ಅಪ್ಪಾಜಿಗಾಗಿ ಮತ್ತೆ ವಿದೇಶ ಪ್ರಯಾಣವೇ ಬೇಡ ಎಂದ ದಾಸ ದರ್ಶನ್​..!

Anitha E | news18
Updated:November 30, 2018, 1:57 PM IST
ಅಪ್ಪಾಜಿಗಾಗಿ ಮತ್ತೆ ವಿದೇಶ ಪ್ರಯಾಣವೇ ಬೇಡ ಎಂದ ದಾಸ ದರ್ಶನ್​..!
ಯಜಮಾನ ಚಿತ್ರದ ಪೋಸ್ಟರ್​
  • News18
  • Last Updated: November 30, 2018, 1:57 PM IST
  • Share this:
ಯಜಮಾನನ ಪಾತ್ರದಲ್ಲಿ ಬಣ್ಣ ಹಚ್ಚೋಕೆ ಸ್ವೀಡನ್‍ಗೆ ಹೋಗಿದ್ದ ದರ್ಶನ್ ತಾನು ದೇವರಂತೆ ಪೂಜಿಸುತ್ತಿದ್ದ ಪ್ರೀತಿಯ ಅಪ್ಪಾಜಿ, ಅಂಬಿ ಮರೆಯಾದ ವಿಷಯ ಕೇಳಿ ತಕ್ಷಣ ವಾಪಸ್ಸಾಗಿದ್ದರು. ಹೀಗಾಗಿ ಸ್ವೀಡನ್ನಿನಲ್ಲಿ 'ಯಜಮಾನ'ನ ಚಿತ್ರೀಕರಣ ಅರ್ಧಕ್ಕೇ ನಿಂತಿತ್ತು. ಆದರೆ ಈಗ ದಚ್ಚು ಚಿತ್ರೀಕರಣ ಪೂರ್ಣಗೊಳಿಸಲು, ಮತ್ತೆ ಸ್ವೀಡನ್‍ಗೆ ಹೋಗುವುದಿಲ್ಲವಂತೆ.

ಸ್ಯಾಂಡಲ್‍ವುಡ್‍ನ ಕರ್ಣ, ಸ್ನೇಹಜೀವಿಯಾದ ಅಂಬರೀಷ ಅವರ ಸಾವಿನ ಸುದ್ದಿ ಎಂಥವರನ್ನ ಒಂದು ಕ್ಷಣ ನಂಬದ ಪರಿಸ್ಥಿತಿಗೆ ದೂಡಿತ್ತು. ಅಂಬಿ ಇನ್ನಿಲ್ಲ ಅನ್ನೋದನ್ನ ಊಹಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. ಅದೇ ರೀತಿ ಅಂಬರೀಷರನ್ನ ತಂದೆ ಸ್ಥಾನದಲ್ಲಿಟ್ಟು ಪ್ರೀತಿಸುತ್ತಿದ್ದ ದಾಸ ದರ್ಶನ್‍ಗೆ ಈ ಸುದ್ದಿ ಹೇಗೆ ಆಗಿರಬೇಡ ಯೋಚಿಸಿ.

ಸ್ವೀಡನ್‍ನಲ್ಲಿ 'ಯಜಮಾನ' ಸಿನಿಮಾದ ಹಾಡುಗಳ ಚಿತ್ರೀಕರಣದಲ್ಲಿದ್ದ  ದರ್ಶನ್​ ತೊಡಗಿಸಿಕೊಂಡಿಬೇಕಾದರೆ, ಅಂಬಿ ಇನ್ನಿಲ್ಲ ಅನ್ನೋ ಸುದ್ದಿ ಮುಟ್ಟಿತ್ತು. ಒಂದು ಕ್ಷಣ ದರ್ಶನ್ ಆಘಾತಕ್ಕೆ ಒಳಗಾಗಿದ್ದರು. ಆ ಸಂದರ್ಭವನ್ನು ಕಣ್ಣಾರೆಕಂಡವರು 'ಯಜಮಾನ' ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್.

'ಅಂಬರೀಷ ಅವರು ನಿಧನರಾದ ದಿನ ನಾವು ಡೆನ್‍ಮಾರ್ಕ್‍ನ ಕೋಪನ್‍ಹೆಗನ್ ಏರ್ಪೋರ್ಟ್ ಬಳಿ ಶೂಟಿಂಗ್‍ನಲ್ಲಿದ್ದೆವು. ಕಲಾವಿದರು, ತಂತ್ರಜ್ಞರು ಸೇರಿ ಒಟ್ಟು 40 ಮಂದಿ ಇದ್ದೆವು. ಕೊರೆಯುವ ಚಳಿ ಬೇರೆ. ಈ ನಡುವೆ ಬಂದ ಸುದ್ದಿಯೇ ಅಂಬಿ ಇನ್ನಿಲ್ಲ ಅನ್ನೋದು. ಆಗ ಅಲ್ಲಿ ಸಂಜೆಯ ಸಮಯ. ದರ್ಶನ್ ನನ್ನ ಬಳಿ ಬಂದು ಅಮ್ಮ, ಅಪ್ಪಾಜಿ ಹೋಗಿಬಿಟ್ಟರಂತೆ ಅಂದರು. ಏನ್ ಹೇಳಬೇಕು ಗೊತ್ತಾಗಲಿಲ್ಲ. ಒದ್ದಾಡುತ್ತಾ ಇದ್ರು, ರೋಧಿಸುತ್ತಿದ್ದರು. ಪದೇ ಪದೇ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿ ಸುಮಲತಾ ಅವರೊಂದಿಗೆ ಇರು.. ಎಲ್ಲೂ ಹೋಗಬೇಡ ಅಂತಿದ್ದರು' ಎಂದು ಸ್ವೀಡನ್​ನಲ್ಲಿ ಅಂದಿನ ಚಿತ್ರಣವನ್ನು ಶೈಲಜಾ ವಿವರಿಸಿದ್ದಾರೆ.

'ನಂತರದಲ್ಲಿ ಬಿ.ಸುರೇಶ್ ಟಿಕೆಟ್‍ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಅಷ್ಟು ಬೇಗ ಟಿಕೆಟ್  ಸಿಗೋದು ಸುಲಭದ ಮಾತಾಗಿರಲಿಲ್ಲ. ನಂತರ ಚಿತ್ರೀಕರಣವನ್ನು ಅಲ್ಲಿಗೆ ಬಿಟ್ಟು ನಾವೆಲ್ಲ ಸ್ವೀಡನ್‍ಗೆ ಬಂದೆವು. ಅಲ್ಲಿಂದ ದರ್ಶನ್‍ಗೆ ದುಬೈಗೆ ಫ್ಲೈಟ್ ಬುಕ್ ಮಾಡಿ ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆವು. ಒಟ್ಟು 4 ಲಕ್ಷ ಖರ್ಚಾಯಿತು. ದುಡ್ಡು ಮುಖ್ಯ ಅಲ್ಲ. ದರ್ಶನ್ ಅಪ್ಪಾಜಿಯನ್ನ ನೋಡಲು ತಲುಪಿದರಲ್ಲ ಅನ್ನೋ ಸಮಾಧಾನ ಅಷ್ಟೆ' ಎನ್ನುತ್ತಾರೆ ಅವರು.

ಇದನ್ನೂನೋಡಿ: ಸ್ವೀಡನ್​ನಲ್ಲಿ ದರ್ಶನ್​: ಯಜಮಾನ ಹಾಡಿನ ಚಿತ್ರೀಕರಣದ ಚಿತ್ರಗಳನ್ನು ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ...

ಅಂಬಿ ಇನ್ನಿಲ್ಲ ಅನ್ನೋ ಸುದ್ದಿ ತಿಳಿದಾಗ ದರ್ಶನ್ ಹೇಗೆ ನಲುಗಿ ಹೋಗಿದ್ದರು ಅನ್ನೋದನ್ನ ನಿರ್ಮಾಪಕಿ ಶೈಲಜಾ ನಾಗ್ ವಿವರಿಸುವ ಪರಿ ಇದು... 'ಅಲ್ಲದೇ ಅಂಬರೀಷ್​ ಅಂತ್ಯ ಸಂಸ್ಕಾರದಲ್ಲೂ ಸ್ವತಃ ಎಲ್ಲ ಕಾರ್ಯಗಳನ್ನ ಅಲ್ಲೆ ನಿಂತು ದರ್ಶನ್ ಮಾಡಿಸಿದರು. ಸ್ವಂತ ಮಗನಲ್ಲದೇ ಆದರೂ ಮಗ ತಂದೆಗೆ ಮಾಡಬೇಕಿದ್ದ ಜವಬ್ದಾರಿಯನ್ನ ನಿರ್ವಹಿಸಿದರು. ಅಷ್ಟೆ ಅಲ್ಲದೇ ಅಂಬಿ ಅವರ ಅಸ್ಥಿಯನ್ನ ಶ್ರೀರಂಗಪಟ್ಟಣಲ್ಲಿ ಬಿಡುವಾಗಲೂ, ತಮ್ಮ ಜವಬ್ದಾರಿಯನ್ನ ಮರೆತಿರಲಿಲ್ಲ ದರ್ಶನ್. ತುಂಬಾ ಆಪ್ತರಾಗಿ, ಅದಕ್ಕೂ ಹೆಚ್ಚಾಗಿ ತಂದೆ ಮಗನಂತಿದ್ದರು ಅಂಬಿ-ದಚ್ಚು. ಈಗ ಅಂಬಿ ಅಪ್ಪಾಜಿಯನ್ನ ಕಳೆದುಕೊಂಡ ದರ್ಶನ್ ಆ ನೋವಿನಲ್ಲೆ ದಿನ ಕಳೆಯುತ್ತಿದ್ದಾರೆ. ಹಾಗೇ ಅಂಬಿ ಕುಟುಂಬ ಮತ್ತು ಚಿತ್ರರಂಗವೂ ಅಗಲಿಕೆಯ ನೋವಿನಲ್ಲಿದೆ'.ಸ್ವೀಡನ್‍ನಲ್ಲಿ ಈಗಾಗಲೇ ಒಂದು ಹಾಡಿನ ಚಿತ್ರೀಕರಣ ಮುಗಿದಿದೆ. ಆದರೆ ಇನ್ನೊಂದು ಹಾಡಿನ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನವೇ ಈ ಬೆಳವಣಿಗೆಗಳಾಗಿವೆ. ಹೀಗಾಗಿಯೇ ಚಿತ್ರತಂಡ ಮತ್ತೆ ಸ್ವೀಡನ್‍ಗೆ ಹೋಗುವ ಯೋಜನೆ ಕೈಬಿಟ್ಟಿದೆ. ಐದಾರು ದಿನಗಳ ಕಾಲ ಬೆಂಗಳೂರಿನಲ್ಲಿ ಕೊನೆಯ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಲಿದೆಯಂತೆ.

ಒಟ್ಟು 100 ದಿನಗಳ ಕಾಲ ಚಿತ್ರೀಕರಣ ಪೂರ್ಣವಾಗಲಿದ್ದು, 6 ಫೈಟ್ಸ್ ಹಾಗೂ 6 ಹಾಡುಗಳಿವೆ. ಎಲ್ಲವೂ ಅಂದುಕೊಂಡಂತಾದರೆ ಜನವರಿ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ 'ಯಜಮಾನ'ನ ದರ್ಶನವಾಗಲಿದೆ.

 

 

 
First published:November 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading