30 ದಾಟಿದ ನಟಿ ತ್ರಿಶಾಗೆ ವಯಸ್ಸಾಯಿತು, ಅಜ್ಜಿ ಅಂತ ಹೇಳಿದ್ದು ಯಾರು?

news18
Updated:July 21, 2018, 5:17 PM IST
30 ದಾಟಿದ ನಟಿ ತ್ರಿಶಾಗೆ ವಯಸ್ಸಾಯಿತು, ಅಜ್ಜಿ ಅಂತ ಹೇಳಿದ್ದು ಯಾರು?
news18
Updated: July 21, 2018, 5:17 PM IST
ನ್ಯೂಸ್18 ಕನ್ನಡ

ನಾಯಕರಿಗೆ ಎಷ್ಟೇ ವಯಸ್ಸಾದರೂ 20 ವರ್ಷದ ಹುಡುಗಿಯರು ನಾಯಕಿಯರಾಗುತ್ತಾರೆ.  ಅದೇ ನಾಯಕಿಯರ ವಿಷಯಕ್ಕೆ ಬಂದರೆ 30 ದಾಟಿದರೆ ಸಾಕು ಅವರನ್ನ ಎಲ್ಲರೂ ಅಜ್ಜಿ ಮಾಡಿಬಿಡುತ್ತಾರೆ. ಒಂದೂವರೆ ದಶಕಗಳಿಂದ ದಕ್ಷಿಣದ ಬಹುತೇಕ ಎಲ್ಲ ನಾಯಕರ ಜೊತೆ ನಟಿಸಿ ಹಾಟ್ & ಫೇವರಿಟ್ ಅನ್ನಿಸಿಕೊಂಡಿದ್ದ ತ್ರಿಶಾರನ್ನ ಈಗ ಎಲ್ಲರೂ ಅಜ್ಜಿ ಅಜ್ಜಿ ಅಂತ ಕರೀತಿದ್ದಾರೆ... ಅಷ್ಟಕ್ಕೂ ತ್ರಿಶಾಗೆ ಆಗಿರೊ ವಯಸ್ಸಾದರೂ ಎಷ್ಟು ? ತ್ರಿಶಾ ಇದನ್ನೆಲ್ಲ ನೋಡಿ ಏನಂತಿದ್ದಾರೆ ?

ತ್ರಿಶಾ ಸಿನಿಮಾಗೆ ಬಂದು 16 ವರ್ಷ ಆಗುತ್ತಿದೆ. ಆದರೆ ತ್ರಿಶಾ ಅಭಿನಯಿಸಿರೊ ಒಂದೊಂದು ಸಿನಿಮಾದ ಒಂದೊಂದೆ ಹಾಡು, ದೃಶ್ಯ, ಕಾಮಿಡಿ, ರೊಮಾನ್ಸ್​ ನೋಡುತ್ತಿದ್ದರೆ ಮುವತ್ತಿನ ಆಸುಪಾಸಿನಲ್ಲಿರೋರಿಗೆಲ್ಲ ಹಳೆಯ ದಿನಗಳು ನೆನಪಾಗುತ್ತೆ. ಹಾಗಂತ ತ್ರಿಶಾ ಅಷ್ಟೊಂದು ಹಳೇ ಹುಡುಗಿ ಆಗಿಬಿಟ್ಟರಾ, ಐಶ್ವರ್ಯಾಗೆ 44 ಆದರೂ ಅದರ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಅದೇ ತ್ರಿಶಾ 30 ದಾಟಿ ಕೇವಲ ಐದು ವರ್ಷವಾಗಿದ್ದು, ಅದಕ್ಕೆ ಯಾಕ್ರೀ ಟ್ರೋಲು, ಈ ಅವಮಾನ.

ಹದಿನೆಂಟು, ಇಪ್ಪತ್ತು, ಇಪ್ಪತ್ತೈದು ಇವೆಲ್ಲ ವಯಸ್ಸುಗಳೇ ಅಲ್ಲ. ಈ ವಯಸ್ಸಿನವರೆಲ್ಲ  ಐಸ್‍ಕ್ರೀಂ ತಿನ್ನೊ ಪಾಪುಗಳು ಅಂತ ಯಾರೊ ಮಾಡ್ರನ್ ಕವಿ ಹೇಳಿದ್ದಾರೆ. ಸರಿ ಹಾಗಾದರೆ ಸರಿಯಾದ ವಯಸ್ಸು ಯಾವುದಪ್ಪಅಂದರೆ, ತರ್ಟಿ ಅಂತಾರೆ..! ತ್ರಿಶಾಗೆ ವಯಸಾಯಿತು, ಅಜ್ಜಿ ಅಂತ ಯಾರಾದರೂ ಅಂದರೆ ಬಾಯಿ ಮೇಲೆ ಒಂದು ಬಿಡಬೇಕು ಅನ್ನಿಸುತ್ತೆ.

ಏಕೆ ಗೊತ್ತಾ? ಮೊನ್ನೆ ಮೊನ್ನೆ ಬಂದ `ಎನ್ನೈ ಅರಿಂದಾಲ್' ಮತ್ತು ನಿನ್ನೆ ನಿನ್ನೆ ನೋಡಿದ `ನೈಂಟಿಸಿಕ್ಸ್' ಟೀಸರ್​ನಲ್ಲಿ ತ್ರಿಶಾ ಕಣ್ಣು ಮೂಗು ನೋಡುತ್ತಾ ಇದ್ದರೆ ಥಂಡಿ ಬಿಟ್ಟು ನೆಗಡಿಯೆಲ್ಲ ಮಾಯವಾಗುತ್ತದೆ.

ಸಿನಿಮಾಗೆ ಬಂದು 16 ವರ್ಷ ಆಗಿರುವುದರಿಂದ ತ್ರಿಶಾಗಿನ್ನು 16ರ ಪ್ರಾಯ ಅನ್ನಬಹುದು. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಈಗಲೂ ನಾಯಕಿಯಾಗಿಯೇ ಮಿಂಚುತ್ತಾ ಇರೊ ತ್ರಿಶಾ ನಿಮ್ಮಿಷ್ಟದ ನಾಯಕನ ಹೆಸರನ್ನು ಹೇಳಿ ಸಾಕು, ಅವರ ಜೊತೆ ಒಂದ್ ಸಿನಿಮಾದಲ್ಲಾದರೂ ಗ್ಯಾರಂಟಿ ಅಭಿನಯಿಸಿರುತ್ತಾರೆ ಈ ಜಿಂಕೆಮರಿ ತ್ರಿಶಾ.

ವೈನು ಹಳೇದಾದಂತೆ ರುಚಿ ಹೆಚ್ಚಾಗುತ್ತೆ, ನಮಗೆಲ್ಲ ವಯಸ್ಸಾದಂತೆ ಕಳೆ ಜಾಸ್ತಿಯಾಗುತ್ತೆ. ಹಾಗಾಗಿ ಯಾವ ಹೆಣ್ಣು ಮಕ್ಕಳಿಗೆ ನಿಮಗೆ ವಯಸ್ಸಾಯಿತು ಅಂತ ನೋವು ಮಾಡಬೇಡಿ.
Loading...

 

 
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ