Ira and Nupur: ಮಿಸ್ಟರ್ ಪರ್ಫೆಕ್ಟ್​ನ ಅಳಿಯ ಯಾರು ಗೊತ್ತಾ? ಇರಾ ಖಾನ್ ಮನಸ್ಸು ಗೆದ್ದ ಆ ಹುಡುಗ ಯಾರು?

ಮಿಸ್ಟರ್ ಪರ್ಫೆಕ್ಟ್ ಅಂತಾನೆ ಹೆಸರು ಮಾಡಿರುವ ನಟ ಅಮೀರ್ ಖಾನ್ ಅವರ ಮಗಳ ಕೈ ಹಿಡಿಯಲಿರುವ ಹುಡುಗ ಹೇಗೆ? ಏನು? ಅಂತ ತಿಳಿದುಕೊಳ್ಳಬೇಕೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ ಅಲ್ಲವೇ? ಇರಾ ಖಾನ್ ತಮ್ಮ ಗೆಳೆಯ ನೂಪುರ್ ಶಿಖಾರೆ ಅವರೊಂದಿಗಿನ ನಿಶ್ಚಿತಾರ್ಥವನ್ನು ಮುದ್ದಾದ ರೀತಿಯಲ್ಲಿ ಮನರಂಜನಾತ್ಮಕ ಶೀರ್ಷಿಕೆಯೊಂದಿಗೆ ಘೋಷಿಸಿದರು. ಹಾಗಾದ್ರೆ ಈ ನೂಪುರ್ ಯಾರು? ಏನು ಕೆಲಸ ಮಾಡಿಕೊಂಡಿದ್ದಾರೆ? ಅಂತ ತಿಳಿದುಕೊಳ್ಳೋಣ ಬನ್ನಿ.

ಇರಾ ಖಾನ್ ಮತ್ತು ನೂಪುರ್ ಶಿಖಾರೆ

ಇರಾ ಖಾನ್ ಮತ್ತು ನೂಪುರ್ ಶಿಖಾರೆ

  • Share this:
ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ಮಾಡಿಕೊಂಡಿದ್ದ ನಟ ಅಮೀರ್ ಖಾನ್ ಅವರ ಮಗಳಾದ ಇರಾ ಖಾನ್ (Ira Khan) ಮತ್ತು ಆಕೆಯ ಗೆಳೆಯ ನೂಪುರ್ ಶಿಖಾರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಪೋಸ್ ಮಾಡಿರುವ ಮತ್ತು ನಿಶ್ಚಿತಾರ್ಥ (Engagement) ಮಾಡಿಕೊಂಡಿರುವ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡು ಅವರಿಬ್ಬರು ಈಗ ‘ಎಂಗೇಜ್ಡ್’ ಅಂತ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಮಿಸ್ಟರ್ ಪರ್ಫೆಕ್ಟ್ ಅಂತಾನೆ ಹೆಸರು ಮಾಡಿರುವ ನಟ ಅಮೀರ್ ಖಾನ್ (Aamir Khan) ಅವರ ಮಗಳ ಕೈ ಹಿಡಿಯಲಿರುವ ಹುಡುಗ ಹೇಗೆ? ಏನು? ಅಂತ ತಿಳಿದುಕೊಳ್ಳಬೇಕೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ ಅಲ್ಲವೇ? ಇರಾ ಖಾನ್ ತಮ್ಮ ಗೆಳೆಯ ನೂಪುರ್ ಶಿಖಾರೆ (Nupur Shikhare)ಅವರೊಂದಿಗಿನ ನಿಶ್ಚಿತಾರ್ಥವನ್ನು ಸಾಧ್ಯವಾದಷ್ಟು ಮುದ್ದಾದ ರೀತಿಯಲ್ಲಿ ಮನರಂಜನಾತ್ಮಕ ಶೀರ್ಷಿಕೆಯೊಂದಿಗೆ ಘೋಷಿಸಿದರು.

ಹಾಗಾದ್ರೆ ಈ ನೂಪುರ್ ಯಾರು? ಏನು ಕೆಲಸ ಮಾಡಿಕೊಂಡಿದ್ದಾರೆ? ಅಂತ ತಿಳಿದುಕೊಳ್ಳೋಣ ಬನ್ನಿ.

ನೂಪುರ್ ಶಿಖಾರೆ ಮೂಲತಃ ಎಲ್ಲಿಯವರು?
ನೂಪುರ್ ಅಕ್ಟೋಬರ್ 17, 1985 ರಂದು ಪುಣೆಯಲ್ಲಿ ಜನಿಸಿದರು. ಎಸ್.ಡಿ. ಕಟಾರಿಯಾ ಹೈಸ್ಕೂಲ್ ನಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಮುಂಬೈನ ಆರ್.ಎ. ಪೊದ್ದಾರ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಅವರು ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ತಾಯಿ ಪ್ರೀತಂ ಶಿಖಾರೆ ಅವರು ಒಬ್ಬ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ನೂಪುರ್ ಏನ್ ಕೆಲಸ ಮಾಡಿಕೊಂಡಿದ್ದಾರೆ?
ನೂಪುರ್ ಶಿಖಾರೆ ವೃತ್ತಿಯಲ್ಲಿ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾಗಿದ್ದಾರೆ ಮತ್ತು ಈಗ ಕೆಲವು ಸಮಯದಿಂದ ಇರಾಗೆ ತರಬೇತಿ ನೀಡುತ್ತಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಶುರುವಾದದ್ದು 2020 ರಲ್ಲಿ ಅಂತ ಹೇಳಬಹುದು.

ಇದನ್ನೂ ಓದಿ: Viral Video: ಥೇಟ್​​ ಫಿಲ್ಮಿ ಸ್ಟೈಲ್​​ನಲ್ಲಿ ಎಂಗೇಜ್​ ಆದ ಆಮೀರ್​ ಮಗಳು ಇರಾ! ವೈರಲ್ ಆಯ್ತು ಪ್ರಪೋಸಿಂಗ್ ವಿಡಿಯೋ










View this post on Instagram






A post shared by Ira Khan (@khan.ira)




ತಮ್ಮ ಸಂಬಂಧವನ್ನು ಪ್ರಪಂಚದಿಂದ ಮರೆಮಾಚದೇ, ಪ್ರೀತಿ ಶುರುವಾದಾಗಿನಿಂದ ಈ ಇಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ನೂಪುರ್ ಹಲವಾರು ವರ್ಷಗಳಿಂದ ಇರಾ ಅವರ ಪಾರ್ಟಿಗಳು ಮತ್ತು ಹುಟ್ಟುಹಬ್ಬದ ಆಚರಣೆಗಳಲ್ಲಿ ಭಾಗವಾಗಿದ್ದರು.

ಅಮೀರ್ ಮತ್ತು ಸುಶ್ಮಿತಾ ಸೇನ್ ಗೆ ತರಬೇತಿ ನೀಡಿದ ನೂಪುರ್
ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾಗಿರುವ ನೂಪುರ್, ಇರಾ ಹೊರತಾಗಿ, ಆಕೆಯ ತಂದೆಯಾದ ಬಾಲಿವುಡ್ ನಟ ಅಮೀರ್ ಖಾನ್ ಅವರಿಗೂ ತರಬೇತಿ ನೀಡಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ನೂಪುರ್ ಒಂದು ದಶಕದಿಂದ ಸುಶ್ಮಿತಾ ಸೇನ್ ಅವರಿಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ದಾರೆ ಮತ್ತು ಅವರಿಬ್ಬರ ಒಂದು ಫೋಟೋವನ್ನು ಹಂಚಿಕೊಳ್ಳುತ್ತಾ ನಟಿ ಸುಶ್ಮಿತಾ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಸಹ ಕೋರಿದ್ದರು ಎಂದು ಹೇಳಲಾಗುತ್ತಿದೆ.










View this post on Instagram






A post shared by Popeye ⚓ (@nupur_shikhare)




ಡ್ಯಾನ್ಸ್ ಮತ್ತು ಟೆನ್ನಿಸ್ ನಲ್ಲಿಯೂ ಸಹ ಪರಿಣತಿ ಹೊಂದಿದ್ದಾರೆ ನೂಪುರ್
ಫಿಟ್ನೆಸ್ ತರಬೇತುದಾರ ಮಾತ್ರವಲ್ಲದೇ ನೂಪುರ್ ತಮ್ಮನ್ನು ತಾವು ನೃತ್ಯದಲ್ಲಿ ಸಹ ತೊಡಗಿಸಿಕೊಂಡಿದ್ದಾರೆ ಮತ್ತು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಅವರು ಬಾಲಿವುಡ್ ನಟರಾದ ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ಅವರ ‘ವಾರ್’ ಚಿತ್ರದಲ್ಲಿದ್ದ ‘ಜೈ ಜೈ ಶಿವ ಶಂಕರ್’ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಇವರು ಹಂಚಿಕೊಂಡಿದ್ದಾರೆ.

 ಇದನ್ನೂ ಓದಿ:  Samantha: ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯುತ್ತಿದ್ದಾರೆ ಸಮಂತಾ! ಸ್ಯಾಮ್ ಈಗ ಸಖತ್ ಫೇಮಸ್

ಅಷ್ಟೇ ಅಲ್ಲದೇ ಇವರು 2014 ರಲ್ಲಿ ಐರನ್ ಮ್ಯಾನ್ 70.3 ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು ಮತ್ತು ರಾಜ್ಯ ಮಟ್ಟದ ಟೆನಿಸ್ ಆಟಗಾರರಾಗಿದ್ದಾರೆ. ಅವರು ಅಲ್ಟಿಮೇಟ್ ಬೀಸ್ಟ್ ಮಾಸ್ಟರ್ ಸೀಸನ್ 2 ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿದ್ದರು.
Published by:Ashwini Prabhu
First published: