Rakhi Sawant: ಯಾರು ಈ ಕೆ ಎಲ್ ರಾಹುಲ್? ಹೀಗೆ ಹೇಳಿದ್ಯಾಕೆ ನಟಿ ರಾಖಿ ಸಾವಂತ್

ಕೆ.ಎಲ್ ರಾಹುಲ್​, ರಾಖಿ ಸಾವಂತ್​

ಕೆ.ಎಲ್ ರಾಹುಲ್​, ರಾಖಿ ಸಾವಂತ್​

ಗುರುವಾರ ಮುಂಬೈಗೆ ಬಂದು ಇಳಿದ ನಟಿ ರಾಖಿ ಸಾವಂತ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು ಮತ್ತು ಅವರು ಪಾಪರಾಜಿಗಳೊಂದಿಗೆ ತಮ್ಮ 12 ಗಂಟೆಗಳ ಸುದೀರ್ಘ ಹಾರಾಟದ ಬಗ್ಗೆ ಮಾತಾಡಿದ್ದು, ಈ ವೇಳೆ ರಾಖಿ ಕೆ.ಎಲ್ ರಾಹುಲ್ ಯಾರು ಅಂತ ಕೇಳಿದ್ದಾರೆ.

  • Trending Desk
  • 5-MIN READ
  • Last Updated :
  • Karnataka, India
  • Share this:

ಸದಾ ಒಂದಲ್ಲ ಒಂದು ಬೋಲ್ಡ್ ಹೇಳಿಕೆಗಳಿಂದ ತಮ್ಮ ವೈಯುಕ್ತಿಕ ಜೀವನದಲ್ಲಾಗುವ ಘಟನೆಗಳಿಂದ ಮತ್ತು ತಮ್ಮ ಸ್ಟೈಲ್ ನಿಂದಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿಯರ ಸಾಲಿನಲ್ಲಿ ನಟಿ ರಾಖಿ  ಸಾವಂತ್ (Rakhi Sawant) ತುಂಬಾನೇ ಮೇಲಿನ ಸ್ಥಾನದಲ್ಲಿ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗಷ್ಟೇ ತಮ್ಮ ತಾಯಿಯ ನಿಧನ ಬಗ್ಗೆ ಮತ್ತು ತಮ್ಮ ವೈವಾಹಿಕ ಜೀವನದಲ್ಲಿ ಆದ ಘಟನೆಗಳ ಬಗ್ಗೆ ತಮ್ಮ ಅಭಿಮಾನಿಗಳ ಜೊತೆಗೆ ಮುಕ್ತವಾಗಿ ಹಂಚಿಕೊಂಡ ರಾಖಿ ಸಾವಂತ್ ಜೀವನದಲ್ಲಿ ಇದುವರೆಗೆ ನಡೆದ ಎಲ್ಲಾ ಕಹಿ ಘಟನೆಗಳನ್ನು ಮತ್ತು ನೋವು ತಂದಿರುವ ಘಟನೆಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗುವುದಾಗಿ ಹೇಳಿಕೊಂಡಿದ್ದರು.


ಈಗ ಮತ್ತೊಮ್ಮೆ ರಾಖಿ ಸಾವಂತ್ ಅವರು ಸುದ್ದಿಯಲ್ಲಿದ್ದಾರೆ ನೋಡಿ, ಅದು ಏನಕ್ಕೆ ಅಂತ ಅಂದುಕೊಂಡಿದ್ದೀರಿ? ಒಬ್ಬ ಜನಪ್ರಿಯ ಕ್ರಿಕೆಟ್ ಆಟಗಾರನನ್ನು ಗುರುತಿಸದೆ ಯಾರು ಅಂತ ಕೇಳಿದ್ರಂತೆ ರಾಖಿ ಸಾವಂತ್.


ಲಂಡನ್ ನಿಂದ ಬಂದ ರಾಖಿ ಅವರು ಕೆ ಎಲ್ ರಾಹುಲ್ ಅವರನ್ನ ಗುರುತಿಸಿಲ್ವಂತೆ..


ಇತ್ತೀಚೆಗೆ ಲಂಡನ್ ಪ್ರವಾಸದಲ್ಲಿದ್ದ ನಟಿ ರಾಖಿ ಸಾವಂತ್ ಅವರು ತಮ್ಮ ಲಂಡನ್ ಪ್ರವಾಸ ಮುಗಿಸಿಕೊಂಡು ಗುರುವಾರದಂದು ಮುಂಬೈಗೆ ಮರಳಿದ್ದಾರೆ. ಗುರುವಾರ ಮುಂಬೈಗೆ ಬಂದು ಇಳಿದ ನಟಿ ರಾಖಿ ಸಾವಂತ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು ಮತ್ತು ಅವರು ಪಾಪರಾಜಿಗಳೊಂದಿಗೆ ತಮ್ಮ 12 ಗಂಟೆಗಳ ಸುದೀರ್ಘ ಹಾರಾಟದ ಬಗ್ಗೆ ಮಾತನಾಡುತ್ತಿದ್ದರು.


ಅದೇ ಸಮಯದಲ್ಲಿ, ಕ್ರಿಕೆಟಿಗ ಕೆ ಎಲ್ ರಾಹುಲ್ (KL Rahul) ಕೂಡ ಅದೇ ಸ್ಥಳಕ್ಕೆ ಬಂದರು. ಆದರೆ ರಾಖಿ ಸಾವಂತ್ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲವಂತೆ ನೋಡಿ. ರಾಖಿ ಸಾವಂತ್ ಅವರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಪ್ರದೇಶದ ಮೂಲಕ ನಿರ್ಗಮನದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಕ್ರಿಕೆಟಿಗ ಕೆ ಎಲ್ ರಾಹುಲ್ ತನ್ನ ಪಕ್ಕದಲ್ಲಿ ಇರುವ ಕಾರಿನಲ್ಲಿ ಕುಳಿತಿದ್ದಾರೆ ಎಂದು ಪಾಪರಾಜಿಗಳು ಹೇಳಿದರು.


ಆಗ ರಾಖಿ ಆ ಕಾರನ್ನು ನೋಡಿದರು, ನಂತರ ಮತ್ತೆ ಶಟರ್ ಬಗ್ಸ್ ಕಡೆಗೆ ತಿರುಗಿ "ಯಾರು ಈ ಕೆ ಎಲ್ ರಾಹುಲ್?" ಎಂದು ಕೇಳಿದರಂತೆ.


ರಾಹುಲ್ ಅವರು ಸುನಿಲ್ ಶೆಟ್ಟಿ ಅಳಿಯ ಅಂತ ರಾಖಿಗೆ ಹೇಳಿದ ಛಾಯಾಗ್ರಾಹಕರು..


ನಂತರ ಅಲ್ಲಿಯೇ ಇದ್ದಂತಹ ಛಾಯಾಗ್ರಾಹಕರು ಕೆ ಎಲ್ ರಾಹುಲ್ ಒಬ್ಬ ಕ್ರಿಕೆಟಿಗ ಅಂತ ಹೇಳುವುದರೊಂದಿಗೆ ರಾಖಿಗೆ ರಾಹುಲ್ ಅವರನ್ನು ಗುರುತಿಸಲು ಸಹಾಯ ಮಾಡಿದರು.ಇಷ್ಟೇ ಅಲ್ಲದೆ ಅವರು ರಾಖಿ ಅವರಿಗೆ ಬೇಗನೆ ಅರ್ಥವಾಗಲಿ ಅಂತ ರಾಹುಲ್ ಅವರು ನಟ ಸುನೀಲ್ ಶೆಟ್ಟಿ ಅವರ ಅಳಿಯ ಅಂತ ಸಹ ಹೇಳಿದರಂತೆ ಎಂದು ಹೇಳಲಾಗುತ್ತಿದೆ.


ಕೊನೆಗೆ ಇಷ್ಟೆಲ್ಲಾ ಕೇಳಿಸಿಕೊಂಡ ರಾಖಿಗೆ ರಾಹುಲ್ ಯಾರು ಅಂತ ನೆನಪಾದರಂತೆ. ಆಗ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರೊಂದಿಗೆ ಮದುವೆಯಾಗಿದ್ದಕ್ಕೆ ಅವರಿಬ್ಬರಿಗೂ ಮದುವೆಯ ಶುಭಾಶಯಗಳನ್ನು ಸಹ ತಿಳಿಸಿದರು.ರಾಹುಲ್ ತನ್ನ ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸಿದ್ದರೆ, ವೈಯಕ್ತಿಕವಾಗಿ ಅವರಿಗೆ ಮದುವೆಯ ಅಭಿನಂದನೆಗಳನ್ನು ಹೇಳುತ್ತಿದ್ದೆ ಅಂತ ಸಹ ರಾಖಿ ಹೇಳಿದರು.


ಇದನ್ನೂ ಓದಿ: Anushka Sharma: ವಿರಾಟ್-ಅನುಷ್ಕಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ನಟಿ ನೋಡಿ ಫುಲ್ ನರ್ವಸ್ ಆಗಿದ್ದರಂತೆ ಕೊಹ್ಲಿ!


ನಂತರ ಪಾರ್ಕಿಂಗ್ ಪ್ರದೇಶದಿಂದ ಹೊರಡುವ ಮೊದಲು ಅವರೊಂದಿಗೆ ಮಾತನಾಡಲು ರಾಹುಲ್ ಏಕೆ ತನ್ನ ಕಾರಿನ ಕಿಟಕಿಯನ್ನು ಕೆಳಗಿಳಿಸುತ್ತಾರೆ ಅಂತ ರಾಖಿ ಹೇಳಿದರು.ರಾಖಿಯ ಈ ಉಲ್ಲಾಸಭರಿತ ಸಂಭಾಷಣೆಯ ವೀಡಿಯೋವನ್ನು ಪಾಪರಾಜಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡರು.


top videos    ಕೆ ಎಲ್ ರಾಹುಲ್ ಮತ್ತು ಅಥಿಯಾ ಜನವರಿ 23 ರಂದು ಖಂಡಾಲಾದಲ್ಲಿ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಖಾಸಗಿ ವಿವಾಹದಲ್ಲಿ 100 ಕ್ಕಿಂತ ಕಡಿಮೆ ಅತಿಥಿಗಳು ಭಾಗವಹಿಸಿದ್ದರು.

    First published: