರೆ.

Published by:Ashwini Prabhu
First published: