news18-kannada Updated:August 27, 2020, 3:36 PM IST
ಪ್ರೈಮ್
ಕೊರೋನಾ ವೈರಸ್ ದೇಶದಲ್ಲಿ ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳನ್ನು ತೆರೆಯಲು ಇನ್ನೂ ಅವಕಾಶ ಸಿಕ್ಕಿಲ್ಲ. ಚಿತ್ರಮಂದಿರಗಳು ಯಾವಾಗ ಓಪನ್ ಆಗಲಿವೆ ಅನ್ನೋ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಹೀಗಾಗಿ, ಕೆಲ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು ಅಮೆಜಾನ್ ಪ್ರೈಮ್ನಲ್ಲೇ ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಹೀಗೇಕೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಅಮೆಜಾನ್ ಪ್ರೈಮ್, ನೆಟ್ಫ್ಲಿಕ್, ಹಾಟ್ಸ್ಟಾರ್, ಸೋನಿ, ಜೀ5, ವೂಟ್, ಎಂಎಕ್ಸ್ ಇವುಗಳು ಮುಂಚೂಣಿಯಲ್ಲಿರುವ ಒಟಿಟಿ ಪ್ಲಾಟ್ಫಾರ್ಮ್ಗಳು. ಈ ಒಟಿಟಿಗಳನ್ನು ಹೊಕ್ಕರೆ ಸಾಕು ನಿಮಗೆ ಸಾವಿರಾರು ಚಿತ್ರಗಳು ಸಿಗುತ್ತವೆ. ಪ್ರೈಮ್ ಹೊರತು ಪಡಿಸಿದರೆ ಉಳಿದ ಕಡೆಗಳಲ್ಲಿ ಕನ್ನಡ ಚಿತ್ರಗಳು ನೇರವಾಗಿ ತೆರೆಗೆ ಬಂದಿದ್ದು ತುಂಬಾನೇ ಅಪರೂಪ. ಹೀಗೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದೂ ಇದೆ.
ನೆಟ್ಫ್ಲಿಕ್, ಹಾಟ್ಸ್ಟಾರ್ ಈ ಒಟಿಟಿ ಪ್ಲಾಟ್ಫಾರ್ಮ್ಗಳು ಭಾರತದಲ್ಲಿ ಹಿಂದಿ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಹೀಗಾಗಿ, ಅವುಗಳು ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾದತ್ತ ಹೆಚ್ಚು ಒಲವು ತೋರುತ್ತಿಲ್ಲ. ಆದರೆ, ಅಮೆಜಾನ್ ಪ್ರೈಂ ಈ ಮೊದಲಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ, ದಕ್ಷಿಣ ಭಾರತದ ಸಿನಿಮಾಗಳನ್ನು ರಿಲೀಸ್ ಮಾಡಲು ಪ್ರೈಮ್ ಸುಲಭ ವೇದಿಕೆ ಆಗುತ್ತಿದೆ.
ಒಂದೇ ತಿಂಗಳಲ್ಲಿ ಫುಲ್ ಸೆಟ್ಲಮೆಂಟ್
ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರು ಪ್ರೈಮ್ನಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಖುಷಿ ಹೊಂದಿದ್ದಾರಂತೆ. ಏಕೆಂದರೆ, ಸಿನಿಮಾ ರಿಲೀಸ್ ಆದ ಕೇವಲ 30 ದಿನಗಳಲ್ಲಿ ಅಷ್ಟೂ ಹಣ ನಿರ್ಮಾಪಕರ ಖಾತೆಗೆ ಜಮೆ ಆಗಿರುತ್ತದೆ. ಇದು ನಿರ್ಮಾಪಕರಿಗೆ ಪ್ಲಸ್ ಪಾಯಿಂಟ್.
ಪ್ರೈಮ್ನಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ನೇರವಾಗಿ ರಿಲೀಸ್ ಆಗೋದು ತುಂಬಾನೇ ಅಪರೂಪ. ಹೀಗಾಗಿ, ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಕರಿಗೆ ಒಂದೇ ತಿಂಗಳಲ್ಲಿ ಫುಲ್ ಪೇಮೆಂಟ್ ಆದರೆ ಅದು ನಿಜಕ್ಕೂ ತುಂಬಾನೇ ಸಹಾಯಕಾರಿ.
ಇದನ್ನೂ ಓದಿ: Anushka Sharma: ವಿರಾಟ್-ಅನುಷ್ಕಾ ಈಗ ಇಬ್ಬರಲ್ಲ ಮೂವರು; ತಾಯಿ ಆಗ್ತಿರೋ ಬಗ್ಗೆ ಖಚಿತಪಡಿಸಿದ ಸ್ಟಾರ್ ನಟಿ ಸಣ್ಣ ಸಿನಿಮಾ ನಿರ್ಮಾಪಕರಿಗೆ ಸಂಕಷ್ಟ
ದೊಡ್ಡ ನಟರ ಚಿತ್ರಗಳಾದರೆ ಒಟಿಟಿ ಪ್ಲಾಟ್ಫಾರ್ಮ್ನವರು ಸಹಜವಾಗಿಯೇ ದೊಡ್ಡ ಮೊತ್ತವನ್ನು ನೀಡಿ ಸಿನಿಮಾ ಖರೀದಿ ಮಾಡುತ್ತವೆ. ಆದರೆ, ಸಣ್ಣ ಸಿನಿಮಾಗಳಿಗೆ ಮೊದಲೇ ಹಣ ನೀಡುವುದಿಲ್ಲ. ಬದಲಿಗೆ ಒಂದು ವೀಕ್ಷಣೆಗೆ ಇಂತಿಷ್ಟು ಎನ್ನುವ ಮೊತ್ತ ನಿಗದಿ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ನಿರ್ಮಾಪಕನಿಗೆ ಹಣ ಸಂದಾಯವಾಗುತ್ತದೆ.
ನೆಟ್ಫ್ಲಿಕ್ ಪಾಲಿಸಿಯೇ ಬೇರೆ
ನೆಟ್ಫ್ಲಿಕ್ಸ್ ವಿಶ್ವಾದ್ಯಂತ ಖ್ಯಾತಿ ಪಡೆದುಕೊಂಡಿದೆ. ಹೀಗಾಗಿ, ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಅವರು ಅಷ್ಟಾಗಿ ಇನ್ನೂ ಗಮನ ಹರಿಸಲು ಆರಂಭಿಸಿಲ್ಲ. ಇನ್ನು, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ರಿಲೀಸ್ ಮಾಡೋದು ನಿರ್ಮಾಪಕರಿಗೂ ಹೊರೆಯಾಗಲಿದೆಯಂತೆ. ಏಕೆಂದರೆ, ಸಿನಿಮಾ ರಿಲೀಸ್ ಆದ ನಂತರ ಹಂತ ಹಂತವಾಗಿ ನಿರ್ಮಾಪಕರಿಗೆ ಹಣ ಸಂದಾಯವಾಗಲಿದೆ. ಇದಕ್ಕೆ ಕೆಲವೊಮ್ಮೆ ವರ್ಷವೇ ಹಿಡಿದು ಬಿಡುತ್ತದೆ. ಹೀಗಾಗಿ, ನಿರ್ಮಾಪಕರು ನೆಟ್ಫ್ಲಿಕ್ಸ್ಗೆ ಹೆಚ್ಚು ಒತ್ತು ನೀಡುವುದಿಲ್ಲವಂತೆ.
ಡಿಸ್ನಿ- ಹಾಟ್ಸ್ಟಾರ್
ಡಿಸ್ನಿ ಹಾಟ್ ಸ್ಟಾರ್ ಇತ್ತೀಚಿನ ದಿನಗಳಲ್ಲಿ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದೆ. ಒಟಿಟಿ ಪ್ಲಾಟ್ಫಾರ್ಮ್ ವಿಸ್ತರಣೆಗೆ ಡಿಸ್ನಿ ಹಾಟ್ಸ್ಟಾರ್ ದೊಡ್ಡ ಮೊತ್ತದ ಹಣ ಸುರಿದಿದೆ. ಸದ್ಯ, ಹಿಂದಿ ಚಿತ್ರಗಳ ಮೇಲೆ ಮಾತ್ರ ಅವರು ಹೆಚ್ಚು ಕೇಂದ್ರಿಕೃತ ಮಾಡುತ್ತಿದ್ದಾರೆ. ಇನ್ನು, ಜೀ5 ನೇರವಾಗಿ ಸಿನಿಮಾಗಳನ್ನು ತಮ್ಮ ವೇದಿಕೆಯಲ್ಲಿ ರಿಲೀಸ್ ಮಾಡುವಷ್ಟು ಬಜೆಟ್ ಇಲ್ಲ.
Published by:
Rajesh Duggumane
First published:
August 27, 2020, 3:36 PM IST