ಎಲ್ಲಿ ಹೋದರು ಸ್ಯಾಂಡಲ್​ವುಡ್​ ಬ್ಯೂಟಿ ಶ್ರುತಿ ಹರಿಹರನ್​?

news18
Updated:July 27, 2018, 11:48 AM IST
ಎಲ್ಲಿ ಹೋದರು ಸ್ಯಾಂಡಲ್​ವುಡ್​ ಬ್ಯೂಟಿ ಶ್ರುತಿ ಹರಿಹರನ್​?
ನಟಿ ಶೃತಿ ಹರಿಹರನ್
news18
Updated: July 27, 2018, 11:48 AM IST
ಓಂ ಸಕಲೇಶಪುರ, ನ್ಯೂಸ್​ 18 ಕನ್ನಡ

ಎಲ್ಲಿ ಹೋದರಪ್ಪ ಶೃತಿ ಹರಿಹರನ್ ಅಂತ ನೀವೂ ಹುಡುಕುತ್ತಿರಬೇಕಲ್ಲಾ... ನೀವೇನು ಹುಡುಕೋದು. ನಾವೂ ಹುಡುಕುತ್ತಿದ್ದೀವಿ. ಇತ್ತೀಚೆಗೆ ಒಂದು ಸಿನಿಮಾ ಕಾರ್ಯಕ್ರಮಕ್ಕೆ ಬಂದವರು ಮಾಧ್ಯಮಗಳಿಗೆ ಕಾಣಿಸದಂತೆ ಹೊರಟು ಹೋಗಿದ್ದಾರೆ. ಯಾಕೆ..? ಏನು..? ಅನ್ನೋದರ ಕುರಿತಾಗಿ ಒಂದು ವರದಿ ಇಲ್ಲಿದೆ.

ಕೆಲವು ತಿಂಗಳ ಹಿಂದೆ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ (ಕಾಸ್ಟಿಂಗ್ ಕೌಚ್) ಇದೆ. ನಾನೂ ಅದನ್ನು ಎದುರಿಸಿದ್ದೇನೆ ಎನ್ನುವ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಸಂಚಲನ ಮೂಡಿಸಿ ಪ್ರತಿಕ್ರಿಯೆಗೂ ಸಿಗದಂತೆ ಕಾಣೆಯಾಗಿದ್ದ ಶ್ರುತಿ ಹರಿಹರನ್, ಅದಾದ ನಂತರ ಕನ್ನಡ ಚಿತ್ರರಂಗದಿಂದಂತೂ ದೂರವೇ ಉಳಿದಿದ್ದಾರೆ ಅನ್ನಿಸುತ್ತಿದೆ. ಇನ್ನು ಮಾಧ್ಯಮಗಳಿಗಂತೂ ಶ್ರುತಿ ಗಗನ ಕುಸುಮ.

ಸದ್ಯ 'ದಿ ವಿಲನ್' ಮತ್ತು 'ಅಂಬಿ ನಿಂಗೆ ವಯಸ್ಸಾಯ್ತೋ' ಎರಡು ಚಿತ್ರಗಳಲ್ಲಿ ನಟಿಸಿರೋ ಶೃತಿ ಹರಿಹರನ್ ಈ ಸಿನಿಮಾ ಪ್ರಚಾರಕ್ಕಾದರೂ ವೇದಿಕೆ ಏರುತ್ತಾರಾ ಗೊತ್ತಿಲ್ಲ. ಈ ಎರಡೂ ಚಿತ್ರಗಳು ಬಹುತೇಕ ಆಗಸ್ಟ್ ಸೆಪ್ಟೆಂಬರ್​ನಲ್ಲಿ ತೆರೆಕಾಣುತ್ತಿವೆ.

ಕಳೆದ ವರ್ಷ ದರ್ಶನ್ ಈ ವರ್ಷ ಸುದೀಪ್ ಜೊತೆ ಎರೆಡೆರೆಡು ಸಿನಿಮಾಗೆ ನಾಯಕಿಯಾಗಿ  ಸ್ಟಾರ್  ನಾಯಕಿ ಆಗಿದ್ದಾಯಿತು. ಇನ್ನು ಮದುವೆ ಆಗಿದ್ದಾರೆ ಅನ್ನೋ ಗಾಸಿಪ್ ಬೇರೆ, ಇದರ ನಡುವೆ ಶೃತಿ ಹರಿಹರನ್ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರೋದಂತೂ ಸತ್ಯ. ಇದಕ್ಕೆ ಕಾರಣ ಮಾತ್ರ ಅವರೇ ಹೇಳಬೇಕು.
First published:July 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ