Coffenadu Chandu: ನಾನೇ ಕಾಫಿನಾಡು ಚಂದು, ನೀವೇ ನನ್ನ ಬಂಧು! ಹೀಗ್​ ಹೇಳುತ್ತಲೇ ಫೇಮಸ್​, ನೆಕ್ಸ್ಟ್​ ಬಿಗ್​ಬಾಸ್​ ಫಿಕ್ಸ್ ಅಂತೆ​

"ನಾನು ಕಾಫಿನಾಡಿನ ಚೆಂದು (Coffenadu Chandu). ನಾನು ಶಿವಣ್ಣ(Shivanna) , ಪುನೀತ್ (Puneeth)​ ಅವರ ಅಭಿಮಾನಿ ಇವತ್ತು ಇಂಥವರ ಬರ್ತಡೇ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಅವರಿಗಾಗಿ ಒಂದು ಹಾಡು. ಹ್ಯಾಪಿ ಬರ್ತ್​ಡೇ" ಹೀಗೆ ಹೇಳುತ್ತಲೇ ಫೇಮಸ್​ ಆದವರು ಕಾಫಿನಾಡಿನ  ಚಂದು.

ಕಾಫಿನಾಡಿನ ಚಂದು

ಕಾಫಿನಾಡಿನ ಚಂದು

  • Share this:
ಇದು ಫಾಸ್ಟ್​ ಫುಡ್ (Fast Food)​ ಯುಗ.. ಊಟ ಆರ್ಡರ್​​ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ ​(Famous) ಆಗಬಹುದು. ಇಂಟರ್​ನೆಟ್ (Internet)​ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ.  ಕೆಲವರು ತಮ್ಮ ಟ್ಯಾಲೆಂಟ್ (Talent)​ ಪ್ರದರ್ಶಿಸಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಇನ್ನೂ ಕೆಲವರು ಬಂದ ಪುಟ್ಟ ಹೋದ ಪುಟ್ಟ ಎನ್ನುವ ಹಾಗೇ ಆಗಿದ್ದಾರೆ. ಟಿಕ್​ ಟಾಕ್ (Tik Tok)​ ಬ್ಯಾನ್​ ಆಗುವುದಕ್ಕಿಂತ ಮುಂಚೆ ಕರ್ನಾಟಕದಲ್ಲೂ ಹಲವು ಪ್ರತಿಭೆಗಳು ಹೆಸರು ಮಾಡಿದ್ದರು. ರಾತ್ರೋ ರಾತ್ರಿ ಸ್ಟಾರ್​​ (Star)ಗಳ ರೇಂಜ್​ನಲ್ಲಿ ಹೆಸರು ಮಾಡಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವ ತಾಕತ್ತು ಯಾರಿಗೂ ಇರಲಿಲ್ಲ. ಇದೇ ರೀತಿಯಲ್ಲಿ ಕಳೆದ ದಿನಗಳಿಂದ ಮತ್ತೊಂದು ಹೆಸರು ಸಿಕ್ಕಾಪಟ್ಟೆ ಫೇಮಸ್​ ಆಗುತ್ತಿದೆ.  ಅವರೇ ಕಾಫಿನಾಡಿನ ಚಂದು.

ಕಾಫಿನಾಡಿನ ಚಂದು ಸಿಕ್ಕಾಪಟ್ಟೆ ಫೇಮಸ್​!

ಹಾಯ್​, ಹಲೋ ನಮಸ್ಕಾರ ಕರ್ನಾಟಕ. "ನಾನು ಕಾಫಿನಾಡಿನ ಚೆಂದು (Coffenadu Chandu). ನಾನು ಶಿವಣ್ಣ(Shivanna) , ಪುನೀತ್ (Puneeth)​ ಅವರ ಅಭಿಮಾನಿ ಇವತ್ತು ಇಂಥವರ ಬರ್ತಡೇ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಅವರಿಗಾಗಿ ಒಂದು ಹಾಡು. ಹ್ಯಾಪಿ ಬರ್ತ್​ಡೇ" ಹೀಗೆ ಹೇಳುತ್ತಲೇ ಫೇಮಸ್​ ಆದವರು ಕಾಫಿನಾಡಿನ  ಚಂದು. ಕಳೆದ ಎರಡು ವಾರಗಳಿಂದ ಸೋಷಿಯಲ್​  ಮೀಡಿಯಾ ಓಪನ್​ ಮಾಡಿದರೆ ಸಾಕು. ನಾನೇ ಚಂದು ಓಹೋ. ನೀವೇ ನನ್ನ ಬಂದು ಓಹೋ ಎಂದು ಹೇಳುವ ಕಾಫಿನಾಡಿನದ ಚಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಕಾಫಿನಾಡಿನ ಚಂದು ಹಿನ್ನೆಲೆ ಏನು?

ಮನಸ್ಸಿಗೆ ಬಂದಥ ಹಾಡು, ಮನಸ್ಸಿಗೆ ಬಂದತಹ ಸಾಹಿತ್ಯವನ್ನು ಹೇಳುತ್ತಾ ಫೇಮಸ್​ ಆದವರು ಈ ಚಂದು. ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ಸ್ನೇಹಿತರಿಗೆ ಬರ್ತ್​ಡೇಗೆ ವಿಶ್​ ಮಾಡುತ್ತಿದ್ದರು. ಇವರ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಕಾಫಿನಾಡಿನ ಚಂದುಗೆ ಇನ್​ಸ್ಟಾಗ್ರಾಮ್​ನಲ್ಲಿ ಸದ್ಯಕ್ಕೆ 1 ಲಕ್ಷದ 24 ಸಾವಿರ ಜನ ಫಾಲೋವರ್ಸ್​ ಇದ್ದಾರೆ. ಇದು ನಿಜಕ್ಕೂ ಮೆಚ್ಚುವಂಥ ಕಾರ್ಯವೇ. 2 ವಾರಗಳಿಂದ ಸಿಕ್ಕಾಪಟ್ಟೆ ಪ್ರಸಿದ್ಧಿಗೆ ಬಂದಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರಿನ ಮೂಡಗೆರೆಯ ಭಾಗದ ಮಲ್ಲಂದೂರಿನ ಭಾಗಮನೆ ಆಸುಪಾಸಿನವರು. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​​ ಅವರ ಊರಿನವರಂತೆ.ಇದನ್ನೂ ಓದಿ: ಟ್ರೋಲ್​ ಪೇಜ್​ಗಳಿಂದಲೇ ಫೇಮಸ್​ ಆದ ಸೋನು! ರೀಲ್ಸ್​​ ಮಾಡಿನೇ ತಿಂಗಳಿಗೆ ಇಷ್ಟೊಂದು ಸಂಪಾದನೆನಾ?

ವೃತ್ತಿಯಲ್ಲಿ ಆಟೋ ಡ್ರೈವರ್​​ ಚಂದು!

ಜೀವನಕ್ಕೆ ಆಟೋ ಓಡಿಸಿಕೊಂಡು ಇದ್ದಾರೆ ಚಂದು. ಅವರೇ ಹೇಳಿರುವಂತೆ ಮೊದಲೆಲ್ಲಾ ಅವರು ರಸ್ತೆಯಲ್ಲಿ ಯಾರಾದರೂ ಆ್ಯಕ್ಸಿಡೆಂಟ್​ ಆಗಿ ಬಿದ್ದಿದ್ದರೆ ಅಂಥವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಇದೇ ರೀತಿಯ ಸಣ್ಣ ಪುಟ್ಟ ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬರ್ತಿದ್ದರಂತೆ. ಇವರು ಶಿವಣ್ಣ, ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿ ಅಂತೆ. ಬರ್ತ್​ಡೇ ಸಾಂಗ್​ ಮೂಲಕ ಹೆಚ್ಚಿನ ಫಾಲೋವರ್ಸ್​ ಪಡೆದಿದ್ದರು. ಇವರಿಗೆ ಕರೆ ಮಾಡಿ ತನ್ನ ಸ್ನೇಹಿತರಿಗಾಗಿ ಅವರ ಮೂಲಕ ವಿಶ್​ ಮಾಡುವುದಕ್ಕೆ ಶುರು ಮಾಡಿದ್ದರು.

ಇದನ್ನೂ ಓದಿ: ನಮಸ್ಕಾರ ದೇವ್ರು, ಹೀಗ್​ ಅನ್ನುತ್ತಲೇ ದುಡ್ಡು ಮಾಡ್ತಿರೋ ಯುಟ್ಯೂಬರ್​​! ವಿಡಿಯೋಗಳಿಂದಲೇ ತಿಂಗಳಿಗೆ ಇಷ್ಟೊಂದು ಸಂಪಾದನೆನಾ?

ಆದಾಯವೇನು? ವಿಡಿಯೋಗಳಿಂದ ದುಡ್ಡು ಬರ್ತಿದ್ಯಾ?

ಕಾಫಿನಾಡಿನ ಚಂದು ಅವರನ್ನು ನೋಡಿದರೆ ಮುಗ್ದರು ಎಂದು ತಿಳಿಯುತ್ತದೆ. ಸದ್ಯ ಚಂದುಗೆ ಕನ್ನಡ ಮಾಧ್ಯಮಗಳು ಕೂಡ ಇಂಟರ್​ವ್ಯೂವ್​ ಮಾಡುತ್ತಿದ್ದಾರೆ. ಯಾವ ಮಟ್ಟಿಗೆ ಹೆಸರು ಮಾಡಿದ್ದಾರೆ ಎಂದರೆ, ಈ ಸಲ ಬಿಗ್​ ಬಾಸ್​ಗೆ ಇವರು ಫಿಕ್ಸ್​ ಅಂತಿದ್ದಾರೆ ಜನರು. ಸೋಷಿಯಲ್​ ಮೀಡಿಯಾದಲ್ಲಿ ಇದ್ದಕಿದ್ದ ಹಾಗೇ ಒಮ್ಮೇಲೆ ಹೆಸರು ಕೊಡುತ್ತೆ. ಒಮ್ಮೇಲೆ ದುಪ್​ ಅಂತ  ಬೀಳಿಸಿಬಿಡುತ್ತೆ. ಸದ್ಯ ಕಾಫಿನಾಡಿನ ಚಂದು ಪಿಕ್​ನಲ್ಲಿದ್ದರು. ಹಲವರು ಇವರನ್ನು ಕರೆಸಿ ಸನ್ಮಾನ ಮಾಡಿ, ಹಣ ಕೂಡ ಕೊಡುತ್ತಿದ್ದಾರಂತೆ. ಇದು ಬಿಟ್ಟು ಆಟೋ ಓಡಿಸಿಕೊಂಡು ಸಂಪಾದನೆ ಮಾಡುತ್ತಿದ್ದಾರೆ.

ಅದೇನೇ ಇರಲಿ. ಈ ಹಿಂದೆಯೂ ಸೋಷಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿ ನಂತರ ಹೆಸರು ಹಾಳು ಮಾಡಿಕೊಂಡವರು ಇದ್ದಾರೆ. ಕಾಫಿನಾಡಿನ ಚಂದು ಅಂಥವರ ಪಟ್ಟಿ ಸೇರದೇ ಇರಲಿ ಅಷ್ಟೆ.
Published by:Vasudeva M
First published: