Bottle Cap Challenge: ಬಾಟಲ್​ ಕ್ಯಾಪ್​ ಚಾಲೆಂಜ್​ ಆರಂಭಿಸಿದಾತನಿಂದೇ ಪೆನ್ಸಿಲ್​ ಚಾಲೆಂಜ್​ಗೆ ಸಿಕ್ತು​ ಕಿಕ್ ಸ್ಟಾರ್ಟ್​​

Who Started Bottle Cap Challenge: ನಿನ್ನೆಯಷ್ಟೆ ಈ ಚಾಲೆಂಜ್​ ಬಗ್ಗೆ ಹೇಳಿದ್ವಿ. ಆದರೆ ಇಂಟರ್​ನೆಟ್​ನಲ್ಲಿ ಈ ಚಾಲೆಂಜ್​ಗಿಂತ ಹೆಚ್ಚಾಗಿ, ಇದನ್ನು ಯಾರು ಮೊದಲು ಮಾಡಿದ್ದು ಎಂದು ಹುಡುಕಾಡುವವರ ಸಂಖ್ಯೆಯೇ ಜಾಸ್ತಿಯಾಗಿದೆ.

ಬಾಟಲ್​ ಕ್ಯಾಪ್​ ಹಾಗೂ ಪೆನ್ಸಿಲ್​ ಚಾಲೆಂಜ್​ ಕೊಟ್ಟಿರುವ ಫೆರಬಿ

ಬಾಟಲ್​ ಕ್ಯಾಪ್​ ಹಾಗೂ ಪೆನ್ಸಿಲ್​ ಚಾಲೆಂಜ್​ ಕೊಟ್ಟಿರುವ ಫೆರಬಿ

  • News18
  • Last Updated :
  • Share this:
- ಅನಿತಾ ಈ, 

ಕೀ ಕೀ ಕೀ ಚಾಲೆಂಜ್​ ಆಯ್ತು... ಫಿಟ್​ನೆಸ್​ ಚಾಲೆಂಜ್​ ಆಯ್ತು... ಈಗ ಏನಿದ್ದರೂ #BottleCapChallenge. ಹೌದು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಬಾಟಲ್​ ಕ್ಯಾಪ್​ ಚಾಲೆಂಜ್​  ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ನಿನ್ನೆಯಷ್ಟೆ ಈ ಚಾಲೆಂಜ್​ ಬಗ್ಗೆ ಹೇಳಿದ್ವಿ. ಆದರೆ ಇಂಟರ್​ನೆಟ್​ನಲ್ಲಿ ಈ ಚಾಲೆಂಜ್​ಗಿಂತ ಹೆಚ್ಚಾಗಿ, ಇದನ್ನು ಯಾರು ಮೊದಲು ಮಾಡಿದ್ದು ಎಂದು ಹುಡುಕಾಡುವವರ ಸಂಖ್ಯೆಯೇ ಜಾಸ್ತಿಯಾಗಿದೆ.

ಹೌದು, ಈ ಚಾಲೆಂಜ್​ ನಿಜಕ್ಕೂ #BottleCapChallenge ಅನ್ನು ಯಾರು ಮಾಡಿದ್ದು ಅಂತೀರಾ,,? ಮುಂದೆ ಓದಿ...

Bottle Cap Challenge by Farabi Davletchin
ಬಾಟಲ್​ ಕ್ಯಾಪ್​ ಚಾಲೆಂಜ್​ ಮಾಡಿದ ಫರಬಿ ದ್ಯಾವ್ಲೆಚಿನ್​


ಇದು BottleCapChallenge ಚಾಲೆಂಜ್​ ಅಲ್ಲ. ಇದನ್ನು ಮೊದಲ ಬಾರಿಗೆ ಮಾಡಿದ್ದು ಮಾರ್ಷಲ್​ ಆರ್ಟ್ಸ್​ನ ಗುರು ಫರಬಿ ದ್ಯಾವ್ಲೆಚಿನ್​ ಎಂಬುವರು. ಇವರು ಸದಾ ಒಂದಲ್ಲಾ ಒಂದು ಹೊಸ ಪ್ರಯೋಗಗಳನ್ನು ಮಾಡುತ್ತಾ ಅದನ್ನು ತಮ್ಮ ಆಪ್ತ ಬಳಗದೊಂದಿಗೆ ಹಂಚಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚೆಗೆ ಅಂದರೆ ಜೂನ್ 25ರಂದು ಫರಬಿ ಈ ಹೊಸ ಸ್ಟಂಟ್​ ಮಾಡಿದ್ದು, ಅದಕ್ಕೆ ಫರಕಿಕ್ಸ್​ ಚಾಲೆಂಜ್​ #farakickschallenge  ಎಂದು ಹೆಸರು ಕೊಡುವ ಮೂಲಕ ಮೂವರಿಗೆ ಇದನ್ನು ಮಾಡುವಂತೆ ಸವಾಲು ಹಾಕಿದ್ದರು.
ಅದರಲ್ಲಿ ಹಾಲಿವುಡ್​ ನಟ ಜೇಸನ್​ ಸ್ಟ್ಯಾತಮ್​ ಸಹ ಒಬ್ಬರು. ಅವರು ಸಹ ಈ ಸವಾಲನ್ನು ಯಶಸ್ವಿಯಾಗಿ ಪೂರ್ತಿ ಮಾಡಿದ್ದು, ಅದರ ವಿಡಿಯೋ ಇಲ್ಲಿದೆ.
ಡಿಸೈನರ್​ ಎರೊಲ್​ಸನ್​ ಅವರಿಗೂ ಈ ಚಾಲೆಂಜ್​ ಕೊಟ್ಟಿದ್ದು, ಅವರೂ ಸಹ ಅದನ್ನು ಮಾಡಿದ್ದಾರೆ.
ಇದನ್ನೂ ಓದಿ: Bottle Cap Challenge: ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಕಿಲಾಡಿ ಅಕ್ಷಯ್​ ಕುಮಾರ್​- ಗೋಲ್ಡನ್​ ಸ್ಟಾರ್​ ಗಣೇಶ್​

ಇಷ್ಟೇ ಅಲ್ಲ ಫೆರಬಿ ಎರಡು ದಿನಗಳ ಹಿಂದೆ ಹೊಸದಾಗಿ ಪೆನ್ಸಿಲ್ ಚಾಲೆಂಜ್​ ಕಿಕ್​ #pencilchallengeKick ಸಹ ಕೊಟ್ಟಿದ್ದಾರೆ. ಅದು ಬಾಟಲ್​ನಂತೆಯೇ ಪೆನ್ಸಿಲ್​ನ ಲೆಡ್​ ಅನ್ನು ಕಿಕ್​ ಮಾಡುವ ಮೂಲಕ ಮುರಿಯುವುದು. ಇದನ್ನು ಯಾರು ಮಾಡುತ್ತಾರೋ ಗೊತ್ತಿಲ್ಲ. ಆದರೆ ಅದಕ್ಕೂ ಮೂರು ಜನರಿಗೆ ಈ ಚಾಲೆಂಜ್​ ಅನ್ನು ಪಾಸ್​ ಮಾಡಿದ್ದಾರೆ.

ಪೆನ್ಸಿಲ್​ ಚಾಲೆಂಜ್​ ಕೊಟ್ಟಿರುವ ಫೆರಬಿ ದ್ಯಾವ್ಲೆಚಿನ್​
 
View this post on Instagram
 

New Challenge from @farakicks 😉 #Pencilchallengekick . Sending a challenge @erlsn.acr @eskindir_tesfay @sensei_seth @blessedmma . Waiting for you video friends .🥋🔥 Especially for masters ✊🏼🥋Tag your friends 👥 ⠀ ⠀ . Новый челендж от @farakicks 😉 #карандашчелендж . Передаю челендж @zarie75 @kumar_lukmanov @sergeyboytcov @denisgusev_com 🥋👍🏻 жду вообще видео друзья! Специально для мастеров . ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ ⠀ #bottlecapchallenge #farakicks #farakickschallenge #martialarts #태권도 #challenge #karate #kickboxer #kickboxing #алматы #mixedmartialarts #tkd #taekwondowtf #taekwondo #fighter #sidekick #trainning #jeetkunedo #jump #kungfu #kicks #taekwondoitf #каратэ #ткд #martialartist #blackbelt


A post shared by Master Fa (@farakicks) on


ಇನ್ನು ಬಾಲಿವುಡ್​ ನಟ ತನ್ನ ನೆಚ್ಚಿನ ಹಾಲಿವುಡ್​ ನಟ ಜೇಸನ್​ ಸ್ಯ್ಟಾತಮ್​ ಅವರ ವಿಡಿಯೋ ನೋಡಿ ತಾವೇ ಚಾಲೆಂಜ್​ ಸ್ವೀಕರಿಸಿ, ಅದನ್ನು ಮಾಡಿದ್ದಾರೆ. ಇದು ಈಗ ಹಾಲಿವುಡ್​ನಿಂದ ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದೆ. ಇನ್ನು ಈ ಚಾಲೆಂಜ್​ ಅನ್ನು ಯಾವ ಯವಾ ನಟರು ಸ್ವೀಕರಿಸಿ ಮಾಡುತ್ತಾರೆ ಅನ್ನೋದನ್ನ ಕಾದುನೋಡಬೇಕು.

Photos: ಹೊಸ ಫೋಟೋಶೂಟ್​ನಿಂದ ಮತ್ತೆ ಟಾಕ್​ ಆಫ್​ ದ ಟೌನ್​ ಆದ ದೀಪಿಕಾ ಪಡುಕೋಣೆ..!


 
First published: