ಯಾರಾಗಲಿದ್ದಾರೆ ಚಂದನವನದ ಮತ್ತೊಬ್ಬ 'ಪರಶುರಾಮ'..!

news18
Updated:August 11, 2018, 4:30 PM IST
ಯಾರಾಗಲಿದ್ದಾರೆ ಚಂದನವನದ ಮತ್ತೊಬ್ಬ 'ಪರಶುರಾಮ'..!
news18
Updated: August 11, 2018, 4:30 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ರಾಜಕುಮಾರ ನಂತರ ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೆ ಜೊತೆಯಾಗಲಿದ್ದಾರೆ ಅನ್ನೋದು ಹಳೇ ಸುದ್ದಿ. ಸದ್ಯ ಈ ಕುರಿತಂತೆ ಹೊಸ ಮಾಹಿತಿಯೊಂದು ಸಿಕ್ಕಿದೆ. ಇವರಿಬ್ಬರು ಮಾಡುತ್ತಿರುವ ಸಿನಿಮಾಗೆ ಟೈಟಲ್ ಫಿಕ್ಸಾಗಿದೆಯಂತೆ. ಅದು ಕೂಡ ಅಣ್ಣಾವರ ಸಿನಿಮಾದ ಶೀರ್ಷಿಕೆಯಂತೆ. ಅದು ಯಾವುದು? ಕತೆ ಏನು ? ಆ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಈ ವರ್ಷದ ಮೊದಲ ದಿನವೇ ಈ ದೊಡ್ಡ ಸಿನಿಮಾದ ಕುರಿತು ಪ್ರಕಟಣೆಯಾಗಿತ್ತು. ಆ ನಂತರ ಚಿತ್ರತಂಡ ಹೆಚ್ಚು ಸುದ್ದಿ ಮಾಡಿರಲಿಲ್ಲ. ಸೈಲೆಂಟ್ ಆಗಿ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ತೊಡಗಿಕೊಂಡಿತ್ತು

ಈಗ ಪೇಪರ್ ವರ್ಕ್ ಎಲ್ಲ ಮುಗಿದು ಸಿನಿಮಾ ಸೆಟ್ಟೇರೋ ಹಂತಕ್ಕೆ ಬಂದಿದೆ. ಪರಿಣಾಮ ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ದಿನಕ್ಕೊಂದು ಸದ್ದು ಸುದ್ದಿ ಆಗುತ್ತಾ ಇದೆ. ಅದರಂತೆ ಈಗ ಪುನೀತ್-ಸಂತೋಷ್ ಕಾಂಬಿನೇಷನ್ನಿನ ಚಿತ್ರಕ್ಕೆ 'ಪರಶುರಾಮ' ಎಂಬ ಶೀರ್ಷಿಕೆ ಇಡಲಾಗುತ್ತದೆ ಅನ್ನೋದು ಸ್ಯಾಂಡಲ್‍ವುಡ್‍ನಲ್ಲಿ ಹಾಟ್​ ನ್ಯೂಸ್​ ಆಗಿದೆ.

'ಪರಶುರಾಮ' ಹೆಸರಿನಲ್ಲಿ ಡಾ.ರಾಜ್‍ಕುಮಾರ್ ಅಭಿನಯದ ಸಿನಿಮಾ 1989ರಲ್ಲಿ ಮೂಡಿಬಂದಿತ್ತು. ಸೋಮಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಕೂಡ ಅಭಿನಯಿಸಿದ್ದರು. ಈ ಚಿತ್ರದ ನಗುನಗುತಾ ಹಾಡು ಇಂದಿಗೂ ಎವರ್​ ಗ್ರೀನ್​. ಇಂತಹ ಸಿನಿಮಾದ ಶೀರ್ಷಿಕೆ ಪುನೀತ್ ಚಿತ್ರಕ್ಕೆ ಇಡುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಖತ್ ಹರುಷ ಮೂಡಿಸಿದೆ.

ಸದ್ಯಕ್ಕೆ ಈ ಬಗ್ಗೆ ಚಿತ್ರತಂಡ ಏನನ್ನೂ ಖಚಿತಪಡಿಸಿಲ್ಲ. ಹೀಗಾಗಿ ಇದು ಗಾಳಿಮಾತಾ ? ಅಥವಾ ನಿಜಾನಾ ಅಂತ ತಿಳಿಯೋಕೆ ಇನ್ನೊಂದಿಷ್ಟು ದಿನಗಳು ಕಾಯಲೇಬೇಕಾದ ಅನಿವಾರ್ಯತೆ ಚಿತ್ರ ಪ್ರೇಮಿಗಳದ್ದು.

 
Loading...

 
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ