HOME » NEWS » Entertainment » WHO IS PRASHANTH SAMBARGI ASK KANNADA PRODUCERS RMD

ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಲು ಪ್ರಶಾಂತ್ ಸಂಭರ್ಗಿ ಯಾರು?; ನಿರ್ಮಾಪಕ ರಾಮಕೃಷ್ಣ ಆಕ್ರೋಶ

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ವಿಚಾರ ಸಾಕಷ್ಟು ಹರಿದಾಡುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗವನ್ನ ಡ್ರಗ್ ಇಂಡಸ್ಟ್ರಿ ಅಂತ ಫೇಸ್ಬುಕ್ ನಲ್ಲಿ ಬರೆದಿರೋ ಪ್ರಶಾಂತ್ ಸಂಭರ್ಗಿಗೆ ನಿರ್ಮಾಪಕರ ಸಂಘದ ಅದ್ಯಕ್ಷ ರಾಮಕೃಷ್ಣ ತಿರುಗೇಟು ಕೊಟ್ಟಿದ್ದಾರೆ.

news18-kannada
Updated:September 1, 2020, 1:17 PM IST
ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಲು ಪ್ರಶಾಂತ್ ಸಂಭರ್ಗಿ ಯಾರು?; ನಿರ್ಮಾಪಕ ರಾಮಕೃಷ್ಣ ಆಕ್ರೋಶ
ಪ್ರಶಾಂತ್​ ಸಂಭರ್ಗಿ-ರಾಮಕೃಷ್ಣ
  • Share this:
ಸ್ಯಾಂಡಲ್ವುಡ್​ಗೆ ಅಂಟಿರುವ ನಶೆಯ ನಂಟಿನ ಬಗ್ಗೆ ಸಾಕಷ್ಟು ನಟನಟಿಯರು ಮಾತನಾಡಿದ್ದಾರೆ. ಕೆಲವರು ಚಿತ್ರರಂಗಕ್ಕೆ ನಶೆಯ ನಂಟಿರೋದು ನಿಜ eದು ಹೇಳಿದರೆ ಇನ್ನೂ ಕೆಲವರು ನಮ್ಮ ಅನುಭವಕ್ಕಂತೂ ಈ ರೀತಿಯ ಘಟನೆಗಳು ಬಂದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು, ನಿರ್ಮಾಪಕರು ಶೋಕಿಗಾಗಿ ಚಿತ್ರರಂಗಕ್ಕೆ ಬರುತ್ತಾರೆ. ನಟಿಯರನ್ನು ರೇವ್ ಪಾರ್ಟಿಗೆ ಆಹ್ವಾನಿಸ್ತಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಇದರ ಕುರಿತು ನಿರ್ಮಾಪಕರ ಸಂಘದ ಅದ್ಯಕ್ಷ ರಾಮ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರೋ ಒಬ್ಬರು ಮಾಡುವ ತಪ್ಪಿಗೆ ಎಲ್ಲರನ್ನೂ ದೂಷಿಸುವುದು ತಪ್ಪು ಎನ್ನುವ ರಾಮ ಕೃಷ್ಣ, “ಸ್ಯಾಂಡಲ್ವುಡ್ ನಲ್ಲಿ ಕೆಲವರು ಡ್ರಗ್ಸ್ ತೆಗೆದುಕೊಳ್ಳುತ್ತಿರಬಹುದು. ಹಾಗಂತ ಇಡೀ ಇಂಡಸ್ಟ್ರಿಯ ಮೇಲೆ ಅಪವಾದ ಸರಿಯಲ್ಲ. ಹಾಗೆ ನಿರ್ಮಾಪಕರು ರೇವ್ ಪಾರ್ಟಿಗೆ ಹೋಗುತ್ತಾರೆ ಅನ್ನೋದು ಸುಳ್ಳು. ನಮಗೆ ಮಾಡಬೇಕಾದ ಸಾಕಷ್ಟು ಕೆಲಸಗಳಿರುತ್ತವೆ. ನಮ್ಮದೆ ಆದ ಜವಾಬ್ದಾರಿ ಗಳಿರುತ್ತವೆ. ಯಾರೋ ಒಬ್ಬರು ಹೊಸದಾಗಿ ಬಂದಿರೋರು, ಒಂದು ಎರಡು ಸಿನಿಮಾ ಮಾಡಿರೋರು ಇದನ್ನ ಮಾಡುತ್ತಿರಬಹುದು. ಹಾಗಂತ ಇಡೀ ಇಂಡಸ್ಟ್ರಿನ ಯಾಕೆ ದೂಷಿಸಬೇಕು, ಎಂದು ಪ್ರಶ್ನೆ ಮಾಡುತ್ತಾರೆ.

ಇಷ್ಟೇ ಅಲ್ಲದೆ ಕನ್ನಡ ಚಿತ್ರರಂಗವನ್ನ ಡ್ರಗ್ ಇಂಡಸ್ಟ್ರಿ ಅಂತ ಫೇಸ್ಬುಕ್ ನಲ್ಲಿ ಬರೆದಿರೋ ಪ್ರಶಾಂತ್ ಸಂಭರ್ಗಿಗೆ ರಾಮಕೃಷ್ಣ ತಿರುಗೇಟು ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಪ್ರಶಾಂತ್ ಸಂಭರ್ಗಿ ಯಾರು? ನಿರ್ಮಾಪಕರಾ? ಕಲಾವಿದರಾ? ಸಿನಿಮಾ ರಂಗಕ್ಕೆ ಏನು ಸಂಬಂಧ? ಕನ್ನಡ ಸಿನಿಮಾ ಇಂಡಸ್ಟ್ರಿ ನಾ ಹೇಗೆ ಡ್ರಗ್ ಇಂಡಸ್ಟ್ರಿ ಅಂತಾರೆ? ಎಂದು ಕೇಳಿದ್ದಾರೆ.

ಜೊತೆಗೆ ಇಂದ್ರಜಿತ್ ಲಂಕೇಶ್ ಹೆಸರನ್ನ ಸಹ ಉಲ್ಲೇಖಿಸಿದ್ದು, ಚಿರಂಜೀವಿ ಬಗ್ಗೆ ಯಾಕೆ ಮಾತನಾಡಬೇಕು. ಸತ್ತವರ ಬಗ್ಗೆ ಮಾತನಾಡೋದು ತಪ್ಪಲ್ವಾ? ಯಾರ್ಯಾರು ಪಾಲ್ಗೊಂಡಿದ್ದಾರೆ ಅವರ ಹೆಸರನ್ನ ಬಹಿರಂಗ ಪಡಿಸಲಿ. ಡ್ರಗ್ಸ್ ಸಿನಿಮಾ ಇಂಡಸ್ಟ್ರಿ ಅಷ್ಟೇ ಅಲ್ಲ ಎಲ್ಲಾ ಕಡೆ ಇದೆ.. ಎಲ್ಲಾ ತನಿಖೆ ಆಗಲಿ, ಶಿಕ್ಷೆ ಆಗಲಿ, ಎಂದು ಆಗ್ರಹಿಸಿದ್ದಾರೆ.
Published by: Rajesh Duggumane
First published: September 1, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories