ಬ್ಯಾಡ್​ಬಾಯ್​ ಇಮೇಜ್​ನಿಂದ ಹೊರ ಬಂದಿಲ್ಲವಾ ಬಿ-ಟೌನ್​ ಸುಲ್ತಾನ್​: ಮತ್ತೆ ವಿವಾದಕ್ಕೀಡಾದ ಸಲ್ಮಾನ್​ ಖಾನ್​

ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾ ರಂಜಾನ್‍ಗೆ ರಿಲೀಸ್ ಆಗಿದೆ. ಚಿತ್ರದ ರಿಲೀಸ್‍ಗೂ ಹಿಂದಿನ ದಿನದ ಪ್ರೀಮಿಯರ್ ಶೋ ವೇಳೆ ಸೆಕ್ಯೂರಿಟಿ ಗಾರ್ಡ್‍ಗಳು ಸಲ್ಮಾನ್ ಖಾನ್‍ರನ್ನು ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ನೂಕು ನುಗ್ಗಲಿಂದ ರಕ್ಷಣೆ ಮಾಡ್ತಿದ್ರು. ಈ ವೇಳೆ ಸಲ್ಮಾನ್, ಎದುರಿದ್ದ ಸೆಕ್ಯೂರಿಟಿ ಗಾರ್ಡ್​ಗೆ ಕಪಾಳ ಮೋಕ್ಷ ಮಾಡಿರೋ ವಿಡಿಯೋ ಈಗ ವೈರಲ್ ಆಗಿದೆ.

ನಟ ಸಲ್ಮಾನ್​ ಖಾನ್​

ನಟ ಸಲ್ಮಾನ್​ ಖಾನ್​

  • News18
  • Last Updated :
  • Share this:
ಬ್ಯಾಡ್‍ಬಾಯ್ ಇಮೇಜ್‍ನಿಂದ ಸಲ್ಮಾನ್ ಹೊರಬಂದು ಬಹಳ ವರ್ಷಗಳೇ ಕಳೆದಿದೆ. ಬಿಟೌನ್‍ನಲ್ಲಿ ಗುಡ್‍ಬಾಯ್ ಎನಿಸಿಕೊಂಡಿರೋ ಸಲ್ಲೂ ಸದ್ಯ ಮತ್ತೆ ಎಡವಟ್ಟು ಮಾಡ್ಕೊಂಡಿದ್ದಾರೆ. ಏನೇ ಆದರೂ ಬ್ಯಾಡ್‍ಬಾಯ್ ಸಲ್ಲೂ ಬುದ್ದಿ ಬಿಡಲ್ಲ ಅಂತ ಬಿಟೌನ್ ಮಾತಾಡಿಕೊಳ್ತಿದೆ.

ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾ ರಂಜಾನ್‍ಗೆ ರಿಲೀಸ್ ಆಗಿದೆ. ಚಿತ್ರದ ರಿಲೀಸ್‍ಗೂ ಹಿಂದಿನ ದಿನದ ಪ್ರೀಮಿಯರ್ ಶೋ ವೇಳೆ ಸೆಕ್ಯೂರಿಟಿ ಗಾರ್ಡ್‍ಗಳು ಸಲ್ಮಾನ್ ಖಾನ್‍ರನ್ನು ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ನೂಕು ನುಗ್ಗಲಿಂದ ರಕ್ಷಣೆ ಮಾಡ್ತಿದ್ರು. ಈ ವೇಳೆ ಸಲ್ಮಾನ್, ಎದುರಿದ್ದ ಸೆಕ್ಯೂರಿಟಿ ಗಾರ್ಡ್​ಗೆ ಕಪಾಳ ಮೋಕ್ಷ ಮಾಡಿರೋ ವಿಡಿಯೋ ಈಗ ವೈರಲ್ ಆಗಿದೆ.

 ಸಲ್ಲೂ ಹೀಗೆ ಮಾಡಿದ್ದನ್ನು ಯಾರೋ ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇಷ್ಟಕ್ಕೂ ಸಲ್ಲೂ ಹೀಗೆ ಮಾಡಿದ್ದಕ್ಕೂ ಒಂದು ಬಲವಾದ ಕಾರಣ ಇದೆಯಂತೆ. ಸಲ್ಲೂಗಾಗಿ ಬಂದಿದ್ದ ಅಭಿಮಾನಿಗಳು ಕರೆದುಕೊಂಡು ಬಂದಿದ್ದ ಮಗುವೊಂದು ಸಲ್ಲೂಗಾಗಿ ಕೈ ಕಾಚಿದ ವೇಳೆ ಸೆಕ್ಯೂರಿಟಿ ಗಾರ್ಡ್ ಆ ಮಗುವನ್ನು ದೂಡಿದ್ದಾರೆ. ಇದಕ್ಕೆ ಕಾರಣಕ್ಕೆ ಸಲ್ಲು ಸೆಕ್ಯೂರಿಟಿ ಗಾರ್ಡ್​ ಕಪಾಳಕ್ಕೆ ಹೊಡೆದಿದ್ದಾರೆ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: Bharat Movie Review: ಭಾರತ್​ಗೆ ಸೆಡ್ಡು ಹೊಡೆದು ಮಿಂಚಿದ ವಿಲಾಯಿತಿ ಸುನಿಲ್​​

ಸಲ್ಮಾನ್ ಈಗಾಗಲೇ ಹಲವು ಬಾರಿ ಸ್ವಯಂಕೃತ ಅಪರಾಧಗಳಿಂದ ಬ್ಯಾಡ್‍ಬಾಯ್ ಇಮೇಜ್ ಪಡೆದುಕೊಂಡ ನಟ. ಮತ್ತೆ ಮತ್ತೆ ಇಂತಹ ಘಟನೆಗಳು ನಡೆದರೂ ಸಲ್ಲೂ ಇನ್ನೂ ಬುದ್ದಿ ಕಲಿತಿಲ್ಲವೇ ಅನ್ನೋದು ಬಿಟೌನ್ ಪಂಡಿತರ ಪ್ರಶ್ನೆ?

Photos: ಬೋಲ್ಡ್​ ಉಡುಗೆ ತೊಟ್ಟು ಟೀಕೆಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ..!

First published: