• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sonu Srinivas Gowda: ಸೋಶಿಯಲ್​ ಮೀಡಿಯಾ TO ಬಿಗ್​ ಬಾಸ್​, ಹೇಗಿದೆ ಸೋನು ಶ್ರೀನಿವಾಸ್​ ಗೌಡ ಜರ್ನಿ

Sonu Srinivas Gowda: ಸೋಶಿಯಲ್​ ಮೀಡಿಯಾ TO ಬಿಗ್​ ಬಾಸ್​, ಹೇಗಿದೆ ಸೋನು ಶ್ರೀನಿವಾಸ್​ ಗೌಡ ಜರ್ನಿ

ಸೋನು ಶ್ರೀನಿವಾಸ್​ ಗೌಡ

ಸೋನು ಶ್ರೀನಿವಾಸ್​ ಗೌಡ

ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ್ದ ಸೋನು ಶ್ರೀನಿವಾಸ್​ ಗೌಡ ಅವರು ಇದೀಗ ಬಿಗ್​ ಬಾಸ್​ ಒಟಿಟಿ ಕನ್ನಡಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ನ 2ನೇ ಸ್ಪರ್ಧಿಯಾಗಿ ಸೋನು  ಶ್ರೀನಿವಾಸ್ ಗೌಡ ಅವರು ಎಂಟ್ರಿ ನೀಡಿದ್ದಾರೆ. 

  • Share this:

ಇದು ಸೋಶಿಯಲ್​ ಮೀಡಿಯಾ ಯುಗ. ರಾತ್ರಿ ಆಗಿ ಬೆಳಗಾಗುವುದರೊಳಗಾಗಿ ಅದೆಷ್ಟೋ ಜನ ಸೂಪರ್ ಸ್ಟಾರ್​ ಗಳಾಗಿ ಹೋಗಿರುತ್ತಾರೆ. ಅದರಲ್ಲಿಯೂ ಟಿಕ್ ಟಾಕ್ ಬಂದ ನಂತರ ಸಾಮಾಜಿಕ ಜಾಲತಾಣ ಎನ್ನುವುದು ಮತ್ತಷ್ಟು ಮುನ್ನೆಲೆಗೆ ಬಂದಿತು. ಆದರೆ ಕೆಲ ವರ್ಷಗಳ ಹಿಂದೆ ಟಿಕ್​ ಟಾಕ್​ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಬಳಿಕ ಶುರುವಾದದ್ದು ಇನ್ಸ್ಟಾಗ್ರಾಂ ರೀಲ್ಸ್. ಟಿಕ್​ ಟಾಕ್ ಮಾದರಿಯಲ್ಲಿಯೇ ರೀಲ್ಸ್ ಪ್ರಾರಂಭವಾದ ಮೇಲೆ ಅದರಲ್ಲಿನ ಪ್ರತಿಭೆಗಳು ಇದರತ್ತ ತಿರುಗಿದರು. ಅದೇ ರೀತಿ ಸೋಶಿಯಲ್ ಮೀಡಿಯಾ ಮೂಲಕ ಮಿಂಚು ಹರಿಸಿ ಎಲ್ಲರಿಗೂ ಚಿರಪರಿಚಿತರಾಗಿರುವವರು ಒಬ್ಬರು ಈ ಬಾರಿ ಬಿಗ್​ ಬಾಸ್​ ಒಟಿಟಿ ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಅವರೇ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಯಾರು ಅವರು? ಅವರ ಜರ್ನಿ ಹೇಗಿತ್ತು ಎಂಬುದನ್ನು ನೋಡಿ.


ಯಾರು ಈ ಸೋನು ಶ್ರೀನಿವಾಸ್ ಗೌಡ:


ಸೋನು ಶ್ರೀನಿವಾಸ್​ ಗೌಡ ಈಕೆಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇತ್ತೀಚೆಗಂತೂ ಈಕೆಯನ್ನು ನೋಡದಿರದೇ ಇರುವವರಿಲ್ಲ. ಟಿಕ್​ಟಾಕ್​ ಬ್ಯಾನ್​ ಆದಮೇಲೂ ಸೋನು ಇನ್​ಸ್ಟಾಗ್ರಾಂ ರೀಲ್ಸ್​ ಮಾಡಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಇವರು ಸರಿಸುಮಾರು 4 ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯಲ್ಲಿ ವಿಡಿಯೋಗಳನ್ನು ಮಾಡುವ ಇವರು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದಾರೆ. ಇಂತಹ ಸೋಶಿಯಲ್ ಮೀಡಿಯಾ ಸ್ಟಾರ್​ ಇದಿಗ ಕನ್ನಡ ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ ನಲ್ಲಿ ಸ್ಪರ್ಧಿಯಾಗಿ ದೊಮ್ಮನೆಯೊಳಗೆ ಪ್ರವೇಶ ಮಾಡಿದ್ದಾರೆ.
ಬಿಗ್​ ಬಾಸ್​ಗೆ ಎಂಟ್ರಿ ಕೊಟ್ಟ ಸೋನು:


ಇನ್ನು, ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ್ದ ಸೋನು ಶ್ರೀನಿವಾಸ್​ ಗೌಡ ಅವರು ಇದೀಗ ಬಿಗ್​ ಬಾಸ್​ ಒಟಿಟಿ ಕನ್ನಡಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ನ 2ನೇ ಸ್ಪರ್ಧಿಯಾಗಿ ಸೋನು  ಶ್ರೀನಿವಾಸ್ ಗೌಡ ಅವರು ಎಂಟ್ರಿ ನೀಡಿದ್ದಾರೆ. ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿರುವ ಸೋನು ಶ್ರೀನಿವಾಸ ಗೌಡ ಅವರು ಎಲ್ಲರ ನಿರೀಕ್ಷೆಯಂತೆ ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಮಾಡಿದ್ದಾರೆ.
ಸೋಷಿಯಲ್​ ಮೀಡಿಯಾ ಸ್ಟಾರ್ ಸೋನು:


ಸೋನು ಶ್ರೀನಿವಾಸ್​ ಗೌಡ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್​ ಆಗಿಯೇ ಫೇಮಸ್​ ಆದವರು. ಟ್ರೋಲ್​ ಪೇಜ್​ಗಳಿಂದಲೇ ಈಕೆಗೆ ಇಷ್ಟು ಹೆಸರು ಬಂದಿದ್ದು. ಚೈಲ್ಡೀಸ್​ ಮಾತುಗಳಿಂದ, ಇನ್ನೂ ಅನೇಕ ವಿಚಾರಕ್ಕೆ  ಸಿಕ್ಕಾಪಟ್ಟೆ ಟ್ರೋಲ್​ ಆದವರು ಸೋನು ಶ್ರೀನಿವಾಸ್​ ಗೌಡ.ಈಗ ಸೋಷಿಯಲ್​ ಮೀಡಿಯಾ ಸ್ಟಾರ್​ ಪಟ್ಟ ಪಡೆದುಕೊಂಡಿದ್ದಾರೆ. ಈಗಾಗಲೇ ಅವರೇ ಹೇಳಿರುವಂತೆ ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್​ಗಳ ಪ್ರ,ಮೋಷನ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ


ಇವರು ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾರೆ ಎಂದು ಎಲ್ಲರಿಗೂ ಒಂದು ಕುತೂಹಲ ಇರುತ್ತೆ. ತಿಂಗಳಿಗೆ ಒಂದರಿಂದ ಎರಡು ಲಕ್ಷ ರೂ ಅನ್ನು ಸೋನು ಶ್ರೀನಿವಾಸ ಗೌಡ ಗಳಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೆಲ ಜಾಹೀರಾತುಗಳು, ಪ್ರಮೋಷನ್​ ವಿಡಿಯೋ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಆದರೆ ಇದು ಯಾವುದೇ ಅಧಿಕೃತ ಮಾಹಿತಿ ಅಲ್ಲವಾಗಿದ್ದು, ಕೇಔಲ ಜನರು ಮಾತುಗಳಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಸೋನು ಶ್ರೀನಿವಾಸ ಗೌಡ ಕನ್ನಡ ಸಿನಿಮಾ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು