Pooja Gandhi: ಸ್ಟಾರ್​​ ನಟಿಯಾಗಿ ಮೆರೆದಿದ್ದ ಪೂಜಾ ಗಾಂಧಿ ಈಗ ಎಲ್ಲಿದ್ದಾರೆ? ದಪ್ಪ ಆಗಿದ್ದೇ ಮಳೆ ಹುಡುಗಿಗೆ ಮುಳುವಾಯ್ತಾ?

ಪೂಜಾ ಗಾಂಧಿ ಒಂದು ಕಾಲದಲ್ಲಿ ಕನ್ನಡದ ಟಾಪ್​ ನಟಿ (Kannada Top Actress) , ಇವರ ಕಾಲ್​ಶೀಟ್​ಗಾಗಿ ನಿರ್ಮಾಪಕರು (Producer) ಕ್ಯೂ ನಿಲ್ಲುತ್ತಿದ್ದರು. ಆದರೆ, ಇದ್ದಕಿದ್ದ ಹಾಗೇ ಪೂಜಾ ಗಾಂಧಿ ಸಿನಿಮಾ ರಂಗದಿಂದ ಕಣ್ಮರೆಯಾಗಿದ್ದಾರೆ. ಅಷ್ಟು ಪೀಕ್​ನಲ್ಲಿದ್ದ ಪೂಜಾ ಗಾಂಧಿಗೆ ಏನಾಯ್ತು? ಅಸಲಿಗೆ ಈಗ ಏನು ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ಇಲ್ಲಿದ ನೋಡಿ ಸಂಪೂರ್ಣ ಮಾಹಿತಿ

ನಟಿ ಪೂಜಾ ಗಾಂಧಿ

ನಟಿ ಪೂಜಾ ಗಾಂಧಿ

  • Share this:
ಮನುಷ್ಯ (Human) ನ ಬದುಕೇ ಹಾಗೇ. ಯಾವಾಗ? ಎಲ್ಲಿ? ಏನಾಗುತ್ತೆ? ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕೋಟಿ (Crore) ಕೋಟಿ ಆಸ್ತಿ  ಮಾಡಿದವನು ಸಾಯುತ್ತಾನೆ. ಒಂದೊಂತ್ತು ಊಟಕ್ಕೆ ಪರದಾಡಿವ ಬಡುವನೂ ಸಾಯುತ್ತಾನೆ. ಬದುಕಿದ್ದಾಗ ಏನು ಸಾಧನೆ ಮಾಡುತ್ತೇವೆ ಎಂಬುದಷ್ಟೇ ಮುಖ್ಯ. ಅದರಲ್ಲೂ ನಮ್ಮ ಕೆರಿಯರ್ (Career) ​​ನಲ್ಲಿ ಯಾವಾಗ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ಸಿಕ್ಕಾಪಟ್ಟೆ ಹೆಸರು ಮಾಡಿದ್ದು ಉಂಟು, ಮತ್ತೊಮ್ಮೆ ದೊಪ್​ ಅಂತ ಕೆಳಗೆ ಬೀಳೋದು ಸಹಜ. ಅಂಥವರಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಒಬ್ಬರು. ಪೂಜಾ ಗಾಂಧಿ ಒಂದು ಕಾಲದಲ್ಲಿ ಕನ್ನಡದ ಟಾಪ್​ ನಟಿ (Kannada Top Actress) , ಇವರ ಕಾಲ್​ಶೀಟ್​ಗಾಗಿ ನಿರ್ಮಾಪಕರು (Producer) ಕ್ಯೂ ನಿಲ್ಲುತ್ತಿದ್ದರು. ಆದರೆ, ಇದ್ದಕಿದ್ದ ಹಾಗೇ ಪೂಜಾ ಗಾಂಧಿ ಸಿನಿಮಾ ರಂಗದಿಂದ ಕಣ್ಮರೆಯಾಗಿದ್ದಾರೆ. ಅಷ್ಟು ಪೀಕ್​ನಲ್ಲಿದ್ದ ಪೂಜಾ ಗಾಂಧಿಗೆ ಏನಾಯ್ತು? ಅಸಲಿಗೆ ಈಗ ಏನು ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ಇಲ್ಲಿದ ನೋಡಿ ಸಂಪೂರ್ಣ ಮಾಹಿತಿ

ಕಣ್ಮರೆಯಾಗಿದ್ದೇಕೆ ಪೂಜಾ ಗಾಂಧಿ!

ಪೂಜಾ ಗಾಂಧಿ ಮೂಲತಃ ಪಂಜಾಬಿ ಹುಡುಗಿ. ಆದರೆ ಹುಟ್ಟಿದ್ದು ಉತ್ತರ ಪ್ರದೇಶದ ಮೀರತ್​ನಲ್ಲಿ. 1973ರಲ್ಲಿ ಪೂಜಾ ಗಾಂಧಿ ಜನಿಸಿದರು. ಇವರ ಮೂಲ ಹೆಸರು ಸಂಜನಾ ಗಾಂಧಿ. ಮೊದಲು ಆ್ಯಡ್​ ಹಾಗೂ ಮಾಡೆಲಿಂಗ್​ನಲ್ಲಿ ತೊಡಗಿಸಿಕೊಂಡಿದ್ದರು ಪೂಜಾ ಗಾಂಧಿ. ಜಮೀರ್​ ಆಸ್​ ಮನ್​ ಥಕ್​ ಸೀರಿಯಲ್​ನಲ್ಲೂ ಪೂಜಾ ಗಾಂಧಿ ನಟಿಸಿದ್ದರು. ಕತ್ರೋನ್​ ಕ ಕಿಲಾಡಿ ಎಂಬ ಸಿನಿಮಾದಲ್ಲಿ ಪೂಜಾ ಗಾಂಧಿ ನಟಿಸಿದ್ದರು. ಅದಾದ ನಂತ ಬೆಂಗಾಲಿ ಸಿನಿಮಾದಲ್ಲೂ ನಟಿಸಿದ್ದರು. ಬಳಿಕ ತಮಿಳು ಸಿನಿಮಾ ಕೊಕ್ಕಿ ಮೂಲಕ ಸೌತ್​​ ಇಂಡಸ್ಟ್ರಿಗೆ ಕಾಲಿಟ್ಟಿದ್ದರು.

ಹೊಸ ನಾಯಕಿಯ ಹುಡುಕಾಟದಲ್ಲಿದ್ದ ಮುಂಗಾರು ಮಳೆ ತಂಡ!

ಮುಂಗಾರು ಮಳೆ ಸ್ಕ್ರಿಪ್ಟ್​ ರೆಡಿಮಾಡಿಕೊಂಡು, ಹೊಸ ನಟಿಯರ ಹುಡುಕಾಟದಲ್ಲಿತ್ತು ಚಿತ್ರತಂಡ. ಆಗ ಕಣ್ಣಿಗೆ ಬಿದಿದ್ದೆ ಪೂಜಾ ಗಾಂಧಿ. ಮುಂಗಾರು ಮಳೆ ಸಿನಿಮಾ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ. ಗಣೇಶ್​ ಹಾಗೂ ಪೂಜಾ ಗಾಂಧಿಗೆ ಒಳ್ಳೆ ಇಮೇಜ್​ ಕೂಡ ಈ ಸಿನಿಮಾದ ಬಳಿಕ ಸಿಗುತ್ತೆ. ಆದರೆ, ಪೂಜಾ ಗಾಂಧಿಗೆ ಹಲವಾರು ಟೀಕೆ ಕೂಡ ಎದುರಾಗಿತ್ತು. ನಟಿ ನೋಡೋಕೆ ಚೆನ್ನಾಗಿಲ್ಲ. ಕುಳ್ಳಕ್ಕೆ ಇದ್ದಾರೆ. ಗಂಡಸರ ಹಾಗೇ ಕಾಣಿಸುತ್ತಾರೆ ಅಂತ ಟೀಕೆಗಳು ಎದುರಾಯ್ತು. ಈ ಬಗ್ಗೆ ಸ್ವತಃ ಪೂಜಾ ಗಾಂಧಿ ಹೇಳಿಕೊಂಡಿದ್ದರು. ಸರಿಯಾದ ರೀತಿಯಲ್ಲಿ ನನ್ನನ್ನು ಸರಿಯಾಗಿ ತೋರಿಸಿಲ್ಲ ಎಂದು ನಿರ್ದೇಶಕರ ವಿರುದ್ಧವೇ ಪೂಜಾ ಗಾಂಧಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಶಂಕರ್​ ನಾಗ್​ ಮೃತ ಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ

ಸ್ಟಾರ ನಟಿಯಾಗಿದ್ದ ಪೂಜಾ ಗಾಂಧಿಗೆ ಏನಾಯ್ತು?

ಮುಂಗಾರು ಮಳೆ ಎಲ್ಲರಿಗೂ ಹೊಸ ಬದುಕನ್ನೇ ನೀಡಿತ್ತು. ಇದಾದ ಬಳಿಕ ಪೂಜಾ ಗಾಂಧಿ ಕಾಲ್​ಶೀಟ್​ಗಾಗಿ ನಿರ್ಮಾಪಕರು ಮುಗಿ ಬೀಳುತ್ತಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡರು. ಮಿಲನ, ಕೃಷ್ಣ, ಮನ್ಮಥ, ಹನಿ ಹನಿ, ಆ್ಯಕ್ಸಿಡೆಂಟ್​, ನೀ ಟಾಟಾ ನಾ ಬಿರ್ಲಾ, ತಾಜ್​ಮಹಲ್​, ಬುದ್ದಿವಂತ, ಹುಚ್ಚಿ, ಗೋಕುಲ, ದಂಡುಪಾಳ್ಯ, ಇದು ಪೂಜಾ ಗಾಂಧೀ ಅವರ ಸಿನಿಮಾ ಜೀವನ ನಡೆದು ಬಂದ ಹಾದಿ. ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಿರುವಾಗ ಇದ್ದಕ್ಕಿದ್ದ ಹಾಗೇ ಪೂಜಾ ಗಾಂಧಿ ಬೇಡಿಕೆ ಡೌನ್​ ಆಗಿಬಿಡುತ್ತೆ.

ಪೂಜಾ ಗಾಂಧಿಗೆ ದಪ್ಪ ಆಗಿದ್ದೇ ಮುಳುವಾಯ್ತಾ?

ಆರಂಭದಲ್ಲಿ ಸ್ಲೀಮ್​ ಆಗಿದ್ದ ಪೂಜಾ ಗಾಂಧಿ ಬರ ಬರುತ್ತಾ ತುಂಬಾ ದಪ್ಪ ಆಗಿಬಿಡುತ್ತಾರೆ. ದಪ್ಪ ಆಗೋದಕ್ಕೆ ಶುರುವಾದಗಿನಿಂದಲೂ, ಅವಕಾಶಗಳೂ ಕೂಡ ಕಡಿಮೆಯಾಯ್ತು. ಈ ಸಮಯದಲ್ಲಿ ಹೊಸ ಹೊಸ ನಟಿಯರು ಕೂಡ ಎಂಟ್ರಿ ಕೊಟ್ಟರು. ದಂಡುಪಾಳ್ಯ ಸಿನಿಮಾಗೂ ಮುನ್ನ ಪೂಜಾ ಗಾಂಧಿ ಅವರನ್ನು ನೋಡುತ್ತಿದ್ದ ರೀತಿಯೇ ಬೇರೆ ಇತ್ತು. ಈ ಸಿನಿಮಾ ಬಳಿಕ ಇವರ ಇಮೇಜ್​ ಬದಲಾಯ್ತು. ಇದಾದ ಬಳಿಕ ತುಂಬಾ ದಪ್ಪಗೇ ಆಗಿದ್ದ ಪುಜಾ ಗಾಂಧಿ ಬ್ರೇಕ್​ ತೆಗೆದುಕೊಂಡರು. ಬಳಿಕ ಅವರೇ ನಿರ್ಮಾಣ ಮಾಡಿ, ನಟಿಸಿದ ಅಭಿನೇತ್ರಿ ಸಿನಿಮಾ ಕೂಡ ಅಷ್ಟು ಹೆಸರು ಮಾಡಲಿಲ್ಲ.

ರಾಜಕೀಯಕ್ಕೂ ಕಾಲಿಟ್ಟಿದ್ದ ಮಳೆ ಹುಡುಗಿ!

ಇದಾದ ಬಳಿಕ ರಾಜಕೀಯಕ್ಕೂ ಪೂಜಾ ಗಾಂಧಿ ಕಾಲಿಟ್ಟರು. 2012ರಲ್ಲಿ ಜೆಡಿಎಸ್​ ಪಕ್ಷವನ್ನು ಸೇರಿಕೊಂಡಿದ್ದರು. ಬಳಿಕ ಕೆಜಿಪಿ ಪಕ್ಷಕ್ಕೆ ಜಂಪ್​ ಆಗಿದ್ದರು. ಅದಾದ ನಂತರ ಕಾಂಗ್ರೆಸ್​ ಪಕ್ಷ ಸೇರುತ್ತಾರೆ. ರಾಯಚೂರಿನಲ್ಲಿ ಸ್ಫರ್ಧೇ ಕೂಡ ಮಾಡಿದ್ದರು. ಆದರೆ ಸೋತಿದ್ದರು. 2016ರಲ್ಲಿ ಮತ್ತೆ ಬಿಗ್​ಬಾಸ್​ಗೆ ಬಂದಿದ್ದರು. ಇದಾದ ಬಳಿಕವೂ ಅವರ ಅದೃಷ್ಟ ಕೈ ಹಿಡಿಯಲಿಲ್ಲ. ಸದ್ಯ ಸಂಹಾರಿಣಿ ಎಂಬ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ತೆಲುಗಿನ ತೆಗ್ಗೆದೆಲೆ ಸಿನಿಮಾ ಕೂಡ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: 'ಮೋದಿಜೀ ನೀವೇಕೆ ಏನೂ ಮಾಡುತ್ತಿಲ್ಲ? ಸುಶ್ಮಿತಾ-ಲಲಿತ್ ಮೋದಿ ಡೇಟಿಂಗ್ ಕುರಿತು ರಾಖಿ ಸಾವಂತ್ ರಿಯಾಕ್ಷನ್

ವೈಯಕ್ತಿಕ ಬದುಕು ಕೂಡ ಅಷ್ಟಕಷ್ಟೆ!

ಸದ್ಯಕ್ಕೆ ಪೂಜಾ ಗಾಂಧಿ ಬೆಂಗಳೂರಿನಲ್ಲಿದ್ದಾರೆ. 2012ರಲ್ಲಿ ಪೂಜಾ ಗಾಂಧಿ ಆನಂದ್​ ಗೌಡ ಎಂಬುವವರ ಜೊತೆ ಎಂಗೇಜ್​ಮೆಂಟ್​ ಆಗಿತ್ತು. ಒಂದೇ ತಿಂಗಳಿಗೆ ಈ ಸಂಬಂಧ ಮುರಿದುಬಿದ್ದಿತ್ತು. ಪ್ರಶಾಂತ್​ ಎನ್ನುವ ವ್ಯಕ್ತಿಯೊಂದಿಗೆ ಮತ್ತೆ ಇವರ ಕೇಳಿಬಂದಿತ್ತು. ಒಂದು ಕಾಲದಲ್ಲಿ ಸ್ಟಾರ್​ ನಟಿಯಾಗಿದ್ದ ಪೂಜಾ ಗಾಂಧಿ, ಈಗ ಸ್ಯಾಂಡಲ್​ವುಡ್​ನಿಂದ ಕಣ್ಮರೆಯಾಗಿದ್ದಾರೆ.
Published by:Vasudeva M
First published: