ಜೇಮ್ಸ್ ಬಾಂಡ್ (James Bond) ಪಾತ್ರ ನಿರ್ವಹಿಸುವಲ್ಲಿ ಹೆಸರುವಾಸಿಯಾಗಿರುವ ನಟ ಡೇನಿಯಲ್ ಕ್ರೇಗ್ (Daniel Craig) ಅಭಿನಯದ 'ನೋ ಟೈಮ್ ಟು ಡೈ' (No Time to Die) ಚಿತ್ರ ನಾಳೆ ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಬಾಂಡ್ ಪಾತ್ರದಲ್ಲಿ ನಟಿಸಿರುವ ಡೇನಿಯಲ್ ಕ್ರೇಗ್ ಅವರ ಅಭಿನಯದ ಕೊನೆಯ ಬಾಂಡ್ ಚಿತ್ರ ಇದಾಗಲಿದೆ. ಈ ಸಿನಿಮಾದ ನಂತರ ಜೇಮ್ಸ್ ಬಾಂಡ್, (ಸ್ಪೈ) ಪಾತ್ರದಿಂದ ನಿವೃತ್ತಿ ಹೊಂದಲಿದ್ದು ಕ್ರೇಗ್ ಜಾಗವನ್ನು ಯಾರು ತುಂಬಲಿದ್ದಾರೆ ಎಂಬ ಊಹಾಪೋಹ ಇದೀಗ ಸಿನಿ ವಲಯದಲ್ಲಿ ದಟ್ಟವಾಗಿದೆ. 007ನಲ್ಲಿ ಜೇಮ್ಸ್ ಬಾಂಡ್ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ಕೂಡ ಕಾಡುತ್ತಿದ್ದು, ಮಹಿಳಾ ಬಾಂಡ್ ಅನ್ನು ಫಿಲ್ಮ್ ಮೇಕರ್ಸ್ ಈ ಬಾರಿ ಸಿನಿಮಾಕ್ಕಾಗಿ ಆಯ್ಕೆಮಾಡಬಹುದು ಎಂಬ ವದಂತಿಯೂ ಇದೆ. 2006ರಲ್ಲಿ ಕ್ಯಾಸಿನೊ ರಾಯಲ್ನಲ್ಲಿ ಬಾಂಡ್ ಪಾತ್ರ ನಿರ್ವಹಿಸಿದ ಕ್ರೇಗ್, 'ಕ್ವಾಂಟಮ್ ಆಫ್ ಸೊಲೇಸ್', 'ಸ್ಕೈಫಾಲ್' ಮತ್ತು 'ಸ್ಪೆಕ್ಟರ್' ಮೊದಲಾದ ಚಿತ್ರಗಳಲ್ಲಿ ಬಾಂಡ್ ಪಾತ್ರ ನಿರ್ವಹಿಸಿ ಹೆಸರುವಾಸಿಯಾದರು.
ಕ್ರೇಗ್ ನಿವೃತ್ತಿ ಹೊಂದಿದ ನಂತರ ಟಾಮ್ ಹಾರ್ಡಿ ಬಾಂಡ್ ಪಾತ್ರಕ್ಕೆ ಉತ್ತರಾಧಿಕಾರಿಯಾಗಿ ಬರಬಹುದೆಂಬ ನಿರೀಕ್ಷೆ ಕೂಡ ಸಿನಿಪ್ರಿಯರಲ್ಲಿದೆ. ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿರುವ 'ವೆನಮ್' ಸಿನಿಮಾ ಖ್ಯಾತಿಯ ನಟ ಟಾಮ್ ಹಾರ್ಡಿ, ನಾನು ಅದನ್ನು ಉಲ್ಲೇಖಿಸಿದರೆ ಅದು ಬಹಿರಂಗಗೊಂಡಂತೆಯೇ. ನಿಮಗೆ ಗೊತ್ತಿರುವಂತೆ ನಟನೆಯ ಕುರಿತು ವೃತ್ತಿಪರತೆಯನ್ನು ನಟರು ಹೊಂದಿರುತ್ತಾರೆ. ನೀವು ಯಾವುದೇ ಪಾತ್ರದ ಕುರಿತು ಮಾತನಾಡಿದಲ್ಲಿ ನೀವು ಅಟೋಮ್ಯಾಟಿಕ್ ಆಗಿ ಸ್ಪರ್ಧೆಯಿಂದ ಹೊರಗುಳಿಯುತ್ತೀರಿ. ಅಂದರೆ, ರಹಸ್ಯ ಕಾಪಾಡುವಲ್ಲಿ ನೀವು ಸೋಲುತ್ತೀರಿ ಹಾಗಾಗಿ ನನಗೆ ಈ ಕುರಿತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ನೇರವಾಗಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಂಡ್ ಪಾತ್ರದಲ್ಲಿ ಮಹಿಳೆಯೊಬ್ಬರು ನಟಿಸುವ ವದಂತಿ ಕುರಿತು ಕ್ರೇಗ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಇದಕ್ಕೆ ಉತ್ತರ ತುಂಬಾ ಸರಳ.
ಜೇಮ್ಸ್ ಬಾಂಡ್ ಪಾತ್ರವೇ ಅತ್ಯುತ್ತಮ ಪಾತ್ರವಾಗಿರುವಾಗ ಮಹಿಳೆಯೊಬ್ಬರು ಈ ಪಾತ್ರದಲ್ಲಿ ಏಕೆ ನಟಿಸಬೇಕು. ಅದೂ ಅಲ್ಲದೆ ಮಹಿಳೆಯರು ನಟಿಸುವ ಸಾಕಷ್ಟು ಪಾತ್ರಗಳಿವೆ. ಹಾಗಾಗಿ ಮಹಿಳಾ ನಟಿಯರು ಜೇಮ್ಸ್ ಬಾಂಡ್ ಪಾತ್ರದಲ್ಲಿ ಏಕೆ ನಟಿಸಬೇಕು? ಎಂದು ಕೇಳಿದ್ದಾರೆ.
ಇದನ್ನೂ ಓದಿ: No Time to Die: ಜೇಮ್ಸ್ ಬಾಂಡ್ ಸರಣಿಯ 25ನೇ ಸಿನಿಮಾ: 'ನೋ ಟೈಮ್ ಟು ಡೈ' ಅಂತಿದ್ದಾರೆ 007 ಕ್ರೇಗ್ !
'ವೈರ್' ಚಿತ್ರದ ನಟ ಇದ್ರಿಸ್ ಎಲ್ಬಾ ಕೂಡ ಬಾಂಡ್ ಪಾತ್ರವನ್ನು ಅಭಿನಯಿಸಲಿದ್ದಾರೆ ಎಂಬ ವದಂತಿ ಕೂಡ ಇದೆ. 2018ರಲ್ಲಿ ಎಲ್ಬಾ, ಸಾಮಾಜಿಕ ಮಾಧ್ಯಮದಲ್ಲಿ ಬಾಂಡ್ ದಾಟಿಯಲ್ಲಿಯೇ “ನನ್ನ ಹೆಸರು ಎಲ್ಬಾ, ಇದ್ರಿಸ್ ಎಲ್ಬಾ” ಎಂದು ಪೋಸ್ಟ್ ಮಾಡಿದ್ದರು. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ವಿನಂತಿಸಿದ್ದಾರೆ.
ಇದನ್ನೂ ಓದಿ: No Time To Die Teaser: ಮೈನವಿರೇಳಿಸುವ ಸ್ಟಂಟ್ ಮಾಡಿದ ಡೇನಿಯಲ್ ಕ್ರೇಗ್: ಇಲ್ಲಿದೆ ಜೇಮ್ಸ್ ಬಾಂಡ್ ಸರಣಿಯ 'ನೋ ಟೈಮ್ ಟು ಡೈ' ಚಿತ್ರದ ಟೀಸರ್..!
ಬಾಂಡ್ ಪಾತ್ರದಲ್ಲಿ ಮಹಿಳಾ ನಟಿಯರನ್ನು ಆಯ್ಕೆಮಾಡಿದಲ್ಲಿ ಮುಂಚೂಣಿಯಲ್ಲಿ ಇರುವವರು ಲಶನಾ ಲಿಂಚ್. 'ನೋ ಟೈಮ್ ಟು ಡೈ' ಚಿತ್ರದಲ್ಲಿ ನೋಮಿ, ಹೊಸ 00 ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೇಮ್ಸ್ ಬಾಂಡ್ ಸಿನಿಮಾದ 25ನೇ ಸರಣಿ ಸಿನಿಮಾ ಇದಾಗಿದ್ದು ಡೇನಿಯಲ್ ಕ್ರೇಗ್ ಅವರ ಐದನೇ ಜೇಮ್ಸ್ ಬಾಂಡ್ ಚಿತ್ರವಾಗಿದೆ. ಚಿತ್ರದಲ್ಲಿ ಡೇನಿಯಲ್, ಲಿಂಚ್ ಹೊರತಾಗಿ ರಾಮಿ ಮಾಲೆಕ್, ನವೋಮಿ ಹ್ಯಾರಿಸ್, ಲಿಯಾ ಸೇಡೌಕ್ಸ್, ಬೆನ್ ವಿಶಾ, ಅನಾ ಡಿ ಅರ್ಮಾಸ್, ಜೆಫ್ರಿ ರೈಟ್, ಕ್ರಿಸ್ಟೋಫ್ ವಾಲ್ಟ್ಜ್, ರಾಲ್ಫ್ ಫಿಯೆನ್ಸ್ ಮೊದಲಾದವರು ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ