• Home
 • »
 • News
 • »
 • entertainment
 • »
 • Tamannaah Bhatia: ಸಿಂಗಲ್ ಆಗಿದ್ದ ತಮನ್ನಾಗೆ ವಿಜಯ್ ಮೇಲೆ ಲವ್ ಆಗಿದ್ದು ಹೇಗೆ? ಮೊದಲ ಭೇಟಿ ಎಲ್ಲಿ?

Tamannaah Bhatia: ಸಿಂಗಲ್ ಆಗಿದ್ದ ತಮನ್ನಾಗೆ ವಿಜಯ್ ಮೇಲೆ ಲವ್ ಆಗಿದ್ದು ಹೇಗೆ? ಮೊದಲ ಭೇಟಿ ಎಲ್ಲಿ?

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಅವರು ಕಿಸ್ ಮಾಡೋ ವಿಡಿಯೋ ವೈರಲ್ ಆಗಿದೆ. ಹಾಗಾದರೆ ಇವರ ಸಂಬಂಧ ಶುರುವಾಗಿದ್ದು ಯಾವಾಗ? ಈ ಜೋಡಿ ಮೊದಲು ಭೇಟಿ ಮಾಡಿದ್ದೆಲ್ಲಿ?

 • Trending Desk
 • 5-MIN READ
 • Last Updated :
 • Bangalore, India
 • Share this:

ನಟಿ ತಮನ್ನಾ ಭಾಟಿಯಾ (Tamannah Bhatia) ಮತ್ತು ನಟ ವಿಜಯ್ ವರ್ಮಾ (Vijay Varma) ಇಬ್ಬರೂ ಇತ್ತೀಚೆಗೆ ಸುದ್ದಿಯಲ್ಲಿದ್ದಿದ್ದು ಗೋವಾದಲ್ಲಿ (Goa) ಇಬ್ಬರು ಕಿಸ್ ಮಾಡಿದ ಘಟನೆಯಿಂದ. ಆದರೆ ಈ ಇಬ್ಬರು ನಟರು (Actors) ಮೊದಲ ಬಾರಿಗೆ ಎಲ್ಲಿ ಭೇಟಿಯಾದರು ಎಂಬುದು ಅನೇಕ ಅಭಿಮಾನಿಗಳಿಗೆ (Fans) ಕಾಡುತ್ತಿರುವ ಪ್ರಶ್ನೆ. ರೋನಿ ಸ್ಕ್ರೂವಾಲಾ, ಆಶಿ ದುವಾ ಅವರ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಲಸ್ಟ್ ಸ್ಟೋರೀಸ್ 2 (Lust Stories 2) ರಲ್ಲಿ ನಿರ್ದೇಶಕ ಸುಜೋಯ್ ಅವರ ಈ ಸಿರೀಸ್ ಗೆ ತಮನ್ನಾ ಮತ್ತು ವಿಜಯ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೊದಲು ಪಿಂಕ್ವಿಲ್ಲಾ ವರದಿ ಮಾಡಿತ್ತು.


ಹೊಸ ವರ್ಷದ ಪಾರ್ಟಿಯಲ್ಲಿ ಇವರಿಬ್ಬರು ಕಿಸ್ ಮಾಡುತ್ತಿರುವುದು ಕಂಡು ಬಂದಾಗಿನಿಂದ ಇಬ್ಬರೂ ಸುದ್ದಿಯಲ್ಲಿದ್ದಾರೆ.


ಕುತೂಹಲಕಾರಿಯಾಗಿ, ಮುಂಬೈನಲ್ಲಿ ಇತ್ತೀಚೆಗೆ ನಡೆದ ದಿಲ್ಜಿತ್ ದೋಸಾಂಜ್ ಅವರ ಮ್ಯೂಸಿಕಲ್ ಕನ್ಸರ್ಟ್ ನಲ್ಲಿ ಇವರಿಬ್ಬರೂ ಒಟ್ಟಿಗೆ ಕಂಡುಬಂದರು.


ಲಸ್ಟ್ ಸ್ಟೋರಿಸ್ 2 ನಲ್ಲಿ ಕಾಣಿಸಿಕೊಳ್ಳಲಿದೆ ಈ ಜೋಡಿ


"ತಮನ್ನಾ ಮತ್ತು ವಿಜಯ್ ಅವರು ಮೊದಲ ಬಾರಿ ಸುಜೋಯ್ ಘೋಷ್ ಅವರ ವೆಬ್ ಸಿರೀಸ್ ಸೆಟ್ ನಲ್ಲಿ ಭೇಟಿ ಆಗಿದ್ರಂತೆ. ಅಲ್ಲಿಂದ ಶುರುವಾಯಿತು ಅವರಿಬ್ಬರ ನಡುವೆ ಪರಿಚಯ. ಸುಜೋಯ್ ಅವರ ಕಿರುಚಿತ್ರವು ಒಂದು, ಔಟ್-ಅಂಡ್-ಔಟ್ ಥ್ರಿಲ್ಲರ್ ಆಗಿದೆ.


ಇದನ್ನೂ ಓದಿ: Tamannaah Bhatia: ಗೋವಾದಲ್ಲಿ ತಮನ್ನಾ ಲಿಪ್​ಲಾಕ್! ಮಿಲ್ಕಿಬ್ಯೂಟಿ ಮನಸು ಕದ್ದ ಹ್ಯಾಂಡ್ಸಂ ಯಾರು?


ಬಾಂದ್ರಾದ ಮೆಹಬೂಬ್ ಸ್ಟುಡಿಯೋದಲ್ಲಿ ಆರು ದಿನಗಳ ಕಾಲ ಚಿತ್ರೀಕರಣ ನಡೆಸಿದರು. ಈ ವೆಬ್ ಸಿರೀಸ್ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ‘ಲಸ್ಟ್ ಸ್ಟೋರೀಸ್ 2’ 2023 ರ ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಅದು ಸ್ವಲ್ಪ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.


ತಮನ್ನಾ ಬಳಿ ಇವೆಯಂತೆ ಸಾಲು ಸಾಲು ಚಿತ್ರಗಳು


ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ತಮನ್ನಾ ಅವರು ನಟ ಚಿರಂಜೀವಿ ಮತ್ತು ಕೀರ್ತಿ ಸುರೇಶ್ ಅವರೊಂದಿಗೆ ಮೆಹರ್ ರಮೇಶ್ ಅವರ ತೆಲುಗು ಆಕ್ಷನ್ ಹಾಸ್ಯ ಚಿತ್ರ ‘ಭೋಲಾ ಶಂಕರ್’ ಮತ್ತು ದಿಲೀಪ್ ಜೊತೆ ನಟಿಸಿದ ಮಲಯಾಳಂ ಚಿತ್ರ ‘ಬಾಂದ್ರಾ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಈ ಮುಂಬರುವ ಆಕ್ಷನ್-ಥ್ರಿಲ್ಲರ್ ನಲ್ಲಿ ಡಿನೋ ಮೋರಿಯಾ, ಶರತ್ ಕುಮಾರ್, ರಾಜೀವ್ ಅಂಕುರ್ ಸಿಂಗ್, ಅಮಿತ್ ತಿವಾರಿ ಮತ್ತು ಈಶ್ವರಿ ರಾವ್ ಸಹ ನಟಿಸಿದ್ದಾರೆ.
ಮತ್ತೊಂದೆಡೆ, ನಟ ವಿಜಯ್ ವರ್ಮಾ ಸುಜೋಯ್ ಘೋಷ್ ನಿರ್ದೇಶನದ ‘ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಕರೀನಾ ಕಪೂರ್ ಖಾನ್ ಮತ್ತು ಜೈದೀಪ್ ಅಹ್ಲಾವತ್ ಸಹ ನಟಿಸಿದ್ದಾರೆ.


ಕಳೆದ ವರ್ಷ, ಜಸ್ಮೀತ್ ಕೆ ರೀನ್ ಅವರ ಡಾರ್ಲಿಂಗ್ಸ್ ಚಿತ್ರದಲ್ಲಿ ಹಮ್ಜಾ ಶೇಖ್ ಪಾತ್ರದಲ್ಲಿನ ಅಭಿನಯಕ್ಕಾಗಿ ವಿಜಯ್ ಅವರು ಸಾಕಷ್ಟು ಮೆಚ್ಚುಗೆಯನ್ನು ಪಡೆದರು. ಇದರಲ್ಲಿ ಆಲಿಯಾ ಭಟ್ ಮತ್ತು ಶೆಫಾಲಿ ಶಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿಜಯ್ ಬಳಿ ಈಗ ಮಿರ್ಜಾಪುರ್ 3 ಸಹ ಇದೆ. ಅದಕ್ಕಾಗಿ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದರು.


ಇದಲ್ಲದೆ, ಈ ಹಿಂದೆ ಪಿಂಕ್ವಿಲ್ಲಾದೊಂದಿಗಿನ ವಿಶೇಷ ಸಂಭಾಷಣೆಯಲ್ಲಿ, ತಮನ್ನಾ ಅವರು, ನಟಿಯರಿಗಾಗಿ ಹೆಚ್ಚು ಕಥೆಗಳನ್ನು ಬರೆಯುವ ಬಗ್ಗೆ ಮಾತಾಡಿ “ಹಿಂದೆಂದಿಗಿಂತಲೂ ಈಗ ಬರವಣಿಗೆಯತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ” ಎಂದು ಹೇಳಿದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು