• Home
  • »
  • News
  • »
  • entertainment
  • »
  • Kantara ಕ್ಲೈಮ್ಯಾಕ್ಸ್​​​ ನೋಡ ನೋಡುತ್ತಲೇ ಯುವಕನ ಮೈಮೇಲೆ ದೈವ ಆವಾಹನೆ, ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!

Kantara ಕ್ಲೈಮ್ಯಾಕ್ಸ್​​​ ನೋಡ ನೋಡುತ್ತಲೇ ಯುವಕನ ಮೈಮೇಲೆ ದೈವ ಆವಾಹನೆ, ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!

ಕಾಂತಾರ

ಕಾಂತಾರ

ಈ ಹಿಂದೆ ಮಂಗಳೂರಿನಲ್ಲಿ ಕಾಂತಾರ ಸಿನಿಮಾ ನೋಡುವ ವೇಳೆ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆ ಯಾಗಿತ್ತು ಎಂದು ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ಯುವಕನ ಮೇಲೆ ಕಾಂತಾರಾ ಕ್ಲೈಮ್ಯಾಕ್ಸ್​ ನೋಡುವಾಗ ದೈವ ಆವಾಹನೆ ಆಗಿದೆ ಅಂತ ಹೇಳಲಾಗುತ್ತಿದೆ.

  • Share this:

ಕಾಂತಾರ (Kantara) ಈ ಪದ ಕೇಳಿದರೆ ಸಾಕು ಕನ್ನಡಿಗರಷ್ಟೇ ಅಲ್ಲದೇ ಇಡೀ ದೇಶದ ಜನರ ಕಿವಿ ನೆಟ್ಟಗಗಾಗುತ್ತೆ. ಯಾಕೆಂದರೆ ಇಡೀ ದೇಶದಲ್ಲಿ ಈಗ ಕನ್ನಡ ಸಿನಿಮಾ (Kannada Movie) ಕಾಂತಾರ ಅಬ್ಬರ ಜೋರಾಗಿದೆ. ಎಲ್ಲಿ ನೋಡಿದರೂ ರಿಷಬ್ (Rishab Shetty) ಅವರೇ ಕಾಣಿಸುತ್ತಿದ್ದಾರೆ. ಒಂದು ಕನ್ನಡ ಸಿನಿಮಾ ಈ ಮಟ್ಟಕ್ಕೆ ಹೆಸರು ಮಾಡುತ್ತಿದೆ ಅಂದರೆ ನಾವು ಖುಷಿ ಪಡಬೇಕು. ಇಂದಿನಿಂದ ಹಿಂದಿ (Hindi) ಯಲ್ಲೂ ಕಾಂತಾರ ಸಿನಿಮಾ ರಿಲೀಸ್ ಆಗಿದೆ. ತೆಲುಗು (Telugu) , ತಮಿಳಿ (Tamil) ನಲ್ಲೂ ಕಾಂತಾರ ದರ್ಶನ ನೀಡುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಅಂದರೆ ಕೇವಲವಾಗಿ ನೋಡುತ್ತಿದ್ದ ಬಿಟೌನ್​ಗೆ ಕಾಂತಾರ ಮತ್ತೆ ಗುದ್ದು ನೀಡಿದೆ. ಬಾಕ್ಸ್​​ ಆಫೀಸ್​​(Box Office) ನಲ್ಲೂ ಕಾಂತಾರ ಸಿನಿಮಾ ಲೂಟಿ ಮಾಡುತ್ತಿದೆ. ರೇಟಿಂಗ್​ (Kantara Rating) ವಿಚಾರದಲ್ಲಿ ಕೆಜಿಎಫ್ (KGF)​ ಸಿನಿಮಾವನ್ನು ಕಾಂತಾರ ಹಿಂದಿಕ್ಕಿದೆ. ಇನ್ನು ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್​ (Kantara Climax) ನಲ್ಲಿ ರಿಷಬ್​ ಶೆಟ್ಟಿಅಭಿನಯಕ್ಕೆ ಮನಸೋಲದವರೇ ಇಲ್ಲ. 


ಯುವಕ ಮೈಮೇಲೆ ದೈವ ಆಹ್ವಾನ|


ಈ ಹಿಂದೆ ಮಂಗಳೂರಿನಲ್ಲಿ ಕಾಂತಾರ ಸಿನಿಮಾ ನೋಡುವ ವೇಳೆ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆ ಯಾಗಿತ್ತು ಎಂದು ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ಯುವಕನ ಮೇಲೆ ಕಾಂತಾರಾ ಕ್ಲೈಮ್ಯಾಕ್ಸ್​ ನೋಡುವಾಗ ದೈವ ಆವಾಹನೆ ಆಗಿದೆ ಅಂತ ಹೇಳಲಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಕಾಂತಾರ ಕ್ಲೈಮ್ಯಾಕ್ಸ್ ನೋಡುತ್ತಿರುವಾಗ ಸೀಟಿನಿಂದ ಎದ್ದು ವಿಚಿತ್ರವಾಗಿ ವರ್ತಿಸಿದ್ದಾರೆ. ಓಹೋ ಎಂದು ಕೂಗಾಡಿದ್ದಾರೆ. ಇದನ್ನು ನೋಡಿದ ಅಕ್ಕ ಪಕ್ಕ ಕುಳಿತವರು ಗಾಬರಿಯಾಗಿದ್ದಾರೆ.


ವಿಚಿತ್ರವಾಗಿ ವರ್ತಿಸಿದ ಯುವಕ ವಿಡಿಯೋ ವೈರಲ್!


ಕಾಂತಾರ ಸಿನಿಮಾ ರಿಲೀಸ್ ಆದ ಮರುದಿನ ಮಂಗಳೂರಿನಲ್ಲಿ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆಹ್ವಾನೆಯಾಗಿತ್ತಂತೆ. ಆಗ ಅಕ್ಕಪಕ್ಕ ಕೂತವರು ವಿಡಿಯೋ ಮಾಡಲು ಸಹ ಹೆದರಿದ್ದರಂತೆ. ಆದರೆ, ಈಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಎಲ್ಲರೂ ಗಾಬರಿಯಾಗಿದ್ದಾರೆ. ಈತ ಅನ್ಯಧರ್ಮದ ಯುವಕ ಅಂತ ಕೆಲವೊಂದು ಪತ್ರಿಕೆಗಳಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ನನ್ನ ಲವರ್​ಗಿಂತ ನಿಮ್ಮನ್ನ ಜಾಸ್ತಿ ಪ್ರೀತಿಸ್ತೀನಿ, ರಿಷಬ್​ ಕಾಲಿಗೆ ಬಿದ್ದು ಹಿಂದಿ ಆ್ಯಂಕರ್​ ಭಾವುಕ!


ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಯುವಕ!


ಹಿಂದಿಯಲ್ಲಿ 14ರಿಂದ ಕಾಂತಾರ ಅಬ್ಬರ ಶುರುವಾಗಿದೆ. ಹಲವಾರು ಹಿಂದಿ ಸಂದರ್ಶನಗಳಲ್ಲಿ ರಿಷಬ್​ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಹಿಂದಿ ಯೂಟ್ಯೂಬರ್ ಗಳು ಕಾಂತಾರಾ ಚಿತ್ರದ ಬಗ್ಗೆ ಮೆಚ್ಚುಗೆಯ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಹಿಂದಿ ಯೂಟ್ಯೂಬರ್ ರಿಷಬ್ ಶೆಟ್ಟಿ ಸಂದರ್ಶನ ಮಾಡುವಾಗ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಬೆಂಗಳೂರು ಬೆಡಗಿಗೆ ಮೀನು ಕಟ್ ಮಾಡೋದನ್ನು ಕಲಿಸಿಬಿಟ್ರು ಶೆಟ್ರು


"ನನ್ನ ಲವರ್​ಗಿಂತ ನಿಮ್ಮನ್ನು ಇಷ್ಟಪಡುತ್ತೇನೆ"


ಹಿಂದಿ ಯೂಟ್ಯುಬರ್ ಒಬ್ಬರು ರಿಷಬ್ ಶೆಟ್ಟಿ ಸಂದರ್ಶನ ಮಾಡುವಾಗ ಅವರ ಕಾಲಿಗೆ ಬಿದ್ದು‌ ನಮಸ್ಕರಿಸಿದ್ದಾರೆ. ಹೌದು ಹಿಂದಿಯ ಖ್ಯಾತ ‌ಯೂಟ್ಯೂಬರ್ ಸೂರಜ್ ಕುಮಾರ್ ಎನ್ನುವವರು ರಿಷಬ್ ಕಾಲಿಗೆ ನಮಸ್ಕರಿಸಿದ್ದಾರೆ. ಇದಕ್ಕೆ ರಿಷಬ್‌ ಸಹ‌ ಸೌಜನ್ಯದಿಂದ ಅವರಿಗೆ‌ ಅಪ್ಪುಗೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಅಗಿದೆ. ಜೊತೆಗೆ ನನ್ನ ಲವರ್​ಗಿಂತ ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ. ನಿಮ್ಮ ನಟನೆ ನೋಡಿ ನನಗೆ ಮಾತೇ ಬರುತ್ತಿಲ್ಲ. ನಿಜವಾಗಲೂ ನೀವು ನನಗೆ ದೇವರ ರೀತಿ ಕಾಣುತ್ತಿರಾ. ನಾನು ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಆದರೆ ಕಾಂತಾರ ಮಾಡಿರುವ ಕಮಾಲ್​ ಹೇಳತೀರದು ಎಂದು ಭಾವುಕರಾಗಿದ್ದಾರೆ.

Published by:ವಾಸುದೇವ್ ಎಂ
First published: