ಅರ್ಜುನ್-ಶ್ರುತಿ #MeToo ನಡುವೆ ಪ್ರಚಾರಕ್ಕೆ ಬಂದ ಪ್ರಶಾಂತ್ ಸಂಬರಗಿ ಯಾರು?

news18
Updated:October 26, 2018, 6:22 PM IST
ಅರ್ಜುನ್-ಶ್ರುತಿ #MeToo ನಡುವೆ ಪ್ರಚಾರಕ್ಕೆ ಬಂದ ಪ್ರಶಾಂತ್ ಸಂಬರಗಿ ಯಾರು?
  • News18
  • Last Updated: October 26, 2018, 6:22 PM IST
  • Share this:
ನ್ಯೂಸ್​18 ಕನ್ನಡ

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿದ #MeToo ಆರೋಪದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಕೆಲವರು ಅರ್ಜುನ್ ಬೆನ್ನಿಗೆ ನಿಂತರೆ ಇನ್ನೂ ಕೆಲವರು ಶ್ರುತಿಗೆ ಬೆಂಬಲ ನೀಡಿದ್ದಾರೆ. ಇಬ್ಬರ ನಡುವಣ ಫೈಟ್​ನಲ್ಲಿ ಹೈಲೈಟ್ ಆಗಿದ್ದು ಮಾತ್ರ ಪ್ರಶಾಂತ್ ಸಂಬರಗಿ. ಈ ಹೆಸರನ್ನು ಕೇಳಿದಾಕ್ಷಣ ಅವರು ಯಾರು ಎನ್ನುವ ಪ್ರಶ್ನೆ ಮೂಡದೇ ಇರದು. ಅದಕ್ಕೆ ಇಲ್ಲಿದ ಉತ್ತರ.

ಕನ್ನಡದಲ್ಲಿ ನಡೆದ ಡಬ್ಬಿಂಗ್ ಪರ ಹೋರಾಟದ ಬಗ್ಗೆ ತಿಳಿದವರಿಗೆ ಪ್ರಶಾಂತ್ ಕುರಿತೂ ತಿಳಿದಿರುತ್ತದೆ. ಇವರು ಮೂಲತಃ ಬೆಳಗಾವಿಯವರು. ಬೆಳೆದಿದ್ದು ಬೆಂಗಳೂರಿನಲ್ಲಿ. ಪ್ರಶಾಂತ್ ಉದ್ಯಮಿ ಆಗಿದ್ದು, ಅರ್ಜುನ್ ಸರ್ಜಾ ಅವರಿಗೆ ಆಪ್ತರು. ಡಬ್ಬಿಂಗ್ ಪರ ಹೋರಾಡಿದವರಲ್ಲಿ ಪ್ರಶಾಂತ್ ಕೂಡ ಪ್ರಮುಖರು. ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಪ್ರಶಾಂತ್ ವಿರುದ್ಧ ವಾಗ್ಸಮರ ಕೂಡ ನಡೆದಿತ್ತು. ಡಬ್ಬಿಂಗ್​ಗೆ ಅವಕಾಶ ನೀಡದ ಕಾರಣಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.

ಇದನ್ನೂ ಓದಿ: ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ ಎಂದ ನಟಿ ಶ್ರುತಿ ಹರಿಹರನ್

#MeToo ಪ್ರಕರಣಕ್ಕೂ ಪ್ರಶಾಂತ್​ಗೂ ಇರುವ ಸಂಬಂಧವಾದರೂ ಏನು? ಅವರು ಪ್ರಚಾರಕ್ಕಾಗಿ ಅರ್ಜುನ್-ಶ್ರುತಿ ನಡುವೆ ಎಂಟ್ರಿ ಆಗಿದ್ದಾರಾ? ಹೀಗೊಂದು ಪ್ರಶ್ನೆ ಸದ್ಯ ಎಲ್ಲರನ್ನು ಕಾಡುತ್ತಿದೆ.

ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಈ ಆರೋಪಗಳಿಗೆ ಪ್ರತಿಕ್ರಿಯೆಯನ್ನು ಅರ್ಜುನ್ ಸರ್ಜಾ ಬಳಿಯೇ ಕೇಳಬೇಕು. ನಾನು ಪ್ರರಚಾರಕ್ಕಾಗಿ ಬಂದಿದ್ದೇನೋ ಅಥವಾ ಅವರೇ ಕಳುಹಿಸಿದರೋ ಎಂಬುದರ ಬಗ್ಗೆ ಉತ್ತರಿಸಲು ಅರ್ಜುನ್ ಸೂಕ್ತ ವ್ಯಕ್ತಿ’ ಎಂದಿದ್ದಾರೆ. ಈ ಮೂಲಕ ಅರ್ಜುನ್ ಸರ್ಜಾ ಅವರೇ ತಮ್ಮನ್ನು ಕರೆಸಿಕೊಂಡಿದ್ದಾರೆ ಎಂಬುದನ್ನು ಪ್ರಶಾಂತ್ ಸೂಚ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: #MeToo: ನಟ ಅರ್ಜುನ್​​ ಸರ್ಜಾರಿಗೂ ತಟ್ಟಿದ ಬಿಸಿ: ಫೇಸ್​ಬುಕ್​ನಲ್ಲಿ ಬಾಂಬ್​ ಸಿಡಿಸಿದ ಶ್ರುತಿ ಹರಿಹರನ್​..!
First published: October 26, 2018, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading