• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • The Kapil Sharma Show: ಯುಕೆಗೆ ಪ್ರಯಾಣಿಸಲು ನಿಮಗೆ ವೀಸಾ ಬೇಕಾ ಅಥವಾ ಮದುವೆ ಕಾರ್ಡ್ ಇದ್ರೆ ಸಾಕಾ? ಸುಧಾಮೂರ್ತಿಯವರಿಗೆ ಕಪಿಲ್​ ಪ್ರಶ್ನೆ

The Kapil Sharma Show: ಯುಕೆಗೆ ಪ್ರಯಾಣಿಸಲು ನಿಮಗೆ ವೀಸಾ ಬೇಕಾ ಅಥವಾ ಮದುವೆ ಕಾರ್ಡ್ ಇದ್ರೆ ಸಾಕಾ? ಸುಧಾಮೂರ್ತಿಯವರಿಗೆ ಕಪಿಲ್​ ಪ್ರಶ್ನೆ

ಸುಧಾಮೂರ್ತಿ ಮತ್ತು ಕಪಿಲ್ ಶರ್ಮಾ

ಸುಧಾಮೂರ್ತಿ ಮತ್ತು ಕಪಿಲ್ ಶರ್ಮಾ

ದಿ ಕಪಿಲ್ ಶರ್ಮಾ ಶೋ ನ ಮುಂಬರುವ ಸಂಚಿಕೆಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕರಾದ ಗುನೀತ್ ಮೋಂಗಾ, ಉದ್ಯಮಿ ಸುಧಾ ಮೂರ್ತಿ ಮತ್ತು ಬಾಲಿವುಡ್ ನಟಿ ರವೀನಾ ಟಂಡನ್ ಬರಲಿದ್ದಾರೆ.

 • Share this:

ಹಿಂದಿ ಭಾಷೆಯಲ್ಲಿ ಮೂಡಿಬರುವ ‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ಎಂದರೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಈ ಶೋ ಹೆಸರು ಕೇಳಿದರೆ ಸಾಕು, ಮುಖದಲ್ಲಿ ನಗು ಕಾಣಿಸುತ್ತೆ. ಹೌದು, ಈ ಕಾಮಿಡಿ ಶೋ (Comedy Show) ನಡೆಸಿಕೊಡುವ ಕಪಿಲ್ ಶರ್ಮಾ ಅವರ ಕಾಮಿಡಿ ಡೈಲಾಗ್​ಗಳಿಗೆ ಮತ್ತು ಅದರಲ್ಲಿ ಅವರೊಂದಿಗೆ ಭಾಗವಹಿಸುವ ಇತರೆ ಕಲಾವಿದರ ಮ್ಯಾನರಿಸಂನಿಂದಾಗಿ ಶೋ ತುಂಬಾನೇ ಜನಪ್ರಿಯವಾಗಿದೆ. ಈ ಶೋ ನ ಮುಂಬರುವ ಸಂಚಿಕೆಯ ಟ್ರೈಲರ್ ವಿಡಿಯೋ (Trailer Video) ಈಗ ತುಂಬಾನೇ ಸುದ್ದಿಯಲ್ಲಿದೆ ನೋಡಿ.


ಅಂದಹಾಗೆ ಮುಂಬರುವ ಸಂಚಿಕೆಯಲ್ಲಿ ಯಾರೆಲ್ಲಾ ಸೆಲಿಬ್ರಿಟಿಗಳು ಈ ಶೋ ಗೆ ಬರುತ್ತಿದ್ದಾರೆ ಅಂತ ನಿಮಗೆ ತಿಳಿದುಕೊಳ್ಳಲು ಕುತೂಹಲ ಸಹ ಇರಬೇಕಲ್ಲವೇ?


ಕಪಿಲ್ ಶರ್ಮಾ ಶೋ ನ ಮುಂಬರುವ ಎಪಿಸೋಡ್ ನಲ್ಲಿ ಈ ಮಹಿಳಾ ಸಾಧಕರು ಬರಲಿದ್ದಾರಂತೆ


ದಿ ಕಪಿಲ್ ಶರ್ಮಾ ಶೋ ನ ಮುಂಬರುವ ಸಂಚಿಕೆಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕರಾದ ಗುನೀತ್ ಮೋಂಗಾ, ಉದ್ಯಮಿ ಸುಧಾ ಮೂರ್ತಿ ಮತ್ತು ಬಾಲಿವುಡ್ ನಟಿ ರವೀನಾ ಟಂಡನ್ ಬರಲಿದ್ದಾರೆ. ಈ ಎಪಿಸೋಡ್ ನ ಟ್ರೈಲರ್ ವೀಡಿಯೋದಲ್ಲಿ ಕಪಿಲ್ ಈ ಮೂವರು ಮಹಿಳೆಯರೊಂದಿಗೆ ತಮಾಷೆ ಮಾಡುತ್ತಾ ಸಂತೋಷದ ಸಮಯವನ್ನು ಕಳೆಯುವುದನ್ನು ಕಾಣಬಹುದು.


ಈ ಟ್ರೈಲರ್ ವಿಡಿಯೋದಲ್ಲಿ ಮೊದಲಿಗೆ ಶೋ ಗೆ ಗುನೀತ್ ಅವರನ್ನು ಸ್ವಾಗತಿಸುವಾಗ, ಅವರ ದೊಡ್ಡ ಸಾಧನೆಗಳನ್ನು ಉಲ್ಲೇಖಿಸುತ್ತಾರೆ ಮತ್ತು ದಿ ಎಲಿಫೆಂಟ್ ವಿಸ್ಪರ್ಸ್ ಚಿತ್ರಕ್ಕಾಗಿ ಆಸ್ಕರ್ ಗೆದ್ದಿದ್ದಕ್ಕಾಗಿ ಅವರನ್ನು ಶ್ಲಾಘಿಸುತ್ತಾರೆ.


ಇದನ್ನೂ ಓದಿ: ವಸತಿ ಯೋಜನೆಗಾಗಿ ಬೆಂಗಳೂರಿನಲ್ಲಿ 28 ಎಕರೆ ಭೂಮಿ ಖರೀದಿಸಿದ ಬಿರ್ಲಾ ಎಸ್ಟೇಟ್ಸ್

 "ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ ನೀವು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಬಹುದು ಮತ್ತು ನಂತರ ‘ದಿ ಕಪಿಲ್ ಶರ್ಮಾ ಶೋ’ ಗೂ ಬರಬಹುದು ಅಂತ ಇವರು ಸಾಬೀತುಪಡಿಸಿದ್ದಾರೆ" ಅಂತ ಕಪಿಲ್ ಅವರು ಎಂದಿನಂತೆ ತಮ್ಮ ಕಾಮಿಡಿ ಪಂಚ್ ನೀಡಿದ್ದನ್ನು ಇಲ್ಲಿ ನಾವು ನೋಡಬಹುದು.
ಸುಧಾಮೂರ್ತಿ ಮತ್ತು ಕಪಿಲ್ ಶರ್ಮಾ
ಸುಧಾ ಮೂರ್ತಿಯವರನ್ನ ಶೋ ಗೆ ಹೇಗೆ ಸ್ವಾಗತಿಸಿದ್ರು ನೋಡಿ ಕಪಿಲ್


ನಂತರ ಅವರು ಸುಧಾ ಮೂರ್ತಿ ಅವರನ್ನು ತಮ್ಮ ಶೋ ಗೆ ಸ್ವಾಗತಿಸುವುದಕ್ಕೆ ಶುರು ಮಾಡಿ, ಅವರು ಸ್ಥಾಪಿಸಿದ ಇನ್ಫೋಸಿಸ್ ಫೌಂಡೇಶನ್ ಹೆಸರು ತೆಗೆದುಕೊಂಡು ಸುಧಾ ಅವರನ್ನ ಪ್ರೇಕ್ಷಕರಿಗೆ ಪರಿಚಯಿಸ್ತಾರೆ.


ಕಪಿಲ್ ಅವರು ಸುಧಾ ಅವರ ಬಗ್ಗೆ ಹೇಳುತ್ತಾ “ಇವರು ಎಷ್ಟು ಶಕ್ತಿಶಾಲಿ ಮಹಿಳೆ ಎಂದರೆ ಯುನೈಟೆಡ್ ಕಿಂಗ್ಡಮ್​ನ ಪ್ರಧಾನಿ ಕೂಡ ಇವರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ” ಅಂತ ಹೇಳಿದರು. ಬಹುತೇಕವಾಗಿ ಎಲ್ಲರಿಗೂ ತಿಳಿದಂತೆ ಯುಕೆಯ ಪ್ರಸ್ತುತ ಪ್ರಧಾನಿ ರಿಷಿ ಸುನಕ್ ಸಹ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಅಳಿಯ.
ಸುಧಾ ಮೂರ್ತಿ ಅವರಿಗೆ ಯುಕೆ ಗೆ ಹೋಗೋದಕ್ಕೆ ವೀಸಾ ಅಗತ್ಯವಿದೆಯೇ ಅಥವಾ ತಮ್ಮ ಮಗಳು ಅಕ್ಷತಾ ಮತ್ತು ಅಳಿಯ ರಿಷಿ ಸುನಕ್ ಅವರ ಮದುವೆಯ ಆಮಂತ್ರಣ ಕಾರ್ಡ್ ತೋರಿಸಿದರೆ ಸಾಕಾಗುತ್ತದೆಯೇ ಅಂತ ತಮಾಷೆಯಾಗಿ ಕಪಿಲ್ ಅವರು ಸುಧಾ ಮೂರ್ತಿಯವರನ್ನು ಕೇಳಿದರು.


ಈ ಶೋ ನಲ್ಲಿ ಕಪಿಲ್ ಅವರ ಅತ್ತೆ ಪಾತ್ರ ಮಾಡುತ್ತಿರುವ ನಟಿ ಕೂಡ ಈ ಕಾಮಿಡಿಯಲ್ಲಿ ಸೇರಿಕೊಂಡು "ನಿಮ್ಮ ಅತ್ತೆ ಮಾವನ ಆಶೀರ್ವಾದವಿದ್ದರೆ, ನೀವು ಸಹ ಯುಕೆಯ ಪ್ರಧಾನಿಯಾಗಬಹುದು” ಎಂದು ಅವರು ಕಪಿಲ್ ಗೆ ಕಾಮಿಡಿ ಪಂಚ್ ನೀಡುವುದನ್ನು ಈ ಟ್ರೈಲರ್ ವಿಡಿಯೋದಲ್ಲಿ ನಾವು ನೋಡಬಹುದು.

top videos


  ‘ದಿ ಕಪಿಲ್ ಶರ್ಮಾ ಶೋ’ ನ ಎಪಿಸೋಡ್ ಈ ವಾರಾಂತ್ಯದಲ್ಲಿ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತದೆ. ಇತ್ತೀಚೆಗೆ, ಹಣಕಾಸಿನ ಕಾರಣಗಳಿಂದಾಗಿ ಈ ಶೋ ನಿಂದ ಹೊರಗುಳಿದ ಕೃಷ್ಣ ಅಭಿಷೇಕ್ ಈಗ ಮತ್ತೆ ಶೋ ಗೆ ಮರಳಿದ್ದಾರೆ.

  First published: