Bigg Boss OTT: ಇನ್ಮುಂದೆ ಬಿಗ್​ಬಾಸ್​ ಮನೆಯಲ್ಲಿ ಲೆಕ್ಕ, ಪಕ್ಕಾ! ದೊಡ್ಮನೆ ಸೇರಿದ ಆರ್ಯವರ್ಧನ್ ಗುರೂಜಿ ಯಾರು?

ಐಪಿಎಲ್ ಸಂದರ್ಭದಲ್ಲಿ ಆರ್ಯವರ್ಧನ್​ ಗುರೂಜಿ ನೀಡುತ್ತಿದ್ದ ಪ್ರಿಡಿಕ್ಷನ್ ಸಾಕಷ್ಟು ಸುದ್ದಿ ಆಗುತ್ತಿತ್ತು. ಈ ವಿಚಾರವಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು. ಈಗ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆ ಸೇರಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಗ್​ಬಾಸ್​ ಮನೆಗೆ ಆರ್ಯವರ್ಧನ್ ಗುರೂಜಿ​ ಎಂಟ್ರಿ

ಬಿಗ್​ಬಾಸ್​ ಮನೆಗೆ ಆರ್ಯವರ್ಧನ್ ಗುರೂಜಿ​ ಎಂಟ್ರಿ

  • Share this:
ಬಿಗ್ ಬಾಸ್ ಒಟಿಟಿಗೆ (Bigg Boss OTT) ಆರ್ಯವರ್ಧನ್​ ಗುರೂಜಿ (Aryavardhan Guruji) ಮೊದಲನೇ ಅಭ್ಯರ್ಥಿಯಾಗಿ (Contestant) ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸ್ಪರ್ಧಿಯಾಗಿ ಅವರು ದೊಡ್ಮನೆ ಸೇರಿದ್ದಾರೆ. ಇವರು ತಮ್ಮ ಜ್ಯೋತಿಷ್ಯಕ್ಕಿಂತಲೂ ಹೆಚ್ಚಾಗಿ ವಿವಾದಗಳ (Controversy) ಮೂಲಕವೇ ಸುದ್ದಿಯಲ್ಲಿರುವ ವ್ಯಕ್ತಿ. ಖಾಸಗಿ ಸುದ್ದಿ ವಾಹಿನಿಯಲ್ಲಿ ಸಂಖ್ಯಾಶಾಸ್ತ್ರದ (Numerology) ಆಧಾರದಲ್ಲಿ ಭವಿಷ್ಯ ಹೇಳುತ್ತಿದ್ದರು. ಕಳೆದ ಬಾರಿಯ ಐಪಿಎಲ್ ಸಮಯದಲ್ಲಿ ಇವರು ಹೇಳಿತ್ತಿದ್ದ ಭವಿಷ್ಯ ಬಹಳಷ್ಟು ಸದ್ದು ಮಾಡಿತ್ತು. ಏಕೆಂದರೆ ತಮ್ಮ ಸಂಖ್ಯಾಶಾಸ್ತ್ರದ ಮೂಲಕವೇ ಯಾವ ತಂಡ ಪಂದ್ಯ ಗೆಲ್ಲಲಿದೆ ಯಾವ ಆಟಗಾರರು ಅಂದು ಚೆನ್ನಾಗಿ ಆಡಲಿದ್ದಾನೆ ಎನ್ನುವ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು.

ಯಡಿಯೂರಪ್ಪನವರ ರಾಜೀನಾಮೆ ಕುರಿತು ಭವಿಷ್ಯ

ರಾಜಕೀಯ ವಲಯದ ಬಗ್ಗೆ ಸಹ ನಿಖರ ಭವಿಷ್ಯ ನುಡಿದು ಸಂಚಲನ ಮೂಡಿಸಿದ್ದರು ಆರ್ಯವರ್ಧನ ಗುರೂಜಿ. ಅಂದಹಾಗೆ ಯಡಿಯೂರಪ್ಪನವರ ರಾಜೀನಾಮೆ ಕುರಿತು ನುಡಿದ ಭವಿಷ್ಯ ಹೇಳಿದ್ದಂತೆ ನಿಜವಾಗಿತ್ತು, ಇದು ನಿಜಕ್ಕೂ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆಗಷ್ಟ್​ ವೇಳೆಗೆ ಯಡಿಯೂರಪ್ಪನವರ ರಾಜೀನಾಮೆ ನೀಡುತ್ತಾರೆ ಎಂದಿದ್ದ ಗುರೂಜಿಯವರ ಮಾತಿನಂತೆ ಯಡಿಯೂರಪ್ಪನವರು ಕಳೆದ ವರ್ಷ ಜುಲೈ 16ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್​

ಆರ್ಯವರ್ಧನ್ ಅವರು ಸದಾ ಟ್ರೋಲ್ ಆಗುವ ಮೂಲಕವೇ ಹೆಚ್ಚು ಸುದ್ದಿ ಆಗಿದ್ದಾರೆ. ಅವರು ಜ್ಯೋತಿಷ್ಯ ಶಾಸ್ತ್ರವನ್ನೂ ಹೇಳುತ್ತಾರೆ. ಐಪಿಎಲ್ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಪ್ರಿಡಿಕ್ಷನ್ ಸಾಕಷ್ಟು ಸುದ್ದಿ ಆಗುತ್ತಿತ್ತು. ಈ ವಿಚಾರವಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು. ಈಗ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆ ಸೇರಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಆಟಗಾರನ ಜರ್ಸಿ ಸಂಖ್ಯೆ ಆಧಾರದಲ್ಲೂ ಭವಿಷ್ಯ ನುಡಿದ್ರು!

ಆಟಗಾರನ ಜರ್ಸಿ ಸಂಖ್ಯೆ ಆಧಾರದ ಮೇಲೂ ಆ ಆಟಗಾರ ಎಷ್ಟು ರನ್ ಹೊಡೆಯುತ್ತಾರೆ  ಎನ್ನುವ ವಿಚಾರಗಳ ಬಗ್ಗೆ ಅವರು ಭವಿಷ್ಯ ನುಡಿಯುತ್ತಿದ್ದರು. ಆದರೆ, ಈ ಭವಿಷ್ಯ ತಪ್ಪಾಗಿದ್ದೇ ಹೆಚ್ಚು. ಈ ಕಾರಣದಿಂದ ಅವರು ಸಾಕಷ್ಟು ಟ್ರೋಲ್ ಆಗುತ್ತಿದ್ದರು. ಇದರ ಜೊತೆಗೆ ಅವರ ಭಾಷಾ ಶೈಲಿ ಹಾಗೂ ಕ್ರಿಕೆಟ್ ಕುರಿತ ಅವರ ತಪ್ಪು ತಪ್ಪಾದ ಭವಿಷ್ಯದ ಕಾರಣದಿಂದ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದದ್ದು ಸಹ ಇದೆ. ಇದರ ಜೊತೆಗೆ ಅವರ ಜ್ಯೋತಿಷ್ಯವನ್ನೂ ಸಹ ಟ್ರೋಲ್ ಮಾಡುತ್ತಿದ್ದರು

ಮಗಳ ಅಪ್ಪುಗೆ

ಇನ್ನು ಸ್ಟೇಜ್‌ ಮೇಲೆ ಮಾತನಾಡಲು ತಡವರಿಸುತ್ತಿದ್ದ ಆರ್ಯವರ್ಧನ್ ಗುರೂಜಿ‌ ಅವರಿಗೆ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕುರಿತು ಮಾತಾಡಿಸಿದರು. ಬಿಗ್‌ ಬಾಸ್‌ ಮನೆಯ ಒಳಗೆ ಹೋಗುವ ಬಗ್ಗೆ ಮಾತನಾಡಿದಾಗ ಮಗಳನ್ನು ಅಪ್ಪಿಕೊಳ್ಳುವ ಆಸೆ ಹಂಚಿಕೊಂಡರು ಗುರೂಜಿ. ಅಪ್ಪ ಕರೆದ ಕೂಡಲೇ ಆರ್ಯವರ್ಧನ್ ಗುರೂಜಿ‌ಯ ಪುಟಾಣಿ ಪುತ್ರಿ ಸ್ಟೇಜ್‌ ಮೇಲೆ ಓಡೋಡಿ ಬಂದು ಅಪ್ಪನಿಗೆ ಅಪ್ಪುಗೆ ನೀಡಿದರು.

ಇದನ್ನೂ ಓದಿ: Bigg Boss OTT ಗೆ ಬಂದ್ರು ತುಳು ಸಿನಿಮಾ ಸೂಪರ್​ ಸ್ಟಾರ್​ ರೂಪೇಶ್ ಶೆಟ್ಟಿ

ಇದಾದ ಬಳಿಕ ಆರ್ಯವರ್ಧನ್ ಗುರೂಜಿ‌ ನೇರವಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿಯನ್ನ ಕೊಟ್ಟರು. ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಆರ್ಯವರ್ಧನ್ ಗುರೂಜಿ‌ ಈಗಾಗಲೇ ತಮ್ಮ ಐಪಿಎಲ್‌ ಭವಿಷ್ಯದ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲೂ ಹವಾ ಎಬ್ಬಿಸಿರುವ ಆರ್ಯವರ್ಧನ್ ಗುರೂಜಿ‌ ಈ ಬಾರಿಯ ಬಿಗ್ ಬಾಸ್ ನ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್ಯವರ್ಧನ ಈಗ ಬಿಗ್‌ಬಾಸ್‌ ಮನೆಯಲ್ಲಿ ಏನ್‌ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Published by:Pavana HS
First published: