Bollywood: ಬಾಲಿವುಡ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋಲಲು ಕಾರಣ ಏನು ಗೊತ್ತಾ?

ಬಾಲಿವುಡ್‌ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಅಂದುಕೊಂಡಂತೆ ಯಶಸ್ಸನ್ನು ಕಾಣುತ್ತಿಲ್ಲ. ಇದು ಬಾಲಿವುಡ್‌ ಸಿನಿಮಾ ರಂಗಕ್ಕೆ ಒಂದು ಎಚ್ಚರಿಕೆ ಗಂಟೆ ಎಂದರೂ ತಪ್ಪಾಗಲಾರದು. ಇದ್ಕೆ ಏನು ಕಾರಣ? ಯಾಕೆ ಹೀಗೆಲ್ಲ ಆಗುತ್ತಿದೆ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿಂದು ಚರ್ಚಿಸೋಣ.

ಬಾಲಿವುಡ್‌ ಸಿನಿಮಾಗಳು

ಬಾಲಿವುಡ್‌ ಸಿನಿಮಾಗಳು

  • Share this:

ಬಾಲಿವುಡ್‌ನ (Bollywood) ಸೂಪರ್ ಸ್ಟಾರ್‌ಗಳಿಬ್ಬರ ಬಹುನಿರೀಕ್ಷಿತ ಸಿನಿಮಾಗಳು ಒಂದೇ ಬಾರಿಗೆ ತೆರೆ ಕಂಡಿವೆ. ಒಂದ್ಕಡೆ ಆಮಿರ್ ಖಾನ್ ನಟನೆಯ 'ಲಾಲ್‌ ಸಿಂಗ್ ಚಡ್ಡಾ' (Lal Singh Chadda) ಮತ್ತೊಂದ್ಕಡೆ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' (Raksha Bandhan). ಎರಡೂ ಸಿನಿಮಾಗಳಲ್ಲಿ ಯಾವ ಸಿನಿಮಾ ಬಾಕ್ಸಾಫೀಸ್  (Box Office)ಭವಿಷ್ಯ ಏನಾಗಲಿದೆ ಅನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆ ಒಂದು ತಿಂಗಳ ಹಿಂದೆಯೇ ಶುರುವಾಗಿತ್ತು. ಆದರೆ ಈಗ ಈ ಎರಡೂ ಸಿನಿಮಾಗಳೂ ನೆಲಕಚ್ಚಿವೆ ಎಂದು ಸಿನಿಮಾ ವಿಶ್ಲೇಷಕರು (Movie Analyst) ಹೇಳಿದ್ದಾರೆ. ಬಾಲಿವುಡ್‌ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಅಂದುಕೊಂಡಂತೆ ಯಶಸ್ಸನ್ನು ಕಾಣುತ್ತಿಲ್ಲ. ಇದು ಬಾಲಿವುಡ್‌ ಸಿನಿಮಾ ರಂಗಕ್ಕೆ ಒಂದು ಎಚ್ಚರಿಕೆ ಗಂಟೆ ಎಂದರೂ ತಪ್ಪಾಗಲಾರದು. ಇದ್ಕೆ ಏನು ಕಾರಣ? ಯಾಕೆ ಹೀಗೆಲ್ಲ ಆಗುತ್ತಿದೆ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿಂದು ಚರ್ಚಿಸೋಣ.


ಬಾಲಿವುಡ್‌ನ ಸೋಲಿನ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರಿಕೊಂಡಿದೆ. ನಿರೀಕ್ಷೆಯೊಂದಿಗೆ ರಿಲೀಸ್ ಆದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ, ರಿಲೀಸ್ ಬಳಿಕ ಸೋಲುಂಡಿದೆ. ಅತ್ಯಂತ ಕಡಿಮೆ ಗಳಿಗೆ ಕಂಡ ಆಮಿರ್ ಖಾನ್ ನಟನೆಯ ಮೊದಲ ಸಿನಿಮಾ ಇದು.


'ಫಾರೆಸ್ಟ್ ಗಂಪ್' ನ ರೀಮೇಕ್ 'ಲಾಲ್‌ ಸಿಂಗ್ ಚಡ್ಡಾ
ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾ ರೀಮೇಕ್ 'ಲಾಲ್‌ ಸಿಂಗ್ ಚಡ್ಡಾ'. ಅದ್ವೈತ್ ಚಂದನ್ ನಿರ್ದೇಶನದ ಈ ಕಾಮಿಡಿ ಡ್ರಾಮಾ ಸಿನಿಮಾದಲ್ಲಿ ಆಮಿರ್ ಖಾನ್ ಜೋಡಿಯಾಗಿ ಕರೀನಾ ಕಪೂರ್ ಮಿಂಚಿದ್ದಾರೆ.


ಟಾಲಿವುಡ್ ನಟ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗಿತ್ತು. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ 'ಲಾಲ್‌ ಸಿಂಗ್ ಚಡ್ಡಾ' ಟ್ರೆಂಡ್ ಕೂಡ ನಡೀತಿದೆ. ಆಗಸ್ಟ್‌ 11 ರಂದು ಈ ಸಿನಿಮಾ ತೆರೆಗೆ ಬಂದಿತ್ತು.


ಫ್ಯಾಮಿಲಿ ಕಾಮಿಡಿ ಸಿನಿಮಾ 'ರಕ್ಷಾಬಂಧನ್'
'ರಕ್ಷಾಬಂಧನ್' ಅಕ್ಷಯ್ ಕುಮಾರ್ ನಟನೆಯ ಫ್ಯಾಮಿಲಿ ಕಾಮಿಡಿ ಸಿನಿಮಾ. ಟೈಟಲ್‌ಗೆ ತಕ್ಕಂತೆ ಅಣ್ಣ-ತಂಗಿಯರ ಬಾಂಧವ್ಯದ ಕಥೆ. ನಾಲ್ವರು ತಂಗಿಯರನ್ನು ಮದುವೆ ಮಾಡಲು ಕಷ್ಟಪಡುವ ಅಣ್ಣನ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಸಿನಿಮಾ ಟ್ರೈಲರ್ ಹಾಗೂ ಸಾಂಗ್ಸ್‌ ಕೂಡ ರಿಲೀಸ್ ಆಗಿ ಗಮನ ಸೆಳೆದಿತ್ತು. ರಕ್ಷಾಬಂಧನ್ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬಂದಿರುವುದು ವಿಶೇಷ.


ಈ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬಂದಿರೋದ್ರಿಂದ ಯಾವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನುವ ಕುತೂಹಲ ಎಲ್ಲರಲ್ಲಿಯೂ ಈಗಾಗಲೇ ಮನೆ ಮಾಡಿತ್ತು, ಆದರೆ ಆ ಕುತೂಹಲವನ್ನು ಈ ಎರಡೂ ಸಿನಿಮಾಗಳು ಧೂಳಿಪಟ ಮಾಡಿವೆ. ಏಕೆಂದರೆ ಸಿನಿಮಾ ವಿಶ್ಲೇಷಕರು ಅಂದುಕೊಂಡಂತೆ ಈ ಎರಡೂ ಸಿನಿಮಾಗಳು ಬಾಕ್ಸ್‌ ಆಫೀಸ್‌ ಅನ್ನು ಕೊಳ್ಳೆ ಹೊಡೆಯುವಲ್ಲಿ ವಿಫಲವಾಗಿವೆ.


ಇದನ್ನೂ ಓದಿ: SIIMA Awards 2022: ಬೆಂಗಳೂರಲ್ಲಿ ಸೈಮಾ ಸಿನಿ ಹಬ್ಬ; ಅಪ್ಪು ಸ್ಮರಣೆಯೊಂದಿಗೆ ಸೆಪ್ಟೆಂಬರ್​ನಲ್ಲಿ ಸಮಾರಂಭ

ಸಿನಿಮಾ ಉದ್ಯಮದ ಅಂದಾಜಿನಲ್ಲಿ ಹೇಳುವುದಾದರೆ, ಭಾರತದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಅಕ್ಷಯ್‌ ಕುಮಾರ್ ಅವರು ನಟಿಸಿದ ರಕ್ಷಾಬಂಧನ್‌ ಸಿನಿಮಾವು , ಅಂದಾಜು 7 ಕೋಟಿ ರೂ. ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಚಲನಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿ ಸುಮಾರು 4 ಕೋಟಿ ರೂ. ಗಳನ್ನು ಸಂಗ್ರಹಿಸಿದೆ.


ಆಲ್‌ ಟೈಮ್‌ ಬಾಕ್ಸ್‌ ಆಫೀಸ್‌ ಚಾಂಪಿಯನ್‌ ಎಂದೇ ಖ್ಯಾತಿ ಪಡೆದ ಆಮಿರ್‌ ಖಾನ್‌ ಅವರ ದಂಗಲ್‌,  ಸೀಕ್ರೆಟ್‌ ಸೂಪರ್‌ಸ್ಟಾರ್‌, ಪಿಕೆ ಈ ಸಿನಿಮಾಗಳು ಬಾಲಿವುಡ್‌ನಲ್ಲಿ ತಮ್ಮ ವಿಶ್ವರೂಪವನ್ನು ತೋರಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದು ಬಾಕ್ಸ್‌ ಆಫೀಸ್‌ ಅನ್ನು ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದ್ದವು. ಇತ್ತಿಚೀಗೆ ಯಾಕೋ ಅವರ ಸಿನಿಮಾಗಳು ಪ್ರೇಕ್ಷಕರನ್ನು ಮೋಡಿ ಮಾಡುತ್ತಿಲ್ಲ. 2018 ರಲ್ಲಿ ಕೊನೆಯ ಬಾರಿ ಬಿಡುಗಡೆಯಾದ ʼಥಗ್ಸ್ ಆಫ್ ಹಿಂದೂಸ್ತಾನ್ʼ ಸಿನಿಮಾ ಸಹ ಕಳಪೆ ಪ್ರದರ್ಶನ ನೀಡಿತು. ಈಗ ಬಿಡುಗಡೆ ಕಂಡಿರುವ ʼಲಾಲ್‌ ಸಿಂಗ್‌ ಚಡ್ಡಾʼ ಸಿನಿಮಾವು 180 ಕೋಟಿ ರೂ.ಗಳಲ್ಲಿ ನಿರ್ಮಾಣವಾದ ಈ ಸಿನಿಮಾ ಮೊದಲ ವಾರದಲ್ಲಿ ಕೇವಲ 38 ಕೋಟಿ ರೂ. ಕಲೆಕ್ಷನ್‌ ಮಾಡಿದೆ.


ಇತ್ತಿಚೀಗೆ ಬಾಲಿವುಡ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗುತ್ತಿಲ್ಲ ಏಕೆ? ಸಿನಿಮಾ ವಿಶ್ಲೇಷಕರೇನು ಹೇಳ್ತಾರೆ?


ಈ ಪ್ರಶ್ನೆಗೆ ಉತ್ತರಿಸಿದ ವಿಶ್ಲೇಷಕ ಕರಣ್ ತೌರಾನಿ ಅವರು “ಈ ಸಿನಿಮಾಗಳ ನೀರಸ ಪ್ರದರ್ಶನವು ಪ್ರೇಕ್ಷಕರಿಗೆ ಅಷ್ಟೊಂದು ಹಿಡಿಸಿಲ್ಲ. ಏಕೆಂದರೆ ಕೋವಿಡ್‌ ನಂತರ ಹೆಚ್ಚು ಜನರು ತಮ್ಮ ಅಭಿರುಚಿಗಳನ್ನು ಬದಲಾಯಿಸಿಕೊಂಡಿದ್ದಾರೆ. ಅವರ ಅಭಿರುಚಿಯು ಹಿಂದಿನಂತೆ ಸ್ಟಾರ್‌ ನಟರು ನಟನೆ ಮಾಡಿದ ಎಲ್ಲ ಸಿನಿಮಾ ಉತ್ತಮ ಎಂದು ತಿಳಿದುಕೊಳ್ಳುತ್ತಿಲ್ಲ.


ಅವರು ಸಿನಿಮಾದ ವಿಮರ್ಶೆಗಳನ್ನು ಒಂದು ಸಲ ಚೆಕ್‌ ಮಾಡಿ ನಂತರ ಆ ಸಿನಿಮಾದ ವಿಷಯ ಹೇಗಿದೆ? ಎಂದು ತಿಳಿದು ಥಿಯೇಟರ್‌ಗಳಿಗೆ ಕಾಲಿಡುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳು ಈಗೀಗ ಉತ್ತಮ ವಿಷಯಗಳನ್ನು ಒಳಗೊಂಡ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಯಾವುದೋ ಹಳೆ ವಿಚಾರವನ್ನೆ ಹೊಸ ಸಿನಿಮಾವನ್ನಾಗಿ ನಿರ್ಮಾಣ ಮಾಡಿದರೆ ಪ್ರೇಕ್ಷಕರು ಅದನ್ನು ಒಪ್ಪಿಕೊಳ್ಳುವವರೇ” ಎಂದು ತೌರಾನಿ ಅವರು ಪ್ರಶ್ನೆ ಮಾಡಿದ್ಧಾರೆ.


ಈ ವರ್ಷ ಸೂಪರ್ ಹಿಟ್ ಆದ ಸಿನೆಮಾಗಳು
“ಇದೇ 2022 ರಲ್ಲಿ ಬಾಲಿವುಡ್‌ ಸಿನಿಮಾಗಳಲ್ಲಿ ಮೂರು ಸಿನಿಮಾಗಳು ತಮ್ಮ ವಿಭಿನ್ನ ಕಥಾವಸ್ತುವಿನಿಂದ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಬಾಕ್ಸ್‌ ಆಫಿಸ್‌ನಲ್ಲಿ ಒಳ್ಳೆಯ ಸೌಂಡ್‌ ಮಾಡಿವೆ ಎಂದು ಹೇಳಬಹುದು.


ಆ ಮೂರು ಸಿನಿಮಾಗಳೆಂದರೆ -ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್ ಫೈಲ್ಸ್ʼ, ಸಂಜಯ್ ಲೀಲಾ ಬನ್ಸಾಲಿಯವರ ʼಗಂಗೂಬಾಯಿ ಕಥಿಯಾವಾಡಿʼ ಮತ್ತು ಕಾರ್ತಿಕ್ ಆರ್ಯನ್ ಮತ್ತು ಟಬು ನಟಿಸಿದ ಹಾರರ್-ಕಾಮಿಡಿ ʼಭೂಲ್ ಭುಲೈಯಾ 2ʼ ಈ ಮೂರು ಸಿನಿಮಾಗಳು ಮಾತ್ರ ಉತ್ತಮ ಪ್ರದರ್ಶನವನ್ನು ಕಂಡಿವೆ” ಎಂದು ತೌರಾನಿ ಅವರು ತಮ್ಮ ಮಾತನ್ನು ಮುಂದುವರಿಸಿದ್ದಾರೆ.


ಇದನ್ನೂ ಓದಿ:  Koffee with Karan 7: ಕತ್ರಿನಾ ಕೈಫ್‌ ಬಗ್ಗೆ ಪತಿ ವಿಕ್ಕಿ ಕೌಶಲ್ ರಿವೀಲ್ ಮಾಡಿದ 10 ಇಂಟ್ರೆಸ್ಟಿಂಗ್ ವಿಷಯಗಳಿವು

“2018 ರಲ್ಲಿ ಆಮಿರ್‌ ಖಾನ್‌ ನೀಡಿದ ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಋಣಾತ್ಮಕ ಕಮೆಂಟ್‌ ಹರಿ ಬಿಟ್ಟಿದ್ದರ ಪ್ರಭಾವ, ಈ ಹಿಂದೆಯೂ 'ಲಾಲ್‌ಸಿಂಗ್ ಚಡ್ಡಾ' ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕೂಗು ಕೇಳಿಬಂದಿತ್ತು. ಆಮಿರ್ ಖಾನ್ ನೀಡಿದ ಒಂದು ಹೇಳಿಕೆಯಿಂದಾಗಿ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ವಿಚಾರ ಸದ್ದು ಮಾಡಿತ್ತು.


ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ, ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಇದು ಸಿನಿಮಾ ಬಾಕ್ಸ್‌ ಆಫೀಸ್‌ ಮೇಲೆ ಭಾರಿ ಪರಿಣಾಮ ಬೀರಿದೆ” ಎಂದು ಸಿನಿಮಾ ವಿಶ್ಲೇಷಕರಾದ ತೌರಾನಿ ಅವರು ಅಭಿಪ್ರಾಯಪಟ್ಟಿದ್ದಾರೆ.


ಮುಂಬೈ ಮೂಲದ ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿದರೆ ಈ ವರ್ಷ ತೆರೆ ಕಂಡಿರುವ ದಕ್ಷಿಣ ಭಾರತದ ಭಾಷೆಗಳಲ್ಲಿ ತಯಾರಾದ ಬೆರಳೆಣಿಕೆಯ ಸಿನಿಮಾಗಳಿಂದ ಭಾರತೀಯ ಸಿನಿಮಾವು ಈ ವರ್ಷ ಪ್ರಗತಿ ಕಂಡಿದೆ.


ಕೊನೆಯ ಮಾತು:
“ಬಾಲಿವುಡ್‌ ನಿರ್ದೇಶಕರು, ಸೃಜನಶೀಲ ನಿರ್ಮಾಪಕರು ಮತ್ತು ಚಿತ್ರಕಥೆಗಾರರು 2023 ರಲ್ಲಿ ಖಂಡಿತವಾಗಿಯೂ ಉತ್ತಮ ಆರಂಭವನ್ನು ನೀಡುತ್ತಾರೆ. ಅವರಿಗೆ ಈ ಸೋಲುಗಳನ್ನು ಹೇಗೆ ಗೆಲುವು ಮಾಡಿಕೊಳ್ಳಬೇಕೆಂದು ಚೆನ್ನಾಗಿ ತಿಳಿದಿದೆ. ಅವರು ಖಂಡಿತ ಇನ್ನು ಉತ್ತಮ ಸಿನಿಮಾಗಳನ್ನು ತರುವಲ್ಲಿ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಾರೆ ಎಂಬ ನಂಬಿಕೆ ನನಗಿದೆ” ಎಂದು ಸಿನಿಮಾ ವಿಶ್ಲೇಷಕರಾದ ತೌರಾನಿ ಅವರು ಹೇಳಿದರು.

Published by:Ashwini Prabhu
First published: